ವಧು ಬೇಡಿಕೆ ಕೇಳಿ ಬೆಚ್ಚಿಬಿದ್ದ ಶೋಭನ ರಾತ್ರಿಗೆ ರೆಡಿಯಾಗಿ ಬಂದ ವರ; ಕುಟುಂಬಸ್ಥರು ಶಾಕ್
ವಧುವೊಬ್ಬಳು ಮೊದಲರಾತ್ರಿಯಲ್ಲಿ ತನ್ನ ಪತಿಯಿಂದ 90 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದಾಳೆ. ಈ ಘಟನೆಯು ಎರಡೂ ಕುಟುಂಬಗಳ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿ, ಪ್ರಕರಣವು ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.

ಟಚ್ ಮಾಡೋಕೆ 90 ಲಕ್ಷ ಬೇಕಂತೆ!
ವಧುವೊಬ್ಬರು ಮೊದಲರಾತ್ರಿಯಲ್ಲಿ ತನ್ನನ್ನು ಮುಟ್ಟಲು 90 ಲಕ್ಷ ಕೇಳಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ನನ್ನೊಂದಿಗೆ ಸಂಪರ್ಕ ಹೊಂದಲು 90 ಲಕ್ಷ ನೀಡಲೇಬೇಕೆಂದು ವಧು ಹಠ ಹಿಡಿದ್ದಿದ್ದಳು. ಸದ್ಯ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ವಧು 90 ಲಕ್ಷ ಕೇಳಿದ್ಯಾಕೆ ಎಂಬುದಕ್ಕೆ ಉತ್ತರ ಇಲ್ಲಿದೆ.
ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಜಗಳ
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶಪುರ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮದುವೆಯ ಬಳಿಕ ವಧುವನ್ನು ನಮ್ಮನೆಗೆ ಕರೆದುಕೊಂಡು ಬರಲಾಗಿತ್ತು. ಮೊದಲರಾತ್ರಿಯಲ್ಲಿ ನಮ್ಮ ಹುಡುಗನ ಬಳಿ ಹಣ ಕೇಳಿದ್ದಾಳೆ ಎಂದು ವರನ ಕುಟುಂಬ ಆರೋಪಿಸಿದ್ದಾರೆ. ಇದೇ ವಿಷಯವಾಗಿ ಎರಡೂ ಕುಟುಂಬಗಳು ನಡುವೆ ಜಗಳ ಏರ್ಪಟ್ಟಿದೆ. ಈ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
ಮೊದಲರಾತ್ರಿಯಲ್ಲಿ ಆಗಿದ್ದೇನು?
ವರ ಕೋಣೆಯೊಳಗೆ ಹೋಗುತ್ತಿದ್ದಂತೆ ವಧು 90 ಲಕ್ಷ ನಗದು ನೀಡಬೇಕೆಂದು ಹಠ ಹಿಡಿದಿದ್ದಾಳೆ. ಇಲ್ಲಿಗೆ ನಿಲ್ಲದ ವಧು ಹಣ ನೀಡಿದ್ರೆ ಮಾತ್ರ ವೈವಾಹಿಕ ಸಂಬಂಧಕ್ಕೆ ಅನುಮತಿ ಎಂದು ಹೇಳಿದ್ದಾಳೆ. ವರ ಹಣ ನೀಡಲು ಒಪ್ಪದಿದ್ದಾಗ ಇಬ್ಬರ ನಡುವೆ ಜಗಳ ಏರ್ಪಟ್ಟಿದ್ದು, ನಂತರ ಎರಡೂ ಕುಟುಂಬಗಳಿಗೆ ವಿಷಯ ತಿಳಿದಿದೆ.
ಗ್ಯಾಸ್‌ಪೈಪ್ ಹಿಡಿದು ನಿಂತ ವಧು
ಆರಂಭದಲ್ಲಿ ವರನ ಕುಟುಂಬಸ್ಥರು ವಧುವಿನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಇದ್ಯಾವೂದಕ್ಕೂ ಒಪ್ಪದ ವಧು, ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಆಕೆಯ ಪೋಷಕರು ಬರುತ್ತಿದ್ದಂತೆ ವಧು ಗಲಾಟೆ ಮಾಡಲು ಆರಂಭಿಸಿದ್ದಾಳೆ. ನಂತರ ಮನೆಯಲ್ಲಿ ವಸ್ತುಗಳನ್ನು ಒಡೆದು ಹಾಕಿ, ಗ್ಯಾಸ್ ಪೈಪ್‌ಲೈನ್ ಹಿಡಿದು ಎಲ್ಲರನ್ನು ಸಾಯಿಸುವ ಬೆದರಿಕೆ ಹಾಕಿದ್ದಾಳೆ ಎಂದು ವರನ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಸಿಗರೇಟ್ ಸೇದುತ್ತಿದ್ದ ಯುವತಿ ಮತ್ತು ಗೆಳೆಯರನ್ನು ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದ ಪುಂಡರ ಗುಂಪು!
ಪೊಲೀಸರಿಂದ ತನಿಖೆ ಆರಂಭ
ವರನ ಪೋಷಕರು, ಯುವತಿ ಹಣದಾಸೆಗಾಗಿಯೇ ಈ ಮದುವೆಯಾಗಿರೋದನ್ನು ಒಪ್ಪಿಕೊಂಡಿದ್ದಾಳೆ. ಈ ಗಲಾಟೆ ಬಳಿಕ ವಧು ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಓಡಿ ಹೋಗಿದ್ದಾಳೆ. ಇದರಲ್ಲಿ ವರನ ತಾಯಿ ನೀಡಿದ ಚಿನ್ನಾಭರಣಗಳು ಸೇರಿವೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆ ವರನ ಕುಟುಂಬಸ್ಥರು ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸದ್ಯ ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಸ್ಟೇಷನ್ ಮೆಟ್ಟಿಲೇರಿತು ಬೆಂಗಳೂರು ಬೆಕ್ಕುಗಳ ಲವ್ ಸ್ಟೋರಿ! ಪೊಲೀಸರು ಸುಸ್ತು- ಆಗಿದ್ದೇನು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

