ಮಳೆಗಾಲದಲ್ಲಿ ಬಟ್ಟೆ ಮುಗ್ಗಲು ವಾಸನೆನಾ, ಬಾಗಿಲು ಟೈಟಾಯ್ತಾ, ಲೈಟ್ ಹುಳು ಸಮಸ್ಯೆನಾ? ಪರಿಹಾರ ಇಲ್ಲಿದೆ
ಮಳೆಗಾಲದಲ್ಲಿ ಸಾಮಾನ್ಯವಾಗಿ ಎದುರಾಗುವ ಬಟ್ಟೆಗಳ ಮುಗ್ಗಲು ವಾಸನೆ, ಲೈಟ್ ಸುತ್ತ ಬರುವ ಹುಳುಗಳ ಸಮಸ್ಯೆ, ಮತ್ತು ಮರದ ಬಾಗಿಲುಗಳು ಬಿಗಿಯಾಗುವ ತೊಂದರೆಗಳಿಗೆ ಈ ಲೇಖನದಲ್ಲಿ ಸರಳ ಹಾಗೂ ಪರಿಣಾಮಕಾರಿ ಮನೆಮದ್ದುಗಳನ್ನು ವಿವರಿಸಲಾಗಿದೆ.

ನೋಡಿ ಇಲ್ಲಿದೆ ಪರಿಹಾರ
ಮಳೆಗಾಲದಲ್ಲಿ ಬಟ್ಟೆ ಮುಗ್ಗಿದ ವಾಸನೆನಾ, ಬಾಗಿಲು ಟೈಟಾಯ್ತಾ, ಲೈಟ್ ಹುಳು ಸಮಸ್ಯೆನಾ? ಇವೆಲ್ಲಾ ಸಮಸ್ಯೆಗಳಿಗೆ ಒಂದೊಂದಾಗಿ ಸುಲಭದ ಪರಿಹಾರವನ್ನು ಇಲ್ಲಿ ನೀಡಲಾಗಿದೆ.
ಮುಗ್ಗಲು ವಾಸನೆ
ಸಾಮಾನ್ಯವಾಗಿ ಮಳೆಗಾಲದಲ್ಲಿ ಬಟ್ಟೆಗಳನ್ನು ಒಣ ಹಾಕಿದಾಗ, ಬಿಸಿಲು ಕಡಿಮೆ ಬರುವ ಕಾರಣ, ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಒಣಗಿದಂತೆ ಕಂಡರೂ ತಣ್ಣಗೇ ಇರುವ ಕಾರಣದಿಂದಾಗಿ, ಅದನ್ನು ಕಪಾಟಿನಲ್ಲಿ ಇಟ್ಟಾಗ ಮುಗ್ಗಲು ವಾಸನೆ ಬರುವುದು ಇದೆ. ಇದಕ್ಕಾಗಿ ಚಿಂತೆ ಪಡುವ ಅಗತ್ಯವಿಲ್ಲ.
ಮುಗ್ಗಲು ವಾಸನೆಗೆ ಪರಿಹಾರ
ಕಪಾಟಿನಲ್ಲಿ ನಾಲ್ಕೈದು ಚಾಕ್ ಪೀಸ್ ಇಡಿ. ಹೀಗೆ ಮಾಡಿದರೆ ಚಾಕ್ಪೀಸ್ ಎಲ್ಲ ಕೆಟ್ಟ ವಾಸನೆಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ಮುಗ್ಗಲು ವಾಸನೆ ಬರುವುದಿಲ್ಲ.
ಮಳೆಗಾಲದಲ್ಲಿ ಹುಳುಗಳ ಸಮಸ್ಯೆ
ಮಳೆಗಾಲದಲ್ಲಿ ಅದರಲ್ಲಿಯೂ ಆರಂಭಿಕ ಮಳೆಯಲ್ಲಿ ಟ್ಯೂಬ್ಲೈಟ್ ಅಥ್ವಾ ಮನೆಯಲ್ಲಿ ಇರುವ ಯಾವುದೇ ಬಲ್ಬ್ಗಳ ಸುತ್ತಲೂ ಮಳೆಹುಳುಗಳು ಹಾರಾಡುತ್ತವೆ. ಯಾವ ಸಮಯದಲ್ಲಿ ಅವು ಎಲ್ಲಿ ಬೀಳುತ್ತವೆ,, ಆಹಾರದ ಮೇಲೆ ಬೀಳುತ್ತವೆ, ಎಲ್ಲಿ ಕಚ್ಚಿಬಿಡುತ್ತವೆ ಎನ್ನುವ ಭಯ. ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.
ಹುಳುಗಳಿಗೆ ಪರಿಹಾರ
ಎಲ್ಲಾ ಲೈಟ್ ಆಫ್ ಮಾಡಿ, ಒಂದೇ ಒಂದು ಟಬ್ನಲ್ಲಿ ನೀರು ಇಡಿ. ಆಗ ಆ ಕೀಟಗಳು ನೀರಿಗೆ ಬಂದು ಬೀಳುತ್ತವೆ. ಇದರಿಂದ ಎಲ್ಲಾ ಹುಳುಗಳೂ ಮಾಯವಾಗುತ್ತವೆ.
ಬಾಗಿಲುಗಳು ಟೈಟ್
ಮಳೆಗಾಲದಲ್ಲಿ ಮರದ ಬಾಗಿಲುಗಳು ಟೈಟ್ ಆಗುವುದು ಮಾಮೂಲು. ಆ ಸಮಯದಲ್ಲಿ, ನೀವು ಭಯಪಡುವ ಅಗತ್ಯವಿಲ್ಲ. ಅದಕ್ಕಾಗಿ ನೀವು, ಒಣಗಿರುವ ಸೋಪನ್ನು ಬಾಗಿಲುಗಳ ಮೂಲೆಗಳಿಗೆ ಹಚ್ಚಿದರೆ, ಬಾಗಿಲು ಸರಿಯಾಗಿ ಓಪನ್ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

