ಚಳಿಗಾಲದಲ್ಲಿ ಟ್ಯಾಂಕ್‌ನಲ್ಲಿರುವ ನೀರು ಬಿಸಿಯಾಗಿರಬೇಕಾದ್ರೆ ಸರಳ ಟಿಪ್ಸ್ ಫಾಲೋ ಮಾಡಿ
Water Tank Insulation: ಚಳಿಗಾಲದಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳಲ್ಲಿ ನೀರು ಅತಿಯಾಗಿ ತಣ್ಣಗಾಗುವುದನ್ನು ತಡೆಯಲು ಹಲವು ಸುಲಭ ವಿಧಾನಗಳಿವೆ. ವಿದ್ಯುತ್ ಅಥವಾ ಗೀಸರ್ ಇಲ್ಲದೆಯೇ ಸರಳ ಉಪಾಯಗಳಿಂದ ನೀರನ್ನು ಬೆಚ್ಚಗಿಡಬಹುದು.

ಚಳಿಗಾಲ
ರಾಜ್ಯದ ಜನತೆ ಚಳಿಗೆ ನಡಗುತ್ತಿದ್ದು, ಬೆಳಗ್ಗೆ ಏಳೋದು ಒಂದು ಸವಾಲು. ಎದ್ದ ನಂತರ ಸ್ನಾನ ಮಾಡೋದು ಮತ್ತೊಂದು ಸವಾಲಿನ ಕೆಲಸವಾಗಿದೆ. ಬಿಸಿನೀರು ಇದ್ರೂ ಕೆಲವರು ಸ್ನಾನಕ್ಕೆ ಹಿಂದೇಟು ಹಾಕುತ್ತಾರೆ. ಸಿಂಕ್, ಬಾತ್‌ರೂಮ್ ನಲ್ಲಿ ತಿರುಗಿಸಿದ್ರೆ ಐಸ್‌ನಂತಹ ನೀರು ಬರುತ್ತದೆ. ಛಾವಣಿ ಮೇಲೆ ಟ್ಯಾಂಕ್ ಇರೋದರಿಂದ ನೀರು ತುಂಬಾನೇ ತಂಪಾಗಿರುತ್ತದೆ.
ತಂಪಾದ ನೀರು
ಛಾವಣಿಯಿಂದ ಬರುವ ನೀರು ಮುಟ್ಟಲು ಸಹ ಭಯಪಡುವಂತಾಗಿದೆ. ಬೆಳಗ್ಗೆ ಅಥವಾ ರಾತ್ರಿ ಟ್ಯಾಂಕ್ ನೀರು ಬಳಸಬೇಕಾದ್ರೆ ನೂರು ಸಲ ಯೋಚನೆ ಮಾಡಬೇಕಾಗುತ್ತದೆ. ಕೆಲವರು ಟ್ಯಾಂಕ್‌ಗೆ ಇಮ್ಮರ್ಶನ್ ರಾಡ್ ಬಳಕೆ ಮಾಡುವ ಮೂಲಕ ನೀರು ಬಿಸಿ ಮಾಡಿಕೊಳ್ಳುತ್ತಾರೆ. ಈ ಬಳಕೆಯಿಂದ ವಿದ್ಯುತ್ ಬಿಲ್ ಹೆಚ್ಚಾಗೋದರಿಂದ ಮಧ್ಯಮ ವರ್ಗದ ಕುಟುಂಬಗಳು ಸ್ನಾನಗೃಹದಲ್ಲಿ ಗೀಸರ್ ಅಳವಡಿಸುವುದು ಅಸಾಧ್ಯವಾಗಿದೆ. ಆದ್ರೆ ಕೆಲವು ವಿಧಾನಗಳ ಮೂಲಕ ನೀರನ್ನು ಬಿಸಿಯಾಗಿರುವಂತೆ ಮಾಡಿಕೊಳ್ಳಬಹುದು
ಥರ್ಮೋಕೋಲ್ ಜಾಕೆಟ್
ಛಾವಣೆ ಮೇಲಿರಿಸಿರುವ ಟ್ಯಾಂಕ್‌ಗೆ ಥರ್ಮೋಕೋಲ್ ಜಾಕೆಟ್ ಬಳಸಬಹುದು. ನೀರಿನ ಟ್ಯಾಂಕ್ ಸುತ್ತಲೂ ಥಮೋಕೊಲ್‌ಗಳಿಂದ ಕವರ್ ಮಾಡಿ. ಥರ್ಮೋಕೋಲ್ ಟ್ಯಾಂಕಿನೊಳಗೆ ಶೀತಗಾಳಿ ಹೋಗುವುದನ್ನು ತಡೆದು ನೀರನ್ನು ಬಿಸಿಯಾಗಿರಿಸುತ್ತದೆ. ಇದಕ್ಕೆ ಯಾವುದೇ ರೀತಿಯ ವಿದ್ಯುತ್ ಅಥವಾ ಗ್ಯಾಸ್ ಬೇಕಾಗಲ್ಲ. ಥರ್ಮೋಕೋಲ್ ನೀರಿನ ಶಾಖ ಉಳಿಸಿಕೊಂಡು ಹೆಚ್ಚು ತಂಪಾಗದಂತೆ ನೋಡಿಕೊಳ್ಳುತ್ತದೆ.
ಬಬಲ್ ಹೊದಿಕೆ
ಮನೆಯಲ್ಲಿ ಪ್ಯಾಕೇಜಿಂಗ್ ಬಬಲ್ ಇದ್ರೆ ಅದನ್ನು ಎಸೆಯಬೇಡಿ. ಈ ಬಬಲ್ ಕವರ್‌ನ್ನು ನೀರಿನ ಟ್ಯಾಂಕ್‌ಗೆ ಸುತ್ತಬೇಕು. ಈ ಬಬಲ್ ಹೊದಿಕೆ ತಣ್ಣನೆ ಗಾಳಿ ಟ್ಯಾಂಕ್ ಒಳಗೆ ಹೋಗದಂತೆ ತಡೆಯುತ್ತದೆ. ಎರಡು ಅಥವಾ ಮೂರು ಪದರುಗಳಲ್ಲಿ ಬಿಗಿಯಾಗಿ ಸುತ್ತೋದರಿಂದ ನೀರು ಬಿಸಿಯಾಗಿರುತ್ತದೆ.
ಶೆಡ್ ಅಥವಾ ಕವರ್
ಟ್ಯಾಂಕ್ ತೆರೆದ ಛಾವಣಿಯಲ್ಲಿದ್ರೆ ಚಳಿಗಾಲದಲ್ಲಿ ನೀರು ಹೆಚ್ಚು ತಂಪಾಗಿರುತ್ತದೆ. ಹಾಗಾಗಿ ಟ್ಯಾಂಕ್‌ನ್ನು ಟಾರ್ಪಾಲಿನ್, ಮರದ ಶೆಡ್ ಅಥವಾ ಸಣ್ಣ ಟಿನ್ ಶೆಡ್‌ನಿಂದ ಮುಚ್ಚಿರಿ. ಇದು ನೀರು ತಂಪಾಗದಂತೆ ನೋಡಿಕೊಳ್ಳುತ್ತದೆ. ಟ್ಯಾಂಕ್ ಒಳಗಿನ ತಾಪಮಾನವನ್ನು ಶೆಡ್ ಅಥವಾ ಕವರ್ ನಿಯಂತ್ರಣದಲ್ಲಿಡುತ್ತದೆ. ಗ್ರಾಮೀಣ ಭಾಗದ ಜನರು ಟ್ಯಾಂಕ್‌ಗಳನ್ನು ಮುಚ್ಚಲು ಹಳೆಯು ಗೋಣಿ ಚೀಲಗಳನ್ನು ಬಳಸುತ್ತಾರೆ.
ಇದನ್ನೂ ಓದಿ: ಈಗಲೇ ಎಚ್ಚೆತ್ತುಕೊಳ್ಳಿ.. ಅಡುಗೆಮನೆಯಲ್ಲಿರುವ ಈ 5 ವಸ್ತು ಸೈಲೆಂಟ್ ಕಿಲ್ಲರ್ಸ್
ಗಾಢ ಬಣ್ಣ
ನೀರಿನ ಟ್ಯಾಂಕ್‌ಗೆ ಗಾಢವಾದ ಬಣ್ಣ ಬಳೆಯೋದರಿಂದ ನೀರಿನ ತಾಪಮಾನ ನಿಯಂತ್ರಣದಲ್ಲಿರುತ್ತದೆ. ಎರಡ್ಮೂರು ಲೇಯರ್‌ಗಳಲ್ಲಿ ಬಣ್ಣ ಬಳೆಯೋದರಿಂದ ಚಳಿಗಾಲದಲ್ಲಿ ನೀರು ಬಿಸಿಯಾಗಿಯೂ ಮತ್ತು ಬೇಸಿಗೆಗಾಲದಲ್ಲಿ ತಂಪಾಗಿಯೂ ಇರುತ್ತದೆ. ಛಾವಣಿಯ ಮೇಲೆ ಉತ್ತಮ ಸೂರ್ಯನ ಬೆಳಕು ಇದ್ದರೆ, ಟ್ಯಾಂಕ್ ಅನ್ನು ಆ ಬದಿಯಲ್ಲಿ ಇರಿಸುವದರಿಂದಲೂ ನೀರನ್ನು ಬಿಸಿಯಾಗಿರಿಸಬಹುದು.
ಇದನ್ನೂ ಓದಿ: ಕುಕ್ಕರ್‌ನಿಂದ ನೀರು ಎಂದಿಗೂ ಹೊರಬರಲ್ಲ.. ಅಡುಗೆಮನೆಯಲ್ಲಿರುವ ಈ ಒಂದು ಪದಾರ್ಥ ಸೇರಿಸಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
