MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಬಾಲ್ಕನಿಯಲ್ಲಿ ಬೆಳೆದ ನಿಂಬೆ ಗಿಡಕ್ಕೆ ಗೊಂಚಲು ಕಾಯಿ ಬರ್ಬೇಕೆಂದ್ರೆ ಏನು ಮಾಡ್ಬೇಕು?

ಬಾಲ್ಕನಿಯಲ್ಲಿ ಬೆಳೆದ ನಿಂಬೆ ಗಿಡಕ್ಕೆ ಗೊಂಚಲು ಕಾಯಿ ಬರ್ಬೇಕೆಂದ್ರೆ ಏನು ಮಾಡ್ಬೇಕು?

Garden Tips : ಮನೆಯಲ್ಲಿ ಬೆಳೆದ ನಿಂಬೆ ಗಿಡಕ್ಕೆ ಒಂದೇ ಒಂದು ಕಾಯಿ ಬರೋದಿಲ್ಲ. ಹೆಚ್ಚು ಬೆಳೆ ಬರಲಿ ಅಂತ ಜನ ಪಟಿಕ ಬಳಸ್ತಾರೆ. ಆದ್ರೆ ಈ ಪಟಿಕದಿಂದ ನಿಜವಾಗ್ಲೂ ಕಾಯಿ ಬಿಡುತ್ತಾ? ಗಾರ್ಡನ್‌ ಟಿಪ್ಸ್‌ ಇಲ್ಲಿದೆ. 

1 Min read
Author : Roopa Hegde
Published : Apr 14 2026, 11:14 AM IST
Share this Photo Gallery
  • FB
  • TW
  • Linkdin
  • Whatsapp
14
ನಿಂಬೆ ಗಿಡಕ್ಕೆ ಪಟಿಕ
Image Credit : Asianet News

ನಿಂಬೆ ಗಿಡಕ್ಕೆ ಪಟಿಕ

ಪಟಿಕ, ದ್ವಿ ಲವಣಗಳ ಒಂದು ಗುಂಪು. ಇದ್ರಲ್ಲಿ ಪೊಟಾಸಿಯಂ ಸಲ್ಪೇಟ್ ಮತ್ತು ಅಲ್ಯಮಿನಿಯಮ್ ಸಲ್ಪೇಟ್ ಇರುತ್ತದೆ. ಹೆಚ್ಚು ಕಾಯಿ ಬಿಡ್ಲಿ ಎನ್ನುವ ಉದ್ದೇ ಇಟ್ಕೊಂಡು ನೀವು ನಿಂಬೆ ಗಿಡದ ಕೆಳಗೆ ಈ ಪಟಿಕ ಹಾಕಿದಾಗ ಅದು ನಿಮ್ಮ ಗಿಡವನ್ನೇ ಹಾಳು ಮಾಡ್ಬಹುದು. ಇದು ಕೆಲವು ಪರಿಸ್ಥಿತಿಗಳಲ್ಲಿ ಮಣ್ಣಿನ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಪ್ರಮಾಣದ ಅಲ್ಯೂಮಿನಿಯಂ ಸಸ್ಯಗಳಿಗೆ ಹಾನಿಕಾರಕವಾಗಿದೆ ಅನ್ನೋದು ವೈಜ್ಞಾನಿಕವಾಗಿ ಸಾಬೀತಾಗಿದೆ. ವಿಶೇಷವಾಗಿ ಮಣ್ಣಿನ pH ಮಟ್ಟ ಕಡಿಮೆಯಾದಾಗ ಸಮಸ್ಯೆ ಹೆಚ್ಚಾಗುತ್ತದೆ. ಇದ್ರಿಂದ ಗಿಡದ ಬೇರಿನ ಬೆಳವಣಿಗೆ ಕುಂಠಿತವಾಗಬಹುದು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರಬಹುದು.

24
ಪಟಿಕದ ಬಳಕೆ ಹೇಗೆ?
Image Credit : Asianet News

ಪಟಿಕದ ಬಳಕೆ ಹೇಗೆ?

ನಿಂಬೆ ಗಿಡಕ್ಕೆ ಪಟಿಕ ಬಳಸ್ತಿದ್ದರೆ ಸರಿಯಾದ ವಿಧಾನ ತಿಳಿದುಕೊಳ್ಳಿ. ಕಡಿಮೆ ಪ್ರಮಾಣದಲ್ಲಿ ಪಟಿಕವನ್ನು ಬಳಸಬೇಕು. ಒಂದು ಚಿಟಿಕೆ ಪಟಿಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಸ್ಯದ ಮಣ್ಣಿಗೆ ತಿಂಗಳಿಗೊಮ್ಮೆ ಹಾಕ್ಬೇಕು. ಇದು ಮಣ್ಣಿನಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲು ಮತ್ತು ಶಿಲೀಂಧ್ರಗಳ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಟಿಕ, ಸಸ್ಯದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದ, ಅದನ್ನು ಮಿತವಾಗಿ ಮತ್ತು ಎಚ್ಚರಿಕೆಯಿಂದ ಬಳಸಿ.

Related Articles

Related image1
ಮನೆ ಮುಂದೆ ಹಾಕಿದ ಹಸಿಮೆಣಸಿನ ಗಿಡ ಹೂವು-ಕಾಯಿ ಬಿಡ್ತಿಲ್ವಾ? ಈ 5 ಟಿಪ್ಸ್ ಬಳಸಿ ಗೊಂಚಲು ಮೆಣಸಿನಕಾಯಿ ಬೆಳೆಯಿರಿ!
Related image2
ಮನೆಯಲ್ಲೇ 100% Organic ತರಕಾರಿ ಬೆಳೆಯಲು ಹಳ್ಳಿ ರೈತ ನೀಡಿದ ಟಿಪ್ಸ್
34
ನಿಂಬೆ ಗಿಡಕ್ಕೆ ಪಟಿಕ ಬಳಸುವುದ್ರಿಂದ ಆಗುವ ಲಾಭ
Image Credit : Asianet News

ನಿಂಬೆ ಗಿಡಕ್ಕೆ ಪಟಿಕ ಬಳಸುವುದ್ರಿಂದ ಆಗುವ ಲಾಭ

ನಿಂಬೆ ಗಿಡಕ್ಕೆ ಪಟಿಕ ಹಾಕೋದ್ರಿಂದ ಮಣ್ಣು ಸ್ವಲ್ಪ ಗಟ್ಟಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಸಸ್ಯದ ಬೇರು ಬಲಗೊಳ್ಳುತ್ತವೆ. ಗಿಡ ನೇರವಾಗಿ ಬೆಳೆಯಲು ಸಹಾಯವಾಗುತ್ತದೆ. ಇದು ಮಣ್ಣಿನ ಶುದ್ಧೀಕರಣಕ್ಕೂ ಸಹಾಯ ಮಾಡುತ್ತದೆ ಎಂದು ಅನೇಕರು ನಂಬ್ತಾರೆ. ಆದ್ರೆ ಗಿಡಕ್ಕೆ ಪಟಿಕ ಹಾಕಿದ್ರೆ ಉತ್ತಮ ಎನ್ನುವ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹಾಗಾಗಿ ಗಿಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬಳಸಬಾರದು.

44
ನಿಂಬೆ ಗಿಡದ ಎಲೆ ಒಣಗ್ತಿದ್ದರೆ ಹೀಗೆ ಮಾಡಿ
Image Credit : Asianet News

ನಿಂಬೆ ಗಿಡದ ಎಲೆ ಒಣಗ್ತಿದ್ದರೆ ಹೀಗೆ ಮಾಡಿ

ಮನೆಯಲ್ಲಿ ಬೆಳೆದಿರುವ ನಿಂಬೆ ಗಿಡದ ಎಲೆ ಒಣಗಿ, ಹಳದಿ ಬಣ್ಣಕ್ಕೆ ತಿರುಗ್ತಿದ್ದರೆ ನೀವು ಅತಿ ಶೀಘ್ರದಲ್ಲಿಯೇ ಆರೈಕೆ ಶುರು ಮಾಡ್ಬೇಕು. ಹಸುವಿನ ಗೊಬ್ಬರ, ವರ್ಮಿಕಾಂಪೋಸ್ಟ್, ಬೇವಿನ ಕೇಕ್ ಮತ್ತು ಬಾಳೆಹಣ್ಣಿನ ಸಿಪ್ಪೆಗಳಂತಹ ಸಾವಯವ ಗೊಬ್ಬರಗಳು ನಿಂಬೆ ಗಿಡದ ಬೆಳವಣಿಗೆಗೆ ವಿಶೇಷವಾಗಿ ಪ್ರಯೋಜನಕಾರಿ. ಅವು ಮಣ್ಣಿಗೆ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಸಸ್ಯವನ್ನು ನೈಸರ್ಗಿಕವಾಗಿ ಬಲಪಡಿಸುತ್ತವೆ. ಗಿಡದ ಸೊಂಪಾಗಿ ಬೆಳೆದು, ಗಿಡದ ತುಂಬಾ ಕಾಯಿ ಬಿಡಲು ಇದು ನೆರವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಉದ್ಯಾನ
ಜೀವನಶೈಲಿ

Latest Videos
Recommended Stories
Recommended image1
ಕಲ್ಲಂಗಡಿ ಹಣ್ಣಿನ ಬೀಜ ತೆಗೆಯೋದು ಕಷ್ಟ ಅನಿಸ್ತಿದ್ಯಾ? ಈ ಜಪಾನೀಸ್ ಟ್ರಿಕ್ ಟ್ರೈ ಮಾಡಿ
Recommended image2
ಬೀದಿ ಕಾಳಗದ ವೇಳೆ ಗನ್ ಹೊರತೆಗೆದು ಅಪ್ಪನ ರಕ್ಷಿಸಿದ ಪುಟ್ಟ ಮಗಳು: ವೀಡಿಯೋ ಭಾರಿ ವೈರಲ್
Recommended image3
ಬೆಂಗಳೂರು: ಯಾರೂ ಊಹಿಸದ ವಿಚಿತ್ರ ಘಟನೆ, ಶಿಕ್ಷಕಿ ಜತೆ Online ಸ್ನೇಹ, ಕ್ಯಾನ್ಸರ್ ನಾಟಕ, ಕೊನೆಯ ಆಸೆ ದೈಹಿಕ ಸಂಪರ್ಕ!
Related Stories
Recommended image1
ಮನೆ ಮುಂದೆ ಹಾಕಿದ ಹಸಿಮೆಣಸಿನ ಗಿಡ ಹೂವು-ಕಾಯಿ ಬಿಡ್ತಿಲ್ವಾ? ಈ 5 ಟಿಪ್ಸ್ ಬಳಸಿ ಗೊಂಚಲು ಮೆಣಸಿನಕಾಯಿ ಬೆಳೆಯಿರಿ!
Recommended image2
ಮನೆಯಲ್ಲೇ 100% Organic ತರಕಾರಿ ಬೆಳೆಯಲು ಹಳ್ಳಿ ರೈತ ನೀಡಿದ ಟಿಪ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved