MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮದುವೆಯಾಗಿ ಮಧ್ಯರಾತ್ರಿಯಲ್ಲಿ ಮನೆಗೆ ಬಂದ ರೇಖಾ ಅವರಿಗೆ ಹೇಮಾ ಮಾಲಿನಿ ಕೇಳಿದ್ದೇನು ಗೊತ್ತಾ?

ಮದುವೆಯಾಗಿ ಮಧ್ಯರಾತ್ರಿಯಲ್ಲಿ ಮನೆಗೆ ಬಂದ ರೇಖಾ ಅವರಿಗೆ ಹೇಮಾ ಮಾಲಿನಿ ಕೇಳಿದ್ದೇನು ಗೊತ್ತಾ?

ಹಿರಿಯ ನಟಿ ಹಾಗೂ ಬಾಲಿವುಡ್‌ನ ಸುಂದರಿಯರಲ್ಲಿ ಒಬ್ಬರಾದ ರೇಖಾ  (Rekha) ಅವರಿಗೆ 68 ವರ್ಷಗಳ ಸಂಭ್ರಮ. ಅಕ್ಟೋಬರ್ 10,1954 ರಂದು ಚೆನ್ನೈನಲ್ಲಿ ಜನಿಸಿದ  ರೇಖಾ ಅವರ ಜೀವನವು  ಬಾಲ್ಯದಿಂದಲೂ, ವಿವಾದಗಳಿಂದ ಸುತ್ತುವರೆದಿದೆ ಮತ್ತು ಇಂದಿಗೂ ಅದು ಮುಂದುವರೆದಿದೆ. ಅಭಿನಯ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾದ ರೇಖಾ ಅವರ ಆಫೇರ್‌ಗಳ ಕಥೆಗಳು ಕಡಿಮೆ ಇರಲಿಲ್ಲ. ಅನೇಕರ ಜೊತೆ ಹೆಸರು ಲಿಕಂಕ್‌ ಆದ ನಂತರ, ರೇಖಾ ಅಂತಿಮವಾಗಿ ದೆಹಲಿ ಮೂಲದ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು. 1990 ರಲ್ಲಿ, ರೇಖಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದ ಸಮಯದಲ್ಲಿ ಮುಕೇಶನನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರು. ಒಂದು ರಾತ್ರಿ ದೇವಸ್ಥಾನದಿಂದ ಮುಖೇಶ್ ಜೊತೆ ರಹಸ್ಯವಾಗಿ ಮದುವೆಯಾಗಿ ಅಲ್ಲಿಂದ ನೇರವಾಗಿ ಹೇಮಾ ಮಾಲಿನಿಯ ಮನೆಗೆ ತಲುಪಿದರು. ರೇಖಾರನ್ನು ಈ ಸ್ಥಿತಿಯಲ್ಲಿ ನೋಡಿದ ಹೇಮಾ ಮಾಲಿನಿ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? 

2 Min read
Author : Contributor Asianet
Published : Oct 08 2022, 04:54 PM IST
Share this Photo Gallery
  • FB
  • TW
  • Linkdin
  • Whatsapp
110

ಯಾಸಿರ್ ಉಸ್ಮಾನ್ ಅವರ ಪುಸ್ತಕ Rekha: An Untold Story ರೇಖಾ ಅವರ ಜೀವನಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಹೊಂದಿದೆ. ರೇಖಾ ಮತ್ತು ಮುಖೇಶ್ ಅಗರ್ವಾಲ್ ಅವರ ಮದುವೆಯ ಬಗ್ಗೆ ಸಹ ವಿವರಿಸಲಾಗಿದೆ.  

210

ಮುಕೇಶ್ ಅವರನ್ನು ಮದುವೆಯಾಗುವ ನಿರ್ಧಾರದಲ್ಲಿ ರೇಖಾ ಯಾವುದೇ ಆತುರವನ್ನು ಮಾಡಲಿಲ್ಲ .ರೇಖಾ: ಅನ್‌ಟೋಲ್ಡ್ ಸ್ಟೋರಿಯಲ್ಲಿ, ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೇಖಾ-ಮುಖೇಶ್ ಅಗರ್ವಾಲ್ ಭೇಟಿಯಾದರು ಎಂದು ಹೇಳಲಾಗಿದೆ. 

310

ಆರಂಭದಲ್ಲಿ ರೇಖಾ ಮುಖೇಶ್‌ಗೆ ಹೆಚ್ಚು ಗಮನ ಕೊಡದಿದ್ದರೂ ಕ್ರಮೇಣ ಅವರಿಗೆ  ಹತ್ತಿರವಾದರು. ರೇಖಾರನ್ನು ಭೇಟಿಯಾಗಲು ಮುಖೇಶ್ ಕೂಡ ಆಗಾಗ ಮುಂಬೈಗೆ ಬರತೊಡಗಿದರು. ಮುಕೇಶ್ ವಿಶೇಷವಾಗಿ ಮುಂಬೈಗೆ ಬಂದು ರೇಖಾರಿಗೆ ಮದುವೆ ಪ್ರಸ್ತಾಪ ಮಾಡಿದಾಗ ರೇಖಾ ತಡಮಾಡದೆ ಪ್ರಸ್ತಾಪವನ್ನು ಒಪ್ಪಿಕೊಂಡರು ಮತ್ತು ನಂತರ ಬೇಗನೆ ಮದುವೆಯಾಗಲು ನಿರ್ಧರಿಸಿದರು ಎಂದು ಲೇಖಕ ಯಾಸಿರ್ ಉಸ್ಮಾನ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

410

ರೇಖಾ ಮತ್ತು ಮುಖೇಶ್ ಅಗರ್ವಾಲ್ ರಾತ್ರಿ 10.30 ರ ನಂತರ .ಮುಂಬೈನ ದೇವಸ್ಥಾನಕ್ಕೆ ತೆರಳಿ, ಅರ್ಚಕರನ್ನು ಎಬ್ಬಿಸಿ ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿ ಇಬ್ಬರೂ  ಅತ್ಯಂತ ಸರಳವಾಗಿ ವಿವಾಹವಾದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.


 

510

ಮದುವೆಯಾದ ನಂತರ, ಮುಖೇಶ್ ಅಗರ್ವಾಲ್ ತನ್ನ ಸ್ನೇಹಿತೆ ದೀಪ್ತಿ ನವಲ್ ಅವರ ಮನೆಗೆ ಹೋಗಬೇಕೆಂದು ಬಯಸಿದ್ದರು, ಆದರೆ ರೇಖಾ ತನ್ನ ವಿಶೇಷ ಸ್ನೇಹಿತೆ ಹೇಮಾ ಮಾಲಿನಿಯ ಮನೆಗೆ ಹೋಗಲು ಬಯಸಿದ್ದರು. ವಾಸ್ತವವಾಗಿ, ಇಬ್ಬರೂ ದಕ್ಷಿಣದವರು ಮತ್ತು ಇಬ್ಬರ ನಡುವೆ ವಿಶೇಷ ಸಂಬಂಧವಿತ್ತು.


 

610

ಮಧ್ಯರಾತ್ರಿ ರೇಖಾ ತನ್ನ ಪತಿಯೊಂದಿಗೆ ಹೇಮಾ ಮಾಲಿನಿಯ ಮನೆಗೆ ಬಂದರು. ರೇಖಾರ ಕೊರಳಿನಲ್ಲಿದ್ದ ಸಿಂಧೂರ ಮತ್ತು ಮಾಲೆಯನ್ನು ನೋಡಿದ ತಕ್ಷಣ  ಈಗ ನೀನು  ಮದುವೆಯಾಗಿದ್ದೇನೆ ಎಂದು ಹೇಳಬೇಡ ಹೇಮಾ ಹೇಳಿದರು. ಆದರೆ ರೇಖಾ ಅವರ ಹೌದೆಂದು ಒಪ್ಪಿದಾಗ ಹೇಮಾ ಮಾಲಿನಿ  ಬೆಚ್ಚಿಬಿದ್ದರು. ಅವನ ಬಳಿ ತುಂಬಾ ಹಣವಿದೆಯೇ, ಅವನು ತುಂಬಾ ಶ್ರೀಮಂತನಾ ಎಂದು ಹೇಮಾ ರೇಖಾಳ ಕಿವಿಯಲ್ಲಿ ಕೇಳಿದಳು. ಹೇಮಾಳ ಪ್ರಶ್ನೆಗೆ ರೇಖಾ ಮುಗುಳ್ನಕ್ಕು ಸುಮ್ಮನಾದರು .


 

710

ರೇಖಾ ಮತ್ತು ಮುಕೇಶ್ ಅಗರ್ವಾಲ್ ಅವರ ಮದುವೆ ಕೇವಲ 9 ತಿಂಗಳಾಗಿತ್ತು ಮತ್ತು ಒಂದು ದಿನ ರೇಖಾ ಅವರ ದುಪಟ್ಟಾದಲ್ಲಿ ನೇಣು ಬಿಗಿದುಕೊಂಡು ಮುಖೇಶ್ ಆತ್ಮಹತ್ಯೆ ಮಾಡಿಕೊಂಡರು . ಇದಾದ ನಂತರ ಮಾಧ್ಯಮದವರು ರೇಖಾ ಅವರನ್ನು ಬಿಡಲಿಲ್ಲ. ರೇಖಾ ಬಗ್ಗೆ ಸಾಕಷ್ಟು ಕಥೆಗಳು ಪ್ರಕಟವಾದವು. ಅವರು ಜನರಿಗೆ ಉತ್ತರಿಸಲು ಆಗದೆ ಮೌನವಾಗಿದ್ದರು.

810

ರೇಖಾ ತನ್ನ ವೃತ್ತಿಜೀವನವನ್ನು ಬಾಲ ಕಲಾವಿದೆಯಾಗಿ ದಕ್ಷಿಣ ಚಲನಚಿತ್ರಗಳೊಂದಿಗೆ ಪ್ರಾರಂಭಿಸಿದರು. ನಿಧಾನವಾಗಿ ಅವರಿಗೆ ಬಾಲಿವುಡ್ ಚಿತ್ರಗಳಿಂದ ಆಫರ್ ಬರತೊಡಗಿತು. ಅವರು 1970 ರಲ್ಲಿ ಸಾವನ್ ಭಾಡೋ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆರಂಭಿಕ ಹಂತವು ಅವರಿಗೆ ಉತ್ತಮವಾಗಿರಲಿಲ್ಲ, ಆದರೆ ನಂತರ ಅವರು ತಮ್ಮ ಕೆಲಸವನ್ನು ಗಂಭೀರವಾಗಿ ಪರಿಗಣಿಸಿದರು ಮತ್ತು ವಿಭಿನ್ನ ಗುರುತನ್ನು ಮಾಡಿದರು.


 

910

ರೇಖಾ ತಮ್ಮ ವೃತ್ತಿಜೀವನದಲ್ಲಿ 180 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಬಾಲಿವುಡ್‌ನ ಪ್ರತಿಯೊಬ್ಬ ಸೂಪರ್‌ಸ್ಟಾರ್‌  ಜೊತೆಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಅನೇಕರೊಂದಿಗೆ, ಅವರ ಆಫೇರ್‌ಗಳ ಕಥೆಗಳು ಸಹ ಪ್ರಸಿದ್ಧವಾಗಿವೆ.

1010

ಜಿತೇಂದ್ರ, ವಿನೋದ್ ಮೆಹ್ರಾ  ನವೀನ್ ನಿಶ್ಚಲ್, ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್ ಮುಂತಾದವರ ಜೊತೆ  ಅವರು ಸಂಬಂಧ ಹೊಂದಿದ್ದರು. ಆದರೆ ಯಾರೊಂದಿಗೂ ಸಂಬಂಧವು   ಕಾರ್ಯರೂಪಕ್ಕೆ ಬರಲಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CA
Contributor Asianet
ಮದುವೆ
ಬಾಲಿವುಡ್

Latest Videos
Recommended Stories
Recommended image1
Rashmika-Vijay Wedding: ರಶ್ಮಿಕಾ-ವಿಜಯ್ ಮದುವೆಗೆ ಪ್ರಧಾನಿ ಮೋದಿ ಶುಭಾಶಯ! 'ಇದು ದೈವಿಕವಾಗಿ ಬರೆಯಲ್ಪಟ್ಟ ಅಧ್ಯಾಯ' ಎಂದ ನಮೋ!
Recommended image2
Rashmika Mandanna, Vijay Deverakonda ವಿವಾಹವಾಗುತ್ತಿರುವ ಲಕ್ಸುರಿ ರೆಸಾರ್ಟ್‌ ಬಾಡಿಗೆ ಎಷ್ಟು ? ಗೆಸ್ಟ್‌ಗಳ್ಯಾರು?
Recommended image3
ವಿಜಯ್ ಜೊತೆ ಬಂಗಾರವೂ ಸಿಕ್ತು, ರಶ್ಮಿಕಾ ಫುಲ್ ಕಿಲಕಿಲ, ಮದ್ವೆಗೂ ಮೊದಲೇ ಅತ್ತೆಯ ಗಿಫ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved