- Home
- Life
- ಜ್ವಾಲಾ ಗುಟ್ಟಾ 60 ಲೀಟರ್ ಎದೆಹಾಲು ದಾನ ಮಾಡಿದ್ಧೇಕೆ? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಮಾಜಿ ಬ್ಯಾಡ್ಮಿಂಟನ್ ತಾರೆ
ಜ್ವಾಲಾ ಗುಟ್ಟಾ 60 ಲೀಟರ್ ಎದೆಹಾಲು ದಾನ ಮಾಡಿದ್ಧೇಕೆ? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಮಾಜಿ ಬ್ಯಾಡ್ಮಿಂಟನ್ ತಾರೆ
ಬೆಂಗಳೂರು: ಭಾರತದ ಮಾಜಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಇದೀಗ ತಮ್ಮ ಅದ್ಭುತ ಕಾರ್ಯದ ಮೂಲಕ ಸುದ್ದಿಯಾಗಿದ್ದಾರೆ. ಜ್ವಾಲಾ ಗುಟ್ಟಾ ಸುಮಾರು 60 ಲೀಟರ್ ಎದೆಹಾಲನ್ನು ದಾನ ಮಾಡಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಜ್ವಾಲಾ ಹೀಗೆ ಮಾಡಿದ್ದೇಕೆ ಎನ್ನುವುದನ್ನು ನೋಡೋಣ ಬನ್ನಿ

ನವಜಾತ ಶಿಶುವಿಗೆ ಎದೆಹಾಲು
ನವಜಾತ ಶಿಶುಗಳಿಗೆ ಎದೆ ಹಾಲು ಪ್ರಾಥಮಿಕ ಪೋಷಣೆಯ ಮೂಲವಾಗಿದೆ. ಇದು ಕೊಬ್ಬುಗಳು, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿದ್ದು, ಶಿಶುಗಳ ಬೆಳವಣಿಗೆಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ.

ನವಜಾತ ಶಿಶುಗಳಿಗೆ ಎದೆಹಾಲಿನ ಅಗತ್ಯತೆ
ಆದರೆ ವಿವಿಧ ಕಾರಣಗಳಿಂದಾಗಿ, ಅದರಲ್ಲೂ ವಿಶೇಷವಾಗಿ ಅವರು NICU ನಲ್ಲಿದ್ದರೆ ಅನೇಕ ಶಿಶುಗಳಿಗೆ ತಮ್ಮ ತಾಯಿಯ ಹಾಲು ಸಿಗುವುದೇ ಇಲ್ಲ. ನವಜಾತ ಶಿಶುಗಳ ತೀವ್ರ ನಿಗಾ ಘಟಕವು ಯಾವುದೇ ಆಸ್ಪತ್ರೆಯಲ್ಲಿ ವಿಶೇಷ ವಿಭಾಗವಾಗಿದ್ದು, ಇದು ಅಕಾಲಿಕ ಶಿಶುಗಳು, ತೀವ್ರವಾಗಿ ಅಸ್ವಸ್ಥರಾದ ಮತ್ತು ಕಡಿಮೆ ತೂಕದ ನವಜಾತ ಶಿಶುಗಳನ್ನು ನೋಡಿಕೊಳ್ಳುತ್ತದೆ.
ಎಕ್ಸ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡ ಜ್ವಾಲಾ
ಇದನ್ನು ಗಮನಿಸಿದ, ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ತಮ್ಮ ಪ್ರಸವಾನಂತರದ ಮೊದಲ ವರ್ಷದಲ್ಲಿ 60 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ, ಅವರು ಏಕೆ ಎದೆಹಾಲು ದಾನ ಮಾಡಿದೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ.
60 ಲೀಟರ್ ಎದೆಹಾಲು ದಾನ ಮಾಡಿದ ಜ್ವಾಲಾ
ನನ್ನ ಮೊದಲ ವರ್ಷದ ಡೆಲಿವರಿ ಬಳಿಕ ನಾನು ಚೆನ್ನೈ ಹಾಗೂ ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ಸುಮಾರು 60 ಲೀಟರ್ ಎದೆಹಾಲನ್ನು ದಾನ ಮಾಡಿದ್ದೇನೆ. ಅದರಿಂದ ಏನಾಗುತ್ತೆ ಅಂತೀರಾ?. ಕೇವಲ 100 ಎಂಎಲ್ ಎದೆಹಾಲು ಒಂದು ಕೆಜಿ ತೂಕದ ನವಜಾತ ಶಿಶುವಿಗೆ ಕೆಲವು ದಿನಗಳ ಕಾಲ ಆಹಾರವಾಗುತ್ತದೆ. ಈ ರೀತಿ ಎದೆಹಾಲು ದಾನ ಮಾಡುವುದರಿಂದ NICU ನಲ್ಲಿರುವ ಡಜನ್‌ಗಟ್ಟಲೆ ಶಿಶುಗಳಿಗೆ ಅನುಕೂಲವಾಗಲಿದೆ ಎಂದು ಜ್ವಾಲಾ ಬರೆದುಕೊಂಡಿದ್ದಾರೆ.
ಎದೆಹಾಲು ದಾನ ಸುರಕ್ಷಿತ
ಈ ರೀತಿ ಎದೆಹಾಲು ದಾನ ಮಾಡುವುದು ಸುರಕ್ಷಿತ ಹಾಗೂ ಸ್ಕ್ರೀನಿಂಗ್‌ಗೆ ಒಳಪಟ್ಟಿರುತ್ತದೆ. ನವಜಾತ ಶಿಶುಗಳಿಗೆ ಇದು ಅತ್ಯಗತ್ಯ. ಒತ್ತಡ, ಅನಾರೋಗ್ಯ, ಅಪೌಷ್ಟಿಕತೆ ಮತ್ತು ಅಕಾಲಿಕ ಜನನದಿಂದಾಗಿ ಹಾಲುಣಿಸುವಿಕೆ ವಿಳಂಬವಾಗಬಹುದಾದ ತಾಯಂದಿರಿಗೆ ಇದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಎದೆಹಾಲು ದಾನದ ಮಹತ್ವದ ಬಗ್ಗೆ ಜ್ವಾಲಾ ಒತ್ತಿ ಹೇಳಿದ್ದಾರೆ.
ಎದೆಹಾಲು ದಾನದ ಮಹತ್ವ
ಅಕಾಲಿಕ ಶಿಶುಗಳಲ್ಲಿ ನೆಕ್ರೋಟೈಸಿಂಗ್ ಎಂಟರೊಕೊಲೈಟಿಸ್ (ಜೀವಕ್ಕೆ ಅಪಾಯಕಾರಿ ಕರುಳಿನ ಸ್ಥಿತಿ) ಸಂಭವಿಸುವುದನ್ನು ದಾನಿ ಮಾನವ ಹಾಲು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ವೈದ್ಯಕೀಯವಾಗಿ ಸಾಬೀತಾಗಿದೆ ಎಂದು ಜ್ವಾಲಾ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

