- Home
- Life
- ಮಲಗಿದ ತಕ್ಷಣ ಒಳ್ಳೆ ನಿದ್ದೆ ಬರ್ಬೇಕು ಅಂದ್ರೆ ಬೆಡ್‌ರೂಂನಲ್ಲಿರಲಿ ಸ್ನೇಕ್ ಪ್ಲಾಂಟ್! ಆದ್ರೆ ಈ ದಿಕ್ಕಿನಲ್ಲಿಟ್ರೆ ಒಳ್ಳೇದು
ಮಲಗಿದ ತಕ್ಷಣ ಒಳ್ಳೆ ನಿದ್ದೆ ಬರ್ಬೇಕು ಅಂದ್ರೆ ಬೆಡ್‌ರೂಂನಲ್ಲಿರಲಿ ಸ್ನೇಕ್ ಪ್ಲಾಂಟ್! ಆದ್ರೆ ಈ ದಿಕ್ಕಿನಲ್ಲಿಟ್ರೆ ಒಳ್ಳೇದು
Snake plant benefits: ಸ್ನೇಕ್ ಪ್ಲಾಂಟ್ ಅನ್ನು 'ಮದರ್-ಇನ್-ಲಾಸ್ ಟಂಗ್' ಎಂದೂ ಕರೆಯುತ್ತಾರೆ. ಇದು ಸುಲಭವಾಗಿ ಬೆಳೆಯುವ ಮತ್ತು ದೀರ್ಘಕಾಲ ಬಾಳಿಕೆ ಬರುವ ಸಸ್ಯವಾಗಿದೆ. ಇದನ್ನು ಬೆಳೆಸುವ ಲಾಭಗಳೇನು ಮತ್ತು ಮನೆಯ ಒಳಗೆ ಅಥವಾ ಹೊರಗೆ ಎಲ್ಲಿ ಇಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಡಿಮೆ ನಿರ್ವಹಣೆಯಲ್ಲಿ ಬೆಳೆಯುವ ಸಸ್ಯ
ಇತ್ತೀಚಿನ ದಿನಗಳಲ್ಲಿ ಜನರಿಗೆ ಗಾರ್ಡನಿಂಗ್ (ತೋಟಗಾರಿಕೆ) ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿದೆ. ಮನೆಯ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಗಾಳಿಯನ್ನು ಶುದ್ಧೀಕರಿಸಲು ಒಳಾಂಗಣ ಸಸ್ಯಗಳನ್ನು (Indoor Plants) ಹೆಚ್ಚಾಗಿ ಬಳಸಲಾಗುತ್ತಿದೆ. ಕಡಿಮೆ ನಿರ್ವಹಣೆಯಲ್ಲಿ ಬೆಳೆಯುವ ಸಸ್ಯಗಳಲ್ಲಿ 'ಸ್ನೇಕ್ ಪ್ಲಾಂಟ್' ಅತ್ಯಂತ ಪ್ರಮುಖವಾದುದು.

ಸ್ನೇಕ್ ಪ್ಲಾಂಟ್ ಬೆಳೆಸುವುದರಿಂದ ಆಗುವ ಲಾಭಗಳು
ಗಾಳಿಯನ್ನು ಶುದ್ಧೀಕರಿಸುತ್ತದೆ
ಈ ಸಸ್ಯವು ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿರಿಸುತ್ತದೆ. ಇದು ಗಾಳಿಯಲ್ಲಿರುವ ಫಾರ್ಮಾಲ್ಡಿಹೈಡ್, ಬೆಂಜೀನ್ ಮತ್ತು ಕ್ಸಿಲೀನ್‌ನಂತಹ ವಿಷಕಾರಿ ಅಂಶಗಳನ್ನು ಹೀರಿಕೊಂಡು ಗಾಳಿಯನ್ನು ಫಿಲ್ಟರ್ ಮಾಡುತ್ತದೆ. ಆದ್ದರಿಂದ ಇದನ್ನು ಅತ್ಯುತ್ತಮ 'ಏರ್ ಪ್ಯೂರಿಫೈಯರ್' ಸಸ್ಯ ಎನ್ನಲಾಗುತ್ತದೆ.
ರಾತ್ರಿಯಲ್ಲೂ ಆಮ್ಲಜನಕ ಬಿಡುಗಡೆ ಮಾಡುತ್ತದೆ
ಹೆಚ್ಚಿನ ಸಸ್ಯಗಳು ರಾತ್ರಿಯಲ್ಲಿ ಕಾರ್ಬನ್ ಡೈಆಕ್ಸೈಡ್ ಬಿಡುಗಡೆ ಮಾಡುತ್ತವೆ. ಆದರೆ ಸ್ನೇಕ್ ಪ್ಲಾಂಟ್ ರಾತ್ರಿಯ ವೇಳೆಯಲ್ಲೂ ಆಮ್ಲಜನಕವನ್ನು (Oxygen) ಹೊರಸೂಸುತ್ತದೆ. ಈ ಕಾರಣದಿಂದ ಇದನ್ನು ಬೆಡ್‌ರೂಮ್‌ನಲ್ಲಿ ಇಡುವುದು ತುಂಬಾ ಒಳ್ಳೆಯದು, ಇದು ನಿದ್ರೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.
ಮಾನಸಿಕ ಒತ್ತಡ ನಿವಾರಣೆ
ಮನೆಯಲ್ಲಿ ಹಚ್ಚಹಸಿರಾದ ಗಿಡಗಳಿದ್ದರೆ ಧನಾತ್ಮಕ ಶಕ್ತಿ (Positivity) ಹೆಚ್ಚಾಗುತ್ತದೆ. ಶುದ್ಧವಾದ ಗಾಳಿಯಲ್ಲಿ ಉಸಿರಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ, ನೆಮ್ಮದಿ ಸಿಗುತ್ತದೆ.
ಸಂಪತ್ತು ಮತ್ತು ಸಮೃದ್ಧಿ
ವಾಸ್ತು ಶಾಸ್ತ್ರದ ಪ್ರಕಾರ ಸ್ನೇಕ್ ಪ್ಲಾಂಟ್ ಅನ್ನು ಅದೃಷ್ಟದ ಸಸ್ಯವೆಂದು ಪರಿಗಣಿಸಲಾಗುತ್ತದೆ. ಮನೆಯ ಆಗ್ನೇಯ ಅಥವಾ ಪೂರ್ವ ದಿಕ್ಕಿನಲ್ಲಿ ಇದನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ, ಸುಖ-ಸಮೃದ್ಧಿ ಮತ್ತು ಧನಲಾಭ ಉಂಟಾಗುತ್ತದೆ ಎಂದು ನಂಬಲಾಗಿದೆ.
ಸ್ನೇಕ್ ಪ್ಲಾಂಟ್ ಎಲ್ಲಿಡಬೇಕು?
ಸ್ನೇಕ್ ಪ್ಲಾಂಟ್ ಅನ್ನು ಮನೆಯ ಒಳಗೆ ಅಥವಾ ಹೊರಗೆ ಎಲ್ಲಿ ಬೇಕಾದರೂ ಬೆಳೆಸಬಹುದು. ಇದು ತುಂಬಾ ಕಡಿಮೆ ನಿರ್ವಹಣೆ ಬೇಡುವ ಗಿಡವಾಗಿದೆ.
ಇದಕ್ಕೆ ಅತಿಯಾದ ನೀರಿನ ಅಗತ್ಯವಿಲ್ಲ. ಕುಂಡದಲ್ಲಿನ ಮಣ್ಣು ಸಂಪೂರ್ಣವಾಗಿ ಒಣಗಿದಾಗ ಮಾತ್ರ ನೀರು ಹಾಕಬೇಕು.
ಇದರ ಎಲೆಗಳು ಸಾಕಷ್ಟು ಉದ್ದವಾಗಿ ಬೆಳೆಯುತ್ತವೆ. ಬೇಸಿಗೆಯಲ್ಲಿ ಇದರ ಬುಡದಿಂದ ಹೊಸ ಸಸಿಗಳು ಚಿಗುರುತ್ತವೆ. ನೀವು ಆ ಸಣ್ಣ ಸಸಿಗಳನ್ನು ಬೇರೆ ಕುಂಡಕ್ಕೆ ವರ್ಗಾಯಿಸಿ ಹೊಸ ಗಿಡಗಳನ್ನು ಬೆಳೆಸಬಹುದು.
ಈ ಸಸ್ಯವು ಮಣ್ಣಿನಲ್ಲಿ ಸುಲಭವಾಗಿ ಬೆಳೆಯುತ್ತದೆ, ಆದರೆ ಕೇವಲ ನೀರಿನಲ್ಲಿ ಮಾತ್ರ ಬೆಳೆಯುವುದು ಸ್ವಲ್ಪ ಕಷ್ಟ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
