ನಿಮ್ಮ ಮನಿ ಪ್ಲಾಂಟ್ ಹುಲ್ಲಿನಂತೆ ದಟ್ಟವಾಗಿ ಬೆಳೆಯಬೇಕಾ?, 2 ತಿಂಗಳು ಈ ನೀರನ್ನ ಹಾಕಿ ಸಾಕು
How to make money plant bushy: ನಿಮ್ಮ ಮನೆಯ ಮನಿ ಪ್ಲಾಂಟ್ ಬಾಡಿ ಹೋಗುತ್ತಿದೆಯೇ ಅಥವಾ ಸರಿಯಾಗಿ ಬೆಳೆಯುತ್ತಿಲ್ಲವೇ? ನರ್ಸರಿಗಳಲ್ಲಿ ಗಿಡಗಳು ಅಷ್ಟು ಸೊಂಪಾಗಿ ಬೆಳೆಯಲು ಕಾರಣವೇನು? ಇಲ್ಲಿದೆ ನೋಡಿ ಟಿಪ್ಸ್ ..
ಇಲ್ಲಿದೆ ಟಿಪ್ಸ್
ಇಲ್ಲಿದೆ ಟಿಪ್ಸ್
ಮನೆಯ ಅಂದ ಹೆಚ್ಚಿಸಲು ಮತ್ತು ಪಾಸಿಟಿವ್ ಎನರ್ಜಿಗಾಗಿ ಮನಿ ಪ್ಲಾಂಟ್ ಅನ್ನು ಅನೇಕರು ಬೆಳೆಸುತ್ತಾರೆ. ಆದರೆ ಕೆಲವೊಮ್ಮೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಅಥವಾ ಗಿಡದ ಬೆಳವಣಿಗೆ ಕುಂಠಿತವಾಗುವುದು ಕಂಡುಬರುತ್ತದೆ. ನರ್ಸರಿಗಳಲ್ಲಿ ಇರುವಂತೆ ಗಿಡ ದಟ್ಟವಾಗಿ ಬೆಳೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ..
1. ಸರಿಯಾದ ಕೊಂಬೆಯ ಆಯ್ಕೆ
1. ಸರಿಯಾದ ಕೊಂಬೆಯ ಆಯ್ಕೆ
ಮನಿ ಪ್ಲಾಂಟ್ ನಾಟಲು ದೊಡ್ಡ ಕೊಂಬೆಗಳಿಗಿಂತ, ಗಿಣ್ಣುಗಳು (Nodes) ಇರುವ ಸಣ್ಣ ಸಣ್ಣ ಕೊಂಬೆಗಳನ್ನು ಆರಿಸಿ. ಈ ಗಿಣ್ಣುಗಳಿಂದಲೇ ಬೇರುಗಳು ಸುಲಭವಾಗಿ ಚಿಗುರುತ್ತವೆ.
2. ನಾಟಿ ಮಾಡುವ ವಿಧಾನ
2. ನಾಟಿ ಮಾಡುವ ವಿಧಾನ
ಕೊಂಬೆಗಳನ್ನು ಮಣ್ಣಿನಲ್ಲಿ ನೇರವಾಗಿ ನೆಡುವ ಬದಲು ಸ್ವಲ್ಪ ಓರೆಯಾಗಿ (Slant) ನೆಡಿ. ಇದರಿಂದ ಹೆಚ್ಚಿನ ಗಿಣ್ಣುಗಳು ಮಣ್ಣನ್ನು ಸ್ಪರ್ಶಿಸುತ್ತವೆ ಮತ್ತು ಬೇರುಗಳು ವೇಗವಾಗಿ ಹರಡುತ್ತವೆ.
3. ಮಣ್ಣಿನ ಮಿಶ್ರಣ
3. ಮಣ್ಣಿನ ಮಿಶ್ರಣ
ಮನಿ ಪ್ಲಾಂಟ್ ಬೇರುಗಳು ಮುಕ್ತವಾಗಿ ಬೆಳೆಯಲು ಮಣ್ಣು ಹಗುರವಾಗಿರಬೇಕು. ಸಮಾನ ಪ್ರಮಾಣದ ಕೆಮ್ಮಣ್ಣು, ಕೋಕೋಪೀಟ್ ಅಥವಾ ಮರಳು ಮತ್ತು ಭತ್ತದ ಹೊಟ್ಟನ್ನು ಬೆರೆಸಿ. ಮಣ್ಣಿನಲ್ಲಿ ಫಂಗಸ್ ಬರದಂತೆ ತಡೆಯಲು ಸ್ವಲ್ಪ ಬೇವಿನ ಹಿಂಡಿಯನ್ನು (Neem Powder) ಅವಶ್ಯವಾಗಿ ಬೆರೆಸಿ.
4. ಎಪ್ಸಮ್ ಸಾಲ್ಟ್
4. ಎಪ್ಸಮ್ ಸಾಲ್ಟ್
ಎಲೆಗಳು ಗಾಢ ಹಸಿರು ಬಣ್ಣದಲ್ಲಿ ಹೊಳೆಯಲು ನೈಟ್ರೋಜನ್ ಮತ್ತು ಮೆಗ್ನೀಶಿಯಂ ಸಮೃದ್ಧವಾಗಿರುವ 'ಎಪ್ಸಮ್ ಸಾಲ್ಟ್' (Epsom Salt) ಅನ್ನು ಒಂದು ಚಮಚ ಮಣ್ಣಿಗೆ ಸೇರಿಸಿ. ಎಪ್ಸಮ್ ಸಾಲ್ಟ್ ಇಲ್ಲದಿದ್ದರೆ, ಬಳಸಿದ 3-4 ಚಮಚ ಚಹಾ ಪುಡಿಯನ್ನು (Tea Powder) ಗೊಬ್ಬರವಾಗಿ ಬಳಸಬಹುದು.
5. ಕುಂಡ ಮತ್ತು ಆಸರೆ
5. ಕುಂಡ ಮತ್ತು ಆಸರೆ
ಗಿಡಕ್ಕೆ ಸ್ವಲ್ಪ ದೊಡ್ಡ ಗಾತ್ರದ ಮತ್ತು ಕೆಳಭಾಗದಲ್ಲಿ ನೀರು ಹೋಗಲು ರಂಧ್ರಗಳಿರುವ ಕುಂಡವನ್ನು ಆರಿಸಿ. ಕುಂಡದ ಮಧ್ಯದಲ್ಲಿ ಒಂದು ಮಾಸ್ ಸ್ಟಿಕ್ (Moss Stick) ಅಥವಾ ಪೈಪ್ ಅನ್ನು ಆಸರೆಯಾಗಿ ನೀಡಿದರೆ ಗಿಡ ಅದರ ಮೇಲೆ ಹಬ್ಬಿ ನೋಡಲು ಸುಂದರವಾಗಿ ಕಾಣುತ್ತದೆ.
6. ಗಿಡ ಸೊಂಪಾಗಿ ಬೆಳೆಯಲು
6. ಗಿಡ ಸೊಂಪಾಗಿ ಬೆಳೆಯಲು
ಮನಿ ಪ್ಲಾಂಟ್ ಅನ್ನು ನೇರವಾದ ಬಿಸಿಲಿನಲ್ಲಿ ಇಡಬೇಡಿ. ಬಾಲ್ಕನಿ ಅಥವಾ ಮನೆಯೊಳಗೆ ಬೆಳಕು ಬೀಳುವ ನೆರಳಿನ ಜಾಗದಲ್ಲಿ ಇಡಿ. ಮಣ್ಣಿನ ಮೇಲ್ಪದರ ಒಣಗಿದಾಗ ಮಾತ್ರ ನೀರು ಹಾಕಿ. ಹೊಸದಾಗಿ ಗಿಡ ನೆಟ್ಟ ಮೊದಲ ಎರಡು ತಿಂಗಳು ಅಕ್ಕಿ ತೊಳೆದ ನೀರನ್ನು ಹಾಕಿದರೆ ಗಿಡ ಸೊಂಪಾಗಿ ಬೆಳೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

