ಫ್ರಿಡ್ಜ್‌ನಲ್ಲಿ ಅತಿಯಾಗಿ ಐಸ್ ಕಟ್ಟುತ್ತಿದೆಯೇ? ಇದಕ್ಕೆ ಕಾರಣ ನೀವು ಮಾಡುತ್ತಿರುವ ಈ ಸಣ್ಣ ತಪ್ಪು
Frost-free fridge hacks: ನಿಮ್ಮ ಫ್ರಿಡ್ಜ್‌ನಲ್ಲಿ ಅತಿಯಾಗಿ ಐಸ್ (Ice) ಕಟ್ಟುತ್ತಿದೆಯೇ? ಇದು ಫ್ರಿಡ್ಜ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸುವುದಲ್ಲದೆ, ವಿದ್ಯುತ್ ಬಿಲ್ ಹೆಚ್ಚಳಕ್ಕೂ ಕಾರಣವಾಗಬಹುದು. ಅತಿಯಾದ ಐಸ್ ಶೇಖರಣೆಗೆ ಕಾರಣವಾಗುವ ನಮ್ಮ ತಪ್ಪು ಮತ್ತು ತಡೆಗಟ್ಟುವ 8 ಸುಲಭ ಉಪಾಯ ಇಲ್ಲಿದೆ.
ಕೆಲವು ಸಣ್ಣ ತಪ್ಪೇ ಕಾರಣ
ಕೆಲವು ಸಣ್ಣ ತಪ್ಪೇ ಕಾರಣ
ನಿಮ್ಮ ಫ್ರಿಡ್ಜ್‌ನಲ್ಲಿ ಅತಿಯಾಗಿ ಐಸ್ (Ice) ಕಟ್ಟುತ್ತಿದೆಯೇ? ನೀವು ತಿಳಿಯದೇ ಮಾಡುತ್ತಿರುವ ಕೆಲವು ಸಣ್ಣ ತಪ್ಪುಗಳೇ ಇದಕ್ಕೆ ಕಾರಣವಿರಬಹುದು. ಅವುಗಳನ್ನು ತಿದ್ದಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.
ಹಳೆಯದಾದ ಡೋರ್ ಗ್ಯಾಸ್ಕೆಟ್ (Door Gasket)
ಹಳೆಯದಾದ ಡೋರ್ ಗ್ಯಾಸ್ಕೆಟ್ (Door Gasket)
ಫ್ರಿಡ್ಜ್ ಬಾಗಿಲಿನ ರಬ್ಬರ್ (ಗ್ಯಾಸ್ಕೆಟ್) ಸಡಿಲವಾಗಿದ್ದರೆ ಅಥವಾ ಹಳೆಯದಾಗಿದ್ದರೆ, ಹೊರಗಿನ ಬಿಸಿ ಗಾಳಿ ಒಳಸೇರುತ್ತದೆ. ಈ ಗಾಳಿಯಲ್ಲಿನ ತೇವಾಂಶವೇ ಐಸ್ ಆಗಿ ಬದಲಾಗುತ್ತದೆ. ಹಾಗಾಗಿ ಬಾಗಿಲು ಸರಿಯಾಗಿ ಮುಚ್ಚುತ್ತಿದೆಯೇ ಎಂದು ಆಗಾಗ ಪರಿಶೀಲಿಸಿ.
ಬಾಗಿಲನ್ನು ಪದೇ ಪದೇ ತೆರೆಯುವುದು
ಬಾಗಿಲನ್ನು ಪದೇ ಪದೇ ತೆರೆಯುವುದು
ಫ್ರಿಡ್ಜ್ ಡೋರ್ ಅನ್ನು ಹೆಚ್ಚು ಹೊತ್ತು ತೆರೆದಿಡುವುದು ಅಥವಾ ಪದೇ ಪದೇ ತೆಗೆದು ಮುಚ್ಚುವುದರಿಂದ ಒಳಗಿನ ತಾಪಮಾನ ಏರುಪೇರಾಗುತ್ತದೆ. ಇದರಿಂದ ತೇವಾಂಶ ಹೆಚ್ಚಾಗಿ ಐಸ್ ಶೇಖರಣೆಯಾಗಲು ಶುರುವಾಗುತ್ತದೆ.
ತಾಪಮಾನ ಸೆಟ್ಟಿಂಗ್‌ನಲ್ಲಿನ ತಪ್ಪು
ತಾಪಮಾನ ಸೆಟ್ಟಿಂಗ್‌ನಲ್ಲಿನ ತಪ್ಪು
ಫ್ರಿಡ್ಜ್‌ನ ತಾಪಮಾನವನ್ನು (Thermostat) ಅತಿಯಾಗಿ ಕಡಿಮೆ ಮಟ್ಟಕ್ಕೆ ಸೆಟ್ ಮಾಡಿದರೆ ಕೂಲಿಂಗ್ ಜಾಸ್ತಿಯಾಗಿ ಐಸ್ ಗಡ್ಡೆ ಕಟ್ಟುತ್ತದೆ. ವಾತಾವರಣಕ್ಕೆ ಅನುಗುಣವಾಗಿ ತಾಪಮಾನವನ್ನು ಸರಿಯಾಗಿ ಹೊಂದಿಸುವುದು ಬಹಳ ಮುಖ್ಯ.
ಬಿಸಿ ಆಹಾರ ಪದಾರ್ಥಗಳನ್ನು ಇಡುವುದು
ಬಿಸಿ ಆಹಾರ ಪದಾರ್ಥಗಳನ್ನು ಇಡುವುದು
ಬಿಸಿಯಾದ ಹಾಲು ಅಥವಾ ಸಾರುಗಳನ್ನು ನೇರವಾಗಿ ಫ್ರಿಡ್ಜ್‌ನಲ್ಲಿ ಇಡಬೇಡಿ. ಬಿಸಿ ಪದಾರ್ಥಗಳಿಂದ ಬರುವ ಆವಿ ತೇವಾಂಶವಾಗಿ ಬದಲಾಗಿ ಫ್ರೀಜರ್‌ನಲ್ಲಿ ಗಟ್ಟಿಯಾದ ಮಂಜುಗಡ್ಡೆಯ ರೂಪ ಪಡೆಯುತ್ತದೆ.
ಡ್ರೈನ್ ಹೋಲ್ ಬ್ಲಾಕ್ ಆಗುವುದು (Drain Hole)
ಡ್ರೈನ್ ಹೋಲ್ ಬ್ಲಾಕ್ ಆಗುವುದು (Drain Hole)
ಫ್ರಿಡ್ಜ್‌ನಲ್ಲಿ ಕರಗಿದ ನೀರು ಹೊರಗೆ ಹೋಗಲು ಸಣ್ಣ ದ್ವಾರವಿರುತ್ತದೆ. ಈ ಹೋಲ್ ಕೊಳಕಿನಿಂದ ಮುಚ್ಚಿಹೋದರೆ ನೀರು ಹೊರಹೋಗದೆ ಒಳಗೇ ಶೇಖರಣೆಯಾಗಿ ಗಟ್ಟಿಯಾದ ಐಸ್ ಗಡ್ಡೆ ಕಟ್ಟುತ್ತದೆ. ನೀರಿನ ಪೈಪ್ ಅನ್ನು ಆಗಾಗ ಸ್ವಚ್ಛಗೊಳಿಸಿ.
ಅತಿಯಾದ ವಸ್ತುಗಳನ್ನು ತುಂಬುವುದು (Overloading)
ಅತಿಯಾದ ವಸ್ತುಗಳನ್ನು ತುಂಬುವುದು (Overloading)
ಫ್ರಿಡ್ಜ್‌ನಲ್ಲಿ ಮಿತಿಗಿಂತ ಹೆಚ್ಚು ಸಾಮಾನುಗಳನ್ನು ತುಂಬಿದರೆ ಒಳಗಿನ ಗಾಳಿಯ ಸಂಚಾರಕ್ಕೆ (Air Circulation) ಅಡ್ಡಿಯಾಗುತ್ತದೆ. ಗಾಳಿಯಾಡಲು ಜಾಗವಿಲ್ಲದಿದ್ದಾಗ ಐಸ್ ಸಮಸ್ಯೆ ಹೆಚ್ಚಾಗುತ್ತದೆ.
ತಾಂತ್ರಿಕ ದೋಷಗಳು
ತಾಂತ್ರಿಕ ದೋಷಗಳು
ಒಂದು ವೇಳೆ ಫ್ರಿಡ್ಜ್‌ನ ಆಟೋ-ಡಿಫ್ರಾಸ್ಟ್ (Auto-Defrost) ಫೀಚರ್ ಕೆಲಸ ಮಾಡದಿದ್ದರೆ ಅಥವಾ ಡಿಫ್ರಾಸ್ಟ್ ಸೆನ್ಸರ್‌ನಲ್ಲಿ ದೋಷವಿದ್ದರೆ ಐಸ್ ಹೆಚ್ಚಾಗುತ್ತದೆ. ಅಂತಹ ಸಮಯದಲ್ಲಿ ಕೂಡಲೇ ತಂತ್ರಜ್ಞರ (Technician) ಸಹಾಯ ಪಡೆಯುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.