- Home
- Life
- ಮಾಂಸಾಹಾರಿ ಪ್ರಾಣಿಗಳು ಯಾವಾಗ ಹುಲ್ಲು ತಿನ್ನುತ್ತವೆ? ಹಸಿವಾದಾಗ ಅಲ್ಲವೇ ಅಲ್ಲ, ಕಾರಣ ತಿಳಿದರೆ ಅಚ್ಚರಿ ಪಡ್ತೀರಿ!
ಮಾಂಸಾಹಾರಿ ಪ್ರಾಣಿಗಳು ಯಾವಾಗ ಹುಲ್ಲು ತಿನ್ನುತ್ತವೆ? ಹಸಿವಾದಾಗ ಅಲ್ಲವೇ ಅಲ್ಲ, ಕಾರಣ ತಿಳಿದರೆ ಅಚ್ಚರಿ ಪಡ್ತೀರಿ!
Did You Know Why Carnivorous Animals Eat Grass? ಮಾಂಸಾಹಾರಿ ಪ್ರಾಣಿಗಳು ಕೆಲವೊಮ್ಮೆ ಏಕೆ ಹುಲ್ಲು ತಿನ್ನುತ್ತವೆ? ಹಸಿವಾದಾಗ ತಿನ್ನುತ್ತವೆ ಎಂದರೆ ನಿಮ್ಮ ಉತ್ತರ ತಪ್ಪು. ಮಾಂಸಾಹಾರಿ ಪ್ರಾಣಿಗಳು ಹುಲ್ಲು ತಿನ್ನುವ ಕಾರಣ ತಿಳಿದರೆ ಅಚ್ಚರಿ ಪಡ್ತೀರಿ. ಓದಿ.

ಮಾಂಸಾಹಾರಿ ಪ್ರಾಣಿಗಳು ಯಾವಾಗ ಹುಲ್ಲು ತಿನ್ನುತ್ತವೆ?
ಹುಲಿ, ಸಿಂಹ, ನಾಯಿ, ಬೆಕ್ಕುಗಳಂತಹ ಪ್ರಾಣಿಗಳನ್ನು ಮಾಂಸಾಹಾರಿ ಪ್ರಾಣಿಗಳೆಂದು ಗುರುತಿಸಲಾಗುತ್ತದೆ. ಆದರೆ ಕೆಲವೊಮ್ಮೆ ಹುಲ್ಲು ಮೇಯುವುದುನ್ನು ನೀವು ನೋಡಿರಬಹುದು. ಇತ್ತೀಚೆಗೆ ಚುನಾಗಢ್ ಮೃಗಾಲಯದಲ್ಲಿ ಸಿಂಹವೊಂದು ಹುಲ್ಲು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ನೋಡಿದ ನೆಟಿಜನ್ ಅಚ್ಚರಿ ವ್ಯಕ್ತಪಡಿಸಿದರು. ಮಾಂಸ ತಿನ್ನುವ ಸಿಂಹ ಹುಲ್ಲು ತಿನ್ನುತ್ತಿದೆ ಇದೇ ಕಲಿಗಾಲ ಎಂದರು, ಕೆಲವರು ಅಂತ್ಯಕಾಲ ಎಂದರು. ಮಾಂಸಾಹಾರಿ ಪ್ರಾಣಿಗಳು ಕೆಲವೊಮ್ಮೆ ಹುಲ್ಲು ಏಕೆ ತಿನ್ನುತ್ತವೆ? ಇದರ ಹಿಂದಿನ ಕಾರಣಗಳೇನು ಇಲ್ಲಿ ತಿಳಿಯೋಣ.
ಮಾಂಸಾಹಾರಿ ಪ್ರಾಣಿಗಳು ಹುಲ್ಲು ಏಕೆ ತಿನ್ನುತ್ತವೆ?
ಕೆಲವೊಮ್ಮೆ ಮನೆಯಲ್ಲಿ ಸಾಕಿದ ನಾಯಿಗಳಿದ್ದರೆ, ಬೆಕ್ಕುಗಳಿದ್ದರೆ ನೀವು ಇದನ್ನು ಗಮನಿಸಿಯೇ ಇರುತ್ತೀರಿ. ಅವು ಆಗಾಗ ಮನೆಯಂಗಳದಲ್ಲಿನ ಮೇವು ತಿನ್ನುವುದು ಗಮನಿಸಿರುತ್ತೀರಿ? ಸಿಂಹ, ನಾಯಿ, ಬೆಕ್ಕುಗಳು ಹುಲ್ಲು ತಿನ್ನುವುದರ ಹಿಂದೆ ಯಾವುದೇ ಕಾರಣ ಇಲ್ಲ. ಆಹಾರದಲ್ಲಿನ ಬದಲಾವಣೆ ಅಲ್ಲ. ಬದಲಿಗೆ ದೇಹಕ್ಕೆ ಸಂಬಂಧಿಸಿದ ವಿಶೇಷ ಕಾರಣವಿದೆ. ಅದೇನೆಂದರೆ ಮಾಂಸಾಹಾರಿ ಪ್ರಾಣಿಗಳು ಬೇಟೆಯಾಡಿ ಮಾಂಸ ತಿಂದಾಗ ಅವು ಹೆಚ್ಚಾಗಿ ಕೂದಲು, ಗರಿಗಳು ಮತ್ತು ಸಣ್ಣ ಮೂಳೆಗಳನ್ನು ತಿಂದಿರುತ್ತವೆ. ಈ ವಸ್ತುಗಳು ಜೀರ್ಣಿಸಿಕೊಳ್ಳುವುದು ಅವುಗಳಿಗೆ ಕಷ್ಟ. ಅಲ್ಲದೆ ಇದರಿಂದ ಹೊಟ್ಟೆ ಉಬ್ಬರ ಉಂಟು ಮಾಡುತ್ತೆ. ಅಂತಹ ಪರಿಸ್ಥಿತಿಯಲ್ಲಿ, ದೇಹವು ತನ್ನನ್ನು ತಾನು ಶುದ್ಧೀಕರಿಸಿಕೊಳ್ಳಲು ನೈಸರ್ಗಿಕ ವಿಧಾನವನ್ನು ಅಳವಡಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಪ್ರಾಣಿಗಳು ಹುಲ್ಲು ತಿನ್ನಲು ಪ್ರಾರಂಭಿಸುತ್ತವೆ.
ಹುಲ್ಲು ತಿಂದ ನಂತರ ಏನಾಗುತ್ತೆ?
ಮಾಂಸಾಹಾರಿ ಪ್ರಾಣಿಗಳು ಹುಲ್ಲು ತಿಂದ ಬಳಿಕ ವಾಂತಿ ಮಾಡಿಕೊಳ್ಳುತ್ತವೆ. ಆಗ ಹೊಟ್ಟೆಯಲ್ಲಿ ಜೀರ್ಣವಾಗದೆ ಉಳಿದ ಕೂದಲು, ಮೂಳೆಗಳಂತ ವಸ್ತುಗಳನ್ನು ಹೊರಗೆ ಹಾಕುತ್ತವೆ. ಈ ಅಭ್ಯಾಸವು ಹೆಚ್ಚಾಗಿ ನಾಯಿಗಳು ಬೆಕ್ಕುಗಳಲ್ಲಿ ಕಂಡುಬರುತ್ತೆ. ಏಕೆಂದರೆ ಅವುಗಳ ಜೀರ್ಣಾಂಗ ವ್ಯವಸ್ಥೆ ಸೂಕ್ಷ್ಮ. ಮನುಷ್ಯರಂತೆ ಎಲ್ಲವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ.
ಫೈಬರ್ ಕೊರತೆ:
ಹುಲ್ಲಿನಲ್ಲಿ ನಾರಿನಂಶ ಹೇರಳವಾಗಿದ್ದು ಇದು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಪ್ರಾಣಿಗಳಿಗೆ ಹೆಚ್ಚಿನ ನಾರಿನ ಅಗತ್ಯವಿರುತ್ತದೆ, ಆದ್ದರಿಂದ ಅವು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು, ತಿಂದ ಆಹಾರ ಜೀರ್ಣವಾಗಲು ಹುಲ್ಲಿನ ಮೊರೆ ಹೋಗುತ್ತವೆ.
ಸಾಕು ಪ್ರಾಣಿಗಳಲ್ಲಿ ಈ ಅಭ್ಯಾಸ ಸಾಮಾನ್ಯ
ಮನೆಯಲ್ಲಿ ಸಾಕಿದ ಬೆಕ್ಕುಗಳು ಹಾಲು, ಬ್ರೆಡ್ ಮತ್ತು ಅನ್ನದಂತಹ ವಸ್ತುಗಳನ್ನು ತಿನ್ನುತ್ತವೆಯಾದರೂ ಅವು ಸಂಪೂರ್ಣವಾಗಿ ಮಾಂಸಾಹಾರಿಗಳಾಗಿವೆ. ಅದಕ್ಕಾಗಿಯೇ ಅವು ಕಾಡಿನ ಮಾಂಸಾಹಾರಿಗಳಂತೆಯೇ ಹುಲ್ಲು ತಿನ್ನುವ ನೈಸರ್ಗಿಕ ನಡವಳಿಕೆಯನ್ನು ಹೊಂದಿರುತ್ತವೆ. ಕೆಲವೊಮ್ಮೆ ತಮ್ಮ ಹೊಟ್ಟೆಯನ್ನು ಹಗುರಗೊಳಿಸಲು ಹುಲ್ಲು ತಿನ್ನುತ್ತವೆ.
ಕಾಡಿನಲ್ಲಿ ಹುಲಿ, ಸಿಂಹಗಳು ಹುಲ್ಲು ತಿನ್ನುತ್ತವೆ
ಸಾಕುಪ್ರಾಣಿಗಳು ಮಾತ್ರವಲ್ಲ, ಕಾಡಿನಲ್ಲಿ ಸಿಂಹಗಳು, ಹುಲಿಗಳು ಸಹ ಕೆಲವೊಮ್ಮೆ ಹುಲ್ಲು ತಿನ್ನುವುದನ್ನು ಕಾಣಬಹುದು. ಏನಾದರೂ ಕಾರಣದಿಂದ ಹೊಟ್ಟೆ ಉಬ್ಬಿಕೊಂಡಾಗ ಸಾಕು ನಾಯಿಗಳು ಮತ್ತು ಬೆಕ್ಕುಗಳು ತಿನ್ನುವಂತೆಯೇ ಹುಲ್ಲು ತಿಂದು ವಾಂತಿ ಮಾಡಿಕೊಳ್ಳುತ್ತವೆ.
ತಜ್ಞರ ಪ್ರಕಾರ ಹೇಳಬೇಕೆಂದರೆ, ಮಾಂಸಾಹಾರಿ ಪ್ರಾಣಿಗಳು ಹುಲ್ಲು ತಿನ್ನುವುದು ಅಸಾಮಾನ್ಯವೇನಲ್ಲ, ಇದು ನೈಸರ್ಗಿಕ ರಕ್ಷಣಾ ವಿಧಾನ. ಇದು ಯಾವುದೇ ಬಾಹ್ಯ ಸಹಾಯವಿಲ್ಲದೆ ಪ್ರಾಣಿಗಳು ತಮ್ಮದೇ ಆದ ಸಮತೋಲನ ಹೊಂದಿದ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಹುಲ್ಲು ತಿನ್ನುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

