- Home
- Life
- Richest People Cities: ವಿಶ್ವದ ಶ್ರೀಮಂತರೆಲ್ಲಾ ಅತಿ ಹೆಚ್ಚಾಗಿ ಯಾವ ನಗರಗಳಲ್ಲಿ ವಾಸಿಸುತ್ತಾರೆ ಗೊತ್ತಾ?
Richest People Cities: ವಿಶ್ವದ ಶ್ರೀಮಂತರೆಲ್ಲಾ ಅತಿ ಹೆಚ್ಚಾಗಿ ಯಾವ ನಗರಗಳಲ್ಲಿ ವಾಸಿಸುತ್ತಾರೆ ಗೊತ್ತಾ?
Top 10 Billionaire Cities: ವಿಶ್ವದ ಕೆಲವು ಕುಬೇರರ ಆಸ್ತಿ ಸಣ್ಣ ಪುಟ್ಟ ದೇಶಗಳ ಆರ್ಥಿಕತೆಗಿಂತಲೂ ದೊಡ್ಡದಿರುತ್ತದೆ! ಅಂತಹ ಅತಿ ಹೆಚ್ಚು ಬಿಲಿಯನೇರ್ಗಳು ನೆಲೆಸಿರುವ ವಿಶ್ವದ ಟಾಪ್ 10 ನಗರಗಳ ಪಟ್ಟಿಯನ್ನು ಫೋರ್ಬ್ಸ್ (Forbes 2025) ಪ್ರಕಟಿಸಿದೆ.
ಕುಬೇರರ ರಾಜಧಾನಿ ಇದೇ ನೋಡಿ
ಕುಬೇರರ ರಾಜಧಾನಿ ಇದೇ ನೋಡಿ
ವಿಶ್ವದಾದ್ಯಂತ ಅದೆಷ್ಟೋ ಮಂದಿ ಶ್ರೀಮಂತರಿದ್ದಾರೆ. ಆದರೆ, ಈ ಕುಬೇರರು ಅತಿ ಹೆಚ್ಚಾಗಿ ಯಾವ ನಗರಗಳಲ್ಲಿ ನೆಲೆಸಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಅಷ್ಟಕ್ಕೂ ಈ ಪಟ್ಟಿಯಲ್ಲಿ ನಮ್ಮ ದೇಶದ ಯಾವುದಾದರೂ ನಗರಕ್ಕೆ ಸ್ಥಾನ ಸಿಕ್ಕಿದೆಯೇ? ಇದೇ ನೋಡಿ.. ಕುಬೇರರ ರಾಜಧಾನಿ.
ಪ್ರಪಂಚದಾದ್ಯಂತ ಕೋಟ್ಯಧಿಪತಿಗಳು ಸಾಕಷ್ಟು ಮಂದಿ ಇದ್ದಾರೆ. ಈ ಕೋಟ್ಯಧಿಪತಿಗಳೆಲ್ಲಾ ಎಂತಹ ನಗರಗಳಲ್ಲಿ ಹೆಚ್ಚು ವಾಸಿಸುತ್ತಾರೆ ಎಂಬುದು ಗೊತ್ತೇ? ಕೆಲವು ಕುಬೇರರ ಆಸ್ತಿಯು ಕೆಲವು ಸಣ್ಣ ಪುಟ್ಟ ದೇಶಗಳ ಆರ್ಥಿಕ ವ್ಯವಸ್ಥೆಗಿಂತಲೂ ಹೆಚ್ಚಾಗಿರುತ್ತದೆ. ಫೋರ್ಬ್ಸ್ (Forbes) 2025ರ ಪಟ್ಟಿಯ ಪ್ರಕಾರ... ಕೋಟ್ಯಧಿಪತಿಗಳು ಅತಿ ಹೆಚ್ಚು ನೆಲೆಸಿರುವ ನಗರಗಳು ಯಾವುವು ಎಂಬುದನ್ನು ನೋಡೋಣ..
ಟಾಪ್ 3ರಲ್ಲಿರುವ ನಗರಗಳು...
ಟಾಪ್ 3ರಲ್ಲಿರುವ ನಗರಗಳು…
1. ನ್ಯೂಯಾರ್ಕ್ (New York): 123 ಮಂದಿ ಬಿಲಿಯನೇರ್ಗಳೊಂದಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಒಟ್ಟು 759 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 'ವಿಶ್ವದ ಬಿಲಿಯನೇರ್ಗಳ ರಾಜಧಾನಿ'ಯಾಗಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
2. ಮಾಸ್ಕೋ (Moscow): ಕಳೆದ ವರ್ಷಕ್ಕಿಂತ 16 ಮಂದಿ ಹೆಚ್ಚಾಗಿದ್ದು, ಒಟ್ಟು 90 ಬಿಲಿಯನೇರ್ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇವರ ಒಟ್ಟು ಸಂಪತ್ತು 409 ಬಿಲಿಯನ್ ಡಾಲರ್ ಆಗಿದ್ದು, ತೈಲ ದಿಗ್ಗಜ ವಾಗಿಟ್ ಅಲೆಕ್ಪೆರೋವ್ ಇದರಲ್ಲಿ ಮುಂಚೂಣಿಯಲ್ಲಿದ್ದಾರೆ.
3. ಹಾಂಗ್ ಕಾಂಗ್ (Hong Kong): 72 ಮಂದಿ ಬಿಲಿಯನೇರ್ಗಳು ಹಾಗೂ 309 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಖ್ಯಾತ ಉದ್ಯಮಿ ಲೀ ಕಾ-ಶಿಂಗ್ ಅತ್ಯಂತ ಶ್ರೀಮಂತರಾಗಿದ್ದಾರೆ.
ಮುಂಬೈಗೆ ದಕ್ಕಿದ ಸ್ಥಾನ
ಮುಂಬೈಗೆ ದಕ್ಕಿದ ಸ್ಥಾನ
4. ಲಂಡನ್ (London): ಎರಡು ಸ್ಥಾನಗಳ ಏರಿಕೆ ಕಂಡು, 71 ಮಂದಿ ಅತಿ ಶ್ರೀಮಂತರೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದೆ.
5. ಬೀಜಿಂಗ್ (Beijing): ಮತ್ತೆ ಐದು ಮಂದಿ ಹೊಸ ಬಿಲಿಯನೇರ್ಗಳನ್ನು ಸೇರ್ಪಡೆ ಮಾಡಿಕೊಂಡು, ಒಟ್ಟು 68 ಮಂದಿಯೊಂದಿಗೆ ಐದನೇ ಸ್ಥಾನವನ್ನು ಉಳಿಸಿಕೊಂಡಿದೆ.
6. ಮುಂಬೈ (Mumbai): ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಮುಂಬೈ, 67 ಮಂದಿ ಬಿಲಿಯನೇರ್ಗಳೊಂದಿಗೆ ಆರನೇ ಸ್ಥಾನಕ್ಕೆ ಬಂದಿದೆ. ಆದರೆ ಇವರ ಒಟ್ಟು ಸಂಪತ್ತು 349 ಬಿಲಿಯನ್ ಡಾಲರ್ ಆಗಿರುವುದು ವಿಶೇಷ.
7. ಸಿಂಗಾಪುರ (Singapore): ಎರಡು ಸ್ಥಾನಗಳ ಮೇಲಕ್ಕೇರಿ 60 ಮಂದಿ ಬಿಲಿಯನೇರ್ಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಇವರ ಒಟ್ಟು ಸಂಪತ್ತು 259 ಬಿಲಿಯನ್ ಡಾಲರ್ ಆಗಿದೆ.
ಟೆಕ್ ಮತ್ತು ಮನರಂಜನಾ ಹಬ್ಗಳು
ಟೆಕ್ ಮತ್ತು ಮನರಂಜನಾ ಹಬ್ಗಳು
8. ಶಾಂಘೈ (ಜಂಟಿ ಸ್ಥಾನ): ಕಳೆದ ವರ್ಷ 54 ಮಂದಿ ಬಿಲಿಯನೇರ್ಗಳನ್ನು ಹೊಂದಿದ್ದ ಶಾಂಘೈ, ಈ ಬಾರಿ 58 ಮಂದಿ ಬಿಲಿಯನೇರ್ಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.
ಸ್ಯಾನ್ ಫ್ರಾನ್ಸಿಸ್ಕೋ (ಜಂಟಿ ಸ್ಥಾನ): 58 ಮಂದಿ ಬಿಲಿಯನೇರ್ಗಳೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋ ಕೂಡ ಎಂಟನೇ ಸ್ಥಾನವನ್ನು ಶಾಂಘೈ ಜೊತೆ ಹಂಚಿಕೊಂಡಿದೆ. ಇವರ ಒಟ್ಟು ಸಂಪತ್ತು 217 ಬಿಲಿಯನ್ ಡಾಲರ್ ಆಗಿದ್ದು, ಪ್ರತಿಯೊಬ್ಬರ ಸರಾಸರಿ ಸಂಪತ್ತು 3.7 ಬಿಲಿಯನ್ ಡಾಲರ್ನಷ್ಟಿದೆ.
10. ಲಾಸ್ ಏಂಜಲೀಸ್: ಒಟ್ಟು 56 ಮಂದಿ ಬಿಲಿಯನೇರ್ಗಳು ಹಾಗೂ 243 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಲಾಸ್ ಏಂಜಲೀಸ್ ಹತ್ತನೇ ಸ್ಥಾನದಲ್ಲಿದೆ. ರಿಹಾನ್ನಾ (1.4 ಬಿಲಿಯನ್ ಡಾಲರ್), ಲೆಬ್ರಾನ್ ಜೇಮ್ಸ್ (1.3 ಬಿಲಿಯನ್ ಡಾಲರ್) ಹಾಗೂ ಅರ್ನಾಲ್ಡ್ ಶ್ವಾರ್ಜನೆಗ್ಗರ್ (1.1 ಬಿಲಿಯನ್ ಡಾಲರ್) ಅವರಂತಹ ಪ್ರಮುಖರು ಈ ನಗರದ ಕುಬೇರರ ಪಟ್ಟಿಯಲ್ಲಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.













