ಲಕ್ಷ್ಮೀ ನಿವಾಸ ಚೆಲುವಿಗೆ ತಾಳಿ ಕಟ್ಟಿದ ಅಮೃತಧಾರೆ ಆನಂದ್! ಒಲ್ಲದ ಮನಸ್ಸಿನಿಂದ ನಡೆಯಿತು ಮದುವೆ. ಇದು ಕನ್ನಡ ಸೀರಿಯಲ್ ಅಂತೂ ಅಲ್ಲವೇ ಅಲ್ಲ, ಏನಿದು?
ಲಕ್ಷ್ಮೀ ನಿವಾಸದ ಚೆಲುವಿ ಹಾಗೂ ಅಮೃತಧಾರೆಯ ಆನಂದ್ ಸೀರಿಯಲ್ ಪ್ರಿಯರಿಗೆ ಚಿರಪರಿಚಿತರು. ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಚೆಲುವಿಯ ಮದುವೆ ಮೂಕ ವೆಂಕಿ ಜೊತೆ ಆಗಿದ್ದರೆ, ಆನಂದ್ ಮದುವೆ ಅಪರ್ಣಾ ಜೊತೆ ಆಗಿದೆ. ಆದರೆ ಇದೀಗ ವೈರಲ್ ವಿಡಿಯೋದಲ್ಲಿ ಚೆಲುವಿ ಮತ್ತು ಆನಂದ್ ಇಬ್ಬರ ಮದುವೆ ಆಗಿದ್ದು, ವಿಡಿಯೋ ನೋಡಿ ಒಂದು ಕ್ಷಣ ಫ್ಯಾನ್ಸ್ ಶಾಕ್ ಆಗಿದ್ದಂತೂ ನಿಜ. ಅಷ್ಟಕ್ಕೂ ಇತ್ತೀಚಿನ ದಿನಗಳಲ್ಲಿ ಎರಡು ಸೀರಿಯಲ್ಗಳನ್ನು ಒಟ್ಟಿಗೇ ತೋರಿಸಿ ಒಂದು ಗಂಟೆಯ ಮೇಘಾ ಎಪಿಸೋಡ್ ಮಾಡುವುದು ಮಾಮೂಲು. ಆದರೆ, ಎತ್ತ ಆನಂದ್? ಎತ್ತ ಚೆಲುವಿ? ಆದ್ದರಿಂದ ಇದಂತೂ ಸೀರಿಯಲ್ ವಿಷ್ಯ ಅಲ್ಲವೇ ಅಲ್ಲ ಎಂದುಕೊಂಡು ಅಭಿಮಾನಿಗಳು ಕ್ಷಣದಲ್ಲಿ ಕಂಗಾಲಾದಾರು. ಹಾಗೆಂದು ಇದು ಕನ್ನಡದ ಯಾವುದೋ ಸೀರಿಯಲ್ ಪ್ರೊಮೋ ಅಂದುಕೊಂಡ್ರೆ ಅದು ಕೂಡ ತಪ್ಪು. ಹಾಗಾದ್ರೆ ಇವರಿಬ್ಬರು ಮದುವೆಯಾಗಿದ್ದು ಯಾಕೆ?
ಅಷ್ಟಕ್ಕೂ ಈ ವಿಡಿಯೋ ನೋಡಿದರೆ ಇದರಲ್ಲಿ ಇಬ್ಬರೂ ಖುಷಿಯಾಗಿಲ್ಲ ಎಂದು ತಿಳಿಯುತ್ತದೆ. ದೇವರ ಸಮ್ಮುಖದಲ್ಲಿ ಆನಂದ್, ಚೆಲುವಿ ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ. ಆದರೆ ಇದು ಯಾವುದೋ, ಯಾರದ್ದೋ ಬಲವಂತಕ್ಕೆ ಇಲ್ಲವೇ ಯಾವುದೇ ಸಂಗಿಗ್ಧ ಪರಿಸ್ಥಿತಿಯಲ್ಲಿ ನಡೆದ ಮದುವೆ ಎಂದು ಮೇಲ್ನೋಟಕ್ಕೇ ತಿಳಿದುಬರುತ್ತದೆ. ಅಷ್ಟಕ್ಕೂ ಇದು ಯಾವುದೋ ಕನ್ನಡ ಸೀರಿಯಲ್ ಪ್ರೊಮೋ ಅಲ್ಲ ಎನ್ನುವುದೂ ನಿಜವೇ. ಆದರೆ ಇದು ತಮಿಳು ಸೀರಿಯಲ್ ಗಟ್ಟಿಮೇಳಂ ಪ್ರೊಮೋ. ಇದು ಕನ್ನಡದ ಲಕ್ಷ್ಮೀ ನಿವಾಸದ ರೀಮೇಕ್. ಇದರಲ್ಲಿ ಚೆಲುವಿ ಪಾತ್ರಧಾರಿ ಬದಲಾಗಿಲ್ಲ. ವೆಂಕಿ ಪಾತ್ರವನ್ನು ಆನಂದ್ ನಿರ್ವಹಿಸುತ್ತಿದ್ದಾರೆ. ಇಂದು ನಟ-ನಟಿಯರು ಬೇರೆ ಬೇರೆ ಭಾಷೆಗಳ ಸೀರಿಯಲ್‌ಗಳಲ್ಲಿ ನಟಿಸುವುದು ಮಾಮೂಲು. ಅದರಂತೆಯೇ ಈ ಇಬ್ಬರು ತಾರೆಯರೂ ತಮಿಳು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಆದರೆ ಕನ್ನಡಿಗರು ಇದನ್ನು ನೋಡಿ ಒಮ್ಮೆ ಶಾಕ್ ಆಗಿದ್ದು ಕಮೆಂಟ್ ನೋಡಿದರೆ ತಿಳಿಯುತ್ತದೆ.
ಇನ್ನು ಆನಂದ್ ಅವರ ಕುರಿತು ಹೇಳುವುದಾದರೆ, ಅಸಲಿ ಹೆಸರು ಕೂಡ ಆನಂದ್. ಇವರ ರಿಯಲ್ ಪತ್ನಿಯ ಹೆಸರು ಚೈತ್ರಾ. ಇವರು ಹಿಂದೊಮ್ಮೆ ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಘೋರ ದುರಂತದ ಬಗ್ಗೆ ಮಾತನಾಡಿದ್ದರು. ಚೈತ್ರಾ ಅವರು ದಪ್ಪ ಇರುವ ಕಾರಣದಿಂದ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಆನಂದ್ ಅವರ ಮನೆಯವರು ಮದುವೆಗೆ ಒಪ್ಪದಿದ್ದರೆ, ಅವರು ಕಲಾವಿದ ಎಂದು ತಮ್ಮ ಮನೆಯಲ್ಲಿ ಮದುವೆಗೆ ಒಪ್ಪದನ್ನು ನೆನೆದು ಚೈತ್ರಾ ಕಣ್ಣೀರು ಹಾಕಿದ್ದರು. ಇದೀಗ ಈ ಜೋಡಿ ಆರು ವರ್ಷಗಳ ದಾಂಪತ್ಯ ಜೀವನವನ್ನು ಪುಟ್ಟ ಕಂದನ ಜೊತೆ ಆನಂದದಿಂದ ಕಳೆಯುತ್ತಿದೆ. ಈ ಹಿಂದೆ ಚೈತ್ರಾ, ಕೊರೋನಾ ಟೈಮ್‌ನಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ನಡೆಸಿದ್ದರು. ಆನಂದ್ ಅವರ ತಾಯಿ ಕೊರೋನಾದಿಂದ ಒಂದೆಡೆ ಆಸ್ಪತ್ರೆಗೆ ದಾಖಲಾಗಿದ್ದರೆ, ಇನ್ನೊಂದೆಡೆ ಪತ್ನಿ ಚೈತ್ರಾ. ಇವರಿಬ್ಬರನ್ನೂ ಉಳಿಸಿಕೊಳ್ಳಲು ಆನಂದ್ ಹೆಣಗಾಡಿದ್ದರು. ಕೊನೆಗೆ ಇಬ್ಬರೂ ಜೀವಾಪಾಯದಿಂದ ಪಾರಾದಾಗ ಖುದ್ದು ವೈದ್ಯರೂ ಚಕಿತಪಟ್ಟುಕೊಂಡಿದ್ದರಂತೆ. ಇದು ಕೂಡ ಪತ್ನಿಯ ಮರುಜನ್ಮ ಎಂದಿದ್ದರು ಆನಂದ್.
ಇನ್ನು ಚೆಲುವಿ ಪಾತ್ರಧಾರಿ ಹೆಸರು ಅಶ್ವಿನಿ ಮೂರ್ತಿ. ತಮಿಳಿನ ಗಟ್ಟಿಮೇಳಂನಲ್ಲಿಯೂ ಚೆಲುವಿ ಪಾತ್ರದಲ್ಲಿಯೇ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಹಾಸನದವರು. ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಅಶ್ವಿನಿಯವರು ಮೂಕ ಪತಿಯ ಪ್ರೀತಿಯ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಗಂಡನ ಮಾತುಗಳನ್ನು ಅಚ್ಚುಕಟ್ಟಾಗಿ ಅರ್ಥಮಾಡಿಕೊಂಡು ಅವರನ ಎಲ್ಲಾ ಕಷ್ಟ-ಸುಖಗಳನ್ನು ಅರ್ಥಮಾಡಿಕೊಳ್ಳುವ ಚೆಲುವಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೇ ಕಾರಣಕ್ಕೆ ತಮಿಳಿನಲ್ಲಿಯೂ ಇವರಿಗೆ ಇದೇ ರೋಲ್ ನೀಡಲಾಗಿದೆ. ಇದಕ್ಕೂ ಮುನ್ನ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷಣ' ಸೀರಿಯಲ್‌ನಲ್ಲಿ ನಾಯಕಿ ನಕ್ಷತ್ರಾಳ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಮರಳಿ ಮನಸಾಗಿದೆ, ಬಯಸದೆ ಬಳಿ ಬಂದೆ ಮುಂತಾದ ಸೀರಿಯಲ್‌ಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. . ಇವರು ಕಾಸ್ಮೆಟಾಲಜಿಸ್ಟ್ ಆಗಿದ್ದು, ತಮ್ಮದೇಯಾದ ಬ್ಯೂಟಿ ಸಲೂನ್ ಹೊಂದಿದ್ದಾರೆ.
