MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Karnataka Weather Update
Today's Horoscope in Kannada
Dharmasthala Soujanya Case
Rahul Gandhi vs Gyanesh Kumar
Upper Bhadra Project
KR Pet Municipality
Goa Kadamba Era Inscription
Nandini Outlet Lalbagh
Bank Strike News
Karnataka Agriculture News
  • Home
  • Life
  • ಸೇಫ್ ಆಗಿರಬೇಕೆಂದರೆ Googleನಲ್ಲಿ ಈ 5 ವಿಷಯಗಳನ್ನು ಅಪ್ಪಿತಪ್ಪಿಯೂ ಸರ್ಚ್ ಮಾಡಬೇಡಿ!

ಸೇಫ್ ಆಗಿರಬೇಕೆಂದರೆ Googleನಲ್ಲಿ ಈ 5 ವಿಷಯಗಳನ್ನು ಅಪ್ಪಿತಪ್ಪಿಯೂ ಸರ್ಚ್ ಮಾಡಬೇಡಿ!

Google search safety: ಸೈಬರ್ ಅಪರಾಧಿಗಳು ನಿಮ್ಮ ಒಂದು ಸಣ್ಣ ತಪ್ಪು ನಡೆಗಾಗಿ ಕಾಯುತ್ತಿರುತ್ತಾರೆ. ಗೂಗಲ್ ಕೇವಲ ಮಾಹಿತಿಯನ್ನು ನೀಡುವ ವೇದಿಕೆಯಾಗಿದ್ದು, ಅಲ್ಲಿ ಸಿಗುವ ಎಲ್ಲಾ ಮಾಹಿತಿಗಳು ನಿಜವೆಂದು ನಂಬುವುದು ತಪ್ಪು. ಆದ್ದರಿಂದ ಈ ಕೆಳಗಿನ 5 ವಿಷಯಗಳ ಬಗ್ಗೆ ಜಾಗರೂಕರಾಗಿರಿ..

2 Min read
Author : Ashwini HR
Published : Jun 24 2026, 03:15 PM IST
Share this Photo Gallery
  • FB
  • TW
  • Linkdin
  • Whatsapp
16
ನಿಮಗೆ ಗೊತ್ತಿಲ್ಲದಂತೆಯೇ ಕಾಡುತ್ತೆ ಅಪಾಯ
Image Credit : Google

ನಿಮಗೆ ಗೊತ್ತಿಲ್ಲದಂತೆಯೇ ಕಾಡುತ್ತೆ ಅಪಾಯ

ಇಂದು ನಮಗೆ ಯಾವುದೇ ಅನುಮಾನ ಬಂದ್ರೂ ತಕ್ಷಣ ನೆನಪಿಗೆ ಬರುವುದು 'ಗೂಗಲ್ '. ಅಡುಗೆಯಿಂದ ಹಿಡಿದು ಆರೋಗ್ಯದವರೆಗೆ ಎಲ್ಲದಕ್ಕೂ ನಾವು ಗೂಗಲ್ ಮೊರೆ ಹೋಗುತ್ತೇವೆ. ಆದರೆ, ಗೂಗಲ್‌ನಲ್ಲಿ ಪ್ರತಿಯೊಂದು ವಿಷಯವನ್ನು ಹುಡುಕುವುದು ನಿಮಗೆ ಗೊತ್ತಿಲ್ಲದಂತೆಯೇ ದೊಡ್ಡ ಅಪಾಯವನ್ನು ತಂದೊಡ್ಡಬಹುದು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
1. ಕಸ್ಟಮರ್ ಕೇರ್ ನಂಬರ್ಸ್‌ (Customer Care Numbers)
Image Credit : Getty

1. ಕಸ್ಟಮರ್ ಕೇರ್ ನಂಬರ್ಸ್‌ (Customer Care Numbers)

1. ಕಸ್ಟಮರ್ ಕೇರ್ ನಂಬರ್ಸ್‌ (Customer Care Numbers)
ಯಾವುದಾದರೂ ಬ್ಯಾಂಕ್ ಅಥವಾ ಕಂಪನಿಯ ಕಸ್ಟಮರ್ ಕೇರ್ ನಂಬರ್ ಬೇಕಾದಾಗ ನೇರವಾಗಿ ಗೂಗಲ್‌ನಲ್ಲಿ ಹುಡುಕಬೇಡಿ. ಸೈಬರ್ ಕ್ರಿಮಿನಲ್‌ಗಳು ನಕಲಿ ನಂಬರ್‌ಗಳನ್ನು ಗೂಗಲ್‌ನಲ್ಲಿ ಅಪ್‌ಲೋಡ್ ಮಾಡಿರುತ್ತಾರೆ. ನೀವು ಆ ನಂಬರ್‌ಗೆ ಕರೆ ಮಾಡಿದರೆ, ಅವರು ನಿಮ್ಮ ಬ್ಯಾಂಕ್ ವಿವರಗಳನ್ನು ಪಡೆದು ಹಣ ದೋಚುವ ಸಾಧ್ಯತೆ ಇರುತ್ತದೆ. ಯಾವಾಗಲೂ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನಂಬರ್ ಪಡೆಯಿರಿ.

Related Articles

Related image1
ಹಿಂದಿನ ಕಾಲದಲ್ಲಿ ಕೋಟೆಗಳಿಗಾಗಲೀ, ಮನೆಗಳಿಗಾಗಲೀ ಮುಖ್ಯ ದ್ವಾರದಲ್ಲಿ 2 ಬಾಗಿಲುಗಳು ಏಕಿರುತ್ತಿದ್ದವು?
Related image2
ದಕ್ಷಿಣ ಭಾರತದ ಈ ನಗರದಲ್ಲಿ ಜೋರಾಗಿದೆ 'ರಹಸ್ಯ ಡೇಟಿಂಗ್'; ಜಾಗತಿಕ ಮಟ್ಟದಲ್ಲೂ ದೇಶಕ್ಕೆ ಈಗ 3ನೇ ಸ್ಥಾನ!
36
2. ಕ್ರ್ಯಾಕ್ಡ್ ಸಾಫ್ಟ್‌ವೇರ್ ಮತ್ತು ಆ್ಯಪ್‌ಗಳು (Cracked Software and Apps)
Image Credit : Gemini AI

2. ಕ್ರ್ಯಾಕ್ಡ್ ಸಾಫ್ಟ್‌ವೇರ್ ಮತ್ತು ಆ್ಯಪ್‌ಗಳು (Cracked Software and Apps)

2. ಕ್ರ್ಯಾಕ್ಡ್ ಸಾಫ್ಟ್‌ವೇರ್ ಮತ್ತು ಆ್ಯಪ್‌ಗಳು (Cracked Software and Apps)
ದುಬಾರಿ ಆ್ಯಪ್‌ಗಳನ್ನು ಉಚಿತವಾಗಿ ಪಡೆಯಲು 'Cracked Versions' ಅಥವಾ 'Modded Apps'ಗಳಿಗಾಗಿ ಸರ್ಚ್ ಮಾಡಬೇಡಿ. ಇವುಗಳ ಮೂಲಕ ಮಾಲ್‌ವೇರ್ ಅಥವಾ ರಾನ್ಸಮ್‌ವೇರ್‌ನಂತಹ ವೈರಸ್‌ಗಳು ನಿಮ್ಮ ಫೋನ್ ಅಥವಾ ಕಂಪ್ಯೂಟರ್ ಸೇರಿ, ನಿಮ್ಮ ಖಾಸಗಿ ಫೋಟೋ ಮತ್ತು ಡೇಟಾವನ್ನು ಹ್ಯಾಕರ್‌ಗಳಿಗೆ ತಲುಪಿಸುತ್ತವೆ.

46
3. ಆರೋಗ್ಯ ಸಮಸ್ಯೆಗಳು ಮತ್ತು ಸ್ವಯಂ ಚಿಕಿತ್ಸೆ (Health Issues)
Image Credit : Getty

3. ಆರೋಗ್ಯ ಸಮಸ್ಯೆಗಳು ಮತ್ತು ಸ್ವಯಂ ಚಿಕಿತ್ಸೆ (Health Issues)

3. ಆರೋಗ್ಯ ಸಮಸ್ಯೆಗಳು ಮತ್ತು ಸ್ವಯಂ ಚಿಕಿತ್ಸೆ (Health Issues)
ಸಣ್ಣ ಪುಟ್ಟ ಕಾಯಿಲೆಗಳಿಗೂ ಗೂಗಲ್‌ನಲ್ಲಿ ಸರ್ಚ್ ಮಾಡಿ ಭಯಪಡಬೇಡಿ. ಗೂಗಲ್ ವೈದ್ಯರಲ್ಲ, ಅದು ಕೇವಲ ಲಭ್ಯವಿರುವ ಮಾಹಿತಿಯನ್ನು ತೋರಿಸುತ್ತದೆ. ತಪ್ಪು ಮಾಹಿತಿಯಿಂದಾಗಿ ಅನಗತ್ಯ ಆತಂಕ ಉಂಟಾಗಬಹುದು ಅಥವಾ ತಪ್ಪು ಮಾತ್ರೆಗಳನ್ನು ಸೇವಿಸಿ ಪ್ರಾಣಕ್ಕೆ ಅಪಾಯ ತಂದುಕೊಳ್ಳಬಹುದು. ಆರೋಗ್ಯ ಸಮಸ್ಯೆ ಇದ್ದಾಗ ತಜ್ಞ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

56
4. ಹಣ ಗಳಿಸುವ ಸುಲಭ ಮಾರ್ಗಗಳು (Get Rich Quick Schemes)
Image Credit : Gemini AI

4. ಹಣ ಗಳಿಸುವ ಸುಲಭ ಮಾರ್ಗಗಳು (Get Rich Quick Schemes)

4. ಹಣ ಗಳಿಸುವ ಸುಲಭ ಮಾರ್ಗಗಳು (Get Rich Quick Schemes)
"ಒಂದೇ ದಿನದಲ್ಲಿ ಲಕ್ಷಾಧಿಪತಿಯಾಗುವುದು ಹೇಗೆ?" ಅಥವಾ "ಹಣ ದ್ವಿಗುಣಗೊಳಿಸುವ ಯೋಜನೆಗಳು" ಎಂದು ಸರ್ಚ್ ಮಾಡುವುದು ನಿಮ್ಮನ್ನು ಆನ್‌ಲೈನ್ ವಂಚನೆಗೆ ದೂಡಬಹುದು. ಇಂತಹ ಆಸೆ ತೋರಿಸುವ ವೆಬ್‌ಸೈಟ್‌ಗಳು ನಿಮ್ಮ ಹೂಡಿಕೆಯ ಹಣವನ್ನು ಲಪಟಾಯಿಸಲು ಸಿದ್ಧವಾಗಿರುತ್ತವೆ.

66
5. ವೈಯಕ್ತಿಕ ಗುರುತಿನ ವಿವರಗಳು (Personal Identity Details)
Image Credit : Getty

5. ವೈಯಕ್ತಿಕ ಗುರುತಿನ ವಿವರಗಳು (Personal Identity Details)

5. ವೈಯಕ್ತಿಕ ಗುರುತಿನ ವಿವರಗಳು (Personal Identity Details)
ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಇಮೇಲ್ ಐಡಿ ಅಥವಾ ಪಾಸ್‌ವರ್ಡ್‌ಗಳನ್ನು ಗೂಗಲ್ ಸರ್ಚ್ ಬಾಕ್ಸ್‌ನಲ್ಲಿ ಎಂಟರ್ ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮಾಹಿತಿ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳ ಕೈಗೆ ಸೇರಿ, ನಿಮ್ಮ ಗುರುತಿನ ದುರುಪಯೋಗವಾಗಬಹುದು. ತಂತ್ರಜ್ಞಾನವು ನಮ್ಮ ಜೀವನವನ್ನು ಸುಲಭಗೊಳಿಸಿದೆ ನಿಜ, ಆದರೆ ಈ ಬಗ್ಗೆ ಹೆಚ್ಚಿನ ಜಾಗರೂಕತೆ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂಟರ್ನೆಟ್ ಬಳಸುವಾಗ ಸದಾ ಜಾಗರೂಕರಾಗಿರಿ ಮತ್ತು ಸೈಬರ್ ವಂಚನೆಗಳಿಂದ ದೂರವಿರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
 

Latest Videos
Recommended Stories
Recommended image1
Toshisuke Kanazawa: ಮಾಂಸ ಇಲ್ಲ, ಮೀನು ಇಲ್ಲ; 90ರಲ್ಲೂ ಬಾಡಿಬಿಲ್ಡಿಂಗ್! ಜಪಾನ್‌ನ ಈ ವ್ಯಕ್ತಿ ಆರೋಗ್ಯದ ಗುಟ್ಟು ಬಯಲು!
Recommended image2
₹2ರಿಂದ ₹10ರವರೆಗೆ ಒಂದು ಹೂವಿಗೆ ಬೆಲೆ; ಸಿರ್ಸಿಯ ಮಹಿಳೆಯರು ಕಂಡುಕೊಂಡ ಹೊಸ ಆದಾಯದ ದಾರಿ
Recommended image3
ಪಾಕಿಸ್ತಾನದಲ್ಲಿ ಶೋಚನೀಯ ಸ್ಥಿತಿ: ಆಸ್ಪತ್ರೆಗೆ ಹೋಗಿ ಮರಳಿ ಬರುವ ಪುಟ್ಟ ಮಕ್ಕಳಲ್ಲಿ ಏಡ್ಸ್‌ ಪತ್ತೆ!
Related Stories
Recommended image1
ಹಿಂದಿನ ಕಾಲದಲ್ಲಿ ಕೋಟೆಗಳಿಗಾಗಲೀ, ಮನೆಗಳಿಗಾಗಲೀ ಮುಖ್ಯ ದ್ವಾರದಲ್ಲಿ 2 ಬಾಗಿಲುಗಳು ಏಕಿರುತ್ತಿದ್ದವು?
Recommended image2
ದಕ್ಷಿಣ ಭಾರತದ ಈ ನಗರದಲ್ಲಿ ಜೋರಾಗಿದೆ 'ರಹಸ್ಯ ಡೇಟಿಂಗ್'; ಜಾಗತಿಕ ಮಟ್ಟದಲ್ಲೂ ದೇಶಕ್ಕೆ ಈಗ 3ನೇ ಸ್ಥಾನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved