ಹೋಟೆಲ್‌ಗಳಲ್ಲಿ ಟವೆಲ್‌ಗಳನ್ನು ಹಂಸದ ಆಕಾರದಲ್ಲಿ ಏಕೆ ಮಡಚುತ್ತಾರೆ? ಕಾರಣ ಬೇರೇನೆ ಇದೆ
Why hotels fold towels into swans: ನಾವು ಯಾವುದಾದರೂ ಲಕ್ಸುರಿ ಹೋಟೆಲ್ ಅಥವಾ ರೆಸಾರ್ಟ್‌ಗೆ ಹೋದಾಗ ರೂಂನಲ್ಲಿ ಟವೆಲ್‌ಗಳನ್ನು ಸುಂದರವಾದ ಹಂಸದ (Swan) ಆಕಾರದಲ್ಲಿ ಮಡಚಿಟ್ಟಿರುವುದನ್ನು ನೋಡಿರುತ್ತೇವೆ. ಹೋಟೆಲ್‌ಗಳು ಹೀಗೆ ಮಾಡಲು ಅಸಲಿ ಕಾರಣವೇನು ಇಲ್ಲಿದೆ ನೋಡಿ ಮಾಹಿತಿ..

ಹೋಟೆಲ್‌ಗಳು ಹೀಗೆ ಏಕೆ ಮಾಡುತ್ತವೆ?
ಹೋಟೆಲ್‌ಗಳು ಹೀಗೆ ಏಕೆ ಮಾಡುತ್ತವೆ?
ದೂರದ ಪ್ರಯಾಣದ ನಂತರ ನೀವು ಹೋಟೆಲ್ ರೂಮ್‌ಗೆ ಕಾಲಿಟ್ಟಾಗ, ಅಲ್ಲಿ ಎರಡು ಟವೆಲ್‌ಗಳನ್ನು ಸುಂದರವಾದ ಹಂಸಗಳ ಆಕಾರದಲ್ಲಿ ಮಡಚಿ, ಸುತ್ತಲೂ ಹೂವಿನ ದಳಗಳನ್ನು ಹರಡಿರುವುದನ್ನು ನೋಡಿರಬಹುದು. ಈ ಪುಟ್ಟ ಆರ್ಟ್ ರೂಮ್‌ನ ಅಂದವನ್ನು ಹೆಚ್ಚಿಸುವುದಲ್ಲದೆ, ನಮಗೆ ವಿಶೇಷ ಅನುಭವ ನೀಡುತ್ತದೆ. ಆದರೆ ಹೋಟೆಲ್‌ಗಳು ಹೀಗೆ ಏಕೆ ಮಾಡುತ್ತವೆ ಎಂದು ಎಂದಾದರೂ ಯೋಚಿಸಿದ್ದೀರಾ?
ವಿಶಿಷ್ಟ ಸಂಪ್ರದಾಯ
ವಿಶಿಷ್ಟ ಸಂಪ್ರದಾಯ
ಇದು ಕೇವಲ ನೋಡಲು ಸುಂದರವಾಗಿರಲಿ ಎಂದು ಮಾಡುವ ಕೆಲಸವಲ್ಲ; ಪ್ರವಾಸಿಗರನ್ನು ಪ್ರೀತಿಯಿಂದ ಸ್ವಾಗತಿಸಲು ಮತ್ತು ಅವರ ಮನಸ್ಸಿನಲ್ಲಿ ಒಂದು ಮರೆಯಲಾಗದ ನೆನಪನ್ನು ಉಳಿಸಲು ಹೋಟೆಲ್ ಉದ್ಯಮವು ಕಂಡುಕೊಂಡಿರುವ ಒಂದು ವಿಶಿಷ್ಟ ಸಂಪ್ರದಾಯವಾಗಿದೆ.
ಇದರ ಇತಿಹಾಸ ಮತ್ತು ಹಿನ್ನೆಲೆ
ಇದರ ಇತಿಹಾಸ ಮತ್ತು ಹಿನ್ನೆಲೆ
20ನೇ ಶತಮಾನದ ಕೊನೆಯಲ್ಲಿ ಕ್ರೂಸ್ ಹಡಗುಗಳಲ್ಲಿ (Cruise Ships) ಈ ಟವೆಲ್ ಕಲೆ (Towel Art) ಜನಪ್ರಿಯವಾಯಿತು ಎಂದು ನಂಬಲಾಗಿದೆ. ಹಡಗಿನ ಸಿಬ್ಬಂದಿ ಪ್ರಯಾಣಿಕರನ್ನು ರಂಜಿಸಲು ಟವೆಲ್‌ಗಳನ್ನು ಆನೆ, ಕೋತಿ ಹಾಗೂ ಹಂಸಗಳ ಆಕಾರದಲ್ಲಿ ಮಡಚಲು ಪ್ರಾರಂಭಿಸಿದರು. ಈ ತಮಾಷೆಯ ಕಲೆ ಪ್ರವಾಸಿಗರಿಗೆ ತುಂಬಾ ಇಷ್ಟವಾಯಿತು. ನಂತರದ ದಿನಗಳಲ್ಲಿ ಇದು ವಿಶ್ವದಾದ್ಯಂತದ ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳಿಗೂ ಹರಡಿತು.
ಪ್ರೀತಿ ಮತ್ತು ನೈಪುಣ್ಯತೆಯ ಸಂಕೇತ
ಪ್ರೀತಿ ಮತ್ತು ನೈಪುಣ್ಯತೆಯ ಸಂಕೇತ
ಹಂಸಗಳನ್ನು ಯಾವಾಗಲೂ ಪ್ರೀತಿ, ಘನತೆ ಮತ್ತು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಎರಡು ಹಂಸಗಳು ಮುಖಾಮುಖಿಯಾಗಿ ನಿಂತಾಗ ಹಾರ್ಟ್ (Heart) ಆಕಾರ ಮೂಡುವುದರಿಂದ, ಹನಿಮೂನ್ ಸೂಟ್‌ಗಳು ಮತ್ತು ರೋಮ್ಯಾಂಟಿಕ್ ರೆಸಾರ್ಟ್‌ಗಳಲ್ಲಿ ಇವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಜೊತೆಗೆ, ಇಂತಹ ಸಂಕೀರ್ಣವಾದ ಕಲಾಕೃತಿಯನ್ನು ರೂಪಿಸಲು ಅಪಾರ ತಾಳ್ಮೆ ಮತ್ತು ಕೌಶಲ್ಯ ಬೇಕು. ಇದು ಗ್ರಾಹಕರ ಆತಿಥ್ಯಕ್ಕಾಗಿ ಹೋಟೆಲ್ ಸಿಬ್ಬಂದಿ ವಹಿಸುವ ಕಾಳಜಿ ಮತ್ತು ಶ್ರಮವನ್ನು ಎತ್ತಿ ತೋರಿಸುತ್ತದೆ.
ಎಲ್ಲೆಲ್ಲಿ ನೋಡಬಹುದು?
ಎಲ್ಲೆಲ್ಲಿ ನೋಡಬಹುದು?
ಕುತೂಹಲಕಾರಿ ವಿಷಯವೆಂದರೆ, ವ್ಯಾಪಾರ ಅಥವಾ ಬಿಸಿನೆಸ್ ಉದ್ದೇಶದ ಹೋಟೆಲ್‌ಗಳಲ್ಲಿ ಈ ಕಲೆ ಕಾಣ ಸಿಗುವುದು ಅಪರೂಪ. ಆದರೆ ರಜೆ ಕಳೆಯುವ ರೆಸಾರ್ಟ್‌ಗಳು ಮತ್ತು ಪ್ರವಾಸಿ ತಾಣಗಳಲ್ಲಿ ಗ್ರಾಹಕರಿಗೆ ನಿರಾಳತೆ ಮತ್ತು ಸಂತೋಷದ ಭಾವನೆ ಮೂಡಿಸಲು ಈ 'ಟವೆಲ್ ಹಂಸಗಳನ್ನು' ಪ್ರಮುಖವಾಗಿ ಬಳಸಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
