- Home
- Entertainment
- News
- Lakshmi Nivasa Serial: ದೇವ್ರೇ ಜಯಂತ್‌ಗೆ 'ಗೂಬೆ' ಸಿಗದಿರಲಿ ಎಂದು ಹರಕೆ ಹೊತ್ತ ಸೀರಿಯಲ್ ಪ್ರೇಮಿಗಳು!
Lakshmi Nivasa Serial: ದೇವ್ರೇ ಜಯಂತ್‌ಗೆ 'ಗೂಬೆ' ಸಿಗದಿರಲಿ ಎಂದು ಹರಕೆ ಹೊತ್ತ ಸೀರಿಯಲ್ ಪ್ರೇಮಿಗಳು!
ಜಾಹ್ನವಿ ವಿಶ್ವನ ಮನೆಯಲ್ಲಿ ಇರುವ ಸುದ್ದಿ ಜಯಂತ್‌ಗೆ ತಿಳಿದಿಲ್ಲ. ಆದರೆ ಇದೀಗ ಆಕೆಯ ಹುಡುಕಲು ಮೊದಲು ಅವನಿಗೆ ಗೂಬೆ ಬೇಕಿದೆ. ದೇವ್ರೇ ಜಯಂತ್‌ಗೆ 'ಗೂಬೆ' ಸಿಗದಿರಲಿ ಎಂದು ಹರಕೆ ಹೊತ್ತ ಸೀರಿಯಲ್ ಪ್ರೇಮಿಗಳು. ಏನಿದು?

ಲಕ್ಷ್ಮೀ ನಿವಾಸದಲ್ಲಿ ಜಾಹ್ನವಿ-ಜಯಂತ್ ಟ್ವಿಸ್ಟ್!
ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್ ಭಿನ್ನ ವಿಭಿನ್ನ ಟ್ವಿಸ್ಟ್ ಪಡೆದುಕೊಳ್ಳುತ್ತಾ ಸಾಗಿದೆ. ಒಂದೆಡೆ ಜಾಹ್ನವಿ ಮತ್ತು ಜಯಂತ್ ನಡುವಿನ ಸ್ಟೋರಿಯಾದರೆ ಇನ್ನೊಂದು ಕಡೆಯಲ್ಲಿ, ಸಿದ್ದೇಗೌಡ್ರು ಮತ್ತು ಭಾವನಾ ಸ್ಟೋರಿ. ಒಂದೆಡೆ ತಾನು ಇರುವ ಮನೆಗೇ ಜಯಂತ್ ಬಂದರೂ ಆತನಿಂದ ತಪ್ಪಿಸಿಕೊಳ್ಳಲು ಚಿನ್ನುಮರಿ ಇನ್ನಿಲ್ಲದಂತೆ ಹೆಣಗಾಟ ಮಾಡುತ್ತಿದ್ದರೆ, ಅದೇ ಇನ್ನೊಂದೆಡೆ, ಪತಿ ಸಿದ್ದೇಗೌಡರಿಂದ ಭಾವನಾ ದೂರವಾಗಿದ್ದಾಳೆ.
ವಿಶ್ವನ ಮನೆಯಲ್ಲಿ ಜಾಹ್ನವಿ
ವಿಶ್ವನ ಮನೆಯಲ್ಲಿ ಜಾಹ್ನವಿ ಉಳಿದುಕೊಂಡಿದ್ದಾಳೆ. ವಿಶ್ವನ ನಿಶ್ಚಿತಾರ್ಥವೂ ನಡೆದಿದೆ. ಆದರೆ ಆತ ಇನ್ನೂ ಜಾಹ್ನವಿಯ ಗುಂಗಿನಿಂದ ಹೊರಕ್ಕೆ ಬಂದಿಲ್ಲ. ಆದರೆ ಜಾಹ್ನವಿಗೆ ವಿಶ್ವ ತನ್ನನ್ನೇ ಲವ್ ಮಾಡ್ತಾ ಇರೋದು ಎನ್ನುವ ಸತ್ಯ ಅವಳಿಗೆ ತಿಳಿದಿದೆ. ಆದರೆ ಏನೂ ಮಾಡದ ಸ್ಥಿತಿ ಆಕೆಯದ್ದು.
ಹತ್ತಿರವೇ ಇದ್ದರೂ ಪತ್ನಿಯ ಬಗ್ಗೆ ಅರಿಯದ ಜಯಂತ್
ಜಯಂತ್ ವಿಶ್ವನ ಮನೆಗೇ ಬಂದಿದ್ದ. ಆತನ ನೋಡಿ ಜಾಹ್ನವಿಗೆ ಗಾಬರಿ ಆಗಿತ್ತು. ಆಕೆ ಅಲ್ಲಿ ಚಂದನಾ ಹೆಸರಿನಲ್ಲಿ ವಾಸವಾಗಿದ್ದಾಳೆ (ಅಸಲಿಗೆ ನಟಿಯ ಅಸಲಿ ಹೆಸರು ಕೂಡ ಚಂದನಾ). ಇದೇ ವೇಳೆ ವಿಶ್ವನ ಅಮ್ಮ ಜಯಂತ್‌ಗೆ ಕಾಫಿ ತಂದುಕೊಡಲು ಹೇಳಿದ್ದಳು. ಇನ್ನು ಮುಗಿಯಿತು ತನ್ನ ಕಥೆ ಎಂದುಕೊಳ್ಳುವಷ್ಟರಲ್ಲಿ ವಿಶ್ವ ಬಂದು ಕಾಪಾಡಿದ್ದ.
ಪತ್ನಿ ಬಗ್ಗೆ ತಿಳಿಯದೇ ಜಯಂತ್ ಬೇಸರ
ಸದ್ಯ ಜಯಂತ್‌ಗೆ ಜಾಹ್ನವಿ ಅಲ್ಲೇ ಇರುವ ವಿಷಯ ತಿಳಿದಿಲ್ಲ. ಹಾಗೆಂದು ಆತನಿಗೆ ಅವಳು ಬದುಕಿದ್ದಾಳೆ ಎನ್ನುವುದು ಚೆನ್ನಾಗಿ ಗೊತ್ತಿದೆ. ಆದರೆ, ಆಕೆಯನ್ನು ಹೇಗೆ ಪತ್ತೆ ಮಾಡುವುದು ತಿಳಿಯದೇ ಪೇಚಿಗೆ ಸಿಲುಕಿದ್ದಾನೆ. ಸದ್ಯ ಅವನ ಕೈಯಲ್ಲಿ ಇರುವುದು ಗೂಬೆಯ ಅಸ್ತ್ರ ಮಾತ್ರ.
ಪತ್ರದಲ್ಲಿ ಸಿಕ್ಕಿತ್ತು ಗೂಬೆ ಸುಳಿವು
ಈ ಹಿಂದೆ ವಿಶ್ವ ಮನೆಗೆ ಬಂದು ಜಾಹ್ನವಿ ಕಾಣದಿದ್ದಾಗ ಪತ್ರವೊಂದನ್ನು ಬರೆದು ಮನೆಯೊಳಗೆ ಎಸೆದಿದ್ದನು. ಕೊನೆಯಲ್ಲಿ ತನ್ನ ಹೆಸರಿನ ಬದಲಾಗಿ ಗೂಬೆ ಎಂದು ಬರೆದಿದ್ದನು. ಈ ಪತ್ರ ಶಾಂತಮ್ಮಳಿಗೆ ಸಿಕ್ಕಿತ್ತು. ಈ ಪತ್ರ ನೋಡಿದ್ರೆ ಜಯಂತ್ ಇನ್ನೇನು ಮಾಡುತ್ತಾನೆ ಎಂದು ಶಾಂತಮ್ಮ ಭಯಪಟ್ಟಿದ್ದಳು. ಆದ್ರೂ ಪತ್ರ ಮುಚ್ಚಿಡಲು ಪ್ರಯತ್ನಿಸಿದ್ದ ಶಾಂತಮ್ಮಾ, ತಗ್ಲಾಕೊಂಡಿದ್ದಳು. ಕೊನೆಗೂ ಜಯಂತ್‌ಗೆ ಆ ಪತ್ರ ಸಿಕ್ಕಿತ್ತು.
ಗೂಬೆ ಹುಡುಕಾಟದಲ್ಲಿ ಜಯಂತ್
ಇದರಿಂದ ಗೂಬೆ ಯಾರು ಎನ್ನುವ ಬಗ್ಗೆ ತನಿಖೆ ಶುರುವಿಟ್ಟುಕೊಂಡಿದ್ದಾನೆ. ಒಂದು ವೇಳೆ ಜಾಹ್ನವಿ ವಿಶ್ವನ ಮನೆಯಲ್ಲಿ ಇರುವ ವಿಷ್ಯ ಗೊತ್ತಾದ್ರೆ ಅಷ್ಟೇ ಕಥೆ. ಏಕೆಂದ್ರೆ, ಅವನು ಜಾಹ್ನವಿ ಕಾಲೇಜಿನಲ್ಲಿದ್ದಾಗ ಅವಳ ಸ್ನೇಹಿತನಾಗಿದ್ದ ವಿಶ್ವನೊಂದಿಗೆ ಕ್ಲೋಸ್ ಆಗಿದ್ದಕ್ಕಾಗಿ ಅವಳನ್ನು ಶಿಕ್ಷಿಸಿದ್ದ. ಇದೀಗ ಮತ್ತೆ ಅಲ್ಲೇ ಇದ್ದಾಳೆ ಎಂದು ತಿಳಿದರೆ ಜಾಹ್ನವಿ ಪಾಡು ದೇವ್ರೇ ಗತಿ.
ಜಾಹ್ನವಿ ಸಿಗದಿರಲಿ ದೇವರೇ ಅಂತಿರೋ ಫ್ಯಾನ್ಸ್
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ಜಯಂತ್, ಪೆನ್ಡ್ರೈವ್ನಲ್ಲಿ ಜಾಹ್ನವಿ ಕ್ಲಾಸ್ಮೇಟ್ಸ್ ಡಿಟೇಲ್ಸ್ ತೆಗೆದುಕೊಂಡು ಬಂದಿದ್ದಾರೆ. ಅದರಲ್ಲಿ ಎಲ್ಲರಿಗೂ ಕಾಲ್ ಮಾಡಿ ಗೂಬೆ ಅಂತ ಹೇಳ್ತಿರೋದು ಯಾರಿಗೆ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ ಆತ. ಗೂಬೆ ಯಾರೆಂದು ಗೊತ್ತಾದರೆ ಜಾಹ್ನವಿ ಎಲ್ಲಿದ್ದಾಳೆ ಗೊತ್ತಾಗುತ್ತದೆ ಎನ್ನುವುದು ಅವನ ಅನಿಸಿಕೆ. ಶಾಂತಮ್ಮ ಇದನ್ನು ನೋಡಿ ಗಾಬರಿಗೊಂಡಿದ್ದಾಳೆ. ಇವನ ಕೈಗೆ ಅವಳು ಸಿಕ್ಕರೆ ಗತಿ ಏನು ಎನ್ನುವುದು ಆಕೆಗೂ ಗೊತ್ತು. ಆದರೆ ಏನೂ ಮಾಡದ ಸ್ಥಿತಿ.
ಸಿಕ್ಕಿಬೀಳ್ತಾಳಾ ಜಾಹ್ನವಿ?
ಇಷ್ಟೆಲ್ಲಾ ಮಾಡಿದ ಮೇಲೆ ಜಾಹ್ನವಿ ಸಿಕ್ಕಿಬೀಳ್ತಾಳೆ ಎನ್ನೋ ಭಯ ಸೀರಿಯಲ್ ಪ್ರೇಮಿಗಳದ್ದು. ಯಾವುದೇ ಕಾರಣಕ್ಕೂ ಗೂಬೆ ಜಯಂತ್‌ಗೆ ಸಿಗದಂತೆ ಮಾಡಪ್ಪಾ ಎಂದು ದೇವರಲ್ಲಿ ಬೇಡಿಕೊಳ್ತಿದ್ದಾರೆ ಸೀರಿಯಲ್ ಪ್ರೇಮಿಗಳು. ಇದು ಯಾವ ರೀತಿ ಟರ್ನ್ ತೆಗೆದುಕೊಳ್ಳುತ್ತದೆ ಎನ್ನುವುದು ಊಹಿಸುವುದೂ ಕಷ್ಟ. ಜಾಹ್ನವಿ-ಜಯಂತ್ ಒಂದಾದ್ರೂ ಕಷ್ಟ, ಒಂದಾಗದಿದ್ರೂ ಕಷ್ಟ ಎನ್ನೋ ಸ್ಥಿತಿ ಇದೆ ಸದ್ಯ!