Lakshmi Nivasa: ಒಂದೇ ದಿನ ಇಬ್ಬರು ಗಂಡ-ಹೆಂಡ್ತಿ ಸಂಬಂಧ ಮುಕ್ತಾಯ ಮಾಡಿದ ಸೀರಿಯಲ್?
ಲಕ್ಷ್ಮೀ ನಿವಾಸ ಸೀರಿಯಲ್ಗೆ ಭಾರಿ ಟ್ವಿಸ್ಟ್ ಬಂದಿದೆ. ಒಂದೇ ದಿನ ಎರಡು ಜೋಡಿಗಳು ದೂರ ದೂರವಾಗ್ತಿದ್ದಾರೆ. ಏನಿದು ಅಂಥ ಟ್ವಿಸ್ಟ್? ಫ್ಯಾನ್ಸ್ ಬೇಸರ...

ಮನೆ ಬಿಟ್ಟ ಭಾವನಾ
ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್ ಭಿನ್ನ ವಿಭಿನ್ನ ಟ್ವಿಸ್ಟ್ ಪಡೆದುಕೊಳ್ಳುತ್ತಾ ಸಾಗಿದೆ. ಒಂದೆಡೆ ಜಾಹ್ನವಿ ಮತ್ತು ಜಯಂತ್ ನಡುವಿನ ಸ್ಟೋರಿಯಾದರೆ ಇನ್ನೊಂದು ಕಡೆಯಲ್ಲಿ, ಸಿದ್ದೇಗೌಡ್ರು ಮತ್ತು ಭಾವನಾ ಸ್ಟೋರಿ. ಒಂದೆಡೆ ತಾನು ಇರುವ ಮನೆಗೇ ಜಯಂತ್ ಬಂದರೂ ಆತನಿಂದ ತಪ್ಪಿಸಿಕೊಳ್ಳಲು ಚಿನ್ನುಮರಿ ಇನ್ನಿಲ್ಲದಂತೆ ಹೆಣಗಾಟ ಮಾಡುತ್ತಿದ್ದರೆ, ಅದೇ ಇನ್ನೊಂದೆಡೆ, ಪತಿ ಸಿದ್ದೇಗೌಡರಿಂದ ದೂರವಾಗಲೇಬೇಕಾದ ಪರಿಸ್ಥಿತಿ ಭಾವನಾಗೆ ಬಂದಿದೆ.
ವಿಶ್ವನ ಮನೆಗೆ ಜಯಂತ್ ಆಗಮನ
ಇದೀಗ ಒಂದೇ ಸಲಕ್ಕೆ ಎರಡೂ ಜೋಡಿ ದೂರ ದೂರವಾಗುವ ಸೂಚನೆ ಕಾಣಿಸುತ್ತಿದೆ. ವಿಶ್ವನ ಮನೆಯಲ್ಲಿ ಜಾಹ್ನವಿ ಉಳಿದುಕೊಂಡಿದ್ದಾಳೆ. ವಿಶ್ವನ ನಿಶ್ಚಿತಾರ್ಥವೂ ನಡೆದಿದೆ. ಆದರೆ ಆತ ಇನ್ನೂ ಜಾಹ್ನವಿಯ ಗುಂಗಿನಿಂದ ಹೊರಕ್ಕೆ ಬಂದಿಲ್ಲ. ಆದರೆ ಜಾಹ್ನವಿಗೆ ವಿಶ್ವ ತನ್ನನ್ನೇ ಲವ್ ಮಾಡ್ತಾ ಇರೋದು ಎನ್ನುವ ಸತ್ಯ ಅವಳಿಗೆ ತಿಳಿದಿದೆ. ಆದರೆ ಏನೂ ಮಾಡದ ಸ್ಥಿತಿ ಆಕೆಯದ್ದು.
ಜಯಂತ್ ನೋಡಿ ಚಿನ್ನುಮರಿ ಶಾಕ್
ಇದೀಗ ಜಯಂತ್ ವಿಶ್ವನ ಮನೆಗೇ ಬಂದಿದ್ದಾನೆ. ಆತನಿಗೆ ಜಾಹ್ನವಿಗೆ ಗಾಬರಿ ಆಗಿದೆ. ಆಕೆ ಅಲ್ಲಿ ಚಂದನಾ ಹೆಸರಿನಲ್ಲಿ ವಾಸವಾಗಿದ್ದಾಳೆ (ಅಸಲಿಗೆ ನಟಿಯ ಅಸಲಿ ಹೆಸರು ಕೂಡ ಚಂದನಾ). ಇದೇ ವೇಳೆ ವಿಶ್ವನ ಅಮ್ಮ ಜಯಂತ್ಗೆ ಕಾಫಿ ತಂದುಕೊಡಲು ಹೇಳಿದ್ದಾಳೆ. ಇದನ್ನು ಕೇಳಿ ಆಕೆಗೆ ಗಾಬರಿಯಾಗಿಹೋಗಿದೆ. ಇನ್ನು ಮುಗಿಯಿತು ತನ್ನ ಕಥೆ ಎಂದುಕೊಂಡಿದ್ದಾಳೆ.
ವಿಶ್ವನ ಮನೆಗೆ ಬಂದ ಜಯಂತ್
ಅಷ್ಟರಲ್ಲಿಯೇ ವಿಶ್ವ ಬಂದು ಆಕೆಯನ್ನು ಕಾಪಾಡಿದ್ದಾನೆ. ತನ್ನ ಭಾವಿ ಪತ್ನಿಯಿಂ ಕಾಫಿ ಕೊಡಿಸಿದ್ದಾನೆ. ಇದು ಜಾಹ್ನವಿ ಮತ್ತು ಜಯಂತ್ ಕಥೆ. ಅಲ್ಲಿಗೆ ಈ ಒಂದು ಜೋಡಿ ದೂರ ದೂರ ಆದ ಹಾಗೆಯೇ.
ಎರಡು ಜೋಡಿಗಳು ದೂರ ದೂರ
ಜೈಲಿನಿಂದ ಬಿಡುಗಡೆ ಮಾಡಿದರೆ, ಆತನಿಂದ ನೀನು ದೂರವಾಗಬೇಕು ಎಂದು. ಅದರಂತೆಯೇ, ಈಗ ರಾತ್ರಿ ಮಲಗಿದ ಸಮಯದಲ್ಲಿ, ಭಾವನಾ ಸಿದ್ದೇಗೌಡರಲ್ಲಿ ಮನಸ್ಸಿನಲ್ಲಿಯೇ ಕ್ಷಮೆ ಕೋರಿ ಮನೆಯಿಂದ ಹೊರಕ್ಕೆ ಹೋಗಿದ್ದಾಳೆ. ಅಲ್ಲಿಗೆ ಈ ದಂಪತಿ ಕೂಡ ದೂರ ದೂರ ಆಗುವಂತೆ ಕಾಣುತ್ತಿದೆ. ಇದು ವೀಕ್ಷಕರಿಗೆ ತುಂಬಾ ನೋವು ಉಂಟು ಮಾಡಿದ್ದು, ಭಾವನಾ ಮತ್ತು ಸಿದ್ದೇಗೌಡ್ರು ಒಂದಾಗಬೇಕು ಎನ್ನುತ್ತಿದ್ದಾರೆ.
ದೂರವಾಗಿದ್ದ ವಿಶ್ವ-ಜಾಹ್ನವಿ
ಅದೇ ಇನ್ನೊಂದೆಡೆ, ಜಾಹ್ನವಿ ಮತ್ತು ವಿಶ್ವ ಒಂದಾಗಬೇಕು ಎನ್ನುವುದು ಕೆಲವು ವೀಕ್ಷಕರ ಅಭಿಮತವಾಗಿತ್ತು. ಆದರೆ ಅದಕ್ಕೆ ಕೆಲವರು ವಿರೋಧಿಸುತ್ತಿದ್ದರು. ಜಯಂತ್ ಚಿನ್ನುಮರಿಯನ್ನು ತುಂಬಾ ಪ್ರೀತಿಸ್ತಾನೆ. ಅವರಿಬ್ಬರು ಒಂದಾಗಬೇಕು ಎನ್ನುತ್ತಿದ್ದರು. ಆದ್ದರಿಂದ ಮುಂದೇನು ಎನ್ನುವ ಕುತೂಹಲ ಸದ್ಯಕ್ಕಿದೆ.
ವಿಶ್ವನ ಸುದ್ದಿ ಅಮ್ಮಂಗೆ ತಿಳಿಯತ್ತಾ?
ಅದೇ ಇನ್ನೊಂದೆಡೆ ವಿಶ್ವ ಪ್ರೀತಿ ಮಾಡುತ್ತಿದ್ದ ಹುಡುಗಿ ತಮ್ಮ ಮನೆಯಲ್ಲಿಯೇ ಇರುವ ಚಂದನಾ ಎನ್ನುವುದು ಆತನ ಅಮ್ಮನಿಗೆ ತಿಳಿಯತ್ತಾ? ತಿಳಿದರೆ ಮುಂದೇನು? ಜಾಹ್ನವಿ ಅದೇ ಮನೆಯಲ್ಲಿ ಉಳಿದುಕೊಳ್ಳಲು ಆಕೆ ಅವಕಾಶ ಕೊಡುತ್ತಾಳಾ ಎನ್ನುವ ಪ್ರಶ್ನೆ ಕೂಡ ವೀಕ್ಷಕರನ್ನು ಕಾಡುತ್ತಿದೆ.