Asianet Suvarna News Asianet Suvarna News

ಬಾಲಿವುಡ್‌ಗೆ ಕಿಚ್ಚು ಹಚ್ಚಿದ ಒಂದು ಕಾಲದ ಅಫೇರ್ಸ್

ಬಾಲಿವುಡ್‌ನಲ್ಲಿ ಅಫೇರ್‌ಗಳು ಸೃಷ್ಟಿಯಾಗುವುದು ಬಲು ಬೇಗ. ಅವು ಮರೆಯಾಗುವುದೂ ಹಾಗೇ. ಬನ್ನಿ, ಇತ್ತೀಚೆಗಿಗೆ ಟುಸ್ ಎಂದ ಕೆಲವು ಹೈ ಪ್ರೊಫೈಲ್ ಪ್ರೇಮ ಪ್ರಕರಣಗಳನ್ನು ನೋಡೋಣ.

 

 

Bollywood renowned affairs which forgotten now
Author
Bengaluru, First Published Sep 18, 2021, 5:31 PM IST
  • Facebook
  • Twitter
  • Whatsapp

ಬಾಲಿವುಡ್‌ನಲ್ಲಿ ವಿವಾದಗಳು ಮತ್ತು ಪ್ರೇಮ ಪ್ರಕರಣಗಳು ಜೊತೆಯಾಗಿ ಸಾಗುತ್ತವೆ. ಚಲನಚಿತ್ರಗಳು ಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದರೆ, ಬಾಲಿವುಡ್ ತಾರೆಯರ ಅಫೇರ್‌ಗಳು ಸಹ ಹೆಡ್‌ಲೈನ್‌ಗಳನ್ನು ಪಡೆದುಕೊಳ್ಳುತ್ತವೆ. ಕೆಲವು ದಿಡೀರ್ ಜೋಡಿಗಳು ಹುಟ್ಟಿಕೊಳ್ಳುತ್ತವೆ. ಎಲ್ಲ ಮಿಡಿಯಾಗಳಲ್ಲೂ ಅವರ ಬಗ್ಗೆ ಯದ್ವಾತದ್ವಾ ಸುದ್ದಿಯಾಗುತ್ತದೆ. ಅವರೂ ಹಾಗೇ ನಡೆದುಕೊಳ್ಳುತ್ತಾರೆ. ಇವರು ಮದುವೆಯಾಗಿಯೇ ಬಿಟ್ಟರು ಎಂಬಲ್ಲಿಯವರೆಗೂ ಸುದ್ದಿಯಾಗುತ್ತದೆ. ಆದರೆ ಕೆಲವೇ ವರ್ಷಗಳಲ್ಲಿ ಆ ಜೋಡಿ ತೆರೆಯ ಮರೆಗೆ ಸರಿದುಹೋಗುತ್ತದೆ. ಇಬ್ಬರೂ ಬೇರ್ಯಾರನ್ನೋ ಮದುವೆಯಾಗಿ, ಡೈವೋರ್ಸ್ ಪಡೆದು ಹೀಗೆ ಜೀವನ ಮುನ್ನಡೆಯುತ್ತಾ ಇರುತ್ತದೆ. ಹಾಗೆಂದು ಆಗಿಹೋದ ಅಫೇರ್‌ಗಳೇನೂ ಸುಳ್ಳಲ್ಲ. ಬನ್ನಿ. ಅಂಥ ಕೆಲವು ಬಾಲಿವುಡ್‌ನ ಬಿಗ್‌ ಅಫೇರ್‌ಗಳನ್ನು ನೋಡೋಣ.

ಪ್ರಿಯಾಂಕಾ ಚೋಪ್ರಾ ಮತ್ತು ಶಾಹಿದ್ ಕಪೂರ್
ಒಂದು ಕಾಲದಲ್ಲಿ ಸುದ್ದಿಯಾಗಿದ್ದ ಆದರೆ ಈಗ ಮರೆತುಹೋಗಿರುವ ಒಂದು ಕಥೆ ಪ್ರಿಯಾಂಕಾ ಚೋಪ್ರಾ ಮತ್ತು ಶಾಹಿದ್ ಕಪೂರ್ ಅವರದು. ಇವರಿಬ್ಬರು 36 ಚೈನಾ ಟೌನ್, ಕಮೀನೇ ಮತ್ತು ತೆರಿ ಮೇರಿ ಕಹಾನಿ ಮುಂತಾದ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಲವಾದ ಸುದ್ದಿಗಳಿದ್ದವು. ಆದರೆ ಅವರಿಬ್ಬರಲ್ಲಿ ಯಾರೂ ಅದನ್ನು ದೃಢೀಕರಿಸಲಿಲ್ಲ. ಈಗ ಇಬ್ಬರೂ ಬೇರೆ ಬೇರೆ ಸಂಸಾರಸ್ಥರು.
 

Bollywood renowned affairs which forgotten now

ದೀಪಿಕಾ ಪಡುಕೋಣೆ ಮತ್ತು ಯುವರಾಜ್ ಸಿಂಗ್
ದೀಪಿಕಾ ಪಡುಕೋಣೆ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅವರಿಬ್ಬರು ಒಟ್ಟಾಗಿ ಮಾಡುತ್ತಿದ್ದ ಪ್ರಣಯಪ್ರವಾಸಗಳು ಒಟ್ಟಾಗಿ ಇಂತಹ ವದಂತಿಗಳಿಗೆ ದಾರಿ ಮಾಡಿಕೊಟ್ಟವು. ಆದರೂ ಈ ಸಂಬಂಧವನ್ನು ಈಗ ಮರೆತುಬಿಡಲಾಗಿದೆ. ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ.
 

Bollywood renowned affairs which forgotten now

ಕಂಗನಾ ರಣಾವತ್ ಮತ್ತು ಅಧ್ಯಯನ್ ಸುಮನ್
ಕಂಗನಾ ರಣಾವತ್ ಮತ್ತು ಅಧ್ಯಯನ್ ಸುಮನ್ ಅವರ ಸಂಬಂಧವು ಅತ್ಯಂತ ವಿವಾದಾಸ್ಪದವಾಗಿತ್ತು. ಏಕೆಂದರೆ ಶೇಖರ್ ಸುಮನ್ ಅವರ ಮಗ ಅಧ್ಯಯನ್, ಕಂಗನಾ ಜೊತೆಗಿನ ತಮ್ಮ ಬ್ರೇಕ್‌ಅಪ್ ನಂತರ ಆ ನಟಿಯ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದರು. ಆಗ ತಮ್ಮ ನಡುವೆ ಸಂಬಂಧ ಇದ್ದುದನ್ನೇ ಕಂಗನಾ ನಿರಾಕರಿಸಿದರು.
 

Bollywood renowned affairs which forgotten now

ರಣಬೀರ್ ಅಥವಾ ಸಿದ್ಧಾರ್ಥ್ ಅಲ್ಲ, ಈ ಕೋಸ್ಟಾರ್‌ ಮೇಲೆ ಕ್ರಶ್‌ ಹೊಂದಿದ್ದರು ಆಲಿಯಾ!

ರಣವೀರ್ ಸಿಂಗ್ ಮತ್ತು ಅಹನಾ ಡಿಯೋಲ್
ಕಾಲೇಜು ದಿನಗಳಲ್ಲಿ, ರಣವೀರ್ ಸಿಂಗ್ ಅವರು ಹೇಮಾಮಾಲಿನಿ ಮತ್ತು ಧರ್ಮೇಂದ್ರ ಅವರ ಪುತ್ರಿ ಅಹಾನಾ ಡಿಯೋಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಅವರ ಬಾಂಧವ್ಯ ಬೇಗನೆ ಆಪ್ತತೆ ಕಳೆದುಕೊಂಡಿತು. ನಂತರ ರಣವೀರ್ ಮತ್ತು ದೀಪಿಕಾ ಪಡುಕೋಣೆ ಒಂದಾದರು.
 

Bollywood renowned affairs which forgotten now

ಅರ್ಜುನ್ ಕಪೂರ್ ಮತ್ತು ಅರ್ಪಿತಾ ಖಾನ್
ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮುನ್ನ ಅರ್ಜುನ್ ಕಪೂರ್ ಅವರು ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರನ್ನು ಪ್ರೀತಿಸುತ್ತಿದ್ದರು. ಆದರೆ, ಯಾವುದೋ ಕಾರಣದಿಂದ ಅವರಿಬ್ಬರೂ ಬೇರೆಯಾದರು. ಈಗ, ಅರ್ಜುನ್ ಮಲೈಕಾ ಅರೋರಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
 

Bollywood renowned affairs which forgotten now

ದುಲ್ಖರ್ ಸಲ್ಮಾನ್‌ಗೆ ಯುಎಇ ಗೋಲ್ಡನ್ ವೀಸಾ, ಏನಿದರ ವಿಶೇಷ?

ಕುಶಾಲ್ ಟಂಡನ್ ಮತ್ತು ಗೌಹಾರ್ ಖಾನ್
ಇಶಾಕ್‌ಜಾದೆ ನಟಿ ಗೌಹಾರ್ ಖಾನ್ ಅವರು ಬಿಗ್‌ಬಾಸ್ ಮನೆಯಲ್ಲಿ ಕುಶಾಲ್ ಟಂಡನ್ ಅವರನ್ನು ಭೇಟಿಯಾದರು ಮತ್ತು ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲವು ವರ್ಷಗಳ ಡೇಟಿಂಗ್ ನಂತರ ಅವರು ಅದನ್ನು ತೊರೆದರು.

ರಣಬೀರ್ ಕಪೂರ್ ಮತ್ತು ಅವಂತಿಕ್ ಮಲಿಕ್
ರಣಬೀರ್ ಕಪೂರ್ ಗೆಳತಿಯರ ಸುದೀರ್ಘ ಪಟ್ಟಿಯಲ್ಲಿ, ಅವಂತಿಕಾ ಮಲಿಕ್ ಕೂಡ ಒಂದು ಉಲ್ಲೇಖವನ್ನು ಪಡೆದಿದ್ದಾರೆ. ವರದಿಯ ಪ್ರಕಾರ, ನಟ ಬಾಲಿವುಡ್‌ಗೆ ಎಂಟ್ರಿ ನೀಡುವ ಮೊದಲು ರಣಬೀರ್ ಮತ್ತು ಅವಂತಿಕ ಜೊತೆಗಿದ್ದರು. ಈಗ ರಣಬೀರ್ ಮತ್ತು ಅಲಿಯಾ ಭಟ್ ಅವರು ಜೊತೆಗಿದ್ದಾರೆ.

ರಶ್ಮಿಕಾ ಹಿಂದಿಕ್ಕಿದ ಪೂಜಾ ಹೆಗ್ಡೆ... ಕಿರಿಕ್ ಬೆಡಗಿಗೆ ಬೇಡಿಕೆ ಕಡಿಮೆ ಆಯ್ತಾ?

Follow Us:
Download App:
  • android
  • ios