MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • News
  • Amruthadhare Serial: ಪ್ರೇಮಿಗಳು ಕಾಯ್ತಿದ್ದ ದಿನ ಬಂದೇ ಬಿಡ್ತು! ಮಗುವಿನ ಹೆಸರೇನು? ಗೆದ್ದವರು ಯಾರು?

Amruthadhare Serial: ಪ್ರೇಮಿಗಳು ಕಾಯ್ತಿದ್ದ ದಿನ ಬಂದೇ ಬಿಡ್ತು! ಮಗುವಿನ ಹೆಸರೇನು? ಗೆದ್ದವರು ಯಾರು?

ಅಮೃತಧಾರೆ ಸೀರಿಯಲ್​ ಪ್ರೇಮಿಗಳು ಕಾಯ್ತಿದ್ದ ದಿನ ಬಂದೇ ಬಿಟ್ಟಿದೆ. ಮಗುವಿಗೆ ಏನು ಹೆಸರು ಇಡಲಿದ್ದಾರೆ ಎಂದು ಕಾಯುತ್ತಿದ್ದವರಿಗೆ ಆ ಘಳಿಗೆ ಬಂದೇ ಬಿಟ್ಟದೆ. ಮಗುವಿಗೆ ನಾಮಕರಣ ಶಾಸ್ತ್ರ ಶುರುವಾಗಿದೆ. 

1 Min read
Suchethana D
Published : Jul 23 2025, 06:19 PM IST
Share this Photo Gallery
  • FB
  • TW
  • Linkdin
  • Whatsapp
17
ಗೌತಮ್​ ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ
Image Credit : Instagram

ಗೌತಮ್​- ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ

ಅಮೃತಧಾರೆಯಲ್ಲಿ ಇದೀಗ ಮಗುವಿನ ನಾಮಕರಣದ ವಿಶೇಷ ಎಪಿಸೋಡ್​ ನಡೆಯುತ್ತಿದೆ. ಎಲ್ಲರೂ ಮಗುವಿನ ನಾಮಕರಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಎಲ್ಲರೂ ಖುಷಿಯಾಗಿದ್ದಾರೆ. ಭೂಮಿಕಾ ಅಪ್ಪ-ಅಮ್ಮ ಎಲ್ಲರೂ ಮನೆಗೆ ಬಂದಿದ್ದು ಮನೆಯಲ್ಲಿ ಹಬ್ಬದ ವಾತಾವರಣ.

27
ಗೌತಮ್​- ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ
Image Credit : Instagram

ಗೌತಮ್​- ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ

ಶಕುಂತಲಾ ಒಬ್ಬಳನ್ನು ಬಿಟ್ಟರೆ ಎಲ್ಲರೂ ಖುಷಿಯಾಗಿದ್ದಾರೆ. ಮಗುವನ್ನು ಭಾಗ್ಯಮ್ಮಾ ಎತ್ತಿಕೊಂಡಿದ್ದಾಳೆ. ಅಷ್ಟಕ್ಕೂ ಆಕೆಯ ಆರೋಗ್ಯ ಸರಿಯಾಗಿದ್ದು, ಎಲ್ಲವೂ ನೆನಪಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ವಿಷಯವನ್ನು ಹೇಳಿಬಿಟ್ಟರೆ ಶಕುಂತಲಾ ಎಲ್ಲಿ ತನ್ನ ಮಗನ ಪ್ರಾಣಕ್ಕೆ ಕಂಟಕ ತಂದುಬಿಡುತ್ತಾಳೆಯೋ ಎನ್ನುವ ಆತಂಕ ಆಕೆಯದ್ದು. ಇದೇ ಕಾರಣಕ್ಕಾಗಿ ಸೈಲೆಂಟ್​ ಆಗಿಯೇ ಇದ್ದಾಳೆ.

Related Articles

Related image1
Lakshmi Nivasa: ಒಂದೇ ದಿನ ಇಬ್ಬರು ಗಂಡ-ಹೆಂಡ್ತಿ ಸಂಬಂಧ ಮುಕ್ತಾಯ ಮಾಡಿದ ಸೀರಿಯಲ್​?
Related image2
Vinay Kashyap Simha: ಬೀಡಿ ಸೇದಲು ಹೋಗಿ ತುಟಿ, ರೆಪ್ಪೆ ಸುಟ್ಟುಕೊಂಡ 'ಕರ್ಣ' ಸೀರಿಯಲ್​ ನಾಯಕ!
37
ಗೌತಮ್​- ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ- ಶಕುಂತಲಾ ಗರಂ
Image Credit : Instagram

ಗೌತಮ್​- ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ- ಶಕುಂತಲಾ ಗರಂ

ಇದೀಗ ಮಗುವಿಗೆ ಏನು ಹೆಸರು ಇಡಬೇಕು ಎನ್ನುವ ಬಗ್ಗೆ ಎಲ್ಲರೂ ಚರ್ಚಿಸಿಯಾಗಿದೆ. ಗೌತಮ್​ ಮತ್ತು ಭೂಮಿಕಾ ತಮ್ಮ ತಮ್ಮ ಇಷ್ಟರ ಹೆಸರುಗಳನ್ನು ಚೀಟಿಯಲ್ಲಿ ಬರೆದು ಹಾಕಿದ್ದಾರೆ. ಅದನ್ನು ಮಗುವಿನ ಸಹೋದರಮಾವ ಜೀವಾ ಚೀಟಿ ಎತ್ತಿದ್ದಾನೆ.

47
 ಮಗುವಿಗೆ ಚೀಟಿಯಲ್ಲಿ ಹೆಸರು ಬರೆಯುತ್ತಿರುವ ಗೌತಮ್​
Image Credit : Instagram

ಮಗುವಿಗೆ ಚೀಟಿಯಲ್ಲಿ ಹೆಸರು ಬರೆಯುತ್ತಿರುವ ಗೌತಮ್​

ಆ ಚೀಟಿಯಲ್ಲಿ ಏನು ಹೆಸರು ಬಂದಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಭೂಮಿಕಾ ಅಥವಾ ಗೌತಮ್ ಇಬ್ಬರಲ್ಲಿ ಯಾರು ಆಯ್ಕೆ ಮಾಡಿರುವ ಹೆಸರು ಬಂದಿದೆ ಎಂದು ನೋಡಬೇಕಿದೆ. ಅಷ್ಟಕ್ಕೂ ಗೌತಮ್​ ತನಗೆ ಹೆಣ್ಣುಮಗು ಬೇಕು ಎಂದಿದ್ದರೆ, ಭೂಮಿಕಾ ಗಂಡು ಎಂದಿದ್ದಳು.ಎರಡೂ ಮಕ್ಕಳು ಹುಟ್ಟಿವೆ. ಆದರೆ ಹೆಣ್ಣುಮಗುವನ್ನು ಅಪಹರಣ ಮಾಡಲಾಗಿದೆ.

57
ಗೌತಮ್​- ಭೂಮಿಕಾ ಮಗುವಿಗೆ ಚೀಟಿಯಲ್ಲಿದೆ ಹೆಸರು
Image Credit : Instagram

ಗೌತಮ್​- ಭೂಮಿಕಾ ಮಗುವಿಗೆ ಚೀಟಿಯಲ್ಲಿದೆ ಹೆಸರು

ಈ ರಹಸ್ಯವನ್ನು ಭೂಮಿಕಾಗೆ ಹೇಳಿ ಆಕೆಯ ಸ್ಥಿತಿಯನ್ನು ಶೋಚನೀಯ ಮಾಡುವ ಪ್ಲ್ಯಾನ್​ ಮಾಡಿದ್ದಾಳೆ ಶಕುಂತಲಾ. ಭೂಮಿಕಾ ಮಗುವಿನ ವಿಷಯದಲ್ಲಿ ತುಂಬಾ ಸೆನ್​ಸೆಟೆವ್​ ಆಗಿರುವ ಕಾರಣ, ವಿಷಯವನ್ನು ಹೇಳಬೇಡಿ ಎಂದು ವೈದ್ಯರು ಹೇಳಿರೋದ್ರಿಂದ ಆಕೆಯಿಂದ ಗೌತಮ್​ ಮತ್ತು ಆನಂದ್​ ವಿಷಯ ಮುಚ್ಚಿಟ್ಟಿದ್ದಾರೆ.

67
ಗೌತಮ್​- ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ
Image Credit : Instagram

ಗೌತಮ್​- ಭೂಮಿಕಾ ಮಗುವಿಗೆ ನಾಮಕರಣ ಶಾಸ್ತ್ರ

ಇದರ ನಡುವೆಯೇ ನಾಮಕರಣ ಶಾಸ್ತ್ರ ನಡೆಯುತ್ತಿದೆ. ಇಬ್ಬರೂ ಚೀಟಿ ಬರೆದು ಅಂತಿಮಗೊಳಿಸಿದ್ದಾರೆ. ಮಗುವಿಗೆ ಏನು ಹೆಸರು ಇಟ್ಟಿರಬಹುದು ಎನ್ನುವ ಕುತೂಹಲ ವೀಕ್ಷಕರದ್ದು. 

77
ಮಗುವಿನ ಹೆಸರು ಜೀವಾ ಕೈಯಲ್ಲಿ
Image Credit : Instagram

ಮಗುವಿನ ಹೆಸರು ಜೀವಾ ಕೈಯಲ್ಲಿ

ಆದರೆ ವಿಷಯ ತಿಳಿಸಿ ಬಿರುಗಾಳಿ ಎಬ್ಬಿಸುವ ಪ್ಲ್ಯಾನ್​ ಮಾಡುತ್ತಿದ್ದಾರೆ ಶಕುಂತಲಾ ಮತ್ತು ಜೈದೇವ. ಸದ್ಯ ಮಗುವಿನ ನಾಮಕರಣದ ಸಮಯದಲ್ಲಿ ಆಕೆ ಏನೂ ಹಾನಿ ಮಾಡದೇ ಇರಲಿ ಎಂದು ಸೀರಿಯಲ್​​ ಪ್ರೇಮಿಗಳು ಹೇಳುತ್ತಿದ್ದಾರೆ. 

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved