ತಿಂಡಿ-ತಿನಿಸುಗಳನ್ನು ಪ್ಯಾಕ್ ಮಾಡಲು ಬಳಸುವ ಅಲ್ಯುಮಿನಿಯನ್ ಫಾಯಿಲ್ ಪೇಪರ್ ಉಪಯೋಗ ಹತ್ತಾರು ಇವೆ. ಅವುಗಳ ಡಿಟೇಲ್ಸ್ ಇಲ್ಲಿ ನೀಡಲಾಗಿದೆ.
kitchen Jul 18 2026
Author: Suchethana D Image Credits:viralgharelutips instagram
Kannada
ಆಭರಣ ಫಳಫಳ
ಒಂದು ಪಾತ್ರೆಯ ಮೇಲೆ ಫಾಯಿಲ್ ಪೇಪರ್ ಇಟ್ಟು ಅದರ ಮೇಲೆ ಬಿಸಿಯಾದ ನೀರಿಗೆ ಬೇಕಿಂಗ್ ಸೋಡಾ ಹಾಕಿ ಆಭರಣ ಹಾಕಿದರೆ ಫಳಫಳ ಹೊಳೆಯುತ್ತದೆ.
Image credits: viralgharelutips instagram
Kannada
ಕತ್ತರಿ ಹರಿತ ಮಾಡಲು
ಫಾಯಿಲ್ ಪೇಪರ್ ಅನ್ನು ನಾಲ್ಕೈದು ಫೋಲ್ಡರ್ ಮಾಡಿ ಮೊಂಡಾದ ಕತ್ತರಿಯಿಂದ ಕೆಲವು ಬಾರಿ ಕತ್ತರಿಸಿದರೆ ಹರಿತವಾಗುತ್ತದೆ. ಇದರಿಂದ ನೀವು ಸುಲಭದಲ್ಲಿ ಎಲ್ಲವನ್ನೂ ಕಟ್ ಮಾಡಬಹುದಾಗಿದೆ.
Image credits: viralgharelutips instagram
Kannada
ಐರನ್ ಬಾಕ್ಸ್ ಕೆಳಗೆ
ಐರನ್ ಬಾಕ್ಸ್ ಕೆಳಗೆ ಫಾಯಿಲ್ ಪೇಪರ್ ಇಟ್ಟು ಇಸ್ತ್ರಿ ಮಾಡಿದರೆ, ಇಸ್ತ್ರಿ ಪೆಟ್ಟಿಗೆಯ ಬಿಸಿ ದೀರ್ಘವಾಗಿರುತ್ತದೆ. ಇದರಿಂದ ಬಟ್ಟೆಯನ್ನು ದೀರ್ಘ ಕಾಲದವರೆಗೆ ಸುಲಭದಲ್ಲಿ ಐರನ್ ಮಾಡಬಹುದು.
Image credits: viralgharelutips instagram
Kannada
ವೈಫೈ ಸ್ಲೋ ಆಗಿದ್ದರೆ
ವೈಫೈ ಸ್ಲೋ ಆಗಿದ್ದರೆ, ಅದರ ಇನ್ಸ್ಟ್ರುಮೆಂಟ್ ಹಿಂದೆ ಫಾಯಿಲ್ ಪೇಪರ್ ಕವರ್ ಮಾಡಿ ಇಟ್ಟರೆ ಸಿಗ್ನಲ್ ಒಂದೇ ಡೈರೆಕ್ಷನ್ಗೆ ಬರುತ್ತದೆ. ಇದರಿಂದ ನೆಟ್ವರ್ಕ್ ಸುಲಭದಲ್ಲಿ ಸಿಗುತ್ತದೆ.
Image credits: viralgharelutips instagram
Kannada
ಕಪ್ಪಾದ ಕಬ್ಬಿಣದ ಪಾತ್ರೆ
ಕಬ್ಬಿಣದ ಪಾತ್ರೆ ಸಿಕ್ಕಾಪಟ್ಟೆ ಕಪ್ಪಾಗಿದ್ದರೆ ನೀರು ಹಾಕಿ, ಫಾಯಿಲ್ ಪೇಪರ್ ಉಂಡೆ ಮಾಡಿ ತಿಕ್ಕಿದರೆ ಸಾಕು. ಪಾತ್ರೆ ಫಳಫಳ ಹೊಳೆಯುತ್ತದೆ.