ಪಬ್ಲಿಕ್ ಟಾಯ್ಲೆಟ್ ಸೀಟ್‌ನಲ್ಲಿ ಈ ಗ್ಯಾಪ್ ಏಕಿರುತ್ತೆ? ಇದು ಡಿಸೈನ್ ಅಲ್ಲ, ಅಸಲಿ ಕಾರಣ ಬೇರೇನೇ ಇದೆ!
Public toilet seat gap: ಸಾರ್ವಜನಿಕ ಶೌಚಾಲಯಗಳನ್ನು ಬಳಸುವಾಗ ಅದರ ಸೀಟುಗಳು ಮುಂಭಾಗದಲ್ಲಿ ಕಟ್ ಆದಂತೆ ಇರುವುದನ್ನು ನೀವು ಗಮನಿಸಿರಬಹುದು. ಇದನ್ನು ನೋಡಿ ಸೀಟು ಮುರಿದಿದೆ ಅಥವಾ ವಿನ್ಯಾಸ ಸರಿ ಇಲ್ಲ ಎಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು! ಈ ಸಣ್ಣ ಗ್ಯಾಪ್‌ನ ಹಿಂದಿದೆ ಒಂದು ಕಾರಣ.
ಉದ್ದೇಶಪೂರ್ವಕವಾಗಿಯೇ ಮಾಡಲಾಗಿರುತ್ತೆ
ಉದ್ದೇಶಪೂರ್ವಕವಾಗಿಯೇ ಮಾಡಲಾಗಿರುತ್ತೆ
ಸಾರ್ವಜನಿಕ ಶೌಚಾಲಯಗಳಲ್ಲಿ ನೀವು ಒಂದು ವಿಷಯ ಗಮನಿಸಿದ್ದೀರಾ? ಅಲ್ಲಿನ ಟಾಯ್ಲೆಟ್ ಸೀಟುಗಳು ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಸೀಟುಗಳಿಗಿಂತ ಭಿನ್ನವಾಗಿರುತ್ತವೆ. ಸೀಟಿನ ಮುಂಭಾಗದಲ್ಲಿ ಒಂದು ತೆರೆದ ಭಾಗ ಅಥವಾ ಗ್ಯಾಪ್ ಇರುತ್ತದೆ, ಇದು ಇಂಗ್ಲಿಷ್ ಅಕ್ಷರ “U” ನಂತೆ ಕಾಣುತ್ತದೆ. ಅನೇಕರು ಇದನ್ನು ಮುರಿದುಹೋದ ಸೀಟು ಅಥವಾ ಕಡಿಮೆ ಖರ್ಚಿನ ವಿನ್ಯಾಸ ಎಂದು ಭಾವಿಸುತ್ತಾರೆ, ಆದರೆ ಸತ್ಯವೇ ಬೇರೆ. ವಾಸ್ತವವಾಗಿ, ಈ ಗ್ಯಾಪ್ ಅನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಮತ್ತು ಇದರ ಹಿಂದೆ ಹಲವು ಪ್ರಮುಖ ಕಾರಣಗಳಿವೆ.
ಈಗಲ್ಲ 1955 ರಿಂದಲೂ ಈ ನಿಯಮ ಜಾರಿ
ಈಗಲ್ಲ 1955 ರಿಂದಲೂ ಈ ನಿಯಮ ಜಾರಿ
ಅಮೆರಿಕದಲ್ಲಿ ಸಾರ್ವಜನಿಕ ಶೌಚಾಲಯಗಳಿಗಾಗಿ U-ಆಕಾರದ ಸೀಟಿನ ನಿಯಮವನ್ನು ಮೊದಲ ಬಾರಿಗೆ 'ಅಮೇರಿಕನ್ ಸ್ಟ್ಯಾಂಡರ್ಡ್ ನ್ಯಾಷನಲ್ ಪ್ಲಂಬಿಂಗ್ ಕೋಡ್' ಅಡಿಯಲ್ಲಿ 1955ರಲ್ಲಿ ಜಾರಿಗೆ ತರಲಾಯಿತು. ನಂತರ 1973 ರಲ್ಲಿ 'ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಪ್ಲಂಬಿಂಗ್ ಅಂಡ್ ಮೆಕ್ಯಾನಿಕಲ್ ಅಫಿಶಿಯಲ್ಸ್' (IAPMO) ಕೂಡ ಇದನ್ನು ತನ್ನ ನಿಯಮದ ಭಾಗವಾಗಿಸಿತು. ಇದರಿಂದಾಗಿ ವಿಶ್ವದ ಹಲವು ದೇಶಗಳು ಇದೇ ವಿನ್ಯಾಸವನ್ನು ಅಳವಡಿಸಿಕೊಂಡವು. ಇದು ಕೇವಲ ಡಿಸೈನ್ ಅಲ್ಲ, ಅಧಿಕೃತ ನಿಯಮವಾಗಿದೆ. ಹಾಗಾದರೆ ಈ ವಿನ್ಯಾಸದ ಹಿಂದಿನ ಉದ್ದೇಶವೇನು?.
ಈ ಅಪಾಯ ಕಡಿಮೆ ಮಾಡಲು ಸಹಕಾರಿ
ಈ ಅಪಾಯ ಕಡಿಮೆ ಮಾಡಲು ಸಹಕಾರಿ
ಸೀಟಿನ ಮುಂಭಾಗದ ಈ ತೆರೆದ ಭಾಗದ ಮುಖ್ಯ ಉದ್ದೇಶ ಮಹಿಳಾ ಸ್ವಾಸ್ಥ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವುದು. ಶೌಚದ ನಂತರ ಸ್ವಚ್ಛಗೊಳಿಸುವಾಗ ಸೀಟಿನ ಮುಂಭಾಗದ ಭಾಗಕ್ಕೆ ನೇರ ಸಂಪರ್ಕ ಬರುವುದನ್ನು ಈ ವಿನ್ಯಾಸ ತಡೆಯುತ್ತದೆ. ಸಾರ್ವಜನಿಕ ಶೌಚಾಲಯಗಳನ್ನು ದಿನಕ್ಕೆ ನೂರಾರು ಜನರು ಬಳಸುವುದರಿಂದ ಸೋಂಕು ಮತ್ತು ಕೀಟಾಣುಗಳು ಹರಡುವ ಅಪಾಯ ಹೆಚ್ಚಿರುತ್ತದೆ. U-ಆಕಾರದ ವಿನ್ಯಾಸವು ಈ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸ್ವಚ್ಛತಾ ಸಿಬ್ಬಂದಿಗೂ ಸಹಕಾರಿ
ಸ್ವಚ್ಛತಾ ಸಿಬ್ಬಂದಿಗೂ ಸಹಕಾರಿ
U-ಆಕಾರದ ಸೀಟುಗಳು ಕೇವಲ ಬಳಕೆದಾರರಿಗೆ ಮಾತ್ರವಲ್ಲದೆ, ಸ್ವಚ್ಛಗೊಳಿಸುವ ಸಿಬ್ಬಂದಿಗೂ ತುಂಬಾ ಅನುಕೂಲಕರವಾಗಿದೆ. ಈ ಗ್ಯಾಪ್ ಇರುವುದರಿಂದ ಸೀಟಿನ ಕೆಳಭಾಗ ಮತ್ತು ಟಾಯ್ಲೆಟ್ ಬೌಲ್‌ನ ಮುಂಭಾಗದ ಭಾಗವನ್ನು ಸುಲಭವಾಗಿ ತಲುಪಬಹುದು. ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಸ್ವಚ್ಛತೆ ಮತ್ತು ಸ್ಯಾನಿಟೈಸೇಶನ್ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ಈ ವಿನ್ಯಾಸವು ಉತ್ತಮ ಗಾಳಿಯ ಚಲನೆಗೆ (Ventilation) ಅನುವು ಮಾಡಿಕೊಡುತ್ತದೆ, ಇದರಿಂದ ದುರ್ವಾಸನೆ ಕಡಿಮೆಯಾಗುತ್ತದೆ.
ಸಣ್ಣ ಬದಲಾವಣೆ, ದೊಡ್ಡ ಉದ್ದೇಶ
ಸಣ್ಣ ಬದಲಾವಣೆ, ದೊಡ್ಡ ಉದ್ದೇಶ
ಮೇಲ್ನೋಟಕ್ಕೆ ಸಾಮಾನ್ಯವೆಂದು ಕಂಡುಬರುವ ಈ ಗ್ಯಾಪ್ ವಾಸ್ತವವಾಗಿ ಸಾರ್ವಜನಿಕ ಸ್ವಚ್ಛತೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ವಿನ್ಯಾಸವಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಕಾಣುವ ಸಣ್ಣ ಸಣ್ಣ ವಿಷಯಗಳ ಹಿಂದೆ ಕೂಡ ಆಳವಾದ ವೈಜ್ಞಾನಿಕ ಮತ್ತು ಪ್ರಾಯೋಗಿಕ ತರ್ಕ ಅಡಗಿರುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.