Snakes Fear: ಮಳೆಗಾಲದಲ್ಲಿ ಹಾವುಗಳು, ಚೇಳುಗಳು, ಜೇಡಗಳು ಅಥವಾ ಸಹಸ್ರಪದಿಗಳ ಅಪಾಯ ಹೆಚ್ಚಾಗುತ್ತದೆ. ಇವುಗಳಲ್ಲಿ ಹಾವುಗಳು ಅತ್ಯಂತ ಅಪಾಯಕಾರಿ, ಹಾವು ಕಚ್ಚಿ ಸಾಯುವ ಅಪಾಯವೂ ಇದೆ. ಹಾವುಗಳು ಹೆಚ್ಚಾಗಿ ಯಾವುದಕ್ಕೆ ಭಯ ಪಡುತ್ತವೆ ಎನ್ನುವುದನ್ನು ತಿಳಿದರೆ, ಹಾವುಗಳಿಂದ ಸುಲಭವಾಗಿ ರಕ್ಷಣೆ ಪಡೆಯಬಹುದು.

ಮಳೆಗಾಲದಲ್ಲಿ ಹೆಚ್ಚಾಗುವ ಹಾವುಗಳ ಸಮಸ್ಯೆ

ಮಳೆ ಹೆಚ್ಚಾಗುತ್ತಿದ್ದಂತೆ, ಮನೆಯೊಳಗೆ ಹಾವು, ಕಾರಲ್ಲಿ, ಬೈಕಲ್ಲಿ ಹಾವು ಕಾಣಿಸಿಕೊಳ್ಳುವುದು ಮತ್ತು ಹಾವು ಕಚ್ಚಿ ಸತ್ತ ಸುದ್ದಿಗಳು ಸಹ ಹೆಚ್ಚಾಗಿ ಕೇಳೋದಕ್ಕೆ ಶುರುವಾಗುತ್ತದೆ. ಜನರು ಸಾಮಾನ್ಯವಾಗಿ ಹಾವುಗಳು ಕಾಡು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ ಎಂದು ಭಾವಿಸುತ್ತಾರೆ, ಆದರೆ ಇದು ನಿಜವಲ್ಲ. ಪ್ರವಾಹ, ಬಿಲಗಳಲ್ಲಿನ ತೇವಾಂಶ ಮತ್ತು ಆಹಾರದ ಹುಡುಕಾಟಕ್ಕಾಗಿ, ಹಾವುಗಳು ಎಲ್ಲಾ ಕಡೆಯೂ ಚಲಿಸಲು ಪ್ರಾರಂಭಿಸುತ್ತವೆ. ಅವು ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ವಿವಿಧ ಸ್ಥಳಗಳಲ್ಲಿ ತಮ್ಮ ಮನೆಗಳನ್ನು ನಿರ್ಮಿಸುತ್ತವೆ. ಹಾಗಾಗಿ ಮನೆಯೊಳಗೆ ನೀವು ಎಚ್ಚರಿಕೆಯಿಂದ ಇರುವುದು ಮುಖ್ಯ. ಅದಕ್ಕಾಗಿ ನೀವು ಹಾವುಗಳು ಯಾವುದಕ್ಕೆ ಹೆದರುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಹಾವುಗಳು ಯಾವುದೇ ನಿರ್ದಿಷ್ಟ ಸಸ್ಯ ಅಥವಾ ಮನೆಮದ್ದಿಗೆ ಹೆದರುವುದಿಲ್ಲ. ಹಾಗಿದ್ರೆ ಯಾವುದಕ್ಕೆ ಹಾವು ಹೆದರುತ್ತೆ ನೋಡೋಣ.

ಹಾವುಗಳು ಯಾವುದಕ್ಕೆ ಹೆದರುತ್ತವೆ?

ಬಲವಾದ ಕಂಪನಗಳು ಮತ್ತು ಚಲನೆಯನ್ನು ಹೊಂದಿರುವ ವಸ್ತುಗಳು : ಹಾವುಗಳು ನೆಲದ ಕಂಪನಗಳನ್ನು ಚೆನ್ನಾಗಿ ಗ್ರಹಿಸಬಲ್ಲವು. ಜೋರಾದ ಹೆಜ್ಜೆಗಳನ್ನು ಅಥವಾ ಹತ್ತಿರದ ಚಲನೆಯನ್ನು ಗ್ರಹಿಸಿದಾಗ, ಅವು ಓಡಿಹೋಗುತ್ತವೆ.

ಹಾವುಗಳು ಸಹ ಮನುಷ್ಯರನ್ನು ಕಂಡರೆ ಹೆದರುತ್ತವೆ: ಹಾವುಗಳು ಮನುಷ್ಯರ ಮೇಲೆ ದಾಳಿ ಸುಮ್ಮನೆ ಮಾಡುವುದಿಲ್ಲ ಏಕೆಂದರೆ ಹಾವುಗಳು ಕೂಡ ಮನುಷ್ಯರಿಗೆ ಹೆದರುತ್ತವೆ. ಅವು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಭಾವಿಸಿದಾಗ ಅಥವಾ ತಮಗೆ ನೋವಾದಾಗ ಮಾತ್ರ ಅವು ಕಚ್ಚುತ್ತವೆ.

ಬೆಳಕಿನಿಂದ ದೂರ ಹೋಗುವುದು : ಹಠಾತ್ ಆಗಿ ಬೆಳಕು ಬಂದಾಗ ಹಾವುಗಳು ಹೆದರುತ್ತವೆ. ಇದರ ಹಿಂದಿನ ವಿಜ್ಞಾನವೆಂದರೆ ಅವುಗಳ ಕಣ್ಣುಗಳು ರಾತ್ರಿಯಲ್ಲಿ ನೋಡುವಂತೆ ವಿನ್ಯಾಸಗೊಳಿಸಲಾಗಿದೆ, ಆದ್ದರಿಂದ ಪ್ರಕಾಶಮಾನವಾದ ಬೆಳಕು ಅವುಗಳ ಕಣ್ಣುಗಳಿಗೆ ನೋವುಂಟು ಮಾಡುತ್ತದೆ.

ಹಾವುಗಳು ವಾಸನೆಗಳಿಂದ ಓಡಿಹೋಗುತ್ತವೆಯೇ?

ಅನೇಕ ಪ್ರಾಣಿಗಳು ಮತ್ತು ಕೀಟಗಳು ಕೆಲವು ಗಾಢವಾದ ವಾಸನೆಗೆ ಓಡಿ ಹೋಗುತ್ತವೆ. ಆದ್ದರಿಂದ, ಜನರು ಫಿನಾಯಿಲ್, ಸೀಮೆಎಣ್ಣೆ, ಬೆಳ್ಳುಳ್ಳಿ, ಈರುಳ್ಳಿ, ಕರ್ಪೂರ ಅಥವಾ ಸಸ್ಯಗಳನ್ನು ಬಳಸುತ್ತಾರೆ. ಆದರೆ, ಇವು ಹಾವುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಮಳೆಗಾಲದಲ್ಲಿ ಹಾವುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

ಸ್ವಚ್ಛತೆಗೆ ಗಮನ ಕೊಡಿ : ಮಳೆಗಾಲದಲ್ಲಿ ಮನೆಗಳು ಹೆಚ್ಚಾಗಿ ಕೊಳಕಾಗುತ್ತವೆ, ಇದು ಕೀಟಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದು. ಆದ್ದರಿಂದ, ನಿಯಮಿತವಾಗಿ ಸ್ವಚ್ಛಗೊಳಿಸುವ ಬಗ್ಗೆ ಗಮನ ಕೊಡಿ. ಆ ಮೂಲಕ ಹಾವುಗಳನ್ನು ಮನೆಯಿಂದ ದೂರವಿಡಿ.

ಇಲಿಗಳನ್ನು ನಿಯಂತ್ರಿಸಿ : ಇದು ವಿಚಿತ್ರವೆನಿಸಬಹುದು, ಆದರೆ ಹಾವುಗಳು ಇಲಿಗಳನ್ನು ಇಷ್ಟಪಡುತ್ತವೆ. ಇಲಿಗಳ ಭೇಟೆಗಾಗಿ ಹಾವು ಮನೆಗೆ ಬಂದು ಸೇರಬಹುದು. ಹಾಗಾಗಿ ಮೊದಲಿಗೆ ಮನೆಯಿಂದ ಇಲಿಗಳನ್ನು ಓಡಿಸಿ.