MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • ಜಾರ್ಜಿಯಾದಿಂದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಬಗ್ಗೆ 'ಮಿಸ್ಟರ್ ಬಚ್ಚನ್' ಭಾಗ್ಯಶ್ರೀ ಹೇಳಿದ್ದೇನು?

ಜಾರ್ಜಿಯಾದಿಂದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಬಗ್ಗೆ 'ಮಿಸ್ಟರ್ ಬಚ್ಚನ್' ಭಾಗ್ಯಶ್ರೀ ಹೇಳಿದ್ದೇನು?

ಸದ್ಯ ನಟಿ ಭಾಗ್ಯಶ್ರೀ ಬೋರ್ಸೆ ಅವರು ಮೋಹನ್‌ಲಾಲ್ ಅಭಿನಯದ ‘ಆಪರೇಷನ್ ಗಂಗಾ’ ಸಿನಿಮಾಗೆ ಜಾರ್ಜಿಯಾದಲ್ಲಿ ನಡೆಯುತ್ತಿರವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿಂದಲೇ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸದ ಸುದ್ದಿ ತಿಳಿದು, ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

2 Min read
Author : Shriram Bhat
Published : Oct 03 2026, 07:48 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯಕ್ಕೆ ನಟಿ ಭಾಗ್ಯಶ್ರೀ ಬೋರ್ಸೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. FlyDubai ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆಯ ವೇಳೆ ಪ್ರಯಾಣಿಕರ ಜೀವ ಉಳಿಸಲು ಪೈಲಟ್ ತೋರಿದ ಧೈರ್ಯಕ್ಕೆ ಸಿನಿತಾರೆಯರು ಸೇರಿದಂತೆ ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಾಲಿನಲ್ಲಿ ‘ಮಿಸ್ಟರ್ ಬಚ್ಚನ್’ ಖ್ಯಾತಿಯ ನಟಿ ಭಾಗ್ಯಶ್ರೀ ಬೋರ್ಸೆ ಕೂಡ ಕ್ಯಾಪ್ಟನ್ ಸ್ಮಿತ್ ಅವರನ್ನು ‘ರಿಯಲ್ ಲೈಫ್ ಹೀರೋ’ ಎಂದು ಕೊಂಡಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Instagram

ಸದ್ಯ ನಟಿ ಭಾಗ್ಯಶ್ರೀ ಬೋರ್ಸೆ ಅವರು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ ‘ಆಪರೇಷನ್ ಗಂಗಾ’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಜಾರ್ಜಿಯಾದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ನಡುವೆಯೇ, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸದ ಸುದ್ದಿ ತಿಳಿದ ಭಾಗ್ಯಶ್ರೀ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

Related Articles

Related image1
ಜೇಸನ್ 'ಸಿಗ್ಮಾ' ಪೋಸ್ಟರ್ ಎತ್ತಿಹಿಡಿದ ತಮಿಳುನಾಡು ಸಿಎಂ ವಿಜಯ್; ಮಗನ ಚಿತ್ರಕ್ಕೆ ಸಿಕ್ಕಿತು ತಂದೆಯ ಬೆಂಬಲ
Related image2
Drishyam 3: ಅಜಯ್ ದೇವಗನ್ ವೃತ್ತಿಜೀವನದಲ್ಲೇ ಅತಿದೊಡ್ಡ ಓಪನಿಂಗ್ ಪಡೆದ 'ದೃಶ್ಯಂ-3'.. ಮೊದಲ ದಿನ ಗಳಿಸಿದ್ದೆಷ್ಟು?
37
Image Credit : Instagram

ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೈಲಟ್‌ ಅವರನ್ನು ಶ್ಲಾಘಿಸಿರುವ ಭಾಗ್ಯಶ್ರೀ, ಕರ್ತವ್ಯ ನಿರ್ವಹಿಸುವಾಗ ಸಾಮಾನ್ಯವಾಗಿ ಮೌನವಾಗಿಯೇ ಇರುವ ಕೆಲವರು, ಪರಿಸ್ಥಿತಿ ಕೈಮೀರಿದಾಗ ನಿಜವಾದ ಹೀರೋಗಳಾಗಿ ಹೊರಹೊಮ್ಮುತ್ತಾರೆ ಎಂಬ ಅರ್ಥದಲ್ಲಿ ಬರೆದುಕೊಂಡಿದ್ದಾರೆ. “ಧನ್ಯವಾದಗಳು ಕ್ಯಾಪ್ಟನ್ ಸ್ಮಿತ್. ನಿಜ ಜೀವನದ ಹೀರೋ! ಭಾರತಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಸರ್” ಎಂದು ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

47
Image Credit : Instagram

ಅಷ್ಟಕ್ಕೂ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಹೆಸರು ಇಷ್ಟೊಂದು ಚರ್ಚೆಗೆ ಬರಲು ಕಾರಣವೇನು? ವರದಿಗಳ ಪ್ರಕಾರ, ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ FlyDubai ವಿಮಾನ FZ1073ರಲ್ಲಿ ಗಂಭೀರ ಘಟನೆ ನಡೆದಿದೆ. ಈ ವಿಮಾನದಲ್ಲಿ ಒಟ್ಟು 174 ಮಂದಿ ಇದ್ದರು ಎನ್ನಲಾಗಿದೆ. ವಿಮಾನದ ಕಾಕ್‌ಪಿಟ್‌ನಲ್ಲಿ ಸಹ ಪೈಲಟ್ ಕ್ಯಾಪ್ಟನ್ ಸ್ಮಿತ್ ಅವರ ಮೇಲೆ ದಾಳಿ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ವಿಮಾನವನ್ನು ಅಪಾಯಕ್ಕೆ ತಳ್ಳುವ ಉದ್ದೇಶದಿಂದ ಈ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ.

57
Image Credit : Instagram

ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಸ್ಮಿತ್ ಪರಿಸ್ಥಿತಿಯ ನಿಯಂತ್ರಣ ಕಳೆದುಕೊಳ್ಳಲಿಲ್ಲ ಎನ್ನಲಾಗಿದೆ. ಅವರು ಕಾಕ್‌ಪಿಟ್ ಬಾಗಿಲು ತೆರೆಯಲು ಯಶಸ್ವಿಯಾಗಿದ್ದು, ಬಳಿಕ ಪ್ರಯಾಣಿಕರು ಮತ್ತು ಇತರ ಸಿಬ್ಬಂದಿ ಮಧ್ಯಪ್ರವೇಶಿಸಲು ಸಾಧ್ಯವಾಯಿತು ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಅವರು ತೋರಿದ ಧೈರ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

67
Image Credit : Instagram

ಭಾಗ್ಯಶ್ರೀ ಬೋರ್ಸೆ ಮಾತ್ರವಲ್ಲದೆ, ನಟಿ ರಶ್ಮಿಕಾ ಮಂದಣ್ಣ ಕೂಡ ಕ್ಯಾಪ್ಟನ್ ಸ್ಮಿತ್ ಅವರ ಧೈರ್ಯವನ್ನು ಕೊಂಡಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, ಸ್ವಂತ ಜೀವಕ್ಕಾಗಿ ಹೋರಾಡುತ್ತಿದ್ದರೂ ಸುತ್ತಮುತ್ತಲಿನ ನೂರಾರು ಜನರ ಜೀವದ ಬಗ್ಗೆಯೂ ಯೋಚಿಸಿರುವುದು ನಿಜಕ್ಕೂ ಧೈರ್ಯದ ಸಂಗತಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕ್ಯಾಪ್ಟನ್ ಸ್ಮಿತ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

77
Image Credit : Instagram

ಇನ್ನು ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಅನಿಲ್ ಕಪೂರ್ ಹಾಗೂ ವರುಣ್ ಧವನ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಕೂಡ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಮಾನದಲ್ಲಿನ ಆ ಒಂದು ಘಟನೆ ಇದೀಗ ಸಿನಿತಾರೆಯರ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯ ವಿಷಯವಾಗಿದೆ.

ಇನ್ನು ಭಾಗ್ಯಶ್ರೀ ಬೋರ್ಸೆ ಅವರ ಸಿನಿಮಾ ಪಯಣ ನೋಡುವುದಾದರೆ, ರವಿತೇಜಾ ಅಭಿನಯದ ‘ಮಿಸ್ಟರ್ ಬಚ್ಚನ್’ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ಅವರು ಬಳಿಕ ‘ಕಿಂಗ್‌ಡಮ್’ ಮತ್ತು ‘ಆಂಧ್ರ ಕಿಂಗ್ ತಾಲುಕಾ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ‘ಕಾಂತಾ’ ಚಿತ್ರದಲ್ಲೂ ಅಭಿನಯಿಸಿ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಅಖಿಲ್ ಅಕ್ಕಿನೇನಿ ಜೊತೆಗೆ ‘ಲೆನಿನ್’ ಸಿನಿಮಾದಲ್ಲಿ ಭಾರತೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಶಿವಕಾರ್ತಿಕೇಯನ್ ಅಭಿನಯದ, ಕಮಲ್ ಹಾಸನ್ ಬೆಂಬಲದ ತಮಿಳು ಆ್ಯಕ್ಷನ್ ಡ್ರಾಮಾ ‘ಸೆಯೋನ್’ನಲ್ಲೂ ಭಾಗ್ಯಶ್ರೀ ಬೋರ್ಸೆ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಮಲಯಾಳಂ ಸಿನಿಮಾ
ಬಾಲಿವುಡ್
ಮನರಂಜನಾ ಸುದ್ದಿ
ವೈರಲ್ ಸುದ್ದಿ
 

Latest Videos
Recommended Stories
Recommended image1
ಜೇಸನ್ 'ಸಿಗ್ಮಾ' ಪೋಸ್ಟರ್ ಎತ್ತಿಹಿಡಿದ ತಮಿಳುನಾಡು ಸಿಎಂ ವಿಜಯ್; ಮಗನ ಚಿತ್ರಕ್ಕೆ ಸಿಕ್ಕಿತು ತಂದೆಯ ಬೆಂಬಲ
Recommended image2
ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಹೇಳಿದ ಆ ಮಾತು ವೈರಲ್ ಆಗ್ತಿರೋದೇಕೆ?
Recommended image3
ರಜನಿಕಾಂತ್ ‘ಜೈಲರ್ 2’ ಸ್ಟೋರಿ ಲೀಕ್? ಟೈಗರ್ ಮುತ್ತುವೇಲ್ ಪಾಂಡಿಯನ್ ಮತ್ತೆ ಆ್ಯಕ್ಷನ್‌ಗೆ ಬರ್ತಾರಾ?
Related Stories
Recommended image1
ಜೇಸನ್ 'ಸಿಗ್ಮಾ' ಪೋಸ್ಟರ್ ಎತ್ತಿಹಿಡಿದ ತಮಿಳುನಾಡು ಸಿಎಂ ವಿಜಯ್; ಮಗನ ಚಿತ್ರಕ್ಕೆ ಸಿಕ್ಕಿತು ತಂದೆಯ ಬೆಂಬಲ
Recommended image2
Drishyam 3: ಅಜಯ್ ದೇವಗನ್ ವೃತ್ತಿಜೀವನದಲ್ಲೇ ಅತಿದೊಡ್ಡ ಓಪನಿಂಗ್ ಪಡೆದ 'ದೃಶ್ಯಂ-3'.. ಮೊದಲ ದಿನ ಗಳಿಸಿದ್ದೆಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved