ಒಂಟಿ ಒಂಟಿಯಾಗಿರೋದು, ಬೋರೋ ಬೋರು ಅನ್ನಬೇಡಿ, ಲಾಭವೂ ಇದೆ
'ಸಿಂಗಲ್... ಆಗಿದ್ರೆ, ನಿಮಗೇನೋ ಖುಷಿ ಇರಬಹುದು, ಆದರೆ ಜನ ಖಂಡಿತವಾಗಿಯೂ ನೆಮ್ಮದಿಯಾಗಿರಲು ಬಿಡೋದಿಲ್ಲ. ಯಾಕಂದ್ರೆ ಜನ ಆಗಾಗ್ಗೆ ಯಾವಾಗ ಮದ್ವೆ ಆಗೋದು, ಇಷ್ಟೂ ವರ್ಷ ಆದ್ರೂ ಮದ್ವೆ ಆಗಿಲ್ವಾ? ಯಾರಾದ್ರೂ ಹುಡುಗನ್ನ ನೋಡಿದ್ಯಾ? ಕೊನೆಗೆ ಆ ಹುಡುಗೀನೆ ಸರಿ ಇಲ್ವೇನೋ ಎಂಬಂತಹ ನಿರ್ಧಾರಕ್ಕೂ ಜನ ಬರ್ತಾರೆ. ಆದ್ರೆ ಯಾರು ಏನೆ ಹೇಳಲಿ ಸಿಂಗಲ್ ಆಗಿರೋದ್ರಿಂದ ತುಂಬಾನೆ ಲಾಭ ಇದೆ.

ಸಿಂಗಲ್(Single) ಆಗಿರೋರೆಲ್ಲ ಜೀವನದಲ್ಲಿ ಚೆನ್ನಾಗಿಲ್ವಾ? ಅಂತಾ ಕೇಳಿದ್ರೆ ಅದ್ಕೆ ಉತ್ತಮ ಖಂಡಿತಾ ಹಾಗೇನಿಲ್ಲಪ್ಪಾ, ಸಿಂಗಲ್ ಆಗಿರೋರು ತುಂಬಾನೆ ಹ್ಯಾಪಿಯಾಗಿರುತ್ತಾರೆ. ಆದ್ರೆ ಫ್ಯಾಮಿಲಿ, ಹೊರಗಿನ ಜನ ಮಾತ್ರ ಸಿಂಗಲ್ ಆಗಿರೋರು ನೆಮ್ಮದಿಯಾಗಿರಲು ಬಿಡೋದಿಲ್ಲ, ಏನಾದರೂ ಒಂದು ನೆಪ ಹೇಳಿಕೊಂಡು ಸಿಂಗಲ್ ಆಗಿರೋರ ಕಾಲು ಎಳಿತಾನೆ ಇರ್ತಾರೆ. ಆದ್ರೆ ನೀವೇನೆ ಹೇಳಿ ಸಿಂಗಲ್ ಆಗಿರೋದ್ರಿಂದ ತುಂಬಾನೆ ಲಾಭ ಇದೆ. ಅವುಗಳ ಬಗ್ಗೆ ತಿಳಿಯೋಣ.
ಫ್ರೀ ಲೈಫ್ (free life)
ಸಿಂಗಲ್ ಆಗಿರೋದ್ರಿಂದ ಲೈಫ್ ತುಂಬಾ ಫ್ರಿ ಆಗಿರುತ್ತೆ ಅನ್ನುತ್ತಾರೆ ಮದುವೆಯಾಗದ ಹೆಣ್ಣು ಮಕ್ಕಳು. ನಮ್ಮ ಜೀವನಕ್ಕೆ ಯಾರಾದರೂ ಅಡ್ಡಿಪಡಿಸದಿದ್ದರೆ, ಜೀವನ ಸುಲಭವೆಂದು ತೋರುತ್ತದೆ. ನಾವು ಏನೆ ಮಾಡಿದರೂ ಅದನ್ನು ತಡೆಯುವವರು ಯಾರೂ ಇರೋದಿಲ್ಲ, ಅಲ್ಲದೇ ಯಾರಿಗೂ ಹೆದರ ಬೇಕಾಗಿಯೂ ಇರೋದಿಲ್ಲ.
ಹೊರಗೆ ತಿನ್ನದೇ, ಫಿಟ್(Fit) ಆಗಿರಿ
ರಿಲೇಶನ್‌ಶಿಪ್ (Relationship) ನಲ್ಲಿದ್ದಾಗ ಕಪಲ್ಸ್ ಸಾಮಾನ್ಯವಾಗಿ ಡೇಟ್ ಗೆ ಹೋಗುತ್ತಲೇ ಇರುತ್ತಾರೆ. ಕೆಲವರಂತೂ ವಾರ ಪೂರ್ತಿ ಡೇಟ್ ಮಾಡುತ್ತಲೇ ಇರುತ್ತಾರೆ. ಇದರಿಂದ ವಾರದಲ್ಲಿ ಹೆಚ್ಚಿನ ಸಮಯ ನಾವು ಹೊರಗೆ ತಿನ್ನಬೇಕಾಗುತ್ತೆ. ಇದರಿಂದ ತೂಕ ಸಿಕ್ಕಾಪಟ್ಟೆ ಹೆಚ್ಚುತ್ತೆ. ಆದರೆ ಸಿಂಗಲ್ ಆಗಿರೋದ್ರಿಂದ ಮನೆಯಲ್ಲಿ ಬೇಕಾದ್ದು ಮಾಡಿ ತಿಂದು, ಫಿಟ್ ಆಗಿರಬಹುದು.
ಸೋಲೋ ಟ್ರಿಪ್(Solo trip) ಎಂಜಾಯ್ ಮಾಡಬಹುದು
ರಿಲೇಶನ್ ಶಿಪ್ ನಲ್ಲಿ ಇದ್ರೆ ಸಾಮಾನ್ಯವಾಗಿ ಏನೇ ಮಾಡೋದಾದ್ರು ಸಂಗಾತಿಯನ್ನು ಕೇಳಿ ಅವರ ಜೊತೆಯೇ ಮಾಡಬೇಕಾಗುತ್ತೆ. ಅದು ಟ್ರಾವೆಲ್ ಮಾಡೋದಾದರೂ ಸರಿ. ಅದರಲ್ಲೂ ನೀವು ಸೋಲೊ ಟ್ರಿಪ್ ಇಷ್ಟಪಡುತ್ತಿದ್ದರೆ ಆಗಂತೂ ತುಂಬಾನೆ ಕಷ್ಟ ಆಗುತ್ತೆ. ಆದ್ರೆ ಸಿಂಗಲ್ ಆಗಿದ್ರೆ ಎಷ್ಟು ಸಲ ಬೇಕಾದ್ರೂ ಸೋಲೋ ಟ್ರಿಪ್ ಮಾಡಿ ಬರಬಹುದು.
ಸ್ನೇಹಿತರೊಂದಿಗೆ (Friends) ಸಮಯ ಕಳೆಯೋದು
ಅವಿವಾಹಿತರಾಗಿರುವಾಗ, ನೀವು ಬಯಸಿದಾಗಲೆಲ್ಲಾ ಸ್ನೇಹಿತರೊಂದಿಗೆ ಬೇಕಾದ್ದು ಮಾಡಬಹುದು. ಯಾವ ಟೈಮ್ ಗೆ ಬೇಕಾದ್ರೂ ಪಾರ್ಟಿ ಮಾಡಬಹುದು, ಯಾವಾಗ ಬೇಕಾದ್ರೂ ಅವರ ಜೊತೆ ಹರಟೆ ಹೊಡೆಯಬಹುದು. ಆದರೆ ಮದುವೆ ಆದ್ರೆ ಫ್ರೆಂಡ್ಸ್ ಜೊತೆ ನಮಗಿಷ್ಟ ಬಂದಷ್ಟು ಸಮಯ ಕಳೆಯಲು ಸಾಧ್ಯವಾಗೋದಿಲ್ಲ.
ಭಾವನಾತ್ಮಕ ಶಕ್ತಿ
ಮದುವೆ(Marriage) ಆಗಿರಲಿ ಅಥವಾ ರಿಲೇಶನ್ ಶಿಪ್ ನಲ್ಲಿರಲಿ ಒಟ್ಟಿನಲ್ಲಿ ಈ ಎರಡೂ ಸಂಬಂಧದಲ್ಲೂ ನೀವು ಭಾವನಾತ್ಮಕವಾಗಿ ತುಂಬಾನೆ ಕುಸಿದು ಹೋಗುತ್ತೀರಿ. ಯಾಕೆಂದರೆ ಸಂಗಾತಿ ಜೊತೆಗೆ ಇರೋದ್ರಿಂದ ಬೇಡ ಅಂದ್ರೂ ಮನಸ್ಸು ಭಾವನಾತ್ಮಕವಾಗಿ ಅವರೊಂದಿಗೆ ಬೆರೆತಿರುತ್ತದೆ. ಆದ್ರೆ ಸಿಂಗಲ್ ಆಗಿದ್ರೆ ಯಾವುದರ ಬಗ್ಗೆಯೂ ಯೋಚನೆ ಮಾಡೋ ಅವಶ್ಯಕತೆ ಇಲ್ಲ.
ಎಲ್ಲವೂ ನಿಮಗೆ ಬೇಕಾದಂತೆ ಇರುತ್ತೆ
ನೀವು ಅವಿವಾಹಿತರಾಗಿದ್ದರೆ(Unmarried), ಮನೆಯಲ್ಲಿ ಅಥವಾ ರೂಮ್ ನಲ್ಲಿ ಎಲ್ಲವೂ ನೀವು ಬಯಸಿದ ರೀತಿಯಲ್ಲಿರುತ್ತದೆ. ನೀವು ಬೆಳಿಗ್ಗೆ ನಿಮ್ಮ ಕೋಣೆಯನ್ನು ಸರಿಪಡಿಸಿದ್ದರೆ, ನೀವು ಬರುವವರೆಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಅಲ್ಲದೇ ಅದು ಯಾಕೆ ಹಾಗಿದೆ ಎಂದು ಬೈಯೋರು ಇರೋದಿಲ್ಲ. ಆದ್ರೆ ಮದ್ವೆ ಆಗಿದ್ರೆ ಈ ಬಗ್ಗೆ ತುಂಬಾನೆ ಜಗಳ ಆಗುತ್ತೆ.
ಯಾರನ್ನೂ ಏನೂ ಕೇಳಬೇಕಾಗಿಲ್ಲ
ಸಿಂಗಲ್(Single) ಆಗಿದ್ದರೆ ನೀವು ಯಾರನ್ನೂ ಏನನ್ನೂ ಕೇಳಬೇಕಾಗಿಲ್ಲ. ಅದು ಏಕಾಂಗಿಯಾಗಿರುವುದರ ದೊಡ್ಡ ಪ್ರಯೋಜನವಾಗಿದೆ. ನಿಮಗೆ ಅನಿಸಿದ ಸ್ಥಳಕ್ಕೆ ಹೋಗಬಹುದು, ನಿಮಗೆ ಬೇಕಾದಾಗ ಬೇಕೆನಿಸಿದ ಕೆಲಸ ಮಾಡಬಹುದು, ದಿನಪೂರ್ತಿ ಮಲಗಿದ್ರೂ ಕೇಳೋರು ಇರಲ್ಲ. ಹಾಗಾಗಿ ಒಟ್ಟಲ್ಲಿ ಹೇಳೋದಾದ್ರೆ ಸಿಂಗಲ್ ಆಗಿರೋದೆ ಬೆಸ್ಟ್.