MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • In-Store Shopping: 30 ನಿಮಿಷದಲ್ಲಿ ಬಟ್ಟೆ ಡೆಲಿವರಿ Vs ಅಂಗಡಿ ಶಾಪಿಂಗ್, ಯಾವುದು ಬೆಸ್ಟ್?

In-Store Shopping: 30 ನಿಮಿಷದಲ್ಲಿ ಬಟ್ಟೆ ಡೆಲಿವರಿ Vs ಅಂಗಡಿ ಶಾಪಿಂಗ್, ಯಾವುದು ಬೆಸ್ಟ್?

Why people still shop in stores: ಇವತ್ತಿನ ಡಿಜಿಟಲ್ ಜಗತ್ತಿನಲ್ಲಿ 30 ನಿಮಿಷದಲ್ಲಿ ಬಟ್ಟೆಗಳು ಮನೆಗೆ ಬಂದರೂ, ನಾವೇ ಖುದ್ದಾಗಿ ಅಂಗಡಿಗೆ ಹೋಗಿ, ಬಟ್ಟೆಯನ್ನು ಮುಟ್ಟಿ ನೋಡಿ, ಕುಟುಂಬದ ಜೊತೆ ಖುಷಿಯಿಂದ ಖರೀದಿ ಮಾಡುವ ಅನುಭವಕ್ಕೆ ಆನ್‌ಲೈನ್ ಡೆಲಿವರಿ ಸರಿಸಾಟಿಯಾಗದು. ಅದಕ್ಕೆ ಕಾರಣಗಳು ಇಲ್ಲಿವೆ. 

1 Min read
Author : Ashwini HR
Published : Jun 17 2026, 12:33 PM IST
Share this Photo Gallery
  • FB
  • TW
  • Linkdin
  • Whatsapp
16
ಸ್ಪಷ್ಟ ಆಯ್ಕೆ
Image Credit : Getty

ಸ್ಪಷ್ಟ ಆಯ್ಕೆ

ಸ್ಪಷ್ಟ ಆಯ್ಕೆ
ಆನ್‌ಲೈನ್‌ನಲ್ಲಿ ನೋಡುವಾಗ ಬಟ್ಟೆಗಳು ತುಂಬಾ ಸುಂದರವಾಗಿ ಕಾಣಿಸಬಹುದು, ಆದರೆ ಕೈಗೆ ಬಂದಾಗ ಅದರ ಗುಣಮಟ್ಟ ಬೇರೆಯೇ ಇರಬಹುದು. ನಾವೇ ಅಂಗಡಿಗೆ ಹೋದರೆ, ಬಟ್ಟೆಯ ಗುಣಮಟ್ಟ, ಮೃದುತ್ವ ಮತ್ತು ಅದು ನಮಗೆ ಆರಾಮದಾಯಕವೇ ಎಂಬುದನ್ನು ಮುಟ್ಟಿ ನೋಡಿ ಸ್ಪಷ್ಟವಾಗಿ ಆಯ್ಕೆ ಮಾಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆನ್‌ಲೈನ್‌ನಲ್ಲಿ ಈ ಸೌಲಭ್ಯ ಸಿಗಲ್ಲ
Image Credit : Getty

ಆನ್‌ಲೈನ್‌ನಲ್ಲಿ ಈ ಸೌಲಭ್ಯ ಸಿಗಲ್ಲ

ಆನ್‌ಲೈನ್‌ನಲ್ಲಿ ಈ ಸೌಲಭ್ಯ ಸಿಗಲ್ಲ
ನಾವು ಕೊಂಡುಕೊಳ್ಳುವ ಬಟ್ಟೆ ನಮಗೆ ಪಕ್ಕಾ ಫಿಟ್ ಆಗಬೇಕು. ದೊಡ್ಡ ಅಂಗಡಿಗಳಲ್ಲಿ ಬಟ್ಟೆ ಖರೀದಿಸಿದರೆ, ಅಲ್ಲೇ ಟೈಲರ್‌ಗಳು ಇರುತ್ತಾರೆ. ಅವರು ಬಟ್ಟೆಯ ಉದ್ದ ಅಥವಾ ಅಳತೆಯನ್ನು ತಕ್ಷಣವೇ ಬದಲಾಯಿಸಿ, ನಮಗೆ ಸರಿಹೊಂದುವಂತೆ ಹೊಲಿದು ಕೊಡುತ್ತಾರೆ. ಆನ್‌ಲೈನ್‌ನಲ್ಲಿ ಈ ಸೌಲಭ್ಯ ಸಿಗುವುದಿಲ್ಲ. 

Related Articles

Related image1
DMart Jobs: ಡಿಮಾರ್ಟ್‌ನಲ್ಲಿ ಹೆಣ್ಣುಮಕ್ಕಳಿಗೇ ಜಾಸ್ತಿ ಜಾಬ್ ಸಿಗೋದು ಯಾಕೆ? ಇಲ್ಲಿದೆ ಕಾರಣ
Related image2
1000 ಸಂಖ್ಯೆಯನ್ನು 1k ಎಂದು ಏಕೆ ಕರೆಯುತ್ತಾರೆ? ಶೇ. 99 ರಷ್ಟು ಜನರಿಗೆ ಈ ರಹಸ್ಯ ಖಂಡಿತ ಗೊತ್ತಿಲ್ಲ!
36
ಹಣ ಪೋಲಾಗುವುದು ತಪ್ಪುತ್ತೆ
Image Credit : Getty

ಹಣ ಪೋಲಾಗುವುದು ತಪ್ಪುತ್ತೆ

ಹಣ ಪೋಲಾಗುವುದು ತಪ್ಪುತ್ತೆ
ಆನ್‌ಲೈನ್ ಆ್ಯಪ್‌ಗಳಲ್ಲಿ ಬರುವ ಡಿಸ್ಕೌಂಟ್ ಜಾಹೀರಾತುಗಳನ್ನು ನೋಡಿ, ನಮಗೆ ಬೇಡದ ಬಟ್ಟೆಗಳನ್ನು ಕೂಡ ಆತುರದಲ್ಲಿ ಕೊಂಡುಬಿಡುತ್ತೇವೆ. ಆದರೆ, ನೇರವಾಗಿ ಅಂಗಡಿಗೆ ಹೋದಾಗ ನಮಗೆ ಏನು ಬೇಕೋ, ಅದನ್ನು ಮಾತ್ರ ಪ್ಲ್ಯಾನ್ ಮಾಡಿ ಖರೀದಿಸುತ್ತೇವೆ. ಇದರಿಂದ ಸುಖಾಸುಮ್ಮನೆ ಹಣ ಪೋಲಾಗುವುದು ತಪ್ಪುತ್ತದೆ.

46
ಸಮಯ ವ್ಯರ್ಥ
Image Credit : Getty

ಸಮಯ ವ್ಯರ್ಥ

ಸಮಯ ವ್ಯರ್ಥ
ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಬಟ್ಟೆಗಳು ಕೆಲವೊಮ್ಮೆ ತಪ್ಪು ಸೈಜ್, ಬೇರೆ ಬಣ್ಣ ಅಥವಾ ಕಳಪೆ ಗುಣಮಟ್ಟದಲ್ಲಿ ಬರುವ ಸಾಧ್ಯತೆ ಇದೆ. ಅದನ್ನು ರಿಟರ್ನ್ ಮಾಡಬಹುದಾದರೂ, ಅದು ಸಮಯ ವ್ಯರ್ಥ. ಆದರೆ ಅಂಗಡಿಯಲ್ಲಿ, ಬಟ್ಟೆಗಳನ್ನು ನಾವೇ ಟ್ರಯಲ್ ಮಾಡಿ ನೋಡಿ ಖರೀದಿಸುವುದರಿಂದ 100% ತೃಪ್ತಿ ಸಿಗುತ್ತದೆ.

56
ಮಾರ್ಗದರ್ಶನ ಸಿಗಲ್ಲ
Image Credit : Getty

ಮಾರ್ಗದರ್ಶನ ಸಿಗಲ್ಲ

ಮಾರ್ಗದರ್ಶನ ಸಿಗಲ್ಲ
ನಮಗೆ ಗೊತ್ತಿರುವ ಅಂಗಡಿಗಳಿಗೆ ಪದೇ ಪದೇ ಹೋದಾಗ ಅಲ್ಲಿನ ಸಿಬ್ಬಂದಿ ಜೊತೆ ಉತ್ತಮ ಸ್ನೇಹ ಬೆಳೆಯುತ್ತದೆ. ಅವರು ನಮ್ಮ ಟೇಸ್ಟ್ ಅರ್ಥಮಾಡಿಕೊಂಡು, ನಮಗೆ ಸೂಟ್ ಆಗುವ ಒಳ್ಳೆಯ ಬಟ್ಟೆಗಳನ್ನು ತೋರಿಸುತ್ತಾರೆ. ಈ ಮಾನವೀಯ ಸಂಪರ್ಕ ಮತ್ತು ನಿಜವಾದ ಮಾರ್ಗದರ್ಶನ ಆನ್‌ಲೈನ್ ಆ್ಯಪ್‌ಗಳಲ್ಲಿ ಸಿಗುವುದಿಲ್ಲ.

66
ಈ ನೆನಪುಗಳು ಎಂದಿಗೂ ಹಸಿರು
Image Credit : Getty

ಈ ನೆನಪುಗಳು ಎಂದಿಗೂ ಹಸಿರು

ಈ ನೆನಪುಗಳು ಎಂದಿಗೂ ಹಸಿರು
ನಮಗೆ ಇಷ್ಟವಾದ ಬಟ್ಟೆಗಳ ಹಿಂದೆ ಯಾವಾಗಲೂ ಒಂದು ಸುಂದರ ಕಥೆ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಪ್ಪ-ಅಮ್ಮನ ಜೊತೆ ಅಂಗಡಿ ಅಂಗಡಿ ಅಲೆದು ಬಟ್ಟೆ ತೆಗೆದುಕೊಂಡಿದ್ದು, ದೀಪಾವಳಿ ಶಾಪಿಂಗ್ ಮುಗಿಸಿ ಹೋಟೆಲ್‌ನಲ್ಲಿ ಊಟ ಮಾಡಿದ್ದು... ಹೀಗೆ ಅಂಗಡಿಗೆ ಹೋಗಿ ಬಟ್ಟೆ ಖರೀದಿಸುವಾಗ ಸಿಗುವ ನೆನಪುಗಳು ಎಂದಿಗೂ ಹಸಿರಾಗಿರುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಫ್ಯಾಷನ್
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
ಕಾಮಾಕ್ಯದಲ್ಲಿ ಪಾರಿವಾಳ ಹಾರಿಬಿಟ್ಟ ಅನಂತ್ ಅಂಬಾನಿ, ಈ ಹರಕೆ ಹಿಂದಿನ ಕಾರಣ ಏನು?
Recommended image2
ಮದುವೆಯಾಗಿ 3 ತಿಂಗಳ ಬಳಿಕ ಪತಿ ವಿಜಯ್ ಬಗ್ಗೆ ಹೀಗ್ ಹೇಳಿದ್ಯಾಕೆ ರಶ್ಮಿಕಾ ಮಂದಣ್ಣ? ಇಲ್ಲೇನೋ ಇದೆ ಗುಟ್ಟು!
Recommended image3
1000 ಸಂಖ್ಯೆಯನ್ನು 1k ಎಂದು ಏಕೆ ಕರೆಯುತ್ತಾರೆ? ಶೇ. 99 ರಷ್ಟು ಜನರಿಗೆ ಈ ರಹಸ್ಯ ಖಂಡಿತ ಗೊತ್ತಿಲ್ಲ!
Related Stories
Recommended image1
DMart Jobs: ಡಿಮಾರ್ಟ್‌ನಲ್ಲಿ ಹೆಣ್ಣುಮಕ್ಕಳಿಗೇ ಜಾಸ್ತಿ ಜಾಬ್ ಸಿಗೋದು ಯಾಕೆ? ಇಲ್ಲಿದೆ ಕಾರಣ
Recommended image2
1000 ಸಂಖ್ಯೆಯನ್ನು 1k ಎಂದು ಏಕೆ ಕರೆಯುತ್ತಾರೆ? ಶೇ. 99 ರಷ್ಟು ಜನರಿಗೆ ಈ ರಹಸ್ಯ ಖಂಡಿತ ಗೊತ್ತಿಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved