MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಕೇವಲ 2 ಚಮಚ ಅರಿಶಿಣ ಪುಡಿ ಮಿಶ್ರಣ ಸಾಕು; ಹೂವಿನ ಗಿಡಗಳಿಗೆ ಕಾಡುವ ಬಿಳಿಹುಳ ಒಂದೂ ಉಳಿಯಲ್ಲ!

ಕೇವಲ 2 ಚಮಚ ಅರಿಶಿಣ ಪುಡಿ ಮಿಶ್ರಣ ಸಾಕು; ಹೂವಿನ ಗಿಡಗಳಿಗೆ ಕಾಡುವ ಬಿಳಿಹುಳ ಒಂದೂ ಉಳಿಯಲ್ಲ!

ಮನೆಯ ತೋಟದಲ್ಲಿ ಹೂವಿನ ಗಿಡಗಳಿಗೆ ಹಾನಿ ಮಾಡುವ (Mealybug) ಹಾಗೂ ಅಫಿಡ್‌ಸ್ (Aphids) ಕೀಟಗಳನ್ನು ನಿಯಂತ್ರಿಸಲು ಮನೆಯಲ್ಲೇ ಸುಲಭವಾಗಿ ಪರಿಹಾರ ತಯಾರಿಸಬಹುದು. ಅರಿಶಿಣದ ಜೊತೆಗೆ ಈ ಎರಡು ನೈಸರ್ಗಿಕ ಮಿಶ್ರಣವು ಒಂದೇ ಒಂದು ಕೀಟವೂ ಇಲ್ಲದಂತೆ ಮಾಡುತ್ತದೆ.

2 Min read
Author : Sathish Kumar KH
Published : Aug 01 2026, 06:41 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : YouTube

ಮನೆಯ ತೋಟ (Home Garden) ಅಥವಾ ಬಾಲ್ಕನಿ ಗಾರ್ಡನ್ (Balcony Garden) ಬೆಳೆಸುವವರಿಗೆ ಹೂವಿನ ಗಿಡಗಳಲ್ಲಿ (Flower Plants) ಕಾಣಿಸಿಕೊಳ್ಳುವ ಬಿಳಿಹುಳ (Mealybug) ಹಾಗೂ ಅಫಿಡ್‌ಸ್ (Aphids) ದೊಡ್ಡ ತಲೆನೋವಾಗಿದೆ. ಗಿಡಗಳಲ್ಲಿ ಹೊಸದಾಗಿ ಮೂಡುವ ಮೊಗ್ಗುಗಳು ಅರಳುವ ಮೊದಲೇ ಈ ಕೀಟಗಳು ದಾಳಿ ಮಾಡಿದರೆ ಹೂವುಗಳು ಹಾಳಾಗಬಹುದು ಮತ್ತು ಗಿಡದ ಬೆಳವಣಿಗೆಯೂ ಕುಂಠಿತವಾಗಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : YouTube

ಬಹುತೇಕ ಸಂದರ್ಭಗಳಲ್ಲಿ ಮೀಲಿಬಗ್‌ಗಳು ಅತಿ ವೇಗವಾಗಿ ಗಿಡದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಡುತ್ತವೆ. ಇವುಗಳಿಂದ ಹೊರಬರುವ ಸಿಹಿ ದ್ರವ (Honeydew) ಕಾರಣದಿಂದ ಇರುವೆಗಳು (Ants) ಕೂಡ ಈ ಕೀಟಗಳನ್ನು ರಕ್ಷಿಸುತ್ತವೆ. ಹೀಗಾಗಿ ಕೀಟಗಳ ಜೊತೆಗೆ ಇರುವೆಗಳ ನಿಯಂತ್ರಣವೂ ಮುಖ್ಯವಾಗಿದೆ.

Related Articles

Related image1
1 ರೂ. ಖರ್ಚಿಲ್ಲದೆ ಮನೆಯ ಸಣ್ಣ ಜಾಗದಲ್ಲಿ ಬೆಳೆಯಿರಿ ಗೊಂಚಲು ಗೊಂಚಲು ಪುದೀನಾ!
Related image2
ಅರಿಶಿನ, ಶುಂಠಿ, ಕೊತ್ತಂಬರಿ... ಕೇವಲ 45 ದಿನದಲ್ಲಿ ಕೈತುಂಬಾ ಹಣ ತಂದುಕೊಡುವ ಜಾಕ್‌ಪಾಟ್ ಬೆಳೆ ಯಾವ್ದು?
36
Image Credit : YouTube

ಮನೆಯಲ್ಲೇ ತಯಾರಿಸಬಹುದಾದ ಮಿಶ್ರಣ ಹೇಗೆ?

ತೋಟಗಾರರು ಸೂಚಿಸುವ ಮನೆಮದ್ದು (Home Remedy) ತಯಾರಿಸಲು ಈ ವಸ್ತುಗಳು ಸಾಕು:

  • 1.5 ಲೀಟರ್ ನೀರು
  • 1 ಚಮಚ ಅರಿಶಿಣ ಪುಡಿ (Turmeric Powder)
  • 1 ಚಮಚ ದ್ರವ ಸೋಪ್ (Liquid Soap) ಅಥವಾ ಸೌಮ್ಯ ಡಿಟರ್ಜೆಂಟ್
  • 2 ನಿಂಬೆಹಣ್ಣಿನ ರಸ (Lemon Juice)


ಮೊದಲು ನೀರಿಗೆ ಅರಿಶಿಣ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ದ್ರವ ಸೋಪ್ ಸೇರಿಸಿ ಮತ್ತೆ ಮಿಶ್ರಣ ಮಾಡಿ. ಕೊನೆಯಲ್ಲಿ ಎರಡು ನಿಂಬೆಹಣ್ಣಿನ ರಸವನ್ನು ಸೇರಿಸಿ 2–3 ನಿಮಿಷ ಚೆನ್ನಾಗಿ ಕಲಸಿದ ಬಳಿಕ, ಮಿಶ್ರಣವನ್ನು ಸೋಸಿ (Filter) ಸ್ಪ್ರೇ ಬಾಟಲಿಗೆ ತುಂಬಿಕೊಳ್ಳಿ.

46
Image Credit : YouTube

ಈ ಮಿಶ್ರಣ ಹೇಗೆ ಸಹಾಯ ಮಾಡಬಹುದು?

ಅರಿಶಿಣದಲ್ಲಿ ಇರುವ ಕೆಲವು ನೈಸರ್ಗಿಕ ಸಂಯುಕ್ತಗಳು (Bioactive Compounds) ಮತ್ತು ನಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್ (Citric Acid) ಕೆಲವು ಮೃದುದೇಹದ ಕೀಟಗಳನ್ನು (Soft-bodied Pests) ನಿಯಂತ್ರಿಸಲು ಸಹಾಯಕವಾಗಬಹುದು ಎಂದು ತೋಟಗಾರರು ಹೇಳುತ್ತಾರೆ. ದ್ರವ ಸೋಪ್ ಮಿಶ್ರಣವು ಕೀಟಗಳ ಮೇಲೆ ದ್ರಾವಣ ಸಮವಾಗಿ ಅಂಟಿಕೊಳ್ಳಲು ನೆರವಾಗುತ್ತದೆ.

56
Image Credit : YouTube

ಮೀಲಿಬಗ್ ಅಥವಾ ಅಫಿಡ್‌ಸ್ ಕಾಣುವ ಎಲೆಗಳ ಕೆಳಭಾಗ, ಚಿಗುರುಗಳು ಮತ್ತು ಮೊಗ್ಗುಗಳ ಮೇಲೆ ಈ ಮಿಶ್ರಣವನ್ನು ಸಿಂಪಡಿಸಬಹುದು.

  • ಬಳಸುವಾಗ ಗಮನಿಸಬೇಕಾದ ಅಂಶಗಳು
  • ಬೆಳಗಿನ ಜಾವ ಅಥವಾ ಸಂಜೆ ವೇಳೆಯಲ್ಲಿ ಮಾತ್ರ ಸಿಂಪಡಿಸಿ.
  • ಬಿಸಿಲಿನ ತೀವ್ರ ಸಮಯದಲ್ಲಿ ಸ್ಪ್ರೇ ಮಾಡುವುದನ್ನು ತಪ್ಪಿಸಿ.
  • ಕೀಟಗಳ ದಾಳಿ ಕಂಡಾಗ ಮಾತ್ರ ಈ ವಿಧಾನವನ್ನು ಅನುಸರಿಸಿ. ಮುನ್ನೆಚ್ಚರಿಕೆ ಕ್ರಮವಾಗಿ ನಿರಂತರವಾಗಿ ಬಳಸಬೇಡಿ.
  • ಕೀಟಗಳ ಸಂಖ್ಯೆ ಹೆಚ್ಚಿದ್ದರೆ ಅಥವಾ ಗಿಡಕ್ಕೆ ತೀವ್ರ ಹಾನಿಯಾಗಿದ್ದರೆ ತೋಟಗಾರಿಕೆ ತಜ್ಞರ ಸಲಹೆ ಪಡೆಯುವುದು ಸೂಕ್ತ.
66
Image Credit : YouTube

ಇರುವೆಗಳ ನಿಯಂತ್ರಣವೂ ಮುಖ್ಯ

ಮೀಲಿಬಗ್ ಸಮಸ್ಯೆಯನ್ನು ಶಾಶ್ವತವಾಗಿ ಕಡಿಮೆ ಮಾಡಲು ಇರುವೆಗಳ ಓಡಾಟವನ್ನು ನಿಯಂತ್ರಿಸುವುದು ಅಗತ್ಯ. ಇರುವೆಗಳು ಕಡಿಮೆಯಾದರೆ ಮೀಲಿಬಗ್‌ಗಳ ಹರಡುವಿಕೆ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಉದ್ಯಾನ
ಪ್ರಾಕೃತಿಕ ವಿಕೋಪಗಳು
ಅಡುಗೆಮನೆ ಸಲಹೆಗಳು
ಮಹಿಳೆಯರು
ಜೀವನಶೈಲಿ
ಸಸ್ಯ
Latest Videos
Recommended Stories
Recommended image1
ನಿಮ್ಮನ್ನು ನೀವು ಪ್ರೀತಿಸಲು ಇಂದೇ ಬೆಸ್ಟ್ ದಿನ: ಹೀಗೆ ಆಚರಿಸಿ National Girlfriend Day!
Recommended image2
ಪಾನಿಪುರಿ ಹೆಸರು ಕೇಳಿ ಕಂಗಾಲಾದ ವಿದೇಶಿ ಯುವತಿ! 'ಗೋಲ್‌ಗಪ್ಪಾ' ಅನ್ನೋ ಬದಲು ಏನಂದ್ಲು ನೋಡಿ, ವಿಡಿಯೋ ವೈರಲ್!
Recommended image3
ಮಲ್ಲಿಗೆ ಹೂ 5-7 ದಿನದವರೆಗೆ ಈಗಷ್ಟೇ ಗಿಡದಿಂದ ಕಿತ್ತಂತೆ ಫ್ರೆಶ್ ಆಗಿರ್ಬೇಕಾ? ಇಷ್ಟು ಮಾಡಿ ಸಾಕು
Related Stories
Recommended image1
1 ರೂ. ಖರ್ಚಿಲ್ಲದೆ ಮನೆಯ ಸಣ್ಣ ಜಾಗದಲ್ಲಿ ಬೆಳೆಯಿರಿ ಗೊಂಚಲು ಗೊಂಚಲು ಪುದೀನಾ!
Recommended image2
ಅರಿಶಿನ, ಶುಂಠಿ, ಕೊತ್ತಂಬರಿ... ಕೇವಲ 45 ದಿನದಲ್ಲಿ ಕೈತುಂಬಾ ಹಣ ತಂದುಕೊಡುವ ಜಾಕ್‌ಪಾಟ್ ಬೆಳೆ ಯಾವ್ದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved