ಫ್ರಿಡ್ಜ್‌ನಲ್ಲಿ ಕೇವಲ 5 ರೂ.ಗೆ ಸಿಗುವ ಸ್ಪಾಂಜ್ ಇಡಿ, ಆ ನಂತ್ರ ಮ್ಯಾಜಿಕ್ ನೋಡಿ
Dry sponge fridge trick: ಪ್ರತಿ ಮನೆಯಲ್ಲೂ ಎದುರಾಗುವ ದೊಡ್ಡ ಸಮಸ್ಯೆ ಎಂದರೆ ಫ್ರಿಡ್ಜ್‌ನಲ್ಲಿಟ್ಟ ತರಕಾರಿಗಳು ಸಹ ಬೇಗನೆ ಹಾಳಾಗುವುದು. ನೀವೂ ಸಹ ಈ ಸಮಸ್ಯೆಯಿಂದ ಬೇಸತ್ತಿದ್ದೀರಾ? ಹಾಗಿದ್ದಲ್ಲಿ ನಿಮಗಾಗಿ ಒಂದು ಅದ್ಭುತವಾದ 'ಚೀಪ್ ಅಂಡ್ ಬೆಸ್ಟ್' ಕಿಚನ್ ಹ್ಯಾಕ್ ಇಲ್ಲಿದೆ.
ಏನಿದು 'ಡ್ರೈ ಸ್ಪಾಂಜ್ ಟ್ರಿಕ್'?
ಪ್ರಸ್ತುತ ಪ್ರತಿ ಮನೆಯಲ್ಲೂ ಫ್ರಿಡ್ಜ್ ಎಂಬುದು ಸಾಮಾನ್ಯವಾಗಿದೆ. ವಾರಕ್ಕೆ ಬೇಕಾದ ತರಕಾರಿಗಳನ್ನು ತಂದು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಆದರೆ ಎರಡು ದಿನ ಕಳೆಯುವ ಮೊದಲೇ ಸೊಪ್ಪುಗಳು ಬಾಡುವುದು, ಹಸಿಮೆಣಸಿನಕಾಯಿ ಮೆತ್ತಗಾಗುವುದು ಅಥವಾ ಟೊಮೆಟೊಗಳು ಕೊಳೆಯುವುದನ್ನು ನಾವು ನೋಡುತ್ತೇವೆ. ಎಷ್ಟೇ ಬೆಲೆಬಾಳುವ ಫ್ರಿಡ್ಜ್ ಇದ್ದರೂ ಈ ಸಮಸ್ಯೆ ಹಲವರನ್ನು ಕಾಡುತ್ತಿರುತ್ತದೆ. ಇದಕ್ಕೆ ಪರಿಹಾರವಾಗಿ ಈಗ ಅಡುಗೆಮನೆಯ ಒಂದು ಸರಳ ಟಿಪ್ಸ್ ವೈರಲ್ ಆಗುತ್ತಿದೆ. ಅದೇ 'ಡ್ರೈ ಸ್ಪಾಂಜ್ ಟ್ರಿಕ್'. ಕೇಳಲು ವಿಚಿತ್ರವೆನಿಸಿದರೂ, ಇದರ ಹಿಂದಿರುವ ತರ್ಕವನ್ನು ಕೇಳಿದರೆ ನೀವು ಕೂಡ ತಕ್ಷಣವೇ ಇದನ್ನು ಪ್ರಯತ್ನಿಸುತ್ತೀರಿ.

ಅಸಲಿಗೆ ತರಕಾರಿಗಳು ಯಾಕೆ ಹಾಳಾಗುತ್ತವೆ?
ಫ್ರಿಡ್ಜ್ ಉಷ್ಣಾಂಶ ಕಡಿಮೆಯಿದ್ದರೆ ತರಕಾರಿಗಳು ಹಾಳಾಗುವುದಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅಸಲಿ ವಿಲನ್ ಅಂದರೆ ಅದು ತೇವಾಂಶ. ರೆಫ್ರಿಜರೇಟರ್ ಒಳಗೆ, ವಿಶೇಷವಾಗಿ ವೆಜಿಟೇಬಲ್ ಬಾಕ್ಸ್‌ನಲ್ಲಿ ತೇವಾಂಶವು ಹೆಚ್ಚಾಗಿ ಶೇಖರಣೆಯಾಗುತ್ತದೆ. ಈ ಅಧಿಕ ತೇವಾಂಶದಿಂದಾಗಿ ಬ್ಯಾಕ್ಟೀರಿಯಾ ಮತ್ತು ಬೂಸ್ಟ್ ಬೇಗನೆ ಬೆಳೆದು ಸೊಪ್ಪುಗಳನ್ನು ಬಾಡುವಂತೆ ಅಥವಾ ಜಿಗುಟಾಗುವಂತೆ ಮಾಡುತ್ತವೆ.
ಒಣ ಸ್ಪಾಂಜ್ ಮಾಡುವ ಮ್ಯಾಜಿಕ್ ಇಲ್ಲಿದೆ
ಪಾತ್ರೆ ತೊಳೆಯಲು ಬಳಸುವ ಸಾಮಾನ್ಯ ಸ್ಪಾಂಜ್‌ಗೆ ನೀರನ್ನು ಹೀರಿಕೊಳ್ಳುವ ಅದ್ಭುತ ಗುಣವಿರುತ್ತದೆ. ಇದನ್ನು ತರಕಾರಿ ಡ್ರಾಯರ್‌ನಲ್ಲಿ ಇರಿಸಿದಾಗ ಅದು ಮಾಡುವ ಕೆಲಸಗಳು ಹೀಗಿವೆ:
ತೇವಾಂಶ ನಿಯಂತ್ರಣ: ಬಾಕ್ಸ್‌ನಲ್ಲಿ ಸಂಗ್ರಹವಾಗುವ ಹೆಚ್ಚುವರಿ ತೇವಾಂಶವನ್ನು ಸ್ಪಾಂಜ್ ತಕ್ಷಣವೇ ಹೀರಿಕೊಳ್ಳುತ್ತದೆ. ಇದರಿಂದ ತರಕಾರಿಗಳ ಸುತ್ತಮುತ್ತಲಿನ ವಾತಾವರಣ ಒಣಗಿದ್ದು, ಅವು ಹೆಚ್ಚು ಕಾಲ ತಾಜಾವಾಗಿರುತ್ತವೆ.
ದುರ್ವಾಸನೆ ದೂರ: ಫ್ರಿಡ್ಜ್‌ನಲ್ಲಿ ಬರುವ ವಿವಿಧ ಆಹಾರ ಪದಾರ್ಥಗಳ ವಾಸನೆಯನ್ನು ಕೂಡ ಈ ಸ್ಪಾಂಜ್ ಹೀರಿಕೊಂಡು ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
ಕ್ಲೀನಿಂಗ್ ಸುಲಭ: ಡ್ರಾಯರ್ ಅಡಿಯಲ್ಲಿ ನೀರು ನಿಲ್ಲುವುದು, ಕೊಳೆ ಶೇಖರಣೆಯಾಗುವುದು ಅಂತಹ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ತನ್ಮೂಲಕ ಫ್ರಿಡ್ಜ್ ಸ್ವಚ್ಛಗೊಳಿಸುವುದು ಸುಲಭವಾಗುತ್ತದೆ.
ಬಳಸುವುದು ಹೇಗೆ..?
*ಮೊದಲು ಒಂದು ಹೊಸ ಒಣ ಸ್ಪಾಂಜ್ ತೆಗೆದುಕೊಳ್ಳಿ.
*ಅದನ್ನು ತರಕಾರಿ ಡ್ರಾಯರ್‌ನ ಮೂಲೆಗಳಲ್ಲಿ ಅಥವಾ ಪಕ್ಕದಲ್ಲಿ ಇರಿಸಿ.
*ಒಂದು ವೇಳೆ ಫ್ರಿಡ್ಜ್‌ನಲ್ಲಿ ತೇವಾಂಶ ಅತಿಯಾಗಿದ್ದರೆ, ಎರಡು ಸ್ಪಾಂಜ್‌ಗಳನ್ನು ಸಹ ಬಳಸಬಹುದು.
*ಸ್ಪಾಂಜ್ ಅನ್ನು ನೇರವಾಗಿ ತರಕಾರಿಗಳ ಮೇಲೆ ಇಡಬಾರದು, ಫೋಟೋದಲ್ಲಿ ತೋರಿಸಿರುವ ತರಹ ಪಕ್ಕದಲ್ಲಿ ಮಾತ್ರ ಇಡಬೇಕು.
ಯಾವ ತರಕಾರಿಗಳಿಗೆ ಇದು ಬೆಸ್ಟ್?
ಪಾಲಕ್, ಕೊತ್ತಂಬರಿ ಸೊಪ್ಪಿನಂತಹ ಸೊಪ್ಪುಗಳ ಜೊತೆಗೆ ಸ್ಟ್ರಾಬೆರಿ, ಸೌತೆಕಾಯಿಗಳು, ಕ್ಯಾರೆಟ್, ಕ್ಯಾಪ್ಸಿಕಂ ನಂತಹ ತರಕಾರಿಗಳನ್ನು ಈ ಟಿಪ್ಸ್ ಮೂಲಕ ಹೆಚ್ಚು ಕಾಲ ತಾಜಾವಾಗಿ ಇರಿಸಬಹುದು.
ಬೆಲೆಬಾಳುವ ಕಂಟೈನರ್ ಅಥವಾ ವಿಶೇಷ ಬ್ಯಾಗ್‌ಗಳನ್ನು ಕೊಳ್ಳುವ ಅಗತ್ಯವಿಲ್ಲದೆ ಕೇವಲ ಐದು ರೂಪಾಯಿಯ ಸ್ಪಾಂಜ್‌ನಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

