Dupatta Reuse: ಹಳೆ ದುಪಟ್ಟಾಗಳಿಂದ ಡಿಸೈನರ್ ಬ್ಲೌಸ್! ಕಡಿಮೆ ಖರ್ಚಲ್ಲಿ ಹೊಸ ಲುಕ್
Upcycle old dupattas: ಫ್ಯಾಷನ್ ಲೋಕದಲ್ಲಿ ದಿನಕ್ಕೊಂದು ಹೊಸ ಟ್ರೆಂಡ್ ಬರುತ್ತೆ. ಆದ್ರೆ, ಚೆನ್ನಾಗಿ ಕಾಣೋಕೆ ಪ್ರತಿ ಸಲನೂ ಹೊಸ ಬಟ್ಟೆನೇ ಬೇಕಂತಿಲ್ಲ. ಮನೆಯಲ್ಲಿರೋ ಹಳೆ ದುಪಟ್ಟಾಗಳಿಂದಾನೇ ಸೂಪರ್ ಆಗಿರೋ ಬ್ಲೌಸ್‌ಗಳನ್ನು ಡಿಸೈನ್ ಮಾಡ್ಕೋಬಹುದು. ಅದು ಹೇಗೆ ಅಂತ ನೋಡೋಣ ಬನ್ನಿ.

ಹಳೆ ದುಪಟ್ಟಾಗಳಿಂದ ಹೊಸ ಬ್ಲೌಸ್‌ಗಳು
ಮನೆಯಲ್ಲಿ ಸುಮ್ಮನೆ ಬಿದ್ದಿರೋ ಹಳೆ ದುಪಟ್ಟಾಗಳು ಇರುತ್ತವೆ. ಸೂಟ್ ಹರಿದು ಹೋದ್ರೂ, ಬಣ್ಣ ಮಾಸಿದ್ರೂ ದುಪಟ್ಟಾ ಮಾತ್ರ ಹಾಗೇ ಇರುತ್ತೆ. ಇಂಥ ದುಪಟ್ಟಾಗಳನ್ನ ಬಿಸಾಡೋ ಬದಲು, ಅದ್ರಿಂದಾನೇ ಸುಂದರವಾದ ಬ್ಲೌಸ್ ಡಿಸೈನ್ ಮಾಡಿಸ್ಕೊಂಡ್ರೆ ದುಡ್ಡು ಉಳಿಯುತ್ತೆ, ನಿಮಗೊಂದು ಯೂನಿಕ್ ಸ್ಟೈಲ್ ಕೂಡ ಸಿಗುತ್ತೆ. ದುಪಟ್ಟಾ ಮೇಲಿರೋ ಎಂಬ್ರಾಯ್ಡರಿ, ಪ್ರಿಂಟ್ಸ್, ಮಿರರ್ ವರ್ಕ್ ಬಳಸಿ ಬ್ಲೌಸ್ ಹೊಲಿಸಿದ್ರೆ, ಅದು ದುಬಾರಿ ಡಿಸೈನರ್ ಬ್ಲೌಸ್ ಥರ ಕಾಣುತ್ತೆ.
ಶರ್ಟ್ ಸ್ಟೈಲ್ ಬ್ಲೌಸ್
ಹೆವಿ ಡಿಸೈನ್ ಬ್ಲೌಸ್
ಕೆಲವು ಸೂಟ್‌ಗಳ ಜೊತೆ ಪಟ್ಟು, ಬನಾರಸಿ, ಸಿಲ್ಕ್ ದುಪಟ್ಟಾಗಳು ಬಂದಿರುತ್ತವೆ. ಇವು ಬೇಗ ಹಳೆಯದಾಗಲ್ಲ, ಹರಿಯೋದು ಇಲ್ಲ. ಇಂಥ ದುಪಟ್ಟಾಗಳನ್ನು ಬಳಸಿ ಬೇರೆ ಸೀರೆ ಅಥವಾ ಲೆಹೆಂಗಾ ಮೇಲೆ ಹಾಕಿಕೊಳ್ಳಲು ಸ್ಟೈಲಿಶ್ ಬ್ಲೌಸ್ ಡಿಸೈನ್ ಮಾಡಿಸಬಹುದು. ದುಪಟ್ಟಾದ ಪಟ್ಟು ಬಾರ್ಡರ್ ಅನ್ನು ಬ್ಲೌಸ್‌ನ ಕುತ್ತಿಗೆ, ತೋಳಿಗೆ ಬಳಸಿದರೆ ಲುಕ್ ಸಖತ್ತಾಗಿರುತ್ತೆ. ನೋಡೋಕೆ ಹೊಸ ಬ್ಲೌಸ್ ತರಾನೇ ಕಾಣುತ್ತೆ.
ಮಾಡರ್ನ್ ಬ್ಲೌಸ್
ಪ್ರಿಂಟೆಡ್ ಬ್ಲೌಸ್‌ಗಳು
ಪ್ರಿಂಟೆಡ್ ಅಥವಾ ನೆಟ್ ದುಪಟ್ಟಾಗಳಲ್ಲಿ ಹೈ ನೆಕ್, ಡೀಪ್ ನೆಕ್ ಬ್ಲೌಸ್‌ಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ. ಇವು ಸೀರೆಗೆ ಒಂದು ಮಾಡರ್ನ್ ಟಚ್ ಕೊಡುತ್ತವೆ. ಹಾಗೆಯೇ, ಹಗುರವಾದ ದುಪಟ್ಟಾಗಳಲ್ಲಿ ಸಿಂಪಲ್ ಸ್ಲೀವ್‌ಲೆಸ್ ಅಥವಾ ಬೋಟ್ ನೆಕ್ ಬ್ಲೌಸ್ ಡಿಸೈನ್ ಮಾಡಿಸಿದರೆ, ಕ್ಯಾಶುಯಲ್ ಮತ್ತು ಪಾರ್ಟಿ ವೇರ್ ಎರಡಕ್ಕೂ ಬಳಸಬಹುದು.
ಲೇಸ್ ಬಾರ್ಡರ್ ಬ್ಲೌಸ್‌ಗಳು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.