IPL 2026: ಸಾಕ್ರೀ.. ಆಟ ಆಡಿದ್ದು..ರಿಟೈರ್ ಆಗಲಿರುವ ಐವರು ಸ್ಟಾರ್ ಕ್ರಿಕೆಟರ್ಸ್!
IPL 2026: ಐಪಿಎಲ್ 2026 ಅಂತಿಮ ಹಂತಕ್ಕೆ ಬಂದಿದೆ. ಈ ಸೀಸನ್ ಮುಗಿದ ಮೇಲೆ, ಹಲವು ಸ್ಟಾರ್ ಆಟಗಾರರು ಮುಂದಿನ ಸೀಸನ್‌ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಧೋನಿ ಸೇರಿದಂತೆ ಇನ್ನೂ ನಾಲ್ವರು ಸ್ಟಾರ್ ಕ್ರಿಕೆಟಿಗರು ಐಪಿಎಲ್ 2026ರ ನಂತರ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.

ಸಾಕಿನ್ನು ಆಟ.. ಈ ಐಪಿಎಲ್ ಸೀಸನ್ ಕೊನೆಯಾಗಬಹುದೇ?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಸೀಸನ್ ಸೂಪರ್ ಇಂಟ್ರೆಸ್ಟಿಂಗ್ ಆಗಿದೆ. ಗ್ರೂಪ್ ಹಂತದ ಪಂದ್ಯಗಳು ಕೊನೆಯ ಹಂತಕ್ಕೆ ಬಂದಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಹಾಗೆಯೇ, ಹೈದರಾಬಾದ್ ಮತ್ತು ಗುಜರಾತ್ ತಂಡಗಳು ಕೂಡ ಟಾಪ್ 4ಕ್ಕೆ ಅರ್ಹತೆ ಪಡೆದಿವೆ. ಉಳಿದ ಒಂದು ಸ್ಥಾನಕ್ಕಾಗಿ 5 ತಂಡಗಳ ನಡುವೆ ಬಿಗ್ ಫೈಟ್ ನಡೀತಿದೆ.
ಐಪಿಎಲ್ 2026ರಲ್ಲಿ ಆಡುತ್ತಿರುವ ಕೆಲ ಸ್ಟಾರ್ ಆಟಗಾರರು ವಯಸ್ಸು ಮತ್ತು ಫಿಟ್ನೆಸ್ ಕಾರಣಗಳಿಂದ ಮುಂದಿನ ವರ್ಷ ಕಣಕ್ಕಿಳಿಯುವುದು ಅನುಮಾನ. ಈ ಲಿಸ್ಟ್‌ನಲ್ಲಿ ಮೊದಲ ಹೆಸರು ಕೇಳಿದ್ರೆ ಕೋಟ್ಯಂತರ ಅಭಿಮಾನಿಗಳ ಹೃದಯ ಒಡೆಯೋದು ಗ್ಯಾರಂಟಿ. ಹೌದು, ಆ ಹೆಸರು ಬೇರಾರೂ ಅಲ್ಲ, ಚೆನ್ನೈ ಸೂಪರ್ ಕಿಂಗ್ಸ್‌ನ 'ಥಾಲಾ' ಮಹೇಂದ್ರ ಸಿಂಗ್ ಧೋನಿ. ಧೋನಿ ಜೊತೆಗೆ ಇನ್ನೂ ನಾಲ್ವರು ಸ್ಟಾರ್ ಆಟಗಾರರು ಈ ಲಿಸ್ಟ್‌ನಲ್ಲಿದ್ದಾರೆ.

ಮಹೇಂದ್ರ ಸಿಂಗ್ ಧೋನಿ
ಕೋಟ್ಯಂತರ ಜನರ ಹೃದಯ ಬಡಿತ ಎಂಎಸ್ ಧೋನಿ ಹೆಸರು ಈ ಲಿಸ್ಟ್‌ನಲ್ಲಿ ಮೊದಲನೇ ಸ್ಥಾನದಲ್ಲಿದೆ. 'ಥಾಲಾ' ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಈ ಸೀಸನ್‌ನಲ್ಲಿ ಧೋನಿ ಸಿಎಸ್‌ಕೆ ತಂಡದಲ್ಲಿದ್ದರೂ, ಮೊಣಕಾಲು ಗಾಯದಿಂದಾಗಿ ಒಂದೇ ಒಂದು ಮ್ಯಾಚ್ ಆಡಿಲ್ಲ. 44 ವರ್ಷದ ಧೋನಿ ಈ ಸೀಸನ್ ನಂತರ ಐಪಿಎಲ್‌ನಿಂದ ನಿವೃತ್ತಿ ಆಗೋದು ಬಹುತೇಕ ಖಚಿತ ಎನ್ನಲಾಗ್ತಿದೆ.
ಅಜಿಂಕ್ಯ ರಹಾನೆ
ಈ ಲಿಸ್ಟ್‌ನಲ್ಲಿ ಎರಡನೇ ಸ್ಥಾನದಲ್ಲಿರೋದು ಸೀನಿಯರ್ ಆಟಗಾರ ಅಜಿಂಕ್ಯ ರಹಾನೆ. 37 ವರ್ಷದ ಈ ಸ್ಟಾರ್ ಆಟಗಾರನಿಗೆ ಈ ಸೀಸನ್ ಅಷ್ಟಾಗಿ ಒಲಿದು ಬಂದಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ರಹಾನೆ, ಬ್ಯಾಟಿಂಗ್‌ನಲ್ಲಿ ಹೀನಾಯವಾಗಿ ಫೇಲ್ ಆಗ್ತಿದ್ದಾರೆ. ಐಪಿಎಲ್ 2026ರಲ್ಲಿ ಇಲ್ಲಿಯವರೆಗೆ ಆಡಿದ 12 ಪಂದ್ಯಗಳಲ್ಲಿ ಕೇವಲ 22.82 ಸರಾಸರಿಯಲ್ಲಿ 251 ರನ್ ಮಾತ್ರ ಗಳಿಸಿದ್ದಾರೆ. ಅವರ ಕಳಪೆ ಪ್ರದರ್ಶನ ನೋಡಿದ್ರೆ, ಮುಂದಿನ ವರ್ಷ ಕೆಕೆಆರ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇಲ್ಲ. ಹೀಗಾಗಿ ರಹಾನೆ ಕೂಡ ಐಪಿಎಲ್‌ಗೆ ನಿವೃತ್ತಿ ಘೋಷಿಸುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ.
ಇಶಾಂತ್ ಶರ್ಮಾ
ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 311 ವಿಕೆಟ್ ಪಡೆದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಈ ಲಿಸ್ಟ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇಶಾಂತ್ ಶರ್ಮಾ ಈ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. ಆದರೆ ಅವರಿಗೆ ಇಲ್ಲಿಯವರೆಗೆ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಕ್ಕಿಲ್ಲ. ಗುಜರಾತ್ ಫ್ರಾಂಚೈಸಿ ಈಗ ಯುವ ಆಟಗಾರರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಹಾಗಾಗಿ 37 ವರ್ಷದ ಈ ಸ್ಟಾರ್ ಬೌಲರ್‌ನ ಐಪಿಎಲ್ ಕೆರಿಯರ್‌ಗೆ ಫುಲ್ ಸ್ಟಾಪ್ ಬಿದ್ದಂತೆಯೇ ಎಂದು ಕ್ರಿಕೆಟ್ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಟ್ರೆಂಟ್ ಬೌಲ್ಟ್
ನಿವೃತ್ತಿ ಘೋಷಿಸುವ ಸಾಧ್ಯತೆ ಇರುವ ಆಟಗಾರರ ಲಿಸ್ಟ್‌ನಲ್ಲಿ ನಾಲ್ಕನೇ ಹೆಸರು ನ್ಯೂಜಿಲೆಂಡ್‌ನ ಸ್ಟಾರ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್. ಒಂದು ಕಾಲದಲ್ಲಿ ಬೌಲ್ಟ್ ಅವರ ವೇಗ ಮತ್ತು ಸ್ವಿಂಗ್ ನೋಡಿ ವಿಶ್ವದರ್ಜೆಯ ಬ್ಯಾಟ್ಸ್‌ಮನ್‌ಗಳು ಕೂಡ ಹೆದರುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಬೌಲ್ಟ್ ಮೊದಲಿನಂತೆ ವಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ ಬೌಲ್ಟ್ ಪ್ರದರ್ಶನ ತೀರಾ ನಿರಾಸಾದಾಯಕವಾಗಿತ್ತು. ಹಾಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದನ್ನು ನೋಡಿದರೆ, 2026ರ ನಂತರ ಟ್ರೆಂಟ್ ಬೌಲ್ಟ್ ಅವರ ಐಪಿಎಲ್ ಕೆರಿಯರ್ ಮುಗಿದಂತೆಯೇ ಕಾಣುತ್ತಿದೆ.
ಸುನೀಲ್ ನರೈನ್
ಈ ಲಿಸ್ಟ್‌ನಲ್ಲಿ ಎಲ್ಲರಿಗೂ ಶಾಕ್ ನೀಡುವ ಹೆಸರು ವೆಸ್ಟ್ ಇಂಡೀಸ್‌ನ ಲೆಜೆಂಡರಿ ಟಿ20 ಸ್ಪಿನ್ನರ್ ಸುನೀಲ್ ನರೈನ್. ಈ ಸೀಸನ್‌ನಲ್ಲೇ ನರೈನ್ ಐಪಿಎಲ್‌ನಲ್ಲಿ 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ್ದಾರೆ. ಅಷ್ಟೇ ಅಲ್ಲ, ಐಪಿಎಲ್‌ನಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 37ನೇ ವಯಸ್ಸಿನಲ್ಲೂ ನರೈನ್ ತಮ್ಮ ಸ್ಪಿನ್ ಮ್ಯಾಜಿಕ್‌ನಿಂದ ಮಿಂಚುತ್ತಿದ್ದಾರೆ. ಆದರೆ, ಈ ಸೀಸನ್‌ನ ಯಶಸ್ಸಿನೊಂದಿಗೆ ಐಪಿಎಲ್‌ಗೆ ಗುಡ್‌ಬೈ ಹೇಳಲು ನರೈನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಸೀಸನ್ ನಂತರ ನರೈನ್ ಕೂಡ ಐಪಿಎಲ್‌ನಿಂದ ಹಿಂದೆ ಸರಿಯಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

