ಎರಡೇ ಎರಡು ಪದಾರ್ಥ: ಮುಖದ ಕಲೆ, ಬ್ಲ್ಯಾಕ್ಹೆಡ್ಸ್ ಮಾಯ- ತ್ವಚೆ ಫಳಫಳ: ಹೀಗೆ ಮಾಡಿ
ಮುಖದ ಮೇಲಿನ ಬ್ಲ್ಯಾಕ್ಹೆಡ್ಸ್ ಮತ್ತು ಕಪ್ಪು ಕಲೆಗಳನ್ನು ನಿವಾರಿಸಲು ಆಲೂಗಡ್ಡೆ, ಟೊಮ್ಯಾಟೋ, ಅಲೋವಿರಾ ಜೆಲ್ ಮತ್ತು ನಿಂಬೆರಸ ಬಳಸಿ ಮನೆಯಲ್ಲೇ ನೈಸರ್ಗಿಕ ಕ್ರೀಮ್ ತಯಾರಿಸುವ ವಿಧಾನವನ್ನು ಈ ಲೇಖನ ವಿವರಿಸುತ್ತದೆ. ಈ ಸುಲಭವಾದ ಸೌಂದರ್ಯ ಸಲಹೆಯು ಮುಖದ ಹೊಳಪನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಮುಖದ ಸೌಂದರ್ಯಕ್ಕೆ
ಮುಖದ ಮೇಲೆ ಬ್ಲ್ಯಾಕ್ಹೆಡ್ಸ್ ಹೆಚ್ಚಾದರೆ ಮುಖದ ಸೌಂದರ್ಯ ಹಾಳಾಗುತ್ತದೆ. ಜೊತೆಗೆ ಮೊಡವೆ ಇತ್ಯಾದಿ ಕಲೆಗಳು ದೀರ್ಘಕಾಲ ಇದ್ದರೆ ಮುಖದ ಹೊಳಪೇ ಹೋಗಿರುತ್ತದೆ. ಇವುಗಳನ್ನೆಲ್ಲಾ ಮುಚ್ಚುವುದಕ್ಕಾಗಿ ಕೆಲವರು ಮುಖಕ್ಕೆ ಕೆಜಿಗಟ್ಟಲೆ ಮೇಕಪ್ ಮಾಡಿಕೊಂಡು ಇನ್ನಿಲ್ಲದ ತೊಂದರೆಗೆ ಸಿಲುಕುವುದು ಇದೆ. ಕೆಲವರಿಗೆ ಮೇಕಪ್ಗಳೆಲ್ಲಾ ಅಲರ್ಜಿ ಆಗಿ ಸೈಡ್ ಎಫೆಕ್ಟ್ಸ್ ಆಗುವುದು ಇದೆ. ಮತ್ತೆ ಕೆಲವರು ಮೇಕಪ್ ಹಾಕಿಕೊಳ್ಳಲು ಮನಸ್ಸಿಲ್ಲದೇ ಆತ್ಮವಿಶ್ವಾಸವನ್ನೇ ಕುಗ್ಗಿಸಿಕೊಳ್ಳುವವರೂ ಇದ್ದಾರೆ.

ಬ್ಲ್ಯಾಕ್ಹೆಡ್ಸ್ ಮತ್ತು ಕಪ್ಪು ಕಲೆ
ಅಷ್ಟಕ್ಕೂ ಭಾರತೀಯರ ಅಡುಗೆ ಮನೆಯಲ್ಲಿಯೇ ನೈಸರ್ಗಿಕ ಸೌಂದರ್ಯದ ಗುಟ್ಟು ಇದೆ. ಭಾರತದ ಮೂಲವೇ ಆಗಿರುವ ಸಹಸ್ರಾರು ವರ್ಷಗಳ ಹಿಂದಿನ ಆಯುರ್ವೇದ ಮಹತ್ವ ಪಡೆದಿರುವುದು ಇದಕ್ಕಾಗಿದೆ. ಇದೀಗ ಭಾರತದ ಆಯುರ್ವೇದ ವಿದೇಶಗಳಲ್ಲಿ ಫೇಮಸ್ ಆಗ್ತಿರೋ ಕಾರಣದಿಂದ ಭಾರತೀಯರಿಗೆ ಅದರ ಮೇಲೆ ನಂಬಿಕೆ ಬರಲು ಶುರುವಾಗಿರುವುದು ವಿಚಿತ್ರವಾದರೂ ಸತ್ಯವೇ. ಒಟ್ಟಿನಲ್ಲಿ ನಮಗೆ ವಿದೇಶಿಗರೇ ಗಾಡ್ಫಾದರ್, ಗಾಡ್ಮದರ್ ಆಗಬೇಕು. ಅವರು ಒಪ್ಪಿಕೊಂಡರೆ ನಮಗೆ ಎಲ್ಲವೂ ಚೆಂದ, ಅದು ಸತ್ಯ ಎನ್ನುವ ಮನಸ್ಥಿತಿ. ಒಟ್ಟಿನಲ್ಲಿ ವಿದೇಶಿಗರು ಕೂಡ ಸೌಂದರ್ಯಕ್ಕಾಗಿ ಭಾರತೀಯ ಈ ಆಯುರ್ವೇದ ಪದ್ಧತಿಯ ಮೊರೆ ಹೋಗುತ್ತಿದ್ದಾರೆ. ಅದರಲ್ಲಿ ಒಂದು ಬ್ಲ್ಯಾಕ್ಹೆಡ್ಸ್ ಮತ್ತು ಕಪ್ಪು ಕಲೆಗಳ ನಿವಾರಣೆಗೆ ಮದ್ದು.
ಟಿಪ್ಸ್ ಇಲ್ಲಿದೆ
ಸ್ಟಾರ್ ಸುವರ್ಣ ವಾಹಿನಿಯ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸುಲಭದ ಟಿಪ್ಸ್ ಹೇಳಲಾಗಿದೆ. ಇದಕ್ಕೆ ಬೇಕಿರುವುದು ಆಲೂಗಡ್ಡೆ ಮತ್ತು ಟೊಮ್ಯಾಟೋ.
ಮಾಡುವ ವಿಧಾನ ಹೀಗೆ
ಇವೆರಡನ್ನೂ ತಲಾ ಒಂದೊಂದನ್ನು ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ಒಂದು ಬಟ್ಟಲಿನಲ್ಲಿ ರಸವನ್ನು ಶೋಧಿಸಿಕೊಳ್ಳಬೇಕು.
ಲೇಪ ರೆಡಿ
ಬಳಿಕ ಅದರಲ್ಲಿ ಎರಡು ಚಮಚದಷ್ಟನ್ನು ಇನ್ನೊಂದು ಬೌಲ್ಗೆ ಹಾಕಿ ಅದರಲ್ಲಿ ಎರಡು ಚಮಚ ಅಲೋವಿರಾ ಜೆಲ್, ಸ್ವಲ್ಪ ನಿಂಬೆರಸವನ್ನು ಹಾಕಿ ಕೈಬಿಡದೇ ಕಲಕುತ್ತಿರಬೇಕು. ಬಳಿಕ ಅದು ಮಿಕ್ಸ್ ಆಗಿ ಮೃದುವಾದ ಕ್ರೀಮ್ ಆಗುತ್ತದೆ. ಇದನ್ನು ಹಚ್ಚುತ್ತಾ ಬಂದರೆ ಕಲೆ, ಬ್ಲ್ಯಾಕ್ಸ್ಪಾಟ್ ಲೇಪ ರೆಡಿಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

