MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Land of Horses: ಇಲ್ಲಿ ಮನುಷ್ಯರಿಗಿಂತ ಕುದುರೆಗಳೇ ಹೆಚ್ಚು! ಯಾಕೆ ಅಂತ ಗೊತ್ತಾ?

Land of Horses: ಇಲ್ಲಿ ಮನುಷ್ಯರಿಗಿಂತ ಕುದುರೆಗಳೇ ಹೆಚ್ಚು! ಯಾಕೆ ಅಂತ ಗೊತ್ತಾ?

Land of horses Mongolia: ಸಾಮಾನ್ಯವಾಗಿ ಯಾವುದೇ ದೇಶದಲ್ಲಿ ಮನುಷ್ಯರ ಜನಸಂಖ್ಯೆ ಹೆಚ್ಚಿರುತ್ತದೆ. ಪ್ರಾಣಿಗಳ ಸಂಖ್ಯೆ ಕಡಿಮೆಯಿರುತ್ತದೆ. ಆದರೆ ಒಂದು ದೇಶದಲ್ಲಿ ಮಾತ್ರ ಮನುಷ್ಯರಿಗಿಂತ ಕುದುರೆಗಳೇ ಹೆಚ್ಚಾಗಿವೆ. ಆ ಅಚ್ಚರಿಯ ದೇಶ ಯಾವುದು ಅಂತ ಗೊತ್ತಾ?

3 Min read
Author : Ashwini HR
Published : Sep 26 2026, 06:02 PM IST
Share this Photo Gallery
  • FB
  • TW
  • Linkdin
  • Whatsapp
15
'ಲ್ಯಾಂಡ್ ಆಫ್ ಹಾರ್ಸಸ್'
Image Credit : Gemini AI

'ಲ್ಯಾಂಡ್ ಆಫ್ ಹಾರ್ಸಸ್'

‘ಲ್ಯಾಂಡ್ ಆಫ್ ಹಾರ್ಸಸ್’
ಪ್ರಪಂಚದ ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ವಿಶೇಷತೆ ಇರುತ್ತದೆ. ಕೆಲವು ದೇಶಗಳು ಪ್ರಕೃತಿ ಸೌಂದರ್ಯದಿಂದ ಗುರುತಿಸಿಕೊಂಡರೆ, ಇನ್ನು ಕೆಲವು ಸಂಸ್ಕೃತಿ, ಸಂಪ್ರದಾಯಗಳಿಂದ ಗಮನ ಸೆಳೆಯುತ್ತವೆ. ಆದರೆ ಏಷ್ಯಾ ಖಂಡದ ಮಂಗೋಲಿಯಾ ದೇಶಕ್ಕೆ ಕುದುರೆಗಳೇ ದೊಡ್ಡ ಐಡೆಂಟಿಟಿ. ಇಲ್ಲಿ ಮನುಷ್ಯರಿಗಿಂತ ಕುದುರೆಗಳ ಸಂಖ್ಯೆಯೇ ಹೆಚ್ಚು. ವಿಶಾಲವಾದ ಹುಲ್ಲುಗಾವಲು, ಮರುಭೂಮಿ, ಅಲೆಮಾರಿ ಜೀವನ ಹಾಗೂ ಕುದುರೆಗಳ ಜೊತೆಗಿನ ಒಡನಾಟಕ್ಕೆ ಮಂಗೋಲಿಯಾ ಫೇಮಸ್. ಅದಕ್ಕಾಗಿಯೇ ಈ ದೇಶವನ್ನು 'ಲ್ಯಾಂಡ್ ಆಫ್ ಹಾರ್ಸಸ್' (Land of Horses) ಅಂತ ಕರೆಯುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಂಗೋಲಿಯಾದಲ್ಲಿ ಮನುಷ್ಯರಿಗಿಂತ ಕುದುರೆಗಳೇ ಹೆಚ್ಚು!
Image Credit : Gemini AI

ಮಂಗೋಲಿಯಾದಲ್ಲಿ ಮನುಷ್ಯರಿಗಿಂತ ಕುದುರೆಗಳೇ ಹೆಚ್ಚು!

ಮಂಗೋಲಿಯಾದಲ್ಲಿ ಮನುಷ್ಯರಿಗಿಂತ ಕುದುರೆಗಳೇ ಹೆಚ್ಚು!
ಸದ್ಯ ಮಂಗೋಲಿಯಾದಲ್ಲಿ ಸುಮಾರು 35 ಲಕ್ಷ (3.5 ಮಿಲಿಯನ್) ಜನ ವಾಸಿಸುತ್ತಿದ್ದಾರೆ. ಆದರೆ ಇಲ್ಲಿರುವ ಕುದುರೆಗಳ ಸಂಖ್ಯೆ ಬರೋಬ್ಬರಿ 40 ಲಕ್ಷಕ್ಕೂ (4 ಮಿಲಿಯನ್) ಅಧಿಕ! ಕೆಲವು ಅಂದಾಜಿನ ಪ್ರಕಾರ ಇಲ್ಲಿ 50 ಲಕ್ಷದವರೆಗೂ (5 ಮಿಲಿಯನ್) ಕುದುರೆಗಳಿವೆಯಂತೆ. ಅಂದರೆ ದೇಶದ ಜನಸಂಖ್ಯೆಗಿಂತ ಕುದುರೆಗಳ ಸಂಖ್ಯೆಯೇ ಇಲ್ಲಿ ಹೆಚ್ಚು.

ಬರೀ ಕುದುರೆಗಳು ಮಾತ್ರವಲ್ಲ, ಮಂಗೋಲಿಯಾದಲ್ಲಿ ಕುರಿ, ಮೇಕೆ, ದನ ಮತ್ತು ಒಂಟೆಗಳಂತಹ ಜಾನುವಾರುಗಳೂ ದೊಡ್ಡ ಸಂಖ್ಯೆಯಲ್ಲಿವೆ. ಇಲ್ಲಿನ ವಿಶಾಲವಾದ ಹುಲ್ಲುಗಾವಲುಗಳು ಹಾಗೂ ಪಶುಸಂಗೋಪನೆಯನ್ನೇ ನೆಚ್ಚಿಕೊಂಡಿರುವ ಜೀವನಶೈಲಿಯೇ ಇದಕ್ಕೆ ಮುಖ್ಯ ಕಾರಣ.

Related Articles

Related image1
ಬೀದಿ ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ತಜ್ಞರು ನೀಡಿದ ಸಲಹೆಗಳಿವು
Related image2
Snake On Bed: ಹಾವುಗಳು ಮನುಷ್ಯರ ಹಾಸಿಗೆ ಮೇಲೆ ಯಾಕೆ ಬರುತ್ತವೆ ಗೊತ್ತಾ?
35
ಮಂಗೋಲಿಯನ್ನರು ಕುದುರೆಗಳನ್ನು ಏಕೆ ಸಾಕುತ್ತಾರೆ?
Image Credit : Freepik

ಮಂಗೋಲಿಯನ್ನರು ಕುದುರೆಗಳನ್ನು ಏಕೆ ಸಾಕುತ್ತಾರೆ?

ಮಂಗೋಲಿಯನ್ನರು ಕುದುರೆಗಳನ್ನು ಏಕೆ ಸಾಕುತ್ತಾರೆ?
ಮಂಗೋಲಿಯಾದಲ್ಲಿ ಕುದುರೆಗಳ ಸಂಖ್ಯೆ ಹೆಚ್ಚಿರಲು ಅಲ್ಲಿನ ಭೌಗೋಳಿಕ ಪರಿಸ್ಥಿತಿ ಹಾಗೂ ಸಾಂಪ್ರದಾಯಿಕ ಜೀವನಶೈಲಿಯೇ ಕಾರಣ. ದೇಶದಲ್ಲಿರುವ ವಿಶಾಲವಾದ ಹುಲ್ಲುಗಾವಲುಗಳು ಪಶುಪಾಲನೆಗೆ ಹೇಳಿಮಾಡಿಸಿದಂತಿವೆ.

ಗ್ರಾಮೀಣ ಭಾಗದ ಬಹುತೇಕ ಮಂಗೋಲಿಯನ್ ಕುಟುಂಬಗಳು ಪಶುಸಂಗೋಪನೆಯನ್ನೇ ನಂಬಿ ಬದುಕುತ್ತಿವೆ. ಇವರ ಬಳಿ ಹಲವು ಬಗೆಯ ಪ್ರಾಣಿಗಳಿದ್ದರೂ, ಕುದುರೆಗಳಿಗೆ ವಿಶೇಷ ಸ್ಥಾನವಿದೆ. ಕಡಿಮೆ ಮೇವು ತಿಂದರೂ ಕಠಿಣ ಹವಾಮಾನವನ್ನು ತಡೆದುಕೊಳ್ಳುವ ಶಕ್ತಿ ಈ ಕುದುರೆಗಳಿಗಿದೆ. ಜೊತೆಗೆ ದೂರದ ಪ್ರಯಾಣಕ್ಕೂ ಇವು ಅಲೆಮಾರಿಗಳಿಗೆ ತುಂಬಾನೇ ಉಪಯುಕ್ತ.

ಮಂಗೋಲಿಯಾದ ಸಾಂಪ್ರದಾಯಿಕ ಅಲೆಮಾರಿ ಕುಟುಂಬಗಳಿಗೆ ಕುದುರೆ ಕೇವಲ ಪ್ರಾಣಿಯಲ್ಲ. ಅದು ಅವರ ಸಾರಿಗೆ ಸಾಧನ, ಜೀವನೋಪಾಯದ ಮೂಲ ಹಾಗೂ ಸಾಂಸ್ಕೃತಿಕ ಅಸ್ಮಿತೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವಾಗ ಕುದುರೆಗಳು ಪ್ರಮುಖ ಪಾತ್ರ ವಹಿಸುತ್ತವೆ.

ಇತ್ತೀಚೆಗೆ ಕಾರು, ಬೈಕ್‌ಗಳಂತಹ ಆಧುನಿಕ ವಾಹನಗಳು ಬಂದಿದ್ದರೂ, ಗ್ರಾಮೀಣ ಭಾಗದಲ್ಲಿ ಕುದುರೆಗಳ ಪ್ರಾಮುಖ್ಯತೆ ಕಡಿಮೆಯಾಗಿಲ್ಲ. "ಕುದುರೆ ಇಲ್ಲದ ಮಂಗೋಲಿಯನ್, ರೆಕ್ಕೆ ಇಲ್ಲದ ಹಕ್ಕಿಯಂತೆ" ಎಂಬ ಗಾದೆಮಾತು ಅಲ್ಲಿ ಬಹಳ ಜನಪ್ರಿಯ. ಇದನ್ನು ನೋಡಿದರೆ ಅವರು ಕುದುರೆಗಳಿಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದು ಅರ್ಥವಾಗುತ್ತದೆ.

ಚಿಕ್ಕ ವಯಸ್ಸಿನಲ್ಲೇ ಕುದುರೆ ಸವಾರಿ
ಮಂಗೋಲಿಯನ್ ಸಂಸ್ಕೃತಿಯಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಕುದುರೆ ಸವಾರಿ ಕಲಿಸುತ್ತಾರೆ. ವಿಶಾಲವಾದ ಮೈದಾನಗಳಲ್ಲಿ ಕುದುರೆಗಳನ್ನು ನಿಯಂತ್ರಿಸುವುದು ಅಲ್ಲಿನ ಹಳ್ಳಿ ಜೀವನದ ಒಂದು ಭಾಗ. ಇದು ಕೇವಲ ಮನರಂಜನೆಗಲ್ಲ, ಜಾನುವಾರುಗಳನ್ನು ಮೇಯಿಸಲು ಮತ್ತು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಿಸಲು ಈ ಕೌಶಲ್ಯ ಬಹಳ ಮುಖ್ಯ.

45
ಮಂಗೋಲಿಯಾದಲ್ಲಿ ಕುದುರೆ ಹಾಲಿನ ವಿಶೇಷ ಪಾನೀಯ
Image Credit : meta ai

ಮಂಗೋಲಿಯಾದಲ್ಲಿ ಕುದುರೆ ಹಾಲಿನ ವಿಶೇಷ ಪಾನೀಯ

ಮಂಗೋಲಿಯಾದಲ್ಲಿ ಕುದುರೆ ಹಾಲಿನ ವಿಶೇಷ ಪಾನೀಯ
ಮಂಗೋಲಿಯಾದಲ್ಲಿ ಹೆಣ್ಣು ಕುದುರೆಯ ಹಾಲಿಗೆ ವಿಶೇಷ ಬೇಡಿಕೆಯಿದೆ. ಕುದುರೆ ಹಾಲನ್ನು ಹುದುಗಿಸಿ 'ಐರಾಗ್' (Airag) ಎಂಬ ಸಾಂಪ್ರದಾಯಿಕ ಪಾನೀಯವನ್ನು ತಯಾರಿಸುತ್ತಾರೆ. ಇದು ಮಂಗೋಲಿಯನ್ ಆಹಾರ ಪದ್ಧತಿಯಲ್ಲಿ ಬಹಳ ಫೇಮಸ್.

ಕೆಲವು ಪ್ರದೇಶಗಳಲ್ಲಿ ಕುದುರೆ ಮಾಂಸವನ್ನೂ ಆಹಾರವಾಗಿ ಬಳಸುತ್ತಾರೆ. ಆದರೆ ಎಲ್ಲರೂ ಕುದುರೆ ಮಾಂಸ ತಿನ್ನುತ್ತಾರೆ ಎಂದು ಹೇಳಲಾಗದು. ಸ್ಥಳೀಯ ಪರಿಸ್ಥಿತಿ ಹಾಗೂ ಕುಟುಂಬದ ಸಂಪ್ರದಾಯಗಳಿಗೆ ತಕ್ಕಂತೆ ಆಹಾರ ಪದ್ಧತಿ ಬದಲಾಗುತ್ತದೆ.

ಹಬ್ಬಗಳಲ್ಲಿ ಕುದುರೆಗಳಿಗೆ ವಿಶೇಷ ಸ್ಥಾನ
ಮಂಗೋಲಿಯಾದಲ್ಲಿ ನಡೆಯುವ 'ನಾದಮ್' (Naadam) ಎಂಬ ಸಾಂಪ್ರದಾಯಿಕ ಕ್ರೀಡಾ ಉತ್ಸವದಲ್ಲಿ ಕುದುರೆ ರೇಸ್‌ಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ಉತ್ಸವದಲ್ಲಿ ಕುದುರೆ ರೇಸ್, ಬಿಲ್ಲುಗಾರಿಕೆ ಮತ್ತು ಕುಸ್ತಿ ಪ್ರಮುಖ ಕ್ರೀಡೆಗಳು. ಯುವ ಸವಾರರು ವಿಶಾಲವಾದ ಮೈದಾನಗಳಲ್ಲಿ ಕುದುರೆಗಳನ್ನು ಓಡಿಸುವ ಈ ಸ್ಪರ್ಧೆಗಳಿಗೆ ಮಂಗೋಲಿಯನ್ ಸಂಸ್ಕೃತಿಯಲ್ಲಿ ಐತಿಹಾಸಿಕ ಮಹತ್ವವಿದೆ.

ಮಂಗೋಲಿಯಾ ಇತಿಹಾಸ ಮತ್ತು ಕುದುರೆಗಳು
ಮಂಗೋಲಿಯಾ ಹಾಗೂ ಕುದುರೆಗಳ ನಡುವಿನ ನಂಟು ಶತಮಾನಗಳಷ್ಟು ಹಳೆಯದು. ಮಂಗೋಲ್ ಸಾಮ್ರಾಜ್ಯದ ವಿಸ್ತರಣೆಯ ಸಮಯದಲ್ಲಿ ಕುದುರೆಗಳು ಸೈನ್ಯದ ಅತಿದೊಡ್ಡ ಶಕ್ತಿಯಾಗಿದ್ದವು. ಅದರಲ್ಲೂ ಚಂಗೀಸ್ ಖಾನ್ ಕಾಲದಲ್ಲಿ ವೇಗವಾಗಿ ಚಲಿಸುವ ಅಶ್ವದಳವೇ ಮಂಗೋಲ್ ಸೈನ್ಯದ ಬೆನ್ನೆಲುಬಾಗಿತ್ತು.

ವಿಶಾಲವಾದ ಏಷ್ಯಾ ಖಂಡದಲ್ಲಿ ವೇಗವಾಗಿ ಪ್ರಯಾಣಿಸಲು ಕುದುರೆಗಳು ನೀಡಿದ ಬೆಂಬಲ ಮಂಗೋಲ್ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಐತಿಹಾಸಿಕ ನಂಟೇ ಇಂದಿಗೂ ಮಂಗೋಲಿಯನ್ ಸಂಸ್ಕೃತಿಯಲ್ಲಿ ಕುದುರೆಗಳಿಗೆ ಇಷ್ಟೊಂದು ಗೌರವ ಸಿಗಲು ಕಾರಣ.

55
ಮಂಗೋಲಿಯಾದಲ್ಲಿ ಕಠಿಣ ಹವಾಮಾನ ತಡೆದುಕೊಳ್ಳುವ ಕುದುರೆಗಳು
Image Credit : Getty

ಮಂಗೋಲಿಯಾದಲ್ಲಿ ಕಠಿಣ ಹವಾಮಾನ ತಡೆದುಕೊಳ್ಳುವ ಕುದುರೆಗಳು

ಮಂಗೋಲಿಯಾದಲ್ಲಿ ಕಠಿಣ ಹವಾಮಾನ ತಡೆದುಕೊಳ್ಳುವ ಕುದುರೆಗಳು
ಮಂಗೋಲಿಯಾದಲ್ಲಿ ಚಳಿಗಾಲದ ಹವಾಮಾನ ಅತ್ಯಂತ ಕಠಿಣವಾಗಿರುತ್ತದೆ. ತಾಪಮಾನ ಮೈನಸ್ ಡಿಗ್ರಿಗೆ ಕುಸಿಯುವುದರ ಜೊತೆಗೆ ವಿಪರೀತ ಹಿಮಪಾತ ಹಾಗೂ ಚಳಿ ಗಾಳಿ ಇರುತ್ತದೆ. ಇಂತಹ ವಾತಾವರಣದಲ್ಲೂ ಸ್ಥಳೀಯ ಕುದುರೆಗಳು ಬಯಲಿನಲ್ಲೇ ಬದುಕುತ್ತಾ ತಮ್ಮ ಮೇವನ್ನು ತಾವೇ ಹುಡುಕಿಕೊಳ್ಳುತ್ತವೆ.

ಮಂಗೋಲಿಯನ್ ಕುದುರೆಗಳು ಸಾಮಾನ್ಯವಾಗಿ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ದೇಹದಾರ್ಢ್ಯದಲ್ಲಿ ಬಲಿಷ್ಠವಾಗಿರುತ್ತವೆ. ಇವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕುವ ಬದಲು, ನೈಸರ್ಗಿಕ ವಾತಾವರಣದಲ್ಲೇ ಮೇಯಲು ಬಿಡುವುದು ಇಲ್ಲಿನ ಸಾಂಪ್ರದಾಯಿಕ ಪದ್ಧತಿ. ಇದೇ ಕಾರಣಕ್ಕೆ ಈ ಕುದುರೆಗಳು ಎಂತಹ ಕಠಿಣ ಭೌಗೋಳಿಕ ಪರಿಸ್ಥಿತಿಯನ್ನಾದರೂ ಎದುರಿಸಬಲ್ಲವು.

ಮಂಗೋಲಿಯನ್ನರ ಬದುಕಿನ ಭಾಗವೇ ಕುದುರೆ
ಮಂಗೋಲಿಯಾದಲ್ಲಿ ಕುದುರೆಗೆ ವಿಶೇಷ ಸ್ಥಾನವಿದೆ. ಅದನ್ನು ಕೇವಲ ಒಂದು ಪ್ರಾಣಿಯಾಗಿ ನೋಡಲಾಗುವುದಿಲ್ಲ. ದೇಶದ ಇತಿಹಾಸ, ಹಬ್ಬಗಳು, ಆಹಾರ, ಸಾರಿಗೆ, ಪಶುಪಾಲನೆ ಹಾಗೂ ಗ್ರಾಮೀಣ ಜೀವನಶೈಲಿ... ಹೀಗೆ ಪ್ರತಿಯೊಂದರಲ್ಲೂ ಕುದುರೆ ಬೆರೆತುಹೋಗಿದೆ. ಅದಕ್ಕಾಗಿಯೇ ಅಲ್ಲಿ ಕುದುರೆಗಳ ಬಗ್ಗೆ ಗಾದೆಗಳು, ಹಾಡುಗಳು ಮತ್ತು ಕಥೆಗಳು ಹುಟ್ಟಿಕೊಂಡಿವೆ.

ವಿಶಾಲವಾದ ಸ್ಟೆಪ್ಪಿ (Steppe) ಹುಲ್ಲುಗಾವಲುಗಳಲ್ಲಿ ಕುದುರೆಗಳ ಹಿಂಡು ಮುಕ್ತವಾಗಿ ಓಡಾಡಿಕೊಂಡಿರುವುದು ಮಂಗೋಲಿಯಾದ ವಿಶೇಷ ದೃಶ್ಯಗಳಲ್ಲೊಂದು. ಆಧುನಿಕ ಜಗತ್ತು ಎಷ್ಟೇ ವೇಗವಾಗಿ ಬದಲಾಗುತ್ತಿದ್ದರೂ, ದೇಶದ ಹಲವು ಭಾಗಗಳಲ್ಲಿ ಕುದುರೆಗಳು ಇಂದಿಗೂ ಜನರ ದೈನಂದಿನ ಬದುಕಿನ ಜೊತೆ ಬೆಸೆದುಕೊಂಡಿವೆ. ಇದೇ ಕಾರಣಕ್ಕೆ ಮಂಗೋಲಿಯಾವನ್ನು 'ಲ್ಯಾಂಡ್ ಆಫ್ ಹಾರ್ಸಸ್' ಎಂದು ಕರೆಯುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
 

Latest Videos
Recommended Stories
Recommended image1
ಬರೀ ನಿದ್ದೆ ಮಾಡೋದಲ್ಲ, ವೀಕೆಂಡ್ ನಲ್ಲಿ ಈ ಕೆಲ್ಸ ಮಾಡಿದ್ರೆ ಒಂದು ವಾರ ಆರಾಮಾಗಿರ್ಬಹುದು
Recommended image2
ಇದು ಚಪ್ಪಲಿ ಅಲ್ಲ, ಪಕೋಡಾ! ಸೋರೆಕಾಯಿಯಿಂದ ಅಮ್ಮ ಮಾಡಿದ ವಿಚಿತ್ರ ಸ್ನ್ಯಾಕ್ ವಿಡಿಯೋ ವೈರಲ್
Recommended image3
ಮೊಬೈಲ್ ಚಾರ್ಜ್ ಮಾಡುವಾಗ ಈ 3 ತಪ್ಪು ಮಾಡ್ತಿದ್ದೀರಾ? ಫೋನ್ ಬ್ಲಾಸ್ಟ್ ಆಗಬಹುದು ಎಚ್ಚರ!
Related Stories
Recommended image1
ಬೀದಿ ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ತಜ್ಞರು ನೀಡಿದ ಸಲಹೆಗಳಿವು
Recommended image2
Snake On Bed: ಹಾವುಗಳು ಮನುಷ್ಯರ ಹಾಸಿಗೆ ಮೇಲೆ ಯಾಕೆ ಬರುತ್ತವೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved