ಕೇವಲ ಜಾರ್ ಬಳಸಿ ಕೊತ್ತಂಬರಿ ಸೊಪ್ಪನ್ನು 2 ವಾರಗಳವರೆಗೆ ಫ್ರೆಶ್ ಆಗಿಡೋದು ಹೇಗೆ?
Coriander storage tricks in Kannada: ಕೊತ್ತಂಬರಿ ಸೊಪ್ಪು ಪದೇ ಪದೇ ಹಾಳಾಗುತ್ತಿದೆಯೇ? ಇನ್ನು ಮುಂದೆ ಆ ಚಿಂತೆ ಬೇಡ! ನಿಮ್ಮ ಅಡುಗೆ ಮನೆಯ ಈ ಹಸಿರು ಸಂಪತ್ತನ್ನು 2 ವಾರಗಳ ಕಾಲ ಹಸಿರಾಗಿಯೇ ಇರಿಸಲು ಇಲ್ಲಿದೆ ಸುಲಭ ದಾರಿ.

ಟ್ರಿಮ್ ಮಾಡಿ ಮತ್ತು ಹೈಡ್ರೇಟ್ ಮಾಡಿ
ನಿಮ್ಮ ಕೊತ್ತಂಬರಿ ಸೊಪ್ಪನ್ನು ಕೇವಲ ತರಕಾರಿಯಂತೆ ನೋಡಬೇಡಿ, ತಾಜಾ ಹೂವುಗಳಂತೆ ಭಾವಿಸಿ. ಒಂದು ಜಾರ್ ತೆಗೆದುಕೊಂಡು ಅದರಲ್ಲಿ ಒಂದು ಇಂಚಿನಷ್ಟು ನೀರು ತುಂಬಿಸಿ. ಈಗ ಕೊತ್ತಂಬರಿ ಕಟ್ಟಿನ ಕಾಂಡದ ತುದಿಗಳನ್ನು ಸ್ವಲ್ಪ ಕತ್ತರಿಸಿ, ಅದು ಹೆಚ್ಚು ಕಾಲ ತಾಜಾವಾಗಿರಲು ಆ ಜಾರ್‌ನಲ್ಲಿ ಇರಿಸಿ.
ಕಟ್ಟನ್ನು ಮುಚ್ಚಿ (ಕವರ್ ಮಾಡಿ)
ಒಮ್ಮೆ ಜಾರ್‌ನಲ್ಲಿ ಇಟ್ಟ ನಂತರ, ಜಾರ್‌ನ ಮೇಲ್ಭಾಗದಿಂದ ಅಂದರೆ ಕೊತ್ತಂಬರಿ ಎಲೆಗಳ ಮೇಲೆ ಪ್ಲಾಸ್ಟಿಕ್ ಕವರ್‌ನಿಂದ ಟೋಪಿಯಂತೆ ಮುಚ್ಚಿ, ಕವರ್ ಅನ್ನು ಗಟ್ಟಿಯಾಗಿ ಎಳೆದು ಕಟ್ಟಬೇಡಿ. ಎಲೆಗಳ ಸುತ್ತ ಸ್ವಲ್ಪ ಗಾಳಿ ಇರಲಿ. ಇಲ್ಲದಿದ್ದರೆ ಎಲೆಗಳು ಕೊಳೆಯಬಹುದು. ನಂತರ ಫ್ರಿಡ್ಜ್‌ನಲ್ಲಿಡಿ.
ನೀರನ್ನು ಬದಲಾಯಿಸಿ (ರಿಫ್ರೆಶ್ ಮಾಡಿ)
ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯಲು ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆಯಾದರೂ ನೀರನ್ನು ಬದಲಾಯಿಸಲು ನೆನಪಿಡಿ. ಇದು ಕೊತ್ತಂಬರಿ ಸೊಪ್ಪನ್ನು ಎರಡು ವಾರಗಳವರೆಗೆ ತಾಜಾ ಮತ್ತು ಹಸಿರಾಗಿರಿಸುತ್ತದೆ.
ಡ್ರೈ ಸ್ಟೋರೇಜ್
ಕೊತ್ತಂಬರಿ ಸೊಪ್ಪನ್ನು ಜಾರ್‌ನಲ್ಲಿ ಸಂಗ್ರಹಿಸುವುದು ಅನುಕೂಲಕರವಾಗಿಲ್ಲದಿದ್ದರೆ, ಅದನ್ನು ಪೇಪರ್ ಟವೆಲ್‌ನಲ್ಲಿ ಸುತ್ತುವ ಮೊದಲು ಕಟ್ಟು ಸಂಪೂರ್ಣವಾಗಿ ಒಣಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಮತ್ತು ಅದನ್ನು ಫ್ರಿಡ್ಜ್‌ನೊಳಗೆ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ. ಪೇಪರ್ ಟವೆಲ್ ಕೊತ್ತಂಬರಿಯನ್ನು ಒಣಗಿರಿಸುತ್ತದೆ, ಇದರಿಂದ ಎಲೆಗಳು ಕೊಳೆಯುವುದಿಲ್ಲ.
ಹಣ್ಣಾಗಿರುವ ಎಲೆ ತೆಗೆದುಹಾಕಿ
ಯಾವುದೇ ಸೊಪ್ಪನ್ನು ಫ್ರಿಡ್ಜ್‌ನಲ್ಲಿ ಇಡುವ ಮೊದಲು ಅದರಲ್ಲಿ ಯಾವುದಾದರೂ ಎಲೆಗಳು ಹಣ್ಣಾಗಿದ್ದರೆ ಅಥವಾ ಕೊಳೆಯುತ್ತಿದ್ದರೆ ಅವುಗಳನ್ನು ತಕ್ಷಣ ತೆಗೆದುಹಾಕಿ. ಏಕೆಂದರೆ ಒಂದು ಕೊಳೆತ ಎಲೆ ಇಡೀ ಕಟ್ಟನ್ನು ಹಾಳು ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

