ನಿಂಬೆಹಣ್ಣನ್ನು ತಿಂಗಳಾನುಗಟ್ಟಲೇ ಶೇಖರಿಸಿಡೋದು ಹೇಗೆ? ಇಲ್ಲಿದೆ ಟಿಪ್ಸ್!
How to keep lemons fresh: ಕೆಲವೇ ದಿನಗಳಲ್ಲಿ ನಿಂಬೆಹಣ್ಣುಗಳು ಒಣಗಲು, ಮೃದುವಾಗಲು ಅಥವಾ ಬೂಸ್ಟ್ ಬರುವುದು ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಇಂದು ನಾವು ಮನೆಯಲ್ಲಿ ನಿಂಬೆಹಣ್ಣನ್ನು ದೀರ್ಘಕಾಲ ಫ್ರೆಶ್ ಆಗಿಡುವುದು ಹೇಗೆ ಎಂದು ನಿಮಗೆ ಹೇಳಲಿದ್ದೇವೆ.

ಫ್ರೆಶ್ ಆಗಿಡುವುದು ಒಂದು ರೀತಿ ಸವಾಲು
ಟೀ, ಸಲಾಡ್, ಜ್ಯೂಸ್, ಕರಿ ಯಾವುದೇ ಆಗಿರಲಿ ನಿಂಬೆಹಣ್ಣು ಎಲ್ಲಾ ಅಡುಗೆಯ ರುಚಿ ಹೆಚ್ಚಿಸುತ್ತದೆ. ಅದಕ್ಕಾಗಿಯೇ ಜನರು ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ನಿಂಬೆಹಣ್ಣುಗಳು ಒಣಗಲು, ಮೃದುವಾಗಲು ಅಥವಾ ಬೂಸ್ಟ್ ಬರುವುದು ಹೆಚ್ಚಾಗಿ ಕಂಡುಬರುತ್ತದೆ. ಆಗ ಅವುಗಳನ್ನು ದೀರ್ಘಕಾಲದವರೆಗೆ ಫ್ರೆಶ್ ಆಗಿಡುವುದು ಒಂದು ರೀತಿ ಸವಾಲಾಗುತ್ತದೆ. ನೀವು ಸಹ ಈ ಸಮಸ್ಯೆ ಎದುರಿಸುತ್ತಿದ್ದರೆ ಮತ್ತು ಪರಿಹಾರ ಬಯಸಿದರೆ ಇಂದು ಮನೆಯಲ್ಲಿ ನಿಂಬೆಹಣ್ಣುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡುವುದು ಹೇಗೆ ಎಂದು ಹೇಳುತ್ತೇವೆ.
ಮಧ್ಯಮ ಗಾತ್ರದ ನಿಂಬೆಹಣ್ಣು ಖರೀದಿಸಿ
ನಿಂಬೆಹಣ್ಣುಗಳನ್ನು ಖರೀದಿಸುವಾಗ ಅವು ತುಂಬಾ ಮೃದುವಾಗಿರಬಾರದು ಅಥವಾ ಕಲೆಗಳನ್ನು ಹೊಂದಿರಬಾರದು ಎಂದು ಖಚಿತಪಡಿಸಿಕೊಳ್ಳಿ ಮತ್ತು ಮಧ್ಯಮ ಗಾತ್ರದ ನಿಂಬೆಹಣ್ಣುಗಳನ್ನು ಮಾತ್ರ ಖರೀದಿಸಿ. ಏಕೆಂದರೆ ಅವು ದೀರ್ಘಕಾಲದವರೆಗೆ ತಾಜಾವಾಗಿರುತ್ತವೆ.
ತೊಳೆಯಬೇಡಿ
ಹೆಚ್ಚಿನ ಜನರು ನಿಂಬೆಹಣ್ಣುಗಳನ್ನು ಖರೀದಿಸಿದ ತಕ್ಷಣ ತೊಳೆಯುತ್ತಾರೆ. ಇದರಿಂದ ಅವುಗಳು ಒದ್ದೆಯಾಗಬಹುದು ಮತ್ತು ಅವು ಬೇಗನೆ ಹಾಳಾಗಬಹುದು. ಆದ್ದರಿಂದ ಅವುಗಳನ್ನು ಬಳಸುವ ಮೊದಲು ಮಾತ್ರ ತೊಳೆಯಿರಿ.
ಫ್ರಿಜ್‌ನಲ್ಲಿ ನಿಂಬೆಹಣ್ಣು ಸಂಗ್ರಹಿಸುವುದು ಹೇಗೆ?
ನಿಂಬೆಹಣ್ಣುಗಳನ್ನು ಫ್ರಿಜ್‌ನಲ್ಲಿ ಸಂಗ್ರಹಿಸುವಾಗ ಅವುಗಳನ್ನು ಗಾಳಿಯಾಡದ ಡಬ್ಬಿಯಲ್ಲಿ ಅಥವಾ ಜಿಪ್‌ಲಾಕ್ ಬ್ಯಾಗ್‌ನಲ್ಲಿ ಸಂಗ್ರಹಿಸಿ. ಈ ವಿಧಾನವು ಅವುಗಳನ್ನು 3 ರಿಂದ 4 ವಾರಗಳವರೆಗೆ ತಾಜಾವಾಗಿರಿಸುತ್ತದೆ.
ಉಪ್ಪು ಅಥವಾ ಅಡುಗೆ ಸೋಡಾ ಬಳಸಿ
ನಿಂಬೆಹಣ್ಣುಗಳು ಹೆಚ್ಚು ಕಾಲ ತಾಜಾವಾಗಿರಲು ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಅಥವಾ ಅಡುಗೆ ಸೋಡಾ ಸೇರಿಸಿ. ಇದರಲ್ಲಿ ಚೆನ್ನಾಗಿ ತೊಳೆದು ಒಣಗಿಸಿ. ಇದು ನಿಂಬೆಹಣ್ಣುಗಳನ್ನು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ.
ನಿಂಬೆ ಹೋಳನ್ನು ತೆರೆದ ಸ್ಥಳದಲ್ಲಿ ಬಿಡಬೇಡಿ
ನಿಂಬೆಹಣ್ಣು ಕಟ್ ಮಾಡಿಟ್ಟರೆ ಅದನ್ನು ತೆರೆದ ಸ್ಥಳದಲ್ಲಿ ಬಿಡಬೇಡಿ. ಅದನ್ನು ತಾಜಾವಾಗಿಡಲು, ಕತ್ತರಿಸಿದ ಜಾಗಕ್ಕೆ ಸ್ವಲ್ಪ ಉಪ್ಪು ಹಾಕಿ ರೆಫ್ರಿಜರೇಟರ್‌ನಲ್ಲಿ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ. ಇದು ನಿಂಬೆ ಬೇಗನೆ ಹಾಳಾಗುವುದನ್ನು ತಡೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

