MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Double-leaf Door: ತಾತನ ಕಾಲದ ಮನೆಗಳೇಕೆ ಎರಡು ಹಲಗೆಯ ಬಾಗಿಲು ಇರುತ್ತಿದ್ದವು?

Double-leaf Door: ತಾತನ ಕಾಲದ ಮನೆಗಳೇಕೆ ಎರಡು ಹಲಗೆಯ ಬಾಗಿಲು ಇರುತ್ತಿದ್ದವು?

Heritage Home ನಮ್ಮ ಪೂರ್ವಜರ ಮನೆಗಳಲ್ಲಿ ಎರಡು ಹಲಗೆಯ (Double-leaf) ಮರದ ಬಾಗಿಲುಗಳು ಸಾಮಾನ್ಯವಾಗಿದ್ದವು. ಇದಕ್ಕೆ ಕೇವಲ ಸಂಪ್ರದಾಯವಲ್ಲ, ಹಲವಾರು ಪ್ರಾಯೋಗಿಕ ಕಾರಣಗಳಿದ್ದವು. ಅವುಗಳೇನೆಂದು ತಿಳಿಯಿರಿ. 

2 Min read
Author : Ravi Janekal
Published : Jun 27 2026, 11:47 AM IST
Share this Photo Gallery
  • FB
  • TW
  • Linkdin
  • Whatsapp
16
ಪೂರ್ವಜನರ ಮನೆ ಎರಡು ಹಲಗೆಯ ಬಾಗಿಲುಗಳು
Image Credit : Getty

ಪೂರ್ವಜನರ ಮನೆ ಎರಡು ಹಲಗೆಯ ಬಾಗಿಲುಗಳು

ನಮ್ಮ ಪೂರ್ವಜರ ಮನೆಗಳಲ್ಲಿ ಎರಡು ಹಲಗೆಯ (Double-leaf) ಮರದ ಬಾಗಿಲುಗಳು ಸಾಮಾನ್ಯವಾಗಿದ್ದವು. ಇದಕ್ಕೆ ಕೇವಲ ಸಂಪ್ರದಾಯವಲ್ಲ, ಹಲವಾರು ಪ್ರಾಯೋಗಿಕ ಕಾರಣಗಳಿದ್ದವು. ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯ ರಚನೆಯೂ ಆಧುನಿಕವಾಗಿದೆ. ಮನೆ ಎಷ್ಟೇ ದೊಡ್ಡದಾಗಿದ್ದೂ ಒಂದೇ ಹಲಗೆಯ ಚಿಕ್ಕ ಬಾಗಿಲು ಮತ್ತು ಅದಕ್ಕೆ ಅಂಟಿಕೊಂಡಂತೆ ಒಂದು ವಿಶಾಲವಾದ ಕಿಟಕಿ, ತರಹೇವಾರಿ ಡಿಸೈನ್, ಲೋಹಗಳ ಬಳಕೆ ಮಾಡಿ ನಿರ್ಮಿಸಿರುತ್ತಾರೆ. ನಗರಗಳಿಗೆ ಸೀಮಿತವಾಗಿದ್ದ ಒಂದೇ ಬಾಗಿಲಿನ ಮನೆ, ಹಳ್ಳಿಗಳಿಗೂ ಹರಡಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನಿಮ್ಮ ಅಜ್ಜ-ಅಜ್ಜಿಯರ ಮನೆ ಬಾಗಿಲು ರಚನೆ ಹೇಗಿದ್ದವು?
Image Credit : Getty

ನಿಮ್ಮ ಅಜ್ಜ-ಅಜ್ಜಿಯರ ಮನೆ ಬಾಗಿಲು ರಚನೆ ಹೇಗಿದ್ದವು?

ಹಳ್ಳಿಗಳಲ್ಲೀಗ ಹುಡುಕಿದರೂ ಎರಡು ಹಲಗೆ ಬಾಗಿಲು ಕಾಣಸಿಗದು. ಅಲ್ಲಲ್ಲಿ ಪೂರ್ವಜರ ಮನೆಗಳು ಅನಾಥವಾಗಿ ಯಾವುದೋ ಪಳೆಯುಳಿಕೆಗಳಂತೆ ನಿಂತಿವೆ ಅಂಥ ಮನೆಗಳನ್ನ ಒಮ್ಮೆ ನೋಡಿ. ಆ ಮನೆಗೆ ಎರಡು ಹಲಗೆ(Double-leaf)ಯ ಬಾಗಿಲುಗಳಿದ್ದರೆ ಎಡ ಅಥವಾ ಬಲಕ್ಕೆ ಒಂದು ಚಿಕ್ಕ ಕಿಟಕಿ, ಮೇಲಿನ ರೂಫ್ ಮರ ಮತ್ತು ಮಣ್ಣಿನಿಂದ ನಿರ್ಮಿಸಿದ್ದಾಗಿರುತ್ತೆ. ನಿಮ್ಮ ವಯಸ್ಸು ಈಗ 30-40 ಆಗಿದ್ದರೆ, ನಿಮಗೆ ನಿಮ್ಮ ಹಳೆಯ ಮನೆಯ ನೆನಪು ಖಂಡಿತವಾಗಿ ಇರುತ್ತದೆ. ನಿಮ್ಮ ಹಳೆ ಮನೆ ನೆನಪು ಮಾಡಿಕೊಳ್ಳಿ. ಅಜ್ಜ-ಅಜ್ಜಿಯರು ಕಟ್ಟಿಸಿದ ಮನೆ ಹೇಗಿದ್ದವು? ನಿಮ್ಮ ಮನೆಗೂ ಎರಡು ಹಲಗೆಯ ಬಾಗಿಲುಗಳು ಇದ್ದವು ಎಂದು ನಿಮಗೆ ನೆನಪಿಗೆ ಬರದೇ ಇರದು!

Related Articles

Related image1
ಮಾನವಕುಲದ ಪೂರ್ವಜರು ಮರಿ ಹಾಕುವ ಬದಲು ಮೊಟ್ಟೆ ಇಡುತ್ತಿದ್ದರೇ? 250 ಮಿಲಿಯನ್ ವರ್ಷಗಳ ಹಿಂದಿನ ಕೌತುಕ ಬಿಚ್ಚಿಟ್ಟ ಸೈಂಟಿಸ್ಟ್!
Related image2
Pitru Paksha 2025: ಪೂರ್ವಜರು 'ತುಳಸಿ' ವಾಸನೆಯಿಂದ ಏಕೆ ಸಂತೋಷಪಡ್ತಾರೆ?
36
ಎರಡು ಹಲಗೆ ಬಾಗಿಲು ಏಕೆ?
Image Credit : Getty

ಎರಡು ಹಲಗೆ ಬಾಗಿಲು ಏಕೆ?

ಪೂರ್ವಜರ ಮನೆಗಳು ಯಾಕೆ ಎರಡು ಹಲಗೆಯ ಬಾಗಿಲುಗಳಿಂದಲೇ ನಿರ್ಮಿಸಿರುತ್ತಿದ್ದರು? ಇದು ಮೂಢನಂಬಿಕೆ ಅಲ್ಲ, ಸಮೂಹ ಸನ್ನಿ ಅಲ್ಲ. ಪಕ್ಕದವರು ಮಾಡಿದ್ರು ಅಂತಾ ಇವರು ಮಾಡಿದ್ದಲ್ಲ. ಅದರ ಬದಲಿಗೆ ಎರಡು ಹಲಗೆ ಬಾಗಿಲು ರಚನೆಯ ಹಿಂದೆ ಎಷ್ಟೆಲ್ಲ ದೂರದೃಷ್ಟಿಯಿತ್ತು ಎಂಬುದು ತಿಳಿದರೆ ಅಚ್ಚರಿಯಾಗುತ್ತದೆ.

46
ಪೂರ್ವಜನರ ಮನೆಯ ಎರಡು ಹಲಗೆ ಬಾಗಿಲು ನಿರ್ಮಾಣದ ಹಿಂದಿನ ಉದ್ದೇಶ
Image Credit : Getty

ಪೂರ್ವಜನರ ಮನೆಯ ಎರಡು ಹಲಗೆ ಬಾಗಿಲು ನಿರ್ಮಾಣದ ಹಿಂದಿನ ಉದ್ದೇಶ

ಪ್ರಾಚೀನ ಕಾಲದಲ್ಲಿ, ಇಂದಿನಂತೆ ಬಾಗಿಲುಗಳನ್ನು ಟೊಳ್ಳಾದ ಬೋರ್ಡ್‌ಗಳು, ಪ್ಲಾಸ್ಟಿಕ್ ಅಥವಾ ಪ್ಲೈವುಡ್‌ನಿಂದ ಮಾಡುತ್ತಿರಲಿಲ್ಲ. ಬಾಗಿಲು ನಿರ್ಮಾಣಕ್ಕೆ ತೇಗ, ರೋಸ್‌ವುಡ್, ಮಹುವಾ ಅಥವಾ ಬೇವಿನ ಮರವನ್ನು ಬಳಸಲಾಗುತ್ತಿತ್ತು. ನಮ್ಮ ಕರ್ನಾಟಕ ಭಾಗದ ಹಳ್ಳಿಗಳಂತೂ ಮನೆ ಬಾಗಿಲಿನಿಂದ ಹಿಡಿದು, ಮಾಳಿಗೆ ನಿರ್ಮಾಣದವರೆಗೂ ಬೇವಿನ ಮರ, ಮರದ ತೊಪ್ಪಲುಗಳನ್ನ ಬಳಸಲಾಗುತ್ತಿತ್ತು. ಹಳೆಯ ಮನೆಗಳು ಕಲ್ಲು ಚಪ್ಪಡಿಗಳಿಂದ ಮರದ ಟೊಂಗೆಗಳಿಂದ ನಿರ್ಮಿಸುತ್ತಿದ್ದರಿಂದ ಭಾರವಾಗಿರುತ್ತಿತ್ತು. ಇಂಥ ಮನೆಗೆ ಒಂದೇ ಹಲಗೆಯ ಬಾಗಿಲು ಹಾಕಿದರೆ ಮನೆಯ ತೂಕವೆಲ್ಲ ಗೋಡೆಯ ಮೇಲೆ ಬಿದ್ದು ಬಾಗಿಲು ಬಾಗುತ್ತಿತ್ತು. ಕೆಲವೊಮ್ಮೆ ಮನೆಯ ಬಾಗಿಲು ಮುರಿದೇ ಹೋಗುತ್ತಿತ್ತು.

ಆದ್ದರಿಂದ, ಹಳೆಯ ಮನೆಗಳು ಎರಡು ಹಲಗೆಯ ಬಾಗಿಲಿನಿಂದ ನಿರ್ಮಿಸಲಾಗುತ್ತಿತ್ತು. ಇದು ಮನೆಯ ಒಟ್ಟು ಭಾರವನ್ನು ಬ್ಯಾಲೆನ್ಸ್ ಮಾಡಿ ಬಾಗಿಲು ಬಾಗುವ ಅಪಾಯ ತಡೆಯುತ್ತಿತ್ತು. ಅದು ಅಲ್ಲದೆ ಪ್ರಾಚೀನ ಕಾಲದಲ್ಲಿ, ಮನೆಗಳಲ್ಲಿ ಗೌಪ್ಯತೆ, ಪರದಪದ್ಧತಿಗೆ ಒತ್ತು ನೀಡಲಾಗುತ್ತಿತ್ತು. ಈ ಸಾಮಾಜಿಕ ಪದ್ಧತಿಗೆ ಎರಡು ಹಲಗೆಯ ಬಾಗಿಲುಗಳು ಗಮನಾರ್ಹ ಕೊಡುಗೆ ನೀಡಿವೆ.

56
ಒಂದೇ ಬಾಗಲು ತೆರೆಯುತ್ತಿದ್ದು ಏಕೆ?
Image Credit : Getty

ಒಂದೇ ಬಾಗಲು ತೆರೆಯುತ್ತಿದ್ದು ಏಕೆ?

ಒಬ್ಬ ವ್ಯಾಪಾರಿ, ಪೋಸ್ಟ್‌ಮ್ಯಾನ್ ಅಥವಾ ಇನ್ನಾವುದೇ ಅಪರಿಚಿತರು ಮನೆಯ ಹೊರಗೆ ಬಂದರೆ, ಒಂದು ಬಾಗಿಲು ತೆರೆದರೆ ಸಾಕು. ಹೊರಗಿನವರು ಒಳಗೆ ಏನಿದೆ ಎಂಬುದನ್ನು ನೋಡಲು ಇದು ಅಡ್ಡಿಯಾಗುತ್ತಿತ್ತು. ಅಷ್ಟೇ ಅಲ್ಲ ಮನೆಯ ಮಹಿಳೆಯರು ಹಿಂಜರಿಕೆಯಿಲ್ಲದೆ ತಮ್ಮ ಕೆಲಸವನ್ನು ಮಾಡಬಹುದಿತ್ತು. ಯಾವಾಗಲೂ ಒಂದೇ ತೆರೆಯುತ್ತಿದ್ದರಿಂದ ಮುಚ್ಚಿದಂತೆಯೂ ಮುಚ್ಚದಂತೆಯೂ ಇರುತ್ತಿತ್ತು. ಇದರಿಂದ ಮನೆಯೊಳಗೆ ಗಾಳಿ ಬೆಳಕು ಹರಡಿ ಮನೆ ಯಾವಾಗಲೂ ತಂಪಾಗಿರುತ್ತಿತ್ತು. ಈಗಿನ ಒಂಟಿ ಬಾಗಿಲನ್ನು ಒಂದೋ ಸಂಪೂರ್ಣ ತೆರೆದಿಡಬೇಕು. ಇಲ್ಲವೇ ಮುಚ್ಚಬೇಕು. ಅರ್ಧ ತೆರೆದರೂ ಪ್ರಯೋಜನವಿಲ್ಲ.

ಅವಿಭಕ್ತ ಕುಟುಂಬಗಳಿದ್ದ ಹಳೆಯ ದಿನಗಳಲ್ಲಿ, ಮದುವೆಗಳು ಅಥವಾ ಇತರ ಆಚರಣೆಗಳ ಸಮಯದಲ್ಲಿ ಮನೆಗಳು ಹೆಚ್ಚಾಗಿ ಜನಜಂಗುಳಿಯಿಂದ ಕೂಡಿರುತ್ತಿದ್ದವು. ಈ ಎರಡು ಬಾಗಿಲುಗಳ ವಿಶಿಷ್ಟ ಲಕ್ಷಣವೆಂದರೆ ಎರಡೂ ಬಾಗಿಲುಗಳನ್ನು ತೆರೆಯಬಹುದಾಗಿದ್ದು, ಮನೆಗೆ ವಸ್ತುಗಳು ಸಾಗಿಸಲು, ಮನೆಯಿಂದ ಹೊರಗಡೆ ಸಾಗಿಸಲು ಈ ಎರಡು ಹಲಗೆಯ ಬಾಗಿಲುಗಳು ಅನುಕೂಲವಾಗಿದ್ದವು. ದೊಡ್ಡ ಕೃಷಿ ಧಾನ್ಯದ ಚೀಲಗಳು, ಭಾರವಾದ ಪೆಟ್ಟಿಗೆಗಳು, ಪೆಟ್ಟಿಗೆಗಳು ಅಥವಾ ದೊಡ್ಡ ಮದುವೆಯ ವಸ್ತುಗಳು ಯಾವುದೇ ಅಡಚಣೆಯಿಲ್ಲದೆ ಸುಲಭವಾಗಿ ಮನೆಯೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟವು.

66
Double leaf Door: ಆಧುನಿಕ ಮನೆಗಳ ವಿನ್ಯಾಸ ಮೀರಿಸಿದ್ದವು
Image Credit : Asianet News

Double leaf Door: ಆಧುನಿಕ ಮನೆಗಳ ವಿನ್ಯಾಸ ಮೀರಿಸಿದ್ದವು

80 ಮತ್ತು 90 ರ ದಶಕದ ಈ ಮನೆಗಳನ್ನು ವಿದ್ಯುತ್ ಕಡಿತಗೊಂಡಾಗಲೂ ಗಾಳಿ ಬೆಳಕಿಗೆ ಅವಕಾಶ ನೀಡುವಂತೆ ಹೊರಗಿನಿಂದ ವಿನ್ಯಾಸಗೊಳಿಸಲಾಗಿತ್ತು. ಎರಡು ಹಲಗೆಯ ಬಾಗಿಲುಗಳು ಮನೆಯ ವಾತಾವರಣ ನಿಯಂತ್ರಣವನ್ನು ಸುಧಾರಿಸಿದವು. ಬಲವಾದ ಗಾಳಿಯ ಸಂದರ್ಭದಲ್ಲಿ, ಗಾಳಿಯನ್ನು ತಡೆಯಲು ಒಂದು ಬಾಗಿಲನ್ನು ಮುಚ್ಚಬಹುದಿತ್ತು.

ಒಟ್ಟಾರೆಯಾಗಿ, ಪ್ರಾಚೀನ ಮನೆಗಳ ಈ ಬಾಗಿಲುಗಳು ಕೇವಲ ಮರದ ರಚನೆಗಳಾಗಿರಲಿಲ್ಲ, ಬದಲಾಗಿ ಭದ್ರತೆ, ಹವಾಮಾನ ಪ್ರತಿರೋಧ ಮತ್ತು ಸಾಮಾಜಿಕ ರಚನೆಯ ಗೌರವದ ಸಂಕೇತಗಳಾಗಿದ್ದವು. ಅವು ಇಂದಿನ ಆಧುನಿಕ ಎಂಜಿನಿಯರಿಂಗ್ ಅನ್ನು ಮೀರಿಸಿದ್ದವು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಜೀವನಶೈಲಿ
ಮನೆ

Latest Videos
Recommended Stories
Recommended image1
Indian Railway: ಓಣಂ ವಿಶೇಷ, Bharat Gaurav ರೈಲಿನಲ್ಲಿ ಇಡೀ ದೇಶ ಸುತ್ತುವ ಸುವರ್ಣಾವಕಾಶ, ಶೇ.33 ರಿಯಾಯಿತಿ
Recommended image2
ಗಾಜಿನ ಲೋಟದ ಮೇಲೆ ಬಿಳಿ ಕಲೆಗಳು ಕೂತು ಮಬ್ಬಾಗಿದೆಯಾ? ಸೋಪ್ ಹಚ್ಚಿ ತೊಳೆದ್ರೆ ಹೋಗಲ್ಲ, ಈ ಟ್ರಿಕ್ಸ್ ಬಳಸಿ
Recommended image3
American Houses: ಅಮೆರಿಕದಲ್ಲಿ ನಮ್ಮೂರಂತೆ ಇಟ್ಟಿಗೆ ಮನೆ ಯಾಕಿಲ್ಲ? ಇಲ್ಲಿದೆ ಅಚ್ಚರಿಯ ಕಾರಣಗಳು!
Related Stories
Recommended image1
ಮಾನವಕುಲದ ಪೂರ್ವಜರು ಮರಿ ಹಾಕುವ ಬದಲು ಮೊಟ್ಟೆ ಇಡುತ್ತಿದ್ದರೇ? 250 ಮಿಲಿಯನ್ ವರ್ಷಗಳ ಹಿಂದಿನ ಕೌತುಕ ಬಿಚ್ಚಿಟ್ಟ ಸೈಂಟಿಸ್ಟ್!
Recommended image2
Pitru Paksha 2025: ಪೂರ್ವಜರು 'ತುಳಸಿ' ವಾಸನೆಯಿಂದ ಏಕೆ ಸಂತೋಷಪಡ್ತಾರೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved