MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಸಚಿವರ ಪಾರ್ಟಿಗೆ ಹುಡುಗಿಯರ ಸಪ್ಲೈ ಮಾಡಲು ₹80,000 ಆಫರ್! ಗ್ಲಾಮರ್ ಜಗತ್ತಿನ ಕರಾಳ ಮುಖ ಬಿಚ್ಚಿಟ್ಟ ಮಾಡೆಲ್!

ಸಚಿವರ ಪಾರ್ಟಿಗೆ ಹುಡುಗಿಯರ ಸಪ್ಲೈ ಮಾಡಲು ₹80,000 ಆಫರ್! ಗ್ಲಾಮರ್ ಜಗತ್ತಿನ ಕರಾಳ ಮುಖ ಬಿಚ್ಚಿಟ್ಟ ಮಾಡೆಲ್!

ಖ್ಯಾತ ಮಾಡೆಲ್ ಲಿಚಾ ಬೋರಾ ಅವರು, ರಾಜ್ಯದ ಸಚಿವರೊಬ್ಬರ ಪಾರ್ಟಿಯಲ್ಲಿ ಕುಡಿದು ಡ್ಯಾನ್ಸ್ ಮಾಡಲು ಹುಡುಗಿಯರನ್ನು ಕಳುಹಿಸಲು ತಮಗೆ ಅಪರಿಚಿತರಿಂದ ಕರೆ ಬಂದಿತ್ತು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಮಾಡೆಲಿಂಗ್ ಕ್ಷೇತ್ರ ಹಾಗೂ ಹಣದ ಆಮಿಷದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.

2 Min read
Author : Sathish Kumar KH
Published : Jul 28 2026, 02:35 PM IST
Share this Photo Gallery
  • FB
  • TW
  • Linkdin
  • Whatsapp
16
Assam Model licha bora explosive
Image Credit : Instagram

Assam Model licha bora explosive

ಗ್ಲಾಮರ್ ಜಗತ್ತು ಹಾಗೂ ಮಾಡೆಲಿಂಗ್ ಕ್ಷೇತ್ರದ (Modelling Industry) ಕರಾಳ ಮುಖವನ್ನು ಬಿಚ್ಚಿಡುವಂತಹ ಆಘಾತಕಾರಿ ಘಟನೆಯೊಂದನ್ನು ಖ್ಯಾತ ಮಾಡೆಲ್ ಲಿಚಾ ಬೋರಾ (Licha Bora) ಬಹಿರಂಗಪಡಿಸಿದ್ದಾರೆ. ರಾಜ್ಯದ ಹಾಲಿ ಸಚಿವರೊಬ್ಬರ ಪಾರ್ಟಿಯಲ್ಲಿ (Minister's Party) 'ಕುಡಿದು ಡ್ಯಾನ್ಸ್ ಮಾಡಲು' ಹುಡುಗಿಯರನ್ನು ಸರಬರಾಜು ಮಾಡಿದರೆ ಭಾರಿ ಪ್ರಮಾಣದ ಹಣ ನೀಡುವುದಾಗಿ ತಮಗೆ ಕರೆ ಬಂದಿತ್ತು ಎಂದು ಲಿಚಾ ಶಾಕಿಂಗ್ ಆರೋಪ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸೋನಾಪುರ್ ರೆಸಾರ್ಟ್‌ನಿಂದ ಬಂದಿತ್ತು ಕರೆ!
Image Credit : Instagram

ಸೋನಾಪುರ್ ರೆಸಾರ್ಟ್‌ನಿಂದ ಬಂದಿತ್ತು ಕರೆ!

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ (Interview) ಈ ವಿಚಾರವನ್ನು ಬಿಚ್ಚಿಟ್ಟ ಲಿಚಾ ಬೋರಾ, 'ಕೆಲ ದಿನಗಳ ಹಿಂದೆ ನನಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಕರೆ ಬಂದಿತ್ತು. ಅಸ್ಸಾಂನ ಸೋನಾಪುರ್‌ನಲ್ಲಿರುವ (Sonapur) ಅತ್ಯಂತ ಪ್ರಸಿದ್ಧ ರೆಸಾರ್ಟ್‌ ಒಂದರಲ್ಲಿ ಪಾರ್ಟಿ ಆಯೋಜಿಸಲಾಗಿದೆ. ಅಲ್ಲಿ ಕುಡಿದು ಡ್ಯಾನ್ಸ್ ಮಾಡಲು ಹುಡುಗಿಯರನ್ನು ಕಳುಹಿಸಿಕೊಡಲು ಸಾಧ್ಯವಿದೆಯೇ? ಎಂದು ಕೇಳಿದನು. ನಾನು ಯಾಕೆ ಎಂದು ಪ್ರಶ್ನಿಸಿದಾಗ, ರಾಜ್ಯದ ಪ್ರಭಾವಿ ಶಾಸಕ ಹಾಗೂ ಸಚಿವರೊಬ್ಬರ ಪಾರ್ಟಿಗೆ ಈ ವ್ಯವಸ್ಥೆ ಬೇಕಾಗಿದೆ ಎಂದು ಆತ ಹೇಳಿದನು' ಎಂದು ವಿವರಿಸಿದ್ದಾರೆ.

Related Articles

Related image1
ಮಿಸ್ ಸ್ಟೇಟ್ ಕಿರೀಟ ಗೆದ್ದ ಮಾಡೆಲ್ ವಿಮಾನ ನಿಲ್ದಾಣದಲ್ಲಿ ಅರೆಸ್ಟ್, ಬ್ಯಾಗ್ ನೋಡಿ ಪೊಲೀಸ್ ದಂಗು
Related image2
ಲಿಜ್ಲಾಝ್ ಫೋಟೋಗೆ ಕೊಹ್ಲಿ ಲೈಕ್ ಕೋಲಾಹಲ ಬೆನ್ನಲ್ಲೇ ಹಣದ ಆಫರ್ ಸೀಕ್ರೆಟ್ ಬಿಚ್ಚಿಟ್ಟ ಮಾಡೆಲ್
36
‘ಕೇವಲ ಡ್ಯಾನ್ಸ್‌ಗೆ 80 ಸಾವಿರ ಹಣ!’ ಅನುಮಾನ ಗೊಂಡಿದ್ದ ಮಾಡೆಲ್:
Image Credit : Instagram

‘ಕೇವಲ ಡ್ಯಾನ್ಸ್‌ಗೆ 80 ಸಾವಿರ ಹಣ!’ ಅನುಮಾನ ಗೊಂಡಿದ್ದ ಮಾಡೆಲ್:

ಕರೆ ಮಾಡಿದ ವ್ಯಕ್ತಿಗಳು ಕೇವಲ ಅಲ್ಪಾವಧಿಯ ಪಾರ್ಟಿಗೆ ಬರಲು ಬರೋಬ್ಬರಿ ₹80,000 ನೀಡುವುದಾಗಿ ಆಫರ್ (Offer) ನೀಡಿದ್ದರು. 'ಕೇವಲ ಡ್ಯಾನ್ಸ್ ಮಾಡಲು ಇಷ್ಟೊಂದು ದೊಡ್ಡ ಮೊತ್ತವನ್ನು ಯಾರು ಕೊಡ್ತಾರೆ? ಎಂಬ ಅನುಮಾನ ನನಗೆ ಬಂದಿತ್ತು. ಹೀಗಾಗಿ ನಾನು ನೇರವಾಗಿಯೇ ಆತನನ್ನು ಪ್ರಶ್ನಿಸಿದೆ. ನಿಮಗೆ ಲೈಂಗಿಕ ವೃತ್ತಿಗೆ (Se*x Work) ಹುಡುಗಿಯರು ಬೇಕಿದ್ದರೆ, ಸೆ*ಕ್ಸ್ ವರ್ಕರ್ಸ್ ಬಳಿ ಹೋಗಿ ಎಂದು ಕಡಾಖಂಡಿತವಾಗಿ ಹೇಳಿದೆ. ಆದರೆ ಆತ, ಇಲ್ಲ ನಮಗೆ ಕೇವಲ ನಮ್ಮ ಜೊತೆ ಕುಡಿದು ಡ್ಯಾನ್ಸ್ ಮಾಡಲು ಮಾಡೆಲ್‌ಗಳೇ ಬೇಕು ಎಂದು ಪಟ್ಟು ಹಿಡಿದಿದ್ದನು' ಎಂದು ಲಿಚಾ ಹೇಳಿದ್ದಾರೆ.

46
ಹೆಸರು ಹೇಳಲು ಭಯ, ಶಾಸಕನ ಹೆಸರು ದುರ್ಬಳಕೆಯೋ?
Image Credit : Instagram

ಹೆಸರು ಹೇಳಲು ಭಯ, ಶಾಸಕನ ಹೆಸರು ದುರ್ಬಳಕೆಯೋ?

ಆರೋಪದ ಬೆನ್ನಲ್ಲೇ ಆ ಪ್ರಭಾವಿ ಸಚಿವ ಯಾರು ಎಂಬುದನ್ನು ಹೆಳಲು ಲಿಚಾ ಬೋರಾ ನಿರಾಕರಿಸಿದ್ದಾರೆ. 'ಅವರು ಅತ್ಯಂತ ಪ್ರಭಾವಿ ನಾಯಕರು, ಸುದೀರ್ಘ ಕಾಲದಿಂದ ಶಾಸಕರಾಗಿದ್ದು (MLA), ಪ್ರಸ್ತುತ ಸಚಿವರಾಗಿದ್ದಾರೆ (Minister). ಅವರ ಹೆಸರು ಹೇಳಿದರೆ ನನಗೆ ಅಪಾಯ ಕಾಯ್ದಿರುತ್ತದೆ. ಆದರೆ ನಾನು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ' ಎಂದಿದ್ದಾರೆ.

56
ದೂರವಿರುವಂತೆ ಸಲಹೆ ನೀಡಿದ ಪೊಲೀಸ್
Image Credit : Instagram

ದೂರವಿರುವಂತೆ ಸಲಹೆ ನೀಡಿದ ಪೊಲೀಸ್

ಈ ಕರೆ ಬಂದ ನಂತರ ಲಿಚಾ ತಮ್ಮ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಸಲಹೆ ಕೇಳಿದ್ದರು. 'ಸೋನಾಪುರದಲ್ಲಿ ಇಂತಹ ಘಟನೆಗಳು ನಡೆಯುವ ಬಗ್ಗೆ ಕೇಳಲ್ಪಟ್ಟಿದ್ದೇನೆ. ಆದರೆ, ಇದರಲ್ಲಿ ಸಚಿವರು ನೇರವಾಗಿ ಭಾಗಿಯಾಗಿದ್ದಾರೋ ಅಥವಾ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಮಧ್ಯವರ್ತಿಗಳು (Middlemen) ಈ ರೀತಿ ದಂದೆ ನಡೆಸುತ್ತಿದ್ದಾರೋ ಗೊತ್ತಿಲ್ಲ. ಹೀಗಾಗಿ ಈ ವಿಚಾರದಿಂದ ದೂರವಿರು' ಎಂದು ಪೊಲೀಸರು ಸಲಹೆ ನೀಡಿದ್ದಾಗಿ ಲಿಚಾ ತಿಳಿಸಿದ್ದಾರೆ.

66
ಹೊಸ ಮಾಡೆಲ್‌ಗಳಿಗೆ ಎಚ್ಚರಿಕೆ:
Image Credit : Instagram

ಹೊಸ ಮಾಡೆಲ್‌ಗಳಿಗೆ ಎಚ್ಚರಿಕೆ:

ಮಾಡೆಲಿಂಗ್ ಕ್ಷೇತ್ರಕ್ಕೆ ಹೊಸದಾಗಿ ಬರುವ ಯುವತಿಯರನ್ನು (Newcomers) ಗುರಿಯಾಗಿಸಿಕೊಂಡು ಇಂತಹ ಜಾಲಗಳು ಕೆಲಸ ಮಾಡುತ್ತವೆ. ಹಣ ಮತ್ತು ಕೆಲಸದ ಅಗತ್ಯವಿರುವ ಯುವತಿಯರು "ಕೇವಲ ಡ್ಯಾನ್ಸ್ ತಾನೇ" ಎಂದು ಭಾವಿಸಿ ಇಂತಹ ಅಪಾಯಕಾರಿ ಬಲೆಗೆ ಬೀಳುವ ಸಾಧ್ಯತೆಯಿದೆ ಎಂದು ಲಿಚಾ ಬೋರಾ ಎಚ್ಚರಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತ ಸುದ್ದಿ
ರಾಜಕೀಯ ಸುದ್ದಿ
ಫ್ಯಾಷನ್
ನಟಿ

Latest Videos
Recommended Stories
Recommended image1
ನೀಟ್ ಪ್ರತಿಭಟನೆ ವೇಳೆ ಪೊಲೀಸ್ ವ್ಯಾನ್ ಅಡ್ಡಗಟ್ಟಿ ನಿಲ್ಲಿಸಿದ್ದ 'ಮಾಡೆಲ್‌ ರಿಯಾ'ಗೆ ಎದುರಾಯ್ತು ಸಂಕಷ್ಟ!
Recommended image2
ನಾವು ರಿಯಲ್ ಆಗಿ ಮದುವೆ ಆಗ್ತಿದ್ದೀವಿ: ತೆಲುಗು ವಾಹಿನಿಯಲ್ಲಿ ಘೋಷಿಸಿದ ಕಮಲಿ ಧಾರಾವಾಹಿ ಹೀರೋ, ಹೀರೋಯಿನ್
Recommended image3
ರೂರಲ್ ಅಲ್ಲ, ಇದು ಐಪಿಎಸ್ ಮಲ್ಲಿಯ ಖಡಕ್ ದರ್ಬಾರ್; ಮಾಜಿ ಗಂಡ ಜೈದೇವ್‌ಗೆ ಲಾಠಿ ಏಟು
Related Stories
Recommended image1
ಮಿಸ್ ಸ್ಟೇಟ್ ಕಿರೀಟ ಗೆದ್ದ ಮಾಡೆಲ್ ವಿಮಾನ ನಿಲ್ದಾಣದಲ್ಲಿ ಅರೆಸ್ಟ್, ಬ್ಯಾಗ್ ನೋಡಿ ಪೊಲೀಸ್ ದಂಗು
Recommended image2
ಲಿಜ್ಲಾಝ್ ಫೋಟೋಗೆ ಕೊಹ್ಲಿ ಲೈಕ್ ಕೋಲಾಹಲ ಬೆನ್ನಲ್ಲೇ ಹಣದ ಆಫರ್ ಸೀಕ್ರೆಟ್ ಬಿಚ್ಚಿಟ್ಟ ಮಾಡೆಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved