MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Open 2026
Today's Horoscope in Kannada
Bengaluru Rains
Cricketer Rohit Sharma
BDA Building Redevelopment
Koppal Farmers
Karnataka KPS Schools
Vande Mataram Row
Banashankari Bus Terminal
Mangaluru Airport Land Donation
  • Home
  • Life
  • ಭಾರತದ ಯಾವ ಕಟ್ಟಡದ ಬಾಡಿಗೆ ಅತ್ಯಂತ ಹೆಚ್ಚು, ಇದು ಯಾವ ನಗರದಲ್ಲಿದೆ ಗೊತ್ತೇ?

ಭಾರತದ ಯಾವ ಕಟ್ಟಡದ ಬಾಡಿಗೆ ಅತ್ಯಂತ ಹೆಚ್ಚು, ಇದು ಯಾವ ನಗರದಲ್ಲಿದೆ ಗೊತ್ತೇ?

Most Expensive Office in India: ದೇಶದಲ್ಲಿ ಲಕ್ಷಾಂತರ ಜನರು ಬಾಡಿಗೆಗೆ ವಾಸಿಸುತ್ತಿದ್ದಾರೆ, ಆದರೆ ದೇಶದಲ್ಲಿ ಯಾವ ಕಟ್ಟಡದ ಬಾಡಿಗೆ ಅತ್ಯಂತ ಹೆಚ್ಚು ಮತ್ತು ಅದು ಯಾವ ನಗರದಲ್ಲಿದೆ ಎಂದು ನಿಮಗೆ ತಿಳಿದಿದೆಯೇ?.

2 Min read
Author : Ashwini HR
Published : May 08 2026, 09:09 PM IST
Share this Photo Gallery
  • FB
  • TW
  • Linkdin
  • Whatsapp
19
ಆ ಕಚೇರಿ ಯಾವುದು?
Image Credit : AI Image

ಆ ಕಚೇರಿ ಯಾವುದು?

ಭಾರತದಲ್ಲಿ ಕಾರ್ಪೊರೇಟ್ ಕಚೇರಿಗಳ ಬಾಡಿಗೆ ಈಗ ಗಗನಕ್ಕೇರಿದೆ. ಮುಂಬೈ, ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಜಾಗತಿಕ ಬ್ಯಾಂಕ್‌ಗಳು ಮತ್ತು ದೊಡ್ಡ ಟೆಕ್ ಕಂಪನಿಗಳು ಬೃಹತ್ ಕಚೇರಿಗಳನ್ನು ಬಾಡಿಗೆಗೆ ಪಡೆಯುತ್ತಿವೆ. ಅಚ್ಚರಿಯ ವಿಷಯವೆಂದರೆ, ಈ ಕಚೇರಿಗಳ ಮಾಸಿಕ ಬಾಡಿಗೆ ಈಗ ಕೇವಲ ಲಕ್ಷಗಳಲ್ಲಿಲ್ಲ, ಬದಲಾಗಿ ಕೋಟಿ ರೂಪಾಯಿಗಳ ಗಡಿ ದಾಟಿದೆ. ನಗರದಿಂದ ನಗರಕ್ಕೆ ದರಗಳಲ್ಲಿ ವ್ಯತ್ಯಾಸವಿದ್ದರೂ, ಮುಖ್ಯ ಪ್ರದೇಶಗಳಲ್ಲಿರುವ ಕಚೇರಿಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಾಗಾದರೆ ಭಾರತದಲ್ಲೇ ಅತಿ ಹೆಚ್ಚು ಬಾಡಿಗೆ ಹೊಂದಿರುವ ಆ ಕಚೇರಿ ಯಾವುದು ಮತ್ತು ಅದು ಎಲ್ಲಿದೆ ಎಂಬ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
ಭಾರತದ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ದಾಖಲೆ
Image Credit : Facebook

ಭಾರತದ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ದಾಖಲೆ

ಭಾರತದಲ್ಲೇ ಅತಿ ಹೆಚ್ಚು ಬಾಡಿಗೆ ಹೊಂದಿರುವ ಕಚೇರಿ ವಾಣಿಜ್ಯ ನಗರಿ ಮುಂಬೈನಲ್ಲಿದೆ. ಇಲ್ಲಿನ ಓಬೆರಾಯ್ ಕಾಮರ್ಸ್ ತ್ರೀ (Oberoi Commerz III) ಕಟ್ಟಡದಲ್ಲಿರುವ ಮೋರ್ಗನ್ ಸ್ಟಾನ್ಲಿ ಕಂಪನಿಯ ಕಚೇರಿಯು ದೇಶದ ಅತ್ಯಂತ ದುಬಾರಿ ಆಫೀಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈನಲ್ಲಿರುವ ಸೀಮಿತ ಸ್ಥಳಾವಕಾಶ ಮತ್ತು ಬ್ಯಾಂಕಿಂಗ್ ಹಾಗೂ ಆರ್ಥಿಕ ವಲಯದ ಕಂಪನಿಗಳಿಂದ ಇರುವ ಭಾರಿ ಬೇಡಿಕೆಯಿಂದಾಗಿ ಇಲ್ಲಿನ ಬಾಡಿಗೆ ದರ ಆಕಾಶ ಮುಟ್ಟಿದೆ. ಈ ಕಚೇರಿಯ ತಿಂಗಳ ಬಾಡಿಗೆ ಸರಿಸುಮಾರು 15.9 ಕೋಟಿ ರೂಪಾಯಿಗಳಾಗಿದ್ದು, ಇದು ಭಾರತದ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ಒಂದು ದಾಖಲೆಯಾಗಿದೆ.

Related Articles

Related image1
ಅದೊಂದು ನಿರ್ಧಾರ..ಕೋಟಿ ಕೋಟಿ ಸಂಪಾದಿಸುತ್ತಿದ್ದ ಆಕೆ ಈಗ ಫ್ಲ್ಯಾಟ್‌ ಕ್ಲೀನ್ ಮಾಡ್ತಾ ಇದ್ದಾಳೆ!
Related image2
100 ರೂ.ಗೆ ಒಂದು ಟಿ-ಶರ್ಟ್.. ಮಕ್ಕಳ ಬಟ್ಟೆಗಳು ಅತಿ ಕಡಿಮೆ ಬೆಲೆಗೆ ಸಿಗುವ 7 ಮಾರುಕಟ್ಟೆಗಳಿವು
39
ದೆಹಲಿ ಗೂಗಲ್ ಕಚೇರಿಯ ಬಾಡಿಗೆಯೆಷ್ಟು?
Image Credit : X-@IndianInfoGuid

ದೆಹಲಿ ಗೂಗಲ್ ಕಚೇರಿಯ ಬಾಡಿಗೆಯೆಷ್ಟು?

ದೆಹಲಿ ಎನ್‌ಸಿಆರ್‌ನ ಗುರುಗ್ರಾಂನಲ್ಲೂ ಪ್ರೀಮಿಯಂ ಆಫೀಸ್ ಸ್ಪೇಸ್‌ಗಳ ಬೇಡಿಕೆ ವೇಗವಾಗಿ ಹೆಚ್ಚಿದೆ. ಡಿಎಲ್‌ಎಫ್ ಸೈಬರ್ ಸಿಟಿಯ ಏಟ್ರಿಯಮ್ ಪ್ಲೇಸ್‌ನಲ್ಲಿರುವ ಗೂಗಲ್ ಕಚೇರಿಯು ಪ್ರತಿ ತಿಂಗಳು ಸುಮಾರು 14 ಕೋಟಿ ರೂಪಾಯಿ ಬಾಡಿಗೆಯನ್ನು ಕೊಡುತ್ತದೆ.

49
ಬೆಂಗಳೂರಿನಲ್ಲಿಯೂ ಇದೆ
Image Credit : google

ಬೆಂಗಳೂರಿನಲ್ಲಿಯೂ ಇದೆ

ಇನ್ನು ದೇಶದ ಟೆಕ್ ರಾಜಧಾನಿ ಬೆಂಗಳೂರಿನ ಬಾಗ್ಮನೆ ಕ್ಯಾಪಿಟಲ್ ಬಿಸಿನೆಸ್ ಪಾರ್ಕ್‌ನಲ್ಲಿರುವ ಗೂಗಲ್ ಕಚೇರಿಯು ತಿಂಗಳಿಗೆ ಸುಮಾರು 7 ಕೋಟಿ ರೂಪಾಯಿ ಬಾಡಿಗೆ ಕಟ್ಟುತ್ತದೆ.

59
ಹೈದರಾಬಾದ್‌ನ ಮೈಕ್ರೋಸಾಫ್ಟ್ ಇಂಡಿಯಾ
Image Credit : X

ಹೈದರಾಬಾದ್‌ನ ಮೈಕ್ರೋಸಾಫ್ಟ್ ಇಂಡಿಯಾ

ಹೈದರಾಬಾದ್‌ನ ಫೈನಾನ್ಶಿಯಲ್ ಡಿಸ್ಟ್ರಿಕ್ಟ್ ಕೂಡ ಈಗ ಗ್ಲೋಬಲ್ ಕಂಪನಿಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ಫಿನಿಕ್ಸ್ ಸೆಂಟಾರಸ್ ಕಟ್ಟಡದಲ್ಲಿ ಮೈಕ್ರೋಸಾಫ್ಟ್ ಇಂಡಿಯಾ ತಿಂಗಳಿಗೆ ಸುಮಾರು 7 ಕೋಟಿ ರೂಪಾಯಿ ಬಾಡಿಗೆಯನ್ನು ಪಾವತಿಸುತ್ತಿದೆ.

69
ಪುಣೆಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
Image Credit : X

ಪುಣೆಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್

ಹಾಗೆಯೇ ಪುಣೆಯ ಹಿಂಜೆವಾಡಿ ಐಟಿ ಹಬ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಚೇರಿಯು ಮಾಸಿಕ ಸರಿಸುಮಾರು 6.77 ಕೋಟಿ ರೂ. ಬಾಡಿಗೆ ನೀಡುತ್ತದೆ.

79
ನೋಯ್ಡಾದ ಸ್ಯಾಮ್‌ಸಂಗ್ ಇಂಡಿಯಾ
Image Credit : X

ನೋಯ್ಡಾದ ಸ್ಯಾಮ್‌ಸಂಗ್ ಇಂಡಿಯಾ

ನೋಯ್ಡಾ ಎಕ್ಸ್‌ಪ್ರೆಸ್‌ವೇ ಸಮೀಪದ ಭೂಟಾನಿ ಆಲ್ಫಾಥಮ್‌ನಲ್ಲಿ ಸ್ಯಾಮ್‌ಸಂಗ್ ಇಂಡಿಯಾ ಸುಮಾರು 6 ಕೋಟಿ ರೂಪಾಯಿ ಬಾಡಿಗೆಯನ್ನು ನೀಡುತ್ತಿದೆ.

89
ಕೋಲ್ಕತ್ತಾದಲ್ಲಿ ಎಷ್ಟಿದೆ?
Image Credit : X

ಕೋಲ್ಕತ್ತಾದಲ್ಲಿ ಎಷ್ಟಿದೆ?

ಕೋಲ್ಕತ್ತಾದ ಸಾಲ್ಟ್ ಲೇಕ್ ಸೆಕ್ಟರ್ 5 ರಲ್ಲಿರುವ ಬೆಂಗಾಲ್ ಇಂಟೆಲಿಜೆಂಟ್ ಪಾರ್ಕ್‌ನಲ್ಲಿ ಆಫೀಸ್ ಸ್ಪೇಸ್ ಬಾಡಿಗೆ ಸುಮಾರು 4.5 ಕೋಟಿ ರೂಪಾಯಿಗಳವರೆಗೆ ತಲುಪಿದೆ.

99
ಅದಾನಿ ಗ್ರೂಪ್‌ನ ಕಾರ್ಪೊರೇಟ್ ಹೌಸ್
Image Credit : Asianet News

ಅದಾನಿ ಗ್ರೂಪ್‌ನ ಕಾರ್ಪೊರೇಟ್ ಹೌಸ್

ಇನ್ನು ಅಹಮದಾಬಾದ್‌ನ ಎಸ್‌ಜಿ ಹೈವೇ ಪ್ರದೇಶದಲ್ಲಿರುವ ಅದಾನಿ ಗ್ರೂಪ್‌ನ ಕಾರ್ಪೊರೇಟ್ ಹೌಸ್ ಸುಮಾರು 3.8 ಕೋಟಿ ರೂಪಾಯಿಗಳ ಮಾಸಿಕ ಬಾಡಿಗೆ ಕಟ್ಟುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ದೆಹಲಿ
ಬೆಂಗಳೂರು
 

Latest Videos
Recommended Stories
Recommended image1
Flipkart Big Billion Days 2026: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್.. ಈ ಬ್ಯಾಂಕ್ ಕಾರ್ಡ್‌ಗೆ ಭರ್ಜರಿ ಡಿಸ್ಕೌಂಟ್!
Recommended image2
ಒಣದ್ರಾಕ್ಷಿ ಅಂಟಂಟಾಗಿ ಹುಳಿಯಾಗುತ್ತಿದೆಯೇ? ಡಬ್ಬದ ಮುಚ್ಚಳಕ್ಕೆ ಈ ಒಂದು ವಸ್ತು ಅಂಟಿಸಿ ನೋಡಿ
Recommended image3
ಭಾರತಕ್ಕೆ ಹೆಮ್ಮೆಯ ಕ್ಷಣ: ವಾಯ್ಸ್-ಎನೇಬಲ್ಡ್ ಬ್ರೈಲ್ ಪ್ರಿಂಟರ್ ಕಂಡುಹಿಡಿದ ಹಿಮಜಾಗೆ ಒಲಿದ ಜೇಮ್ಸ್ ಡೈಸನ್ ಪ್ರಶಸ್ತಿ!
Related Stories
Recommended image1
ಅದೊಂದು ನಿರ್ಧಾರ..ಕೋಟಿ ಕೋಟಿ ಸಂಪಾದಿಸುತ್ತಿದ್ದ ಆಕೆ ಈಗ ಫ್ಲ್ಯಾಟ್‌ ಕ್ಲೀನ್ ಮಾಡ್ತಾ ಇದ್ದಾಳೆ!
Recommended image2
100 ರೂ.ಗೆ ಒಂದು ಟಿ-ಶರ್ಟ್.. ಮಕ್ಕಳ ಬಟ್ಟೆಗಳು ಅತಿ ಕಡಿಮೆ ಬೆಲೆಗೆ ಸಿಗುವ 7 ಮಾರುಕಟ್ಟೆಗಳಿವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved