ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರಾಗಿ ಕರಿಕೋಟು ಧರಿಸಿ ಕಾಣಿಸಿಕೊಂಡಿದ್ದಾರೆ. ಆದರೆ, ಭಾರತೀಯ ಬಾರ್ ಕೌನ್ಸಿಲ್ ಅವರ ವಕೀಲಿ ವೃತ್ತಿಯ ಅರ್ಹತೆಯ ಬಗ್ಗೆ ಪ್ರಶ್ನಿಸಿ, ಪರವಾನಗಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದೆ. ಈಗ ಅವರು ತಮ್ಮ ವಕೀಲಿ ವೃತ್ತಿ ನಡೆಸುವ ಹಕ್ಕನ್ನು ನಿಯಮಗಳ ಪ್ರಕಾರ ಸಾಬೀತುಪಡಿಸಬೇಕಾಗಿದೆ.

ಸಿಎಂ ಖುರ್ಚಿಯಿಂದ ನಾನು ಇಳಿಯುವುದೇ ಇಲ್ಲ, ಏನು ಬೇಕಾದ್ರೂ ಮಾಡಿಕೊಳ್ಳಿ ಎಂದು ಮಮತಾ ಬ್ಯಾನರ್ಜಿ ಹಟ ಹಿಡಿದ ನಡುವೆಯೇ, ಸುವೇಂದು ಅಧಿಕಾರಿ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಮಮತಾ ಈಗ ಮಾಜಿ ಆಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೋರ್ಟ್​ಗೆ ಮಮತಾ ಬ್ಯಾನರ್ಜಿ ಭರ್ಜರಿ ಎಂಟ್ರಿ ಕೊಟ್ಟು ಭಾರಿ ಸದ್ದು ಮಾಡುತ್ತಿದ್ದಾರೆ. ಇಷ್ಟು ವರ್ಷ ಬಿಳಿಯ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಮಮತಾ ಈಗ ಕರಿಕೋಟು ಹಾಕಿಕೊಂಡು ಎಲ್ಲರ ಗಮನ ಸೆಳೆದರು. ಚುನಾವಣಾ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಾದಿಸಲು ಮಮತಾ ಲಾಯರ್​ ಆಗಿ ಕಲ್ಕತ್ತಾ ಹೈಕೋರ್ಟ್​ಗೆ ಎಂಟ್ರಿ ಕೊಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಒಕ್ಕರಿಸಿದ ಗ್ರಹಚಾರ

ಆದರೆ ಗ್ರಹಚಾರ ಅವರನ್ನು ಅಲ್ಲಿಯೂ ಕಾಡಿದೆ. ಅವರಿಗೆ ಈಗ ಮತ್ತೊಂದು ಪರೀಕ್ಷೆ ಎದುರಾಗಿದೆ. ಅದೇನೆಂದರೆ, ವಕೀಲರ ಉಡುಪಿನಲ್ಲಿ ಕಲ್ಕತ್ತಾ ಹೈಕೋರ್ಟ್‌ಗೆ ಹಾಜರಾದ ಕೆಲವೇ ಗಂಟೆಗಳ ನಂತರ, ಭಾರತೀಯ ಬಾರ್ ಕೌನ್ಸಿಲ್ ಅರ್ಥಾತ್​ ವಕೀಲರ ಪರಿಷತ್ತು, ಮಮತಾರ ದಾಖಲೆಯನ್ನು ಕೋರಿದೆ. ವಕೀಲರಾಗಿ ಅವರಿಗೆ ಸಿಕ್ಕಿರುವ ಪರವಾನಗಿ, ವಕೀಲಿಕೆ ಪ್ರಾಕ್ಟೀಸ್​ ಮಾಡಲು, ವಕೀಲರ ಸಮವಸ್ತ್ರ ಧರಿಸಿ ಹಾಜರು ಆಗಲು ಇರುವ ದಾಖಲೆಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದೆ! ಈ ಮಾಹಿತಿಯನ್ನು ಇದೇ 16ರ ಒಳಗೆ ನೀಡುವಂತೆ ರಾಜ್ಯ ವಕೀಲರ ಪರಿಷತ್ತಿನ ಕೌನ್ಸಿಲ್ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಬಿಸಿಐ ಕೋರಿದೆ.

ಏನು ಹೇಳತ್ತೆ ನಿಯಮ?

ಇದಕ್ಕೆ ಕಾರಣವೂ ಇದೆ. ವಕೀಲರ ಸಮವಸ್ತ್ರ ಧರಿಸಿ ಪ್ರಾಕ್ಟೀಸ್​ ಮಾಡಬೇಕು ಎಂದರೆ ಅದಕ್ಕೆ ಅದರದ್ದೇ ಆದ ನಿಯಮಗಳು ಇದೆ. ತಮ್ಮ ಕೇಸ್​ ಅನ್ನು ತಾವೇ ವಾದ ಮಂಡಿಸಲು ಎಲ್ಲಾ ನಾಗರಿಕರಿಗೆ ಹಕ್ಕು ಇದೆ. ಆದರೆ ಸಮವಸ್ತ್ರ ಧರಿಸಿ ತಮ್ಮ ಪರವಾಗಿಯಾಗಲೀ, ಬೇರೆಯವರ ಪರವಾಗಿ ಆಗಲಿ ವಾದಿಸಲು ಬಂದಾಗ ಅದಕ್ಕೆ ಕಾನೂನಿನ ಅಡಿ ಕೆಲವೊಂದು ಷರತ್ತುಗಳು ಇವೆ. ವಕೀಲಿ ವೃತ್ತಿ ನಡೆಸಲು ಸನದು ಪಡೆದುಕೊಂಡಿರಬೇಕು. ಯಾವುದೇ ಒಂದು ಸಂಬಳ ಪಡೆಯುವ ಉದ್ಯೋಗದಲ್ಲಿ ಇದ್ದಾಗ ಈ ರೀತಿ ವಕೀಲಿ ವೃತ್ತಿ ನಡೆಸುವಂತೆ ಇಲ್ಲ. ಒಂದು ವೇಳೆ ಹೀಗೆ ಮಾಡುವುದೇ ಆಗಿದ್ದರೆ, ಆ ಸಂದರ್ಭದಲ್ಲಿ ತಾವು ಪಡೆದುಕೊಂಡಿರುವ ಸನದನ್ನು ಅಮಾನತಿನಲ್ಲಿ ಇಡಬೇಕಾಗುತ್ತದೆ. ವಕೀಲಿಕೆ ಪ್ರಾಕ್ಟೀಸ್​ ಮಾಡಲು ಆ ಬಳಿಕ ಬಯಸಿದರೆ, ಉದ್ಯೋಗಕ್ಕೆ ರಾಜೀನಾಮೆ ನೀಡಿ ಸನದನ್ನು ವಾಪಸು ಪಡೆದುಕೊಳ್ಳಬಹುದು. ಇದಕ್ಕೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.

ಪತ್ರದಲ್ಲಿ ಏನಿದೆ

ಇದಾಗಲೇ ಮಮತಾ ಅವರು 2011 ರಿಂದ 2026 ರವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಅವರು ಹೊಂದಿದ್ದ ಸಾಂವಿಧಾನಿಕ ಸಾರ್ವಜನಿಕ ಹುದ್ದೆಯನ್ನು ಪರಿಗಣಿಸಿ, ಭಾರತೀಯ ಬಾರ್ ಕೌನ್ಸಿಲ್ ಅವರ ದಾಖಲಾತಿ, ಅಭ್ಯಾಸ, ಅಮಾನತು, ಯಾವುದಾದರೂ ಇದ್ದರೆ ಮತ್ತು ಪುನರಾರಂಭದ ವಾಸ್ತವಿಕ ಸ್ಥಿತಿಯನ್ನು ನಿಮ್ಮ ದಾಖಲೆಗಳಿಂದ ಪರಿಶೀಲಿಸಬೇಕೆಂದು ಒತ್ತಾಯಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದೆ. ಮಮತಾ ಬ್ಯಾನರ್ಜಿ ಅವರು, ಭಾರತೀಯ ಬಾರ್ ಕೌನ್ಸಿಲ್ ನಿಯಮಗಳ ಭಾಗ VI, ಅಧ್ಯಾಯ IV, ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು, ಅಧೀನ ನ್ಯಾಯಾಲಯಗಳು, ನ್ಯಾಯಮಂಡಳಿಗಳು ಅಥವಾ ಅಧಿಕಾರಿಗಳ ಮುಂದೆ ಹಾಜರಾಗುವ ವಕೀಲರು ಸೂಚಿಸಲಾದ ರೀತಿಯಲ್ಲಿ ಬ್ಯಾಂಡ್‌ಗಳು ಮತ್ತು ವಕೀಲರ ನಿಲುವಂಗಿಗಳ ನಿಯಮ ಪಾಲನೆ ಮಾಡಿದ್ದಾರೆಯೇ ಎನ್ನುವುದನ್ನು ನೋಡಬೇಕಿದೆ ಎಂದು ಅದರಲ್ಲಿ ತಿಳಿಸಲಾಗಿದೆ.

ಎಲ್ಲಾ ದಾಖಲೆ ನೀಡಬೇಕಿದೆ

ಆದ್ದರಿಂದ ಸದ್ಯ ಮಮತಾ ಬ್ಯಾನರ್ಜಿ ಈ ಎಲ್ಲಾ ದಾಖಲೆ ನೀಡಬೇಕಿದೆ. ಚುನಾವಣೆಯಲ್ಲಿ ಸೋತರೂ ಮುಖ್ಯಮಂತ್ರಿ ನಾನೇ, ಈ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ ಹಾಗೆ, ನಾನು ಎಂದಿಗೂ ವಕೀಲೆ, ನನಗೆ ಯಾವ ರೂಲ್ಸೂ ಅಪ್ಲೈ ಆಗಲ್ಲ ಎಂದು ಕಾನೂನಿನ ಅಡಿ ಹೇಳಲು ಆಗದು. ಒಂದು ವೇಳೆ ಎಲ್ಲಾ ನಿಯಮ ಪಾಲನೆ ಮಾಡಿದ್ದರೆ, ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ಕೊಟ್ಟರೆ ಮಾಜಿ ಸಿಎಂ ದೀದಿ ಇನ್ಮುಂದೆ ಹೈಕೋರ್ಟ್​ ವಕೀಲೆ ಮಮತಾ ಬ್ಯಾನರ್ಜಿ ಆಗಲಿದ್ದಾರೆ.