- Home
- Life
- ಬಾಗಿಲು, ಕಿಟಕಿಯಿಂದ 'ಕಿರ್' ಎನ್ನುವ ಶಬ್ದ ಬರುತ್ತಾ? ಸ್ವಲ್ಪವೂ ಶ್ರಮಪಡದೆ ಅತೀ ಸುಲಭವಾಗಿ ಸರಿಪಡಿಸುವ ವಿಧಾನವಿದು
ಬಾಗಿಲು, ಕಿಟಕಿಯಿಂದ 'ಕಿರ್' ಎನ್ನುವ ಶಬ್ದ ಬರುತ್ತಾ? ಸ್ವಲ್ಪವೂ ಶ್ರಮಪಡದೆ ಅತೀ ಸುಲಭವಾಗಿ ಸರಿಪಡಿಸುವ ವಿಧಾನವಿದು
How to stop door noise: ಮನೆ ಬಾಗಿಲು ಅಥವಾ ಕಿಟಕಿ ತೆರೆಯುವಾಗ ಮತ್ತು ಮುಚ್ಚುವಾಗ 'ಕಿರ್' ಎನ್ನುವ ಕಿರಿಕಿರಿ ಉಂಟುಮಾಡುವ ಶಬ್ದ ಬರುತ್ತಿದ್ದರೆ, ಅದನ್ನು ಸರಿಪಡಿಸಲು ನೀವು ಹಣ ಖರ್ಚು ಮಾಡುವ ಅಗತ್ಯವಿಲ್ಲ. ಅಂತಹ ಶಬ್ದವನ್ನು ಹೋಗಲಾಡಿಸಲು ಇಲ್ಲಿವೆ ಸರಳ ಮನೆಮದ್ದು...
ಮನೆಯಲ್ಲಿರುವ ಈ ವಸ್ತುಗಳೇ ಸಾಕು
ಮನೆಯಲ್ಲಿರುವ ಈ ವಸ್ತುಗಳೇ ಸಾಕು
ಸಾಮಾನ್ಯವಾಗಿ ಮಳೆಗಾಲದಲ್ಲಿ ಮರದ ಬಾಗಿಲುಗಳು ತೇವಾಂಶದಿಂದಾಗಿ ಉಬ್ಬುತ್ತವೆ ಅಥವಾ ಅವುಗಳ ಕೀಲುಗಳು (Hinges) ತುಕ್ಕು ಹಿಡಿದು ಶಬ್ದ ಮಾಡಲು ಶುರು ಮಾಡುತ್ತವೆ. ರಾತ್ರಿ ವೇಳೆ ಹಾರರ್ ಸಿನಿಮಾಗಳಲ್ಲಿ ಬರುವಂತಹ ಇಂತಹ ಶಬ್ದಗಳು ಕೇಳಿಸಿದರೆ ಭಯಪಡಬೇಡಿ! ಇದನ್ನು ಸರಿಪಡಿಸಲು ನಿಮ್ಮ ಮನೆಯಲ್ಲಿರುವ ಈ ವಸ್ತುಗಳೇ ಸಾಕು..
1. ಸಾಬೂನು (Soap)
1. ಸಾಬೂನು (Soap)
ಶಬ್ದ ಮಾಡುವ ಬಾಗಿಲುಗಳಿಗೆ ಸಾಬೂನು ಒಂದು ಉತ್ತಮ ಪರಿಹಾರ. ಸಾಬೂನು ಲುಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ. ಬಾಗಿಲಿನ ಸ್ಕ್ರೂಗಳು ಮತ್ತು ಫ್ರೇಮ್‌ಗೆ ಬಿಗಿಯಾಗಿರುವ ಅಂಚುಗಳ ಮೇಲೆ ಒಣ ಸಾಬೂನನ್ನು ಚೆನ್ನಾಗಿ ಉಜ್ಜಿ. ಇದರಿಂದ ಬಾಗಿಲು ಸುಲಭವಾಗಿ ಮತ್ತು ಶಬ್ದವಿಲ್ಲದೆ ತೆರೆಯಲು-ಮುಚ್ಚಲು ಸಾಧ್ಯವಾಗುತ್ತದೆ.
2. ಯಾವುದೇ ಎಣ್ಣೆ (Oil)
2. ಯಾವುದೇ ಎಣ್ಣೆ (Oil)
ಬಾಗಿಲಿನ ಶಬ್ದ ನಿಲ್ಲಿಸಲು ಮನೆಯಲ್ಲಿರುವ ಕೊಬ್ಬರಿ ಎಣ್ಣೆ ಅಥವಾ ಅಡುಗೆ ಎಣ್ಣೆಯ ಸಹಾಯ ಪಡೆಯಬಹುದು. ಬಾಗಿಲಿನ ಜಾಯಿಂಟ್‌ಗಳಿಗೆ ಅಥವಾ ಹಿಂಜ್‌ಗಳಿಗೆ ಕೆಲವು ಹನಿ ಎಣ್ಣೆಯನ್ನು ಹಾಕಿದರೆ, ಅದು ಘರ್ಷಣೆಯನ್ನು ಕಡಿಮೆ ಮಾಡಿ ಶಬ್ದವನ್ನು ತಕ್ಷಣವೇ ನಿಲ್ಲಿಸುತ್ತದೆ.
3. ಪೆಟ್ರೋಲಿಯಂ ಜೆಲ್ಲಿ (Petroleum Jelly)
3. ಪೆಟ್ರೋಲಿಯಂ ಜೆಲ್ಲಿ (Petroleum Jelly)
ಚರ್ಮದ ಆರೈಕೆಗೆ ಬಳಸುವ ಪೆಟ್ರೋಲಿಯಂ ಜೆಲ್ಲಿಯನ್ನು (ಉದಾ: ವ್ಯಾಸಲಿನ್) ಬಾಗಿಲಿನ ಕೀಲುಗಳಿಗೆ ಹಚ್ಚಬಹುದು. ನಿಮ್ಮ ಬೆರಳುಗಳಿಂದ ಸ್ವಲ್ಪ ಜೆಲ್ಲಿಯನ್ನು ತೆಗೆದುಕೊಂಡು ಹಿಂಜ್ ಪಿನ್ ಅಥವಾ ನಟ್‌ಗಳಿಗೆ ಹಚ್ಚಿ. ಇದು ದೀರ್ಘಕಾಲದವರೆಗೆ ಶಬ್ದ ಬರದಂತೆ ತಡೆಯುತ್ತದೆ.
4. ಟಾಲ್ಕಂ ಪೌಡರ್ (Talcum Powder)
4. ಟಾಲ್ಕಂ ಪೌಡರ್ (Talcum Powder)
ಬಾಗಿಲಿನ ಕೀಲುಗಳಲ್ಲಿರುವ ಗ್ರೀಸ್ ಅಥವಾ ಎಣ್ಣೆ ಅಂಶ ಒಣಗಿದ್ದರೆ, ಅಲ್ಲಿ ಸ್ವಲ್ಪ ಟಾಲ್ಕಂ ಪೌಡರ್ ಅಥವಾ ಬೇಬಿ ಪೌಡರ್ ಚಿಮುಕಿಸಿ. ಪೌಡರ್‌ನ ಸಣ್ಣ ಕಣಗಳು ಒರಟಾದ ಮೇಲ್ಮೈಯನ್ನು ನಯಗೊಳಿಸಿ ಲುಬ್ರಿಕೆಂಟ್ ಆಗಿ ಕೆಲಸ ಮಾಡುತ್ತವೆ. ಇದು ಶಬ್ದವನ್ನು ಕಡಿಮೆ ಮಾಡಲು ಬಹಳ ಸಹಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
