Scorpion myths and facts: ಚೇಳಿನ ಮರಿಗಳು ಹುಟ್ಟಿದ ತಕ್ಷಣವೇ ಹೆತ್ತ ತಾಯಿಯನ್ನು ತಿನ್ನುತ್ತವೆಯೇ?
Do baby scorpions eat their mother: ಚೇಳಿನ ಮರಿಗಳು ಹುಟ್ಟಿದ ತಕ್ಷಣ ಹೆತ್ತ ತಾಯಿಯನ್ನು ತಿಂದು ಬದುಕುತ್ತವೆ ಎಂಬ ಮಾತು ಜನರಲ್ಲಿ ದಶಕಗಳಿಂದಲೂ ಚಾಲ್ತಿಯಲ್ಲಿದೆ. ಆದರೆ ವಿಜ್ಞಾನ ಮತ್ತು ಪ್ರಾಣಿಶಾಸ್ತ್ರಜ್ಞರ ಅಧ್ಯಯನಗಳು ಹೇಳುವುದೇ ಬೇರೆ!

ಎಷ್ಟು ಸತ್ಯ?
ಎಷ್ಟು ಸತ್ಯ?
ಚೇಳಿನ ಮರಿಗಳು ಹುಟ್ಟಿದ ತಕ್ಷಣವೇ ತಮ್ಮ ತಾಯಿಯನ್ನು ನುಂಗಿಬಿಡುತ್ತವೆ ಮತ್ತು ಅವುಗಳು ತಾಯಿಯನ್ನೇ ಬೇಟೆಯಾಡುತ್ತವೆ ಎಂಬ ಮಾತು ಜನಪ್ರಿಯವಾಗಿ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲ, ಹೆಣ್ಣು ಚೇಳು ತನ್ನ ಮರಿಗಳನ್ನು ಪೋಷಿಸಲು ತನ್ನ ಜೀವವನ್ನೇ ತ್ಯಾಗ ಮಾಡುತ್ತದೆ ಎಂಬ ಕಥೆಗಳನ್ನು ನಾವು ಕೇಳಿರುತ್ತೇವೆ. ಈ ವಾದಗಳಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಈಗ ತಿಳಿದುಕೊಳ್ಳೋಣ.
ಅತ್ಯಂತ ಅಪರೂಪ
ಅತ್ಯಂತ ಅಪರೂಪ
ಚೇಳಿನ ಮರಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಾಯಿಯ ಬೆನ್ನಿನ ಮೇಲೆ ಕುಳಿತುಕೊಳ್ಳುತ್ತವೆ. ಮರಿಗಳು ಸುಮಾರು 10 ರಿಂದ 20 ದಿನಗಳವರೆಗೆ ತಾಯಿಯ ಬೆನ್ನಿನ ಮೇಲೆಯೇ ಇರುತ್ತವೆ. ಈ ಅವಧಿಯಲ್ಲಿ ಹೆಣ್ಣು ಚೇಳು ತನ್ನ ಪುಟ್ಟ ಮರಿಗಳನ್ನು ಕಾಪಾಡುತ್ತದೆ. ಇತರ ಜೀವಿಗಳು ಮರಿಗಳನ್ನು ಬೇಟೆಯಾಡದಂತೆ ಅದು ರಕ್ಷಣೆ ನೀಡುತ್ತದೆ. ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಜರ್ನಲ್ ಒಂದರ ಪ್ರಕಾರ, ಹೊಸದಾಗಿ ಹುಟ್ಟಿದ ಚೇಳಿನ ಮರಿಗಳು ತಮ್ಮ ಸ್ವಂತ ತಾಯಿಯನ್ನು ಬೇಟೆಯಾಡುವುದು ಅತ್ಯಂತ ಅಪರೂಪ ಎಂದು ತಿಳಿದುಬಂದಿದೆ.
10 ರಿಂದ 100 ಮರಿಗಳಿಗೆ ಜನ್ಮ
10 ರಿಂದ 100 ಮರಿಗಳಿಗೆ ಜನ್ಮ
ಆದರೆ ತಜ್ಞರ ಅಭಿಪ್ರಾಯದ ಪ್ರಕಾರ, ಮರಿಗಳು ತಾಯಿಯನ್ನು ತಿನ್ನುತ್ತವೆ ಎಂಬುದು ಕೇವಲ ಅಪ್ಪಟ ಊಹಾಪೋಹ (ಮಿಥ್ಯೆ). ಹೆಣ್ಣು ಚೇಳು ಮೊಟ್ಟೆ ಇಡದೆ ನೇರವಾಗಿ ಮರಿಗಳಿಗೆ ಜನ್ಮ ನೀಡುತ್ತದೆ. ಈ ಪ್ರಕ್ರಿಯೆಯನ್ನು 'ಸ್ಕಾರ್ಪಿಯೋನಿಂಗ್' (Scorpioning) ಎಂದು ಕರೆಯಲಾಗುತ್ತದೆ. ಒಂದು ಹೆಣ್ಣು ಚೇಳು ಒಂದೇ ಬಾರಿಗೆ 10 ರಿಂದ 100 ರವರೆಗೆ ಮರಿಗಳಿಗೆ ಜನ್ಮ ನೀಡಬಹುದು. ಚೇಳಿನ ಮರಿಗಳು ಹುಟ್ಟಿದ ತಕ್ಷಣ ಅತ್ಯಂತ ಮೃದುವಾಗಿರುತ್ತವೆ (Soft-bodied). ಅವುಗಳ ದೇಹದ ಹೊರಭಾಗವು ಗಟ್ಟಿಯಾಗಿರುವುದಿಲ್ಲ.
ತಾಯಿಯೇ ದುರ್ಬಲ ಮರಿಗಳನ್ನು ತಿನ್ನುತ್ತೆ
ತಾಯಿಯೇ ದುರ್ಬಲ ಮರಿಗಳನ್ನು ತಿನ್ನುತ್ತೆ
ಮರಿಗಳು ತಾಯಿಯನ್ನು ತಿನ್ನುವ ಈ ರೀತಿಯ ಸ್ವಭಾವವು ಕೆಲವು ಜಾತಿಯ ಜೇಡಗಳಲ್ಲಿ ಮತ್ತು ಸೂಡೋಸ್ಕಾರ್ಪಿಯನ್ಸ್ (Pseudoscorpions) ಜೀವಿಗಳಲ್ಲಿ ಕಂಡುಬರುತ್ತದೆ. ಆದರೆ, ಚೇಳಿನ ಮರಿಗಳು ತಮ್ಮ ತಾಯಿಯನ್ನು ಬೇಟೆಯಾಡುತ್ತವೆ ಎಂಬುದು ನಿಜವಲ್ಲ. ಬದಲಿಗೆ, ಹೆಣ್ಣು ಚೇಳು ತನ್ನದೇ ಆದ ಬಲಹೀನ ಮರಿಗಳನ್ನು ಬೇಟೆಯಾಡಿ ತಿನ್ನುತ್ತದೆ. ತಾಯಿ ಚೇಳು ದುರ್ಬಲ ಮರಿಗಳನ್ನು ತಿನ್ನುವುದರಿಂದ, ಉಳಿದ ಬಲಿಷ್ಠ ಮರಿಗಳಿಗೆ ಉತ್ತಮ ಪೋಷಣೆ ಸಿಗುತ್ತದೆ ಮತ್ತು ಅವು ಬದುಕುಳಿಯುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.