ಮನೆಯಲ್ಲಿ ತುಕ್ಕು ಹಿಡಿದ ಸಾಮಗ್ರಿಗಳನ್ನು ಫಟಾಫಟ್ ಎಂದು ಮನೆಯಲ್ಲಿಯೇ ಸುಲಭವಾಗಿ ಸರಿ ಮಾಡಿಕೊಳ್ಳುವ ಕೆಲವೊಂದು ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ.
life Jul 20 2026
Author: Suchethana D Image Credits:healthfacts Instagram
Kannada
ಕತ್ತರಿ ತುಕ್ಕು ಹಿಡಿದಿದ್ದರೆ ಹೀಗೆ ಮಾಡಿ
ಕತ್ತರಿಗೆ ತುಕ್ಕು ಹಿಡಿದಿದ್ದರೆ, ಒಂದು ಬಿಳಿ ಈರುಳ್ಳಿಯ ಒಳಗೆ ತೂರಿಸಿ ತೆಗೆಯಿರಿ. ಇದಕ್ಕಾಗಿ ಈರುಳ್ಳಿಯನ್ನು ತೆಗೆದುಕೊಂಡು ಕತ್ತರಿಯನ್ನು ಆ ಈರುಳ್ಳಿಯ ಒಳಗೆ ತೂರಿಸಿ ಮೇಲೆ ಕೆಳಗೆ ಮಾಡಿ.ಕತ್ತರಿ ಫಳಫಳ ಎನ್ನುತ್ತದೆ.
Image credits: healthfacts Instagram
Kannada
ನಲ್ಲಿಯ ಮೇಲಿನ ಕಲೆ ತೆಗೆಯಲು
ನಲ್ಲಿ ತುಕ್ಕು ಹಿಡಿದಿದ್ದರೆ, ಅಥವಾ ನೀರಿನ ಕಲೆಯಾಗಿದ್ದರೆ, ಒಂದು ಲಿಂಬೆ ಹಣ್ಣನ್ನು ತೆಗೆದುಕೊಂಡು ನಡುವೆ ದೊಡ್ಡ ರಂಧ್ರ ಮಾಡಿ ಅದನ್ನು ಚಿತ್ರದಲ್ಲಿ ತೋರಿಸಿರುವಂತೆ ನಲ್ಲಿಯೊಳಗೆ ತೂರಿಸಿ ಕ್ಲೀನ್ ಮಾಡಿ.
Image credits: healthfacts Instagram
Kannada
ಇಸ್ತ್ರಿ ಪೆಟ್ಟಿಗೆ ಸುಟ್ಟಿದ್ದರೆ
ಇಸ್ತ್ರಿ ಪೆಟ್ಟಿಗೆ ಸುಟ್ಟಿದ್ದರೆ ಅಥವಾ ತುಕ್ಕು ಹಿಡಿದಿದ್ದರೆ, ಬೇಕಿಂಗ್ ಸೋಡಾಕ್ಕೆ ವಿನೀಗರ್ ಸೇರಿಸಿ ಪೇಸ್ಟ್ ಮಾಡಿ. ಅದನ್ನು ಸುಟ್ಟಿರುವ/ ತುಕ್ಕು ಹಿಡಿದಿರುವ ಪೆಟ್ಟಿಗೆಯ ಮೇಲೆ ಉಜ್ಜಿದರೆ ಫಳಫಳ ಎನ್ನುತ್ತದೆ.
Image credits: healthfacts Instagram
Kannada
ಶೂಸ್ ಶೈನ್ ಆಗಲು
ಬೇಕಿಂಗ್ ಸೋಡಾ, ಯಾವುದಾದರೂ ಒಂದು ಟೂಥ್ಪೇಸ್ಟ್ ಮಾಡಿ ಬಿಳಿಯ ಶೂಸ್ ಶುಚಿಗೊಳಿಸಿದ್ರೆ ಧೂಳೆಲ್ಲಾ ಹೋಗಿ ಶೂಸ್ ಶೈನಿಂಗ್ ಬರುತ್ತದೆ.