MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • Sukrutha Nag 'ಮತ್ತಿನಲ್ಲೂ ಸುಖವ ಕಂಡೆನು' ಎನ್ನುತ್ತಾ ಮಾದಕವಾಗಿ ಸ್ಟೆಪ್​ ಹಾಕಿದ ಭಾಗ್ಯಲಕ್ಷ್ಮಿ ಕನ್ನಿಕಾ!

Sukrutha Nag 'ಮತ್ತಿನಲ್ಲೂ ಸುಖವ ಕಂಡೆನು' ಎನ್ನುತ್ತಾ ಮಾದಕವಾಗಿ ಸ್ಟೆಪ್​ ಹಾಕಿದ ಭಾಗ್ಯಲಕ್ಷ್ಮಿ ಕನ್ನಿಕಾ!

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಕನ್ನಿಕಾ ರೋಲ್​ ಮಾಡಿ ಸೀರಿಯಲ್​ ವೀಕ್ಷಕರ ಮನಸ್ಸಿನಲ್ಲಿ ವಿಲನ್​ ಎಂದೇ ಬಿಂಬಿತ ಆಗಿರೋ ನಟಿ ಸುಕೃತಾ ನಾಗ್​ 'ಮತ್ತಿನಲ್ಲೂ ಸುಖವ ಕಂಡೆನು' ಎನ್ನುತ್ತಾ ಮಾದಕವಾಗಿ ಸ್ಟೆಪ್​ ಹಾಗಿದ್ದಾರೆ. ನೆಟ್ಟಿಗರು ಏನು ಹೇಳಿದ್ರು ನೋಡಿ... 

2 Min read
Author : Suchethana D
| Updated : Jul 27 2025, 01:02 PM IST
Share this Photo Gallery
  • FB
  • TW
  • Linkdin
  • Whatsapp
18
 ಭಾಗ್ಯಲಕ್ಷ್ಮಿ ಕನ್ನಿಕಾ ಸಕತ್​ ಸ್ಟೆಪ್​
Image Credit : Instagram

ಭಾಗ್ಯಲಕ್ಷ್ಮಿ ಕನ್ನಿಕಾ ಸಕತ್​ ಸ್ಟೆಪ್​

ಕನ್ನಿಕಾ ಎಂದರೆ ಸಾಕು, ಕೆನ್ನೆಯ ಮೇಲೆ ಬಿಗಿದು ಬಿಡೋಣ ಎನ್ನುವಷ್ಟು ಸಿಟ್ಟು ಭಾಗ್ಯಲಕ್ಷ್ಮಿ ಸೀರಿಯಲ್​ ವೀಕ್ಷಕರದ್ದು. ಏಕೆಂದರೆ ನಾಯಕಿ ಭಾಗ್ಯಳ ಪ್ರತಿಹಂತದಲ್ಲಿಯೂ ಕೆಟ್ಟದ್ದನ್ನೇ ಬಯಸುವ ನೆಗೆಟಿವ್​ ಕ್ಯಾರೆಕ್ಟರ್​ ಕನ್ನಿಕಳದ್ದು. ಹೀಗೆ ನೆಗೆಟಿವ್​ ಮೂಲಕ ಎಲ್ಲರನ್ನೂ ರಂಜಿಸ್ತಿರೋ ನಟಿಯ ನಿಜವಾದ ಹೆಸರು ಸುಕೃತಾ ನಾಗ್‌. ಸುಕೃತಾ ಭಾಗ್ಯಲಕ್ಷ್ಮಿ ಸೀರಿಯಲ್​ಗೂ ಮುನ್ನ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಅಗ್ನಿಸಾಕ್ಷಿ ಸೀರಿಯಲ್‌ ಅಂಜಲಿ ಪಾತ್ರದ ಮೂಲಕ ಸೀರಿಯಲ್​ ಪ್ರೇಕ್ಷಕರ ಮನಸ್ಸನ್ನು ಗೆದ್ದವರು.

28
ಭಾಗ್ಯಲಕ್ಷ್ಮಿ ಕನ್ನಿಕಾ ಸಕತ್​ ಸ್ಟೆಪ್​
Image Credit : Instagram

ಭಾಗ್ಯಲಕ್ಷ್ಮಿ ಕನ್ನಿಕಾ ಸಕತ್​ ಸ್ಟೆಪ್​

ಇಂತಿಪ್ಪ ನಟಿ ಇದೀಗ ಮನಮೆಚ್ಚಿದ ಹುಡುಗಿ ಚಿತ್ರದ ಬೆಂಕಿಯಲ್ಲೂ ತಂಪು ಕಂಡೆನು... ಮತ್ತಿನಲ್ಲೂ ಸುಖವ ಕಂಡೆನು ಎನ್ನುವ ಹಿಟ್​ ಹಾಡಿಗೆ ಮಾದಕವಾಗಿ ನರ್ತಿಸಿ ಕಚಗುಳಿ ಇಟ್ಟಿದ್ದಾರೆ. ಇವರ ಈ ಡಾನ್ಸ್ ನೋಡಿ ವೀಕ್ಷಕರು ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ. ಕೆಲವರು ಪೂಜಾಳಿಗೆ ಹಿಂಸೆ ಕೊಡಬೇಡಿ ಎಂದು ಹೇಳುತ್ತಿದ್ದರೆ, ಮೊದಲು ಮದ್ವೆಯಾಗಿ ಮನೆಯಿಂದ ತೊಲಗು ಎಂದು ಕನ್ನಿಕಾ ರೋಲ್​ಗೆ ಶಪಿಸುತ್ತಿದ್ದಾರೆ. ಒಟ್ಟಿನಲ್ಲಿ ನಟಿಯರು ರೀಲ್ಸ್ ಮಾಡಿದರೂ ಅವರ ಪಾತ್ರಗಳನ್ನೇ ಮುಂದುಮಾಡಿ ನೆಟ್ಟಿಗರು ಕಮೆಂಟ್​ ಮಾಡುತ್ತಲೇ ಇರುತ್ತಅರೆ.

Related Articles

Related image1
ಹೆಂಡ್ತೀನ ಕಂಟ್ರೋಲ್​ನಲ್ಲಿ ಇಟ್ಕೊಳೋದು ಹೇಗೆ ಎಂದು ಹೇಳಿಕೊಟ್ಟ ಭಾಗ್ಯಲಕ್ಷ್ಮಿ ಆದಿ!
Related image2
Sukrutha Nag: ವಯಸ್ಸು 32 ಆದ್ರೂ ಚಿಕ್ಕ ಹುಡುಗಿಯಂತೆ ಕಾಣುವ ರಹಸ್ಯವೇನು? 'ಭಾಗ್ಯಲಕ್ಷ್ಮಿ' ಕನ್ನಿಕಾ ಗುಟ್ಟು ರಿವೀಲ್​
38
ಸೌಂದರ್ಯದ ಬಗ್ಗೆ ನಟಿ ಸುಕೃತಾ ನಾಗ್​
Image Credit : Instagram

ಸೌಂದರ್ಯದ ಬಗ್ಗೆ ನಟಿ ಸುಕೃತಾ ನಾಗ್​

ಸುಕೃತಾ ಅವರು ಸೀರಿಯಲ್​ಗಳಲ್ಲಿ ಸೀರೆ ಉಟ್ಟು ಬಂದರೂ ಹೈಸ್ಕೂಲ್​ ಹುಡುಗಿಯಂತೆಯೇ ಕಾಣುತ್ತಾರೆ. ಗೂಗಲ್​ ದಾಖಲೆಗಳ ಪ್ರಕಾರ ಅವರ ವಯಸ್ಸೀಗ 32. ಆದರೂ ಕೂಡ ಇಷ್ಟೊಂದು ಚಿಕ್ಕ ವಯಸ್ಸಿನವರಂತೆ ಕಾಣಲು ಕಾರಣವೇನು ಎಂಬುದು ಹಲವರ ಪ್ರಶ್ನೆಯಾಗಿತ್ತು. ಈಚೆಗಷ್ಟೇ ನಟಿ ಗುಟ್ಟನ್ನು ರಿವೀಲ್​ ಮಾಡಿದ್ದರು.

48
ಸೌಂದರ್ಯದ ಬಗ್ಗೆ ನಟಿ ಸುಕೃತಾ ನಾಗ್​
Image Credit : Instagram

ಸೌಂದರ್ಯದ ಬಗ್ಗೆ ನಟಿ ಸುಕೃತಾ ನಾಗ್​

ನಟಿ ಹೇಳಿದ್ದೇನೆಂದರೆ, ಇದು ಪೇರೆಂಟ್ಸ್​ ಗಿಫ್ಟ್​. ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ಅಕ್ಕ ಎಲ್ಲರೂ ಹೀಗೇನೇ. ಚಿಕ್ಕವರಂತೆಯೇ ಇದ್ದಾರೆ. ಅದೇ ನನಗೆ ಬಂದಿರುವುದು ಎಂದಿದ್ದಾರೆ. ಇದೇ ವೇಳೆ ತಾವು ನಟನೆಗೆ ಬಂದದ್ದು ಅಚಾನಕ್​ ಆಗಿ. ಬಿಸಿಎ ಮುಗಿಸಿದ್ದೇನೆ. ನಮ್ಮ ಮನೆಯಲ್ಲಿ ಓದು ಮೊದಲು ಎಂದಿದ್ದರು. ನನಗೂ ಚಿಕ್ಕವಳಿರುವಾಗ ಬಹುತೇಕ ಮಂದಿಯಂತೆ ಡಾಕ್ಟರ್​, ಎಂಜಿನಿಯರ್​ ಆಗಬೇಕು ಎನ್ನುವ ಆಸೆ ಇತ್ತು. ಆದರೆ ಡೆಸ್ಟಿನಿ ಇಲ್ಲಿಯವರೆಗೆ ಕರೆದುಕೊಂಡು ಬಂತು ಎಂದಿದ್ದರು.

58
ಸುಕೃತಾ ನಾಗ್​ ಲವ್​ ಬ್ರೇಕಪ್​
Image Credit : Instagram

ಸುಕೃತಾ ನಾಗ್​ ಲವ್​ ಬ್ರೇಕಪ್​

ಹಿಂದೊಮ್ಮೆ ನಟಿ, ಇನ್ನೊಂದು ಸಂದರ್ಶನದಲ್ಲಿ ತಮ್ಮ ಜೀವನದ ಲವ್​, ಬ್ರೇಕಪ್​, ಡಿಪ್ರೆಷನ್​ ಬಗ್ಗೆ ಮಾತನಾಡಿದ್ದರು. ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಲವ್‌ ಮತ್ತು ಬ್ರೇಕಪ್‌ ತುಂಬಾ ಕಾಮನ್‌ ಸಂಗತಿ ಆಗಿದೆ. ನಾನು ಲವ್‌ ಮಾಡಿದ್ದೀನಿ.. ನನಗೂ ಬ್ರೇಕಪ್‌ ಆಗಿದೆ. ಹಾರ್ಟ್‌ ಬ್ರೇಕ್‌ ಆಗಿದೆ. ಡಿಪ್ರೆಶನ್‌ಗೂ ಹೋಗಿದ್ದೀನಿ, ಥೆರಪಿನೂ ತೆಗೆದುಕೊಂಡಿದ್ದೀನಿ ಎಂದು ಸುಕೃತಾ ಓಪನ್​ ಆಗಿ ಹೇಳಿಕೊಂಡಿದ್ದರು.

68
ಸುಕೃತಾ ನಾಗ್​ ಲವ್​ ಬ್ರೇಕಪ್​
Image Credit : Instagram

ಸುಕೃತಾ ನಾಗ್​ ಲವ್​ ಬ್ರೇಕಪ್​

ಲವ್​ ಬ್ರೇಕಪ್​ ಆದಾಗ, ಖಿನ್ನತೆಗೆ ಜಾರಿದ್ದ ಬಗ್ಗೆ ಹೇಳಿಕೊಂಡಿರೋ ಸುಕೃತಾ, ಆ ಸಮಯದಲ್ಲಿ, ಮಾನಸಿಕ ತಜ್ಞರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಂಡಿದುದ್ದಾಗಿ ಹೇಳಿದ್ದಾರೆ. ಇದೆಲ್ಲವೂ ಪ್ರತಿಯೊಬ್ಬರ ಜೀವನದ ಒಂದು ಭಾಗ ಅಷ್ಟೇ. ಎರಡೂವರೆ ವರ್ಷದ ಪ್ರೀತಿ, ಬ್ರೇಕಪ್‌ ಆದಾಗ ಅದನ್ನ ಸಹಿಸಿಕೊಳ್ಳೋಕೆ ತುಂಬಾ ಕಷ್ಟ ಆಯ್ತು. ಒಂದು ವ್ಯಕ್ತಿ ಜೊತೆಗೆ ಪ್ರೀತಿ ಮಾಡಿ, ಇವರನ್ನೇ ಮದುವೆನೂ ಆಗಬೇಕು ಅಂದ್ಕೊಂಡು, ಇಡೀ ಜೀವನವನ್ನೇ ಪ್ಲ್ಯಾನ್‌ ಮಾಡಿರುತ್ತೇವೆ. ಆ ವ್ಯಕ್ತಿ ದೂರ ಆದಾಗ ಬೇಜಾರಾಗುತ್ತೆ. ಅದೇ ನೋವಿನಿಂದ ಖಿನ್ನತೆಗೆ ಹೋಗಿದ್ದೆ. ಜೀವನ ಇಷ್ಟೇ ಎಂದು ಗೊತ್ತಾಯಿತು, ಏನೂ ಮಾಡಲು ಆಗಲ್ಲ ಎಂದಿದ್ದಾರೆ ನಟಿ.

78
ಸುಕೃತಾ ನಾಗ್​ ರಿಯಲ್​ ಲೈಫ್​ ಸ್ಟೋರಿ
Image Credit : Instagram

ಸುಕೃತಾ ನಾಗ್​ ರಿಯಲ್​ ಲೈಫ್​ ಸ್ಟೋರಿ

ನಾವು ಒನ್ನರನೊಬ್ಬರನ್ನು ತುಂಬಾ ಇಷ್ಟ ಪಟ್ಟಿದ್ದೆವು. ಆದರೆ ಒಂದು ಪಾಯಿಂಟ್‌ನಲ್ಲಿ ಸಂಬಂದ ಟೇಕನ್‌ ಫಾರ್‌ ಗ್ರ್ಯಾಂಟೆಡ್‌ ಅನ್ನೋ ಥರ ಆಗಿ ಬಿಟ್ಟಿತು. ಮಾತು ಕಡಿಮೆ ಆಗುತ್ತೆ ಜೊತೆಗೆ ಪ್ರೀತಿ ಕೂಡ ಕಮ್ಮಿ ಆಗುತ್ತಾ ಹೋಗುತ್ತೆ. ನನಗೆ ಪ್ರೀತಿಗಿಂತ ಮುಖ್ಯ ಇನ್ನೇನು ಇಲ್ಲ. ನನಗೆ ಮನಸಾರೆ ಪ್ರೀತಿಸಬೇಕು ಅಷ್ಟೇ ಎಂದು ಮನದ ಮಾತನ್ನು ತೆರೆದಿಟ್ಟಿದ್ದರು. ನಮ್ಮ ಹಣೆಯ ಬರಹದಲ್ಲಿ ಯಾರೊಟ್ಟಿಗೆ ಬದುಕಬೇಕು ಅಂತ ಇರುತ್ತೋ ಅದೇ ಆಗೋದು. ಅದು ನನ್ನ ಜೀವನದ ಬ್ಯೂಟಿಫುಲ್‌ ಪಾರ್ಟ್.‌

88
ಸುಕೃತಾ ನಾಗ್​ ರಿಯಲ್​ ಲೈಫ್​ ಸ್ಟೋರಿ
Image Credit : Instagram

ಸುಕೃತಾ ನಾಗ್​ ರಿಯಲ್​ ಲೈಫ್​ ಸ್ಟೋರಿ

ಬ್ರೇಕಪ್‌ ಆದಮೇಲೆಮತ್ತೆ ನನ್ನನ್ನು ಕಾಂಟ್ಯಾಕ್ಟ್‌ ಮಾಡಲಿಲ್ಲ. ನಾನು ಕೂಡ ಕಾಂಟ್ಯಾಕ್ಟ್‌ ಮಾಡಲಿಲ್ಲ. ಅವರ ಲೈಫ್‌ನಲ್ಲಿ ಅವರು ಚೆನ್ನಾಗಿದ್ದಾರೆ ಮತ್ತು ನನ್ನ ಜೀವನದಲ್ಲಿ ನಾನು ಚೆನ್ನಾಗಿದ್ದೀನಿ ಅಷ್ಟೇ ಎಂದಿದ್ದರು. ಅಷ್ಟಕ್ಕೂ ಇವರ ಲವ್​ ಫೇಲ್ಯೂರ್​ ಆಗಿದ್ದು, ಕೋವಿಡ್‌ ಟೈಮ್‌ನಲ್ಲಿ. ವ್ಯಕ್ತಿ ಸಿಗುವುದಕ್ಕೂ ಮೊದಲು ತುಂಬಾ ಎತ್ತರಕ್ಕೆ ವ್ಯಾಲ್ಯೂ ಇರುತ್ತೆ. ಸಿಕ್ಕಿದ ಮೇಲೆ ಆ ವ್ಯಾಲ್ಯೂ ತುಂಬಾ ಕೆಳಗೆ ಹೋಗುತ್ತದೆ, ಮತ್ತೆ ಕಳೆದುಕೊಂಡಾಗ ವಾಲ್ಯೂ ಹೆಚ್ಚಾಗುತ್ತೆ ಎಂದಿದ್ದರು.

 
 
 
 
View this post on Instagram
 
 
 
 
 
 
 
 
 
 
 

A post shared by Sukrutha Nag🧿 (@sukruthanag_official)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Nayanthara Caravan: ಭಾರೀ ಕಂಡೀಷನ್ಸ್ ಹಾಕ್ತಾರಾ ನಯನತಾರಾ? ಕ್ಯಾರವಾನ್‌ ಒಳಗೆ ಏನೆಲ್ಲಾ ಇರಬೇಕಂತೆ ಗೊತ್ತಾ?
Recommended image2
ಮದುವೆಗೆ ಮೂರೇ ದಿನ ಇರುವಾಗ ಗುಟ್ಟು ರಟ್ಟು ಮಾಡಿದ ರಶ್ಮಿಕಾ-ವಿಜಯ್; ಎಲ್ಲದಕ್ಕೂ ಅದೊಂದೇ ಕಾರಣವೇ?!
Recommended image3
ಕಟಾಂಜನದ ಒಳಗಿರೋ ದರ್ಶನ್ ಸ್ಥಿತಿಗೆ ದೇವರೇ ಗತಿ; ಟಿವಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದ ನಟನಿಗೆ ನ್ಯಾಯಾಧೀಶರ ಕೌಂಟರ್ ಏನು?
Related Stories
Recommended image1
ಹೆಂಡ್ತೀನ ಕಂಟ್ರೋಲ್​ನಲ್ಲಿ ಇಟ್ಕೊಳೋದು ಹೇಗೆ ಎಂದು ಹೇಳಿಕೊಟ್ಟ ಭಾಗ್ಯಲಕ್ಷ್ಮಿ ಆದಿ!
Recommended image2
Sukrutha Nag: ವಯಸ್ಸು 32 ಆದ್ರೂ ಚಿಕ್ಕ ಹುಡುಗಿಯಂತೆ ಕಾಣುವ ರಹಸ್ಯವೇನು? 'ಭಾಗ್ಯಲಕ್ಷ್ಮಿ' ಕನ್ನಿಕಾ ಗುಟ್ಟು ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved