ಈ ವಿಷಯ ಗೊತ್ತಿಲ್ಲದಿದ್ರೆ ಫ್ರಿಡ್ಜ್‌ನಲ್ಲಿಟ್ಟ ಆಹಾರ ವಿಷವಾಗಬಹುದು? ಹೇಗೆ & ಎಷ್ಟು ದಿನ ಇಡಬಹುದು?
ಫ್ರಿಡ್ಜ್‌ನಲ್ಲಿ ಆಹಾರವನ್ನು ಸಂಗ್ರಹಿಸುವುದು ಸಾಮಾನ್ಯವಾದರೂ, ಅದನ್ನು ಸರಿಯಾದ ವಿಧಾನದಲ್ಲಿ ಇಡುವುದು ಮುಖ್ಯ. ವಿಭಿನ್ನ ಆಹಾರಗಳನ್ನು ಎಷ್ಟು ದಿನಗಳವರೆಗೆ ಸುರಕ್ಷಿತವಾಗಿಡಬಹುದು ಮತ್ತು ತಪ್ಪಾದ ಸಂಗ್ರಹಣೆಯಿಂದಾಗುವ ಜೀರ್ಣಕ್ರಿಯೆ ಸಮಸ್ಯೆ ಹಾಗೂ ಫುಡ್ ಪಾಯ್ಸನಿಂಗ್‌ನಂತಹ ಅಪಾಯವಿರುತ್ತದೆ.

ಫ್ರಿಡ್ಜ್
ಈಗಿನ ಕಾಲದಲ್ಲಿ, ಅದರಲ್ಲೂ ಸಿಟಿಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗೋದು ಕಾಮನ್. ಹೀಗಿರುವಾಗ, ಮನೆಯಲ್ಲಿ ಮಾಡಿದ ಅಡುಗೆ ಅಥವಾ ಹೊರಗಿನಿಂದ ತಂದ ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು, ಆಮೇಲೆ ಬಿಸಿ ಮಾಡಿಕೊಂಡು ತಿನ್ನುವುದು ನಮ್ಮೆಲ್ಲರ ಲೈಫ್‌ಸ್ಟೈಲ್‌ನ ಒಂದು ಭಾಗವಾಗಿಬಿಟ್ಟಿದೆ.
ಎಷ್ಟು ದಿನ ಸುರಕ್ಷಿತ?
ಫ್ರಿಡ್ಜ್‌ನಲ್ಲಿ ಆಹಾರವನ್ನು ಎಷ್ಟು ದಿನ ಸುರಕ್ಷಿತವಾಗಿ ಇಡಬಹುದು? ತುಂಬಾ ದಿನ ಇಟ್ಟ ಆಹಾರ ತಿಂದರೆ ಏನಾಗುತ್ತೆ? ನಾನ್-ವೆಜ್, ವೆಜ್ ಅಡುಗೆಗಳನ್ನು ಇಡೋಕೆ ಒಂದೇ ರೀತಿ ಸಮಯ ಸಾಕಾಗುತ್ತಾ? ಈ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲದೆ ಫ್ರಿಡ್ಜ್ ಬಳಸುತ್ತಿದ್ದೇವೆ ಅನ್ನೋದೇ ಸತ್ಯ. ಈ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ಕೆಲವು ಮುಖ್ಯ ವಿಷಯಗಳು ಇಲ್ಲಿವೆ.
ಆಹಾರವನ್ನು ಸಂಗ್ರಹಿಸುವ ವಿಧಾನ
ಫ್ರಿಡ್ಜ್‌ನಲ್ಲಿ ಆಹಾರ ಎಷ್ಟು ದಿನ ಇಡಬಹುದು ಅಂತ ತಿಳಿಯೋ ಮೊದಲು, ಅದನ್ನು ಹೇಗೆ ಸರಿಯಾಗಿ ಸ್ಟೋರ್ ಮಾಡಬೇಕು ಅಂತಾನೂ ಗೊತ್ತಿರಬೇಕು. ಅಡುಗೆ ಮಾಡಿದ ಆಹಾರವನ್ನು ಪದೇ ಪದೇ ಸೌಟು ಹಾಕಿ ಕಲಕದೆ, ಒಂದು ಡಬ್ಬಿಗೆ ಹಾಕಿಡಬೇಕು.ತುಂಬಾ ಹೊತ್ತು ಹೊರಗಡೆ ಇಟ್ಟ ಆಹಾರವನ್ನು ನಂತರ ಫ್ರಿಡ್ಜ್‌ನಲ್ಲಿ ಇಟ್ಟರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇರುತ್ತೆ.
ಹಾಗಾಗಿ, ಏರ್-ಟೈಟ್ ಡಬ್ಬಿಗಳಲ್ಲಿ, ಸ್ವಲ್ಪವೂ ನೀರಿನಂಶ ಇಲ್ಲದಂತೆ ಕ್ಲೀನ್ ಆಗಿ ಆಹಾರವನ್ನು ಎತ್ತಿಡಬೇಕು.ಒಂದು ಸಲ ಫ್ರಿಡ್ಜ್‌ನಿಂದ ಹೊರತೆಗೆದು ಬಿಸಿ ಮಾಡಿದ ಆಹಾರದಲ್ಲಿ ಉಳಿದಿದ್ದನ್ನು ಮತ್ತೆ ಫ್ರಿಡ್ಜ್‌ನಲ್ಲಿ ಇಡಬೇಡಿ. ಬೇಕಾದಷ್ಟು ಮಾತ್ರ ತೆಗೆದು ಬಿಸಿ ಮಾಡಿಕೊಳ್ಳಿ. ಹೆಚ್ಚು ದಿನ ಇಡಬೇಕಿದ್ದರೆ ಫ್ರೀಜರ್ ಬಳಸಿ.
ಎಷ್ಟು ದಿನ ಫ್ರಿಡ್ಜ್‌ನಲ್ಲಿ ಇಡಬಹುದು?
ಅನ್ನ, ನಾನ್-ವೆಜ್ ಸಾರುಗಳನ್ನು ಆದಷ್ಟು ಒಂದು ಅಥವಾ ಎರಡು ದಿನಗಳಲ್ಲಿ ಬಳಸಿ ಮುಗಿಸುವುದೇ ಒಳ್ಳೆಯದು. ಬೇಳೆ ಸಾರಿನಂತಹ ಅಡುಗೆಗಳನ್ನು ಸರಿಯಾಗಿಟ್ಟರೆ ನಾಲ್ಕೈದು ದಿನಗಳವರೆಗೆ ಬಳಸಬಹುದು.
ಅಡುಗೆ ಎಣ್ಣೆ ಬಳಕೆ
ಪಾಸ್ತಾ, ಪಿಜ್ಜಾದಂತಹ ಆಹಾರಗಳು ಉಳಿದರೆ, ಅದನ್ನು ಫ್ರಿಡ್ಜ್‌ನಲ್ಲಿಟ್ಟು ಬಳಸದಿರುವುದೇ ಉತ್ತಮ. ಸಲಾಡ್‌ಗಳಾದರೆ 24 ಗಂಟೆ ಇಟ್ಟರೆ ಸಾಕು. ಹಾಗೆಯೇ ತರಕಾರಿ ಪಲ್ಯಗಳನ್ನು ಎರಡು ದಿನಕ್ಕಿಂತ ಹೆಚ್ಚು ಇಟ್ಟರೆ ಅವುಗಳಲ್ಲಿನ ಪೋಷಕಾಂಶಗಳು ನಾಶವಾಗುತ್ತವೆ. ರೊಟ್ಟಿ, ಚಪಾತಿ, ಪರೋಟದಂತಹ ತಿನಿಸುಗಳಿಗೆ ಚೆನ್ನಾಗಿ ತುಪ್ಪ ಅಥವಾ ಎಣ್ಣೆ ಸವರಿದ್ದರೆ, ಅವು ಬೇಗ ಡ್ರೈ ಆಗುವುದಿಲ್ಲ. ಇಲ್ಲದಿದ್ದರೆ ಬೇಗನೆ ಒಣಗಿ ಹೋಗುತ್ತವೆ.
ಇದನ್ನೂ ಓದಿ: ಮೀನಿನ ಸಾರನ್ನು ಎಷ್ಟು ದಿನದವರೆಗೆ ತಿನ್ಬೋದು? ಹೆಚ್ಚು ದಿನಗಳ ಕಾಲ ಕೆಡದಂತಿರಲು ಈ ಟಿಪ್ಸ್ ಪಾಲಿಸಿ!
ಜೀರ್ಣಕ್ರಿಯೆ ಸಮಸ್ಯೆ
ರೆಸ್ಟೋರೆಂಟ್‌ನಿಂದ ತಂದ ಆಹಾರವನ್ನು ಆದಷ್ಟು ಫ್ರಿಡ್ಜ್‌ನಲ್ಲಿಟ್ಟು ಬಳಸಬೇಡಿ. ಒಂದು ವೇಳೆ ಬಳಸಲೇಬೇಕಾದರೆ, ಎರಡು ದಿನಗಳ ಒಳಗೆ ಬಳಸಿ. ಈ ವಿಷಯಗಳಲ್ಲಿ ಎಚ್ಚರಿಕೆ ವಹಿಸದಿದ್ದರೆ, ಜೀರ್ಣಕ್ರಿಯೆ ಸಮಸ್ಯೆಗಳಿಂದ ಹಿಡಿದು ಫುಡ್ ಪಾಯ್ಸನಿಂಗ್‌ವರೆಗೆ ಆಗಬಹುದು.
ಇದನ್ನೂ ಓದಿ: ಪ್ರೆಶರ್ ಕುಕ್ಕರ್ ಬಳಸುವಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ನಿಮ್ಮ ಜೀವಕ್ಕೇ ಅಪಾಯ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

