Dating Appನಲ್ಲಿ ಇಂತಹ ಪುರುಷರಿದ್ದರೆ ಅವೈಯ್ಡ್ ಮಾಡಿ
ಈಗ ಏನಿದ್ರೂ ಆಪ್ ಗಳ ಜಮಾನ. ಏನೇ ಕೆಲಸ ಆಗಬೇಕಾದರೂ ಮೊಬೈಲ್‌ಗಳಲ್ಲಿರುವ ಆ್ಯಪ್‌ಗಳೇ (apps) ಮಾಡಿ ಮುಗಿಸುತ್ತವೆ. ಇದರ ಸಹಾಯ ಪಡ್ಕೋತ್ತಾರೆ ಜನ, ಫೇಸ್ ಬುಕ್, (facebook) ವಾಟ್ಸ್ ಆಪ್ (What's App), ಗೂಗಲ್ ಪೇ (Google Pay), ಇನ್ನೊಂದು ಮತ್ತೊಂದು ಎಲ್ಲವೂ ಆಪ್ ಗಳಲ್ಲಿ. ಜೊತೆಗೆ ಸಂಬಂಧ ಹುಡುಕಲೂ ಹಲವಾರು ಮ್ಯಾಟ್ರಿಮೋನಿಯಲ್ (matrimonial ) ಆಪ್ ಗಳಿವೆ. ಇನ್ನು ಡೇಟಿಂಗ್ ಆಪ್ ಗಳು ಇತ್ತಿಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ.
ನೀವು ಡೇಟಿಂಗ್ ಆಪ್ (Dating app) ಬಳಸುವವರಲ್ಲಿ ಒಬ್ಬರಾಗಿದ್ದರೆ, ಕೆಲವೊಂದು ವಿಷಯಗಳ ಬಗ್ಗೆ ಗಮನ ಹರಿಸಲೇಬೇಕು. ಯಾಕೆಂದರೆ ಸುಮ್ ಸುಮ್ನೆ ಡೇಟಿಂಗ್ ಆಪ್ ಮೂಲಕ ಯಾರ ಜೊತೆನೋ ಡೇಟ್ ಮಾಡಲು ತಯಾರಿ ನಡೆಸಿದ್ದರೆ, ಮುಂದೆ ಸಮಸ್ಯೆಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಕೆಲವೊಂದಿಷ್ಟು ಜನರನ್ನು ಅವಾಯ್ಡ್ ಮಾಡಿ.
ತನ್ನ ಮಾಜಿ ಪ್ರೇಮಿಯನ್ನು (ex lover) ಮರೆಯಲು ಪ್ರಯತ್ನಿಸುವವರು
ನೀವು ಆನ್ ಲೈನ್ ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬರುತ್ತೀರಿ. ಅವರು ಈಗಷ್ಟೇ ಬ್ರೇಕ್ ಅಪ್ (breakup) ಆಗಿರುತ್ತಾರೆ. ನಿಮ್ಮ ಬಳಿ ಅವರು ಈ ವಿಷಯವನ್ನೇಲಿ ಹೇಳಿರುತ್ತಾರೆ. ನೀವು ಅವರಿಗೆ ಸಾಂತ್ವಾನ ಹೇಳಿಯೂ ಇರಬಹುದು. ನಂತರ ಅವರು ಇದ್ದಕ್ಕಿದ್ದಂತೆ ನಿಮ್ಮ ಸಂದೇಶಗಳಿಗೆ (messages) ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತಾರೆ ಯಾಕೆ ಗೊತ್ತಾ?
ಯಾಕೆಂದರೆ ಕಾರಣ ಇಷ್ಟೇ ಅವರು ತಮ್ಮ ಮಾಜಿ ಪ್ರೇಮಿಯನ್ನು ಮರೆಯಲು ಹೊಸ ಪ್ರೀತಿಯನ್ನು ಅಥವಾ ಆಕರ್ಷಣೆಯನ್ನುಪಡೆಯಲು ಡೇಟಿಂಗ್ ಆಪ್ (dating app) ಬಳಕೆ ಮಾಡಿರುತ್ತಾರೆ. ಅವನು ನಿಜವಾಗಿಯೂ ತನ್ನ ಹಿಂದಿನ ಸಂಬಂಧದಿಂದ ಮುಂದುವರಿಯಲು ಸಿದ್ಧನಾಗಿದ್ದಾನೆ ಎಂದು ಭಾವಿಸುತ್ತಾನೆ, ಆದರೆ ಮಾಜಿ ಪ್ರೇಮಿ ಇನ್ನೂ ಅವರ ಹೃದಯದಲ್ಲಿ ಇರುತ್ತಾಳೆ. ಆದುದರಿಂದ ಇಂತಹ ಸಂಬಂಧವನ್ನು ಅವಾಯ್ದ್ ಮಾಡೋದು ಉತ್ತಮ.
ಸೆಟಲ್ (settle) ಆಗಲು ಸಿದ್ಧವಾಗಿಲ್ಲ
20 ಅಥವಾ 30 ವರ್ಷದ ನಡುವಿನ ಪುರುಷರು ಸೆಟಲ್ ಅಥವಾ ಬದ್ಧರಾಗಿರಲು ಸಿದ್ಧರಾಗಿರುವುದಿಲ್ಲ. ಅವರು ಸಾಮಾನ್ಯವಾಗಿ ವೃತ್ತಿಗಳು, ಮಹತ್ವಾಕಾಂಕ್ಷೆಗಳು ಮತ್ತು ಹವ್ಯಾಸಗಳನ್ನು ಹೊಂದಿರುತ್ತಾರೆ, ಆದರೆ ಕುಟುಂಬವನ್ನು ರಚಿಸಲು ಅವರು ಸಿದ್ಧರಾಗಿರೋದಿಲ್ಲ.
ಇಂತಹ ಗುಣ ಹೊಂದಿರುವವರು ಅಪರೂಪದ ಸಂದರ್ಭಗಳಲ್ಲಿ ಸಂದೇಶಗಳನ್ನು (message) ಕಳುಹಿಸುತ್ತಾರೆ ಮತ್ತು ಹೆಚ್ಚಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಅಭಿಪ್ರಾಯಕ್ಕೆ ಬೆಲೆ ಕೊಡುವ, ಪರಿಪೂರ್ಣತೆ ಮತ್ತು ಗೌರವ (respect)ನೀಡುವ ವ್ಯಕ್ತಿಯನ್ನು ಮಾತ್ರ ಅವರು ಇಷ್ಟಪಡುತ್ತಾರೆ. ಇತರ ಮಹಿಳೆಯರು ಅವರಿಗೆ ಇಷ್ಟವಾಗೋದೆ ಇಲ್ಲ.
ಒಳ್ಳೆಯವರಂತೆ ಫೋಸ್ ಕೊಡೋರು
ಕೆಲವು ಪುರುಷರ ಪ್ರೊಫೈಲ್ (profile) ಗಳು ತುಂಬಾ ಸುಂದರವಾಗಿ. ಅವನ ಪ್ರೊಫೈಲ್ ಕೆಲವು ಸುಂದರವಾದ ಛಾಯಾಚಿತ್ರಗಳನ್ನು (photography) ಹೊಂದಿರಬಹುದು, ಮತ್ತು ಕೆಲವು ನಿಜವಾದ ಸುಂದರ ತಾಣಗಳು ಹೊಂದಿರಬಹುದು. ಅವರ ಪ್ರೊಫೈಲ್ ನೋಡಿದ ತಕ್ಷಣ ಅವರ ಕಡೆಗೆ ಒಲವು ತೋರುತ್ತದೆ. ನೀವು ಅವರನ್ನು ಭೇಟಿಯಾಗುವ ಮೊದಲು, ಅವು ನಿಜವೆಂದು ಖಚಿತಪಡಿಸಿಕೊಳ್ಳಿ.
ಕೆಲವೊಮ್ಮೆ ಜನ ಸುಳ್ಳು ಹೇಳಿ ಪ್ರೊಫೈಲ್ ಸೃಷ್ಟಿ ಮಾಡುತ್ತಾರೆ. ಸುಳ್ಳುಗಾರರು ಅಥವಾ ನಾರ್ಸಿಸಿಸ್ಟ್ ಗಳಾಗಲು ಸಾಮರ್ಥ್ಯವನ್ನು ಹೊಂದಿದ್ದಾರೆ. ಸಂಬಂಧಗಳು ಬೆಳೆಯಲು ಸಮಯ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಯಾವುದು ನಿಜ, ಯಾವುದು ಸುಳ್ಳು ಎನ್ನುವ ಬಗ್ಗೆ ಸರಿಯಾಗಿ ತಿಳಿಯಿರಿ. ಪ್ರೊಫೈಲ್ ನಲ್ಲಿ ಇರೋದೆಲ್ಲ ನಿಜ ಎಂದು ಕಣ್ಣು ಮುಚ್ಚಿ ನಂಬಬೇಡಿ.
ಮಿಸ್ಟರ್ ಶೋ-ಆಫ್ (Mr show off)
ಅವನ ಡೇಟಿಂಗ್ ಪ್ರೊಫೈಲ್ ನಲ್ಲಿ, ಈ ವ್ಯಕ್ತಿಯು ತನ್ನ ಮತ್ತು ಇತರ ಮಹಿಳೆಯರೊಂದಿಗೆ ಅನೇಕ ಛಾಯಾಚಿತ್ರಗಳನ್ನು ಹೊಂದಿದ್ದಾನೆ. ಅವುಗಳಲ್ಲಿ ಬಹಳಷ್ಟು ಇವೆ. ಅವನು ಜಗತ್ತಿಗೆ - ಮತ್ತು ನಿಮಗೆ ತಾನು ತುಂಬಾ ಉತ್ತಮ ವ್ಯಕ್ತಿ. ನಾನು ಎಲ್ಲಾ ಪ್ರದೇಶಗಳಿಗೆ ಪ್ರವಾಸ ಹೋಗುತ್ತೇನೆ ಎಂದು ಶೋ ಆಫ್ ಮಾಡುತ್ತಾರೆ.
ಇಂತಹ ಜನರು Dating App ಮೂಲಕ ದೀರ್ಘಕಾಲೀನ ಸಂಪರ್ಕವನ್ನು ಹುಡುಕುವ ಸಾಧ್ಯತೆ ಇಲ್ಲ. ಮತ್ತು ಛಾಯಾಚಿತ್ರಗಳಲ್ಲಿನ (photography) ಮಹಿಳೆಯರು (Women) ಅವನ ಸ್ನೇಹಿತರು (Friends) ಅಥವಾ ಸಂಬಂಧಿಕರು ಎಂದು ಅವನು ನಿಮಗೆ ಹೇಳಿದರೆ, ಅವನು ಬಹುಶಃ ಸುಳ್ಳು ಹೇಳುತ್ತಾನೆ. ಇಂತಹ ಜನರು ಕೇವಲ ಪ್ಲರ್ಟ್ ಮಾಡುತ್ತಾರೆ ಅಷ್ಟೇ.
ಮಿಸ್ಟರ್ ಮಿಸ್ಟರಿ (Mr Mystery)
ತನ್ನ ಪ್ರೊಫೈಲ್ ನಲ್ಲಿ ತನ್ನ ಯಾವುದೇ ಫೊಟೋಗ್ರಾಫಿ (photography) ಹೊಂದಿರದ ವ್ಯಕ್ತಿ. ಅಥವಾ ಅವರ ಚಿತ್ರಗಳು ಗಾಢವಾಗಿವೆ ಅಥವಾ ಮಬ್ಬಾಗಿವೆ. ಅವನು ಸನ್ ಗ್ಲಾಸ್ ಮತ್ತು ಟೋಪಿಯನ್ನು ಹೊಂದಿದ್ದಾನೆ. ಅವನು ಏನನ್ನೋ ಮರೆಮಾಚುತ್ತಾನೆ? ಅವನು ನಾಚಿಕೆಸ್ವಭಾವದ ವ್ಯಕ್ತಿಯೇ? ಆ ವ್ಯಕ್ತಿ ಸಂಬಂಧದಲ್ಲಿರಬಹುದು ಅಥವಾ ಮದುವೆಯಾಗಿರಬಹುದು ಮತ್ತು ತನ್ನ ಸಂಗಾತಿಗೆ ಮೋಸ ಮಾಡಲು ಬಯಸಬಹುದು. ಅಥವಾ ಇಲ್ಲ, ಆದರೆ ಅದನ್ನು ಕಂಡುಹಿಡಿಯಲು ನೀವು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.