MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Wooden door: ಮಳೆಗಾಲದಲ್ಲಿ ಮನೆ ಬಾಗಿಲು ಉಬ್ಬಿದೆಯೇ? ಕಾರ್ಪೆಂಟರ್ ಕರೆಯದೆ ನೀವೇ ಸರಿಪಡಿಸಿ ಕೇವಲ ಐದು ನಿಮಿಷದಲ್ಲಿ!

Wooden door: ಮಳೆಗಾಲದಲ್ಲಿ ಮನೆ ಬಾಗಿಲು ಉಬ್ಬಿದೆಯೇ? ಕಾರ್ಪೆಂಟರ್ ಕರೆಯದೆ ನೀವೇ ಸರಿಪಡಿಸಿ ಕೇವಲ ಐದು ನಿಮಿಷದಲ್ಲಿ!

Why Your Door Jams in the Monsoon? ನಿಮ್ಮದು ಹಳ್ಳಿ ಮನೆಯಾಗಿದ್ದರೆ ನೀವು ಇದನ್ನು ಗಮನಿಸಿಯೇ ಇರುತ್ತೀರಿ. ಮಳೆಗಾಲದಲ್ಲಿ ಮನೆಯ ಬಾಗಿಲಿನ ಮೇಲ್ಮೈ ಅಲ್ಲಲ್ಲಿ ಸೀಟು ಉಬ್ಬಿಕೊಂಡಿರುತ್ತದೆ. ಮಳೆಗಾಲದಲ್ಲಿ ಏಕೆ ಊದಿಕೊಳ್ಳುತ್ತವೆ?ಸರಿಪಡಿಸುವುದು ಹೇಗೆ ಇಲ್ಲಿದೆ ಸುಲಭ ವಿಧಾನ.

2 Min read
Author : Ravi Janekal
Published : Jul 17 2026, 01:10 PM IST
Share this Photo Gallery
  • FB
  • TW
  • Linkdin
  • Whatsapp
13
ಮಳೆಗಾಲದಲ್ಲಿ ಬಾಗಿಲುಗಳು ಊದಿಕೊಳ್ಳುವುದು ಏಕೆ?
Image Credit : Asianet News

ಮಳೆಗಾಲದಲ್ಲಿ ಬಾಗಿಲುಗಳು ಊದಿಕೊಳ್ಳುವುದು ಏಕೆ?

ಬೇಸಿಗೆಯಲ್ಲಿ ಚೆನ್ನಾಗಿದ್ದ ಮನೆ ಬಾಗಿಲು ಮಳೆಗಾಲ ಶುರುವಾಗುತ್ತಿದ್ದಂತೆ ಬದಲಾಗುತ್ತದೆ. ಒಂದೆರಡು ಬಾರಿ ಸುರಿದ ಮಳೆಗೆ ಬಾಗಿಲು ಅಲ್ಲಲ್ಲಿ ಉಬ್ಬಿಕೊಳ್ಳಲು ಶುರುವಾಗುತ್ತದೆ. ಬಾಗಿಲು ಮೇಲ್ಮೈ ಗಾಳಿಯ ಉಬ್ಬುಗಳು ಕಾಣಿಸಲಾರಂಭಿಸುತ್ತವೆ. ಇದರಿಂದಾಗಿ ಬಾಗಿಲು ಸುಲಭವಾಗಿ ಮುಚ್ಚುವುದಿಲ್ಲ. ಹೊಸದರಲ್ಲಿ ಸರಿಯಾಗಿದ್ದ ಬಾಗಿಲು ಮಳೆಗಾಲದ ಬಳಿಕ ಹೆಚ್ಚು ಕಮ್ಮಿಯಾಗಿ ಬದಲಾಗಿರುತ್ತದೆ. ಕೆಲವೊಮ್ಮೆ ನಾವೇ ಒಂದು ಬಾಗಿಲು ಮೇಲೆ ಎತ್ತಿಯೋ ಅಥವಾ ಜೋರಾಗಿ ತಳ್ಳಿದ ಬಳಿಕವೊ ಮುಚ್ಚಿಕೊಳ್ಳುತ್ತದೆ. ಈ ಸಮಸ್ಯೆ ಕೆಲವು ದಿನಗಳ ಸಮಸ್ಯೆ ಇನ್ನು ಹೆಚ್ಚಾಗಿ ಬಾಗಿಲುಗಳಲ್ಲಿ ಬದಲಾಯಿಸುವ ಪರಿಸ್ಥಿತಿ ಬರುತ್ತದೆ. 

ಬಹಳಷ್ಟು ಜನರಿಗೆ ಈ ಸಮಸ್ಯೆ ಬಾಗಿಲಿನದ್ದೇ ಎಂದು ನಂಬುತ್ತಾರೆ ಅಥವಾ ಬಾಗಿಲು ನಿರ್ಮಿಸಿಕೊಟ್ಟ ಬಡಿಗೆಯವನೇ ಸರಿಯಾಗಿ ನಿರ್ಮಿಸಿಲ್ಲ ಎಂದು ಬೈದುಕೊಳ್ಳಲು ಆರಂಭಿಸುತ್ತಾರೆ. ಆದರೆ ನಿಜವಾದ ಸಮಸ್ಯೆ ಬಡಿಗೆ ವೃತ್ತಿಯವನದು ಅಲ್ಲ, ಬಾಗಿಲಿನದು ಅಲ್ಲ, ಈ ಸಮಸ್ಯೆಗೆ ಮತ್ತೆ ಬಡಿಗಿಯವನನ್ನು ಕರೆದು ಹಣ ವ್ಯಯಿಸುವ ಅಗತ್ಯವಿಲ್ಲ. ಕೆಲವು ಸರಳ ತಂತ್ರಗಳನ್ನ ತಿಳಿದರೆ ಮನೆಯಲ್ಲೇ ನೀವೇ ಸರಿಪಡಿಸಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಮಳೆಗಾಲದಲ್ಲೇ ಈ ಸಮಸ್ಯೆ ಹೆಚ್ಚು ಏಕೆ?
Image Credit : Asianet News

ಮಳೆಗಾಲದಲ್ಲೇ ಈ ಸಮಸ್ಯೆ ಹೆಚ್ಚು ಏಕೆ?

ಮರವು ನೈಸರ್ಗಿಕ ವಸ್ತು. ಹೀಗಾಗಿ ಮರದಿಂದ ಮಡಿದ ಬಾಗಿಲುಗಳು ಸಾಮಾನ್ಯವಾಗಿ ಗಾಳಿಯಲ್ಲಿನ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಮಳೆಗಾಲದಲ್ಲಿ , ವಾತಾವರಣದಲ್ಲಿನ ಆರ್ದ್ರತೆಯು ಹೆಚ್ಚಾಗುವುದರಿಂದ ಮರದ ಹಲಗೆಯ ಬಾಗಿಲು ಕೂಡ ಹಿಗ್ಗಲಾರಂಭಿಸುತ್ತದೆ. ಇದರ ಪರಿಣಾಮ ಬಾಗಿಲಿನ ಮೇಲ್ಭಾಗ ಅಥವಾ ಕೆಳಭಾಗದ ಹಂಚುಗಳು ಹೆಚ್ಚುಕಮ್ಮಿಯಾಗಿ ಮುಚ್ಚುವುದಿಲ್ಲ. ಮುಚ್ಚಿದರೆ ತೆರೆಯುವುದು ಕಷ್ಟವಾಗುತ್ತದೆ.

ಇದನ್ನೂ ಓದಿ: Double-leaf Door: ನಿಮಗಿದು ಗೊತ್ತೇ? ತಾತನ ಮನೆಗಳಿಗೇಕೆ ಎರಡು ಹಲಗೆಯ ಬಾಗಿಲು ಇರುತ್ತಿದ್ದವು?

ಮಳೆಗಾಲದಲ್ಲಿ ಹೆಚ್ಚು ಹೊರಭಾಗದಲ್ಲಿ ತೆರೆದುಕೊಂಡ ಬಾಗಿಲು

ಮನೆಯ ಒಳಗಿನ ಬಾಗಿಲುಗಳಿಗಿಂತ ಮನೆಯ ಹೆಬ್ಬಾಗಿಲು ಹೆಚ್ಚಾಗಿ ಹೊರಗಿನ ವಾತಾವರಣಕ್ಕೆ ತೆರೆದುಕೊಂಡಿರುತ್ತದೆ. ಮಳೆಗಾಲದ ರಭಸ ಮಳೆಗೆ ಶೀತ ಗಾಳಿ, ಮಳೆ ನೀರು ಬಾಗಿಲ ಮೇಲೆ ಸುರಿಯುತ್ತದೆ. ಹೀಗಾಗಿ ಹೆಚ್ಚು ಸಮಸ್ಯೆ ಇದೇ ಬಾಗಿಲಿಗೆ. 

ಇನ್ನೊಂದು ನಿಮ್ಮ ಮನೆಯ ಬಾಗಿಲು ಹಳೆಯದಾಗಿದ್ದರೆ, ಅದಕ್ಕೆ ಕಾಲ ಕಾಲಕ್ಕೆ ವಾರ್ನಿಷ್(ಬಣ್ಣ ಬಳಿಯುವುದು) ಅಥವಾ ಬಾಗಿಲನ್ನು ಮಳೆಗಾಲದಲ್ಲಿ ಸೀಲ್ ಮಾಡಿಲ್ಲದಿದ್ದರೆ, ಅದು ತೇವಾಂಶವನ್ನು ಹೆಚ್ಚು ವೇಗವಾಗಿ ಹೀರಿಕೊಳ್ಳುತ್ತದೆ. ವಿಶೇಷವಾಗಿ ಬಾಗಿಲಿನ ಮೇಲೆ ಮತ್ತು ಕೆಳಭಾಗವನ್ನು ಮುಚ್ಚದೆ ಬಿಟ್ಟರೆ ಅದು ಮಳೆ ನೀರು, ತೇವಾಂಶವು ಅಲ್ಲಿ ಸುಲಭವಾಗಿ ಹೀರಿಕೊಂಡು ಉಬ್ಬಿಕೊಳ್ಳುತ್ತದೆ. ಇದಲ್ಲದೆ ಸಾಕಷ್ಟು ಗಾಳಿ ಇಲ್ಲದೆ ತೇವಾಂಶವಿರುವ ಮನೆಯ ಬಾತ್ ರೂಂ ಬಾಗಿಲುಗಳು ಸಹ ಉಬ್ಬಿಕೊಳ್ಳುತ್ತವೆ

Related Articles

Related image1
ಹಾವುಗಳು ಯಾವುದಕ್ಕೆ ಹೆಚ್ಚು ಭಯ ಪಡುತ್ತೆ? ಈ ವಿಷ್ಯ ತಿಳಿದ್ರೆ ಮಳೆಗಾಲದಲ್ಲಿ ನೀವು ಸೇಫ್
Related image2
ಮಳೆಗಾಲದಲ್ಲಿ ಬಟ್ಟೆಯಿಂದ ದುರ್ವಾಸನೆ ಬರ್ಬಾರದು ಅಂದ್ರೆ ವಾಷಿಂಗ್‌ ಮಷಿನ್‌ ಗೆ ಈ ಒಂದು ವಸ್ತು ಹಾಕಿ
33
ಉಬ್ಬಿದ ಬಾಗಿಲು ಹೇಗೆ ಸರಿಪಡಿಸಬಹುದು?
Image Credit : Asianet News

ಉಬ್ಬಿದ ಬಾಗಿಲು ಹೇಗೆ ಸರಿಪಡಿಸಬಹುದು?

ಬಾಗಿಲು ಸ್ವಲ್ಪ ಉಬ್ಬಿದ್ದರೆ ಅಥವಾ ಜೋತು ಬಿದ್ದಂತಿದ್ದರೆ, ಬಾಗಿಲು ಮುಚ್ಚಲು ತೆರೆಯಲು ಕಷ್ಟವಾಗುತ್ತಿದ್ದರೆ, ಆಗ ನೀವು ಮಾಡಬೇಕಾಗಿದ್ದೇನೆಂದರೆ ಮೊದಲು ಅದರ ಹಿಂಜ್, ಸ್ಕ್ರೂಗಳು ಫಿಟ್ ಆಗಿವೆಯೇ ಎಂಬುದನ್ನ ನೋಡಿ. ಏಕೆಂದರೆ ಕೆಲವೊಮ್ಮೆ ಸಡಿಲವಾದ ಸ್ಕ್ರೂಗಳು ಬಾಗಿಲು ಸೊಟ್ಟಗಾಗಲು ಕಾರಣವಾಗಬಹುದು. ಅವು ಸಡಿಲವಾಗಿದ್ದರೆ, ಅವುಗಳನ್ನು ಸರಿಯಾಗಿ ಬಿಗಿಗೊಳಿಸಿ. ಹೊಸ್ತಿಲಿನ ಚೌಕಟ್ಟಿಗೆ ಮರದ ಬಾಗಲು ಸರಿಯಾಗಿ ಹೊಂದಿಕೊಳ್ಳದಿದ್ದರೆ, ಉಜ್ಜುತ್ತಿದ್ದರೆ ಎಲ್ಲಿ ಹಿಡಿದುಕೊಳ್ಳುತ್ತದೆ ಆ ಭಾಗದಲ್ಲಿ ಸ್ವಲ್ಪ ಸೋಪ್, ಪ್ಯಾರಾಫಿನ್ ವ್ಯಾಕ್ಸ್, ಪೆಟ್ರೋಲಿಯಂ ಜೆಲ್ಲಿ ಅಥವಾ ಮನೆಯ ಲೂಬ್ರಿಕಂಟ್‌ನ ಹಗುರವಾದ ಪದರವನ್ನು ಬಳಸಿದರೆ ಈ ಸಮಸ್ಯೆ ಕಡಿಮೆಯಾಗಬಹುದು. ಸ್ವಲ್ಪ ಸಮಯದವರೆಗೆ ಬಾಗಿಲು ಸುಲಭವಾಗಿ ಮುಚ್ಚಬಹುದು, ತೆರೆಯಬಹುದು. ಆದರೆ ಇದು ಶಾಶ್ವತ ಪರಿಹಾರವಲ್ಲದಿದ್ದರೂ, ಮಳೆಗಾಲದ ದಿನಗಳಲ್ಲಿ ಇದು ಬಾಗಿಲು ಬದಲಾಯಿಸುವ, ತೆರೆದುಕೊಂಡೇ ಮಲಗುವ ಅನಿವಾರ್ಯ ಕಿರಿಕಿರಿಯನ್ನ ತಪ್ಪಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಮಾನ್ಸೂನ್

Latest Videos
Recommended Stories
Recommended image1
ಹೈಡ್ರೋಜನ್ ರೈಲು ಸಾಮಾನ್ಯ ಟ್ರೈನ್‌ಗಿಂತ ಹೇಗೆ ಭಿನ್ನ? 1 ಕಿ.ಮೀ ಸಂಚಾರಕ್ಕೆ ತಗಲುವ ವೆಚ್ಚ ಎಷ್ಟು?
Recommended image2
Chanakya Niti On Marriage: 1 ಕೋಟಿ ರೂಪಾಯಿ ಕೊಟ್ಟರೂ ಇಂಥವ್ರನ್ನು ಮದುವೆಯಾಗಬೇಡಿ; ಚಾಣಕ್ಯ ನೀತಿ
Recommended image3
ಮದುವೆಯಾಗದೆ ತಾಯಿಯಾದ ಮಹಿಳೆ, 14ರಲ್ಲೇ ಕಂಡ ಕನಸು ಇಂದು ನನಸಾಗಿದೆ
Related Stories
Recommended image1
ಹಾವುಗಳು ಯಾವುದಕ್ಕೆ ಹೆಚ್ಚು ಭಯ ಪಡುತ್ತೆ? ಈ ವಿಷ್ಯ ತಿಳಿದ್ರೆ ಮಳೆಗಾಲದಲ್ಲಿ ನೀವು ಸೇಫ್
Recommended image2
ಮಳೆಗಾಲದಲ್ಲಿ ಬಟ್ಟೆಯಿಂದ ದುರ್ವಾಸನೆ ಬರ್ಬಾರದು ಅಂದ್ರೆ ವಾಷಿಂಗ್‌ ಮಷಿನ್‌ ಗೆ ಈ ಒಂದು ವಸ್ತು ಹಾಕಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved