MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಮಲ್ಲಿಗೆ ಹೂ 5-7 ದಿನದವರೆಗೆ ಈಗಷ್ಟೇ ಗಿಡದಿಂದ ಕಿತ್ತಂತೆ ಫ್ರೆಶ್ ಆಗಿರ್ಬೇಕಾ? ಇಷ್ಟು ಮಾಡಿ ಸಾಕು

ಮಲ್ಲಿಗೆ ಹೂ 5-7 ದಿನದವರೆಗೆ ಈಗಷ್ಟೇ ಗಿಡದಿಂದ ಕಿತ್ತಂತೆ ಫ್ರೆಶ್ ಆಗಿರ್ಬೇಕಾ? ಇಷ್ಟು ಮಾಡಿ ಸಾಕು

Jasmine Flower Storage: ಮಲ್ಲಿಗೆ ಹೂವುಗಳು ತಂದ ಕೆಲವೇ ಗಂಟೆಗಳಲ್ಲಿ ಕಪ್ಪಾಗುವುದು ಅಥವಾ ಬಾಡಿ ಹೋಗುವುದು ಅನೇಕರ ದೂರು. ಆದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಮಲ್ಲಿಗೆ ಹೂವಿನ ತಾಜಾತನ ಮತ್ತು ಸುಗಂಧವನ್ನು ಒಂದು ವಾರದವರೆಗೆ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

2 Min read
Author : Ashwini HR
Published : Aug 01 2026, 06:29 PM IST
Share this Photo Gallery
  • FB
  • TW
  • Linkdin
  • Whatsapp
16
ಬೇಗನೆ ಬಾಡುತ್ತಿದೆಯೇ?
Image Credit : AI Image

ಬೇಗನೆ ಬಾಡುತ್ತಿದೆಯೇ?

ಬೇಗನೆ ಬಾಡುತ್ತಿದೆಯೇ?
ಬೇಸಿಗೆ ಇರಲಿ, ಹಬ್ಬಗಳಿರಲಿ ಅಥವಾ ಶುಭ ಸಮಾರಂಭಗಳಿರಲಿ ಮಲ್ಲಿಗೆ ಹೂವಿಗೆ ಇರುವ ಬೇಡಿಕೆಯೇ ಬೇರೆ. ಅದರ ಬಿಳಿ ಬಣ್ಣ ಮತ್ತು ಮನಸೆಳೆಯುವ ಸುಗಂಧವನ್ನು ಇಷ್ಟಪಡದ ಮಹಿಳೆಯರೇ ಇಲ್ಲ. ಆದರೆ ಮಲ್ಲಿಗೆ ಹೂವುಗಳ ವಿಷಯದಲ್ಲಿ ಎಲ್ಲರನ್ನೂ ಕಾಡುವ ದೊಡ್ಡ ಸಮಸ್ಯೆ ಎಂದರೆ ಅವು ಬೇಗನೆ ಬಾಡಿ ಹೋಗುವುದು ಅಥವಾ ಸ್ವಲ್ಪ ಸಮಯದಲ್ಲೇ ಕೆಂಪು ಅಥವಾ ಕಪ್ಪು ಬಣ್ಣಕ್ಕೆ ತಿರುಗುವುದು. ಮಾರುಕಟ್ಟೆಯಿಂದ ಹೆಚ್ಚು ಹೂವು ತಂದಾಗ ಅಥವಾ ಫಂಕ್ಷನ್‌ಗಳಿಗಾಗಿ ಮುಂಚಿತವಾಗಿ ಖರೀದಿಸಿದಾಗ ಅವುಗಳನ್ನು ಎರಡು ಮೂರು ದಿನಗಳ ಕಾಲ ಫ್ರೆಶ್ ಆಗಿ ಇಡುವುದು ಕಷ್ಟವಾಗುತ್ತದೆ.ಆದರೆ ಮನೆಯಲ್ಲಿ ಸಿಗುವ ಕೆಲವು ಸಣ್ಣ ವಸ್ತುಗಳನ್ನು ಬಳಸಿ ಸರಿಯಾಗಿ ಸಂಗ್ರಹಿಸಿದರೆ, ಮಲ್ಲಿಗೆ ಹೂವುಗಳನ್ನು ಒಂದು ವಾರದವರೆಗೆ ಬಣ್ಣ ಬದಲಾಗದಂತೆ, ಪರಿಮಳ ಕುಂದದಂತೆ ತಾಜಾವಾಗಿ ಇಡಬಹುದು ಎಂದು ತಜ್ಞರು ಹೇಳುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬಾಕ್ಸ್ ಮತ್ತು ಟಿಶ್ಯೂ ಪೇಪರ್ ಹ್ಯಾಕ್
Image Credit : AI Image

ಬಾಕ್ಸ್ ಮತ್ತು ಟಿಶ್ಯೂ ಪೇಪರ್ ಹ್ಯಾಕ್

ಬಾಕ್ಸ್ ಮತ್ತು ಟಿಶ್ಯೂ ಪೇಪರ್ ಹ್ಯಾಕ್
ಮಲ್ಲಿಗೆ ಹೂವುಗಳು ಫ್ರೆಶ್ ಆಗಿರಲು ಗಾಳಿ ಮತ್ತು ಅತಿಯಾದ ತೇವಾಂಶ ತಗುಲದಂತೆ ನೋಡಿಕೊಳ್ಳುವುದು ಮುಖ್ಯ. ಒಂದು ಗಾಳಿಯಾಡದ (Air-tight) ಪ್ಲಾಸ್ಟಿಕ್ ಅಥವಾ ಗಾಜಿನ ಡಬ್ಬವನ್ನು ತೆಗೆದುಕೊಳ್ಳಿ. ಅದರ ತಳಭಾಗದಲ್ಲಿ ಒಂದು ಟಿಶ್ಯೂ ಪೇಪರ್ ಅಥವಾ ತೆಳುವಾದ ಕಾಟನ್ ಬಟ್ಟೆಯನ್ನು ಹರಡಿ. ಅದರ ಮೇಲೆ ಹೂವುಗಳನ್ನು ಗಟ್ಟಿಯಾಗಿ ಒತ್ತದೆ ಹಗುರವಾಗಿ ಹಾಕಿ. ಹೂವುಗಳ ಮೇಲೂ ಮತ್ತೊಂದು ಟಿಶ್ಯೂ ಪೇಪರ್ ಇಟ್ಟು, ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ ಫ್ರಿಡ್ಜ್‌ನಲ್ಲಿ ಇರಿಸಿ. ಟಿಶ್ಯೂ ಪೇಪರ್ ಹೂವಿನ ಹೆಚ್ಚಿನ ತೇವಾಂಶವನ್ನು ಹೀರಿಕೊಂಡು ಅವು ಕಪ್ಪಾಗದಂತೆ ಕಾಪಾಡುತ್ತದೆ.

Related Articles

Related image1
ತುಳಸಿ ಗಿಡ ನೀಡುತ್ತೆ ಈ 5 ಎಚ್ಚರಿಕೆ.. ಇಂದೇ ಗಮನಿಸಿ
Related image2
ಒಂದೇ ಒಂದು ಕುಂಡದಲ್ಲಿ ಹತ್ತಾರು ಬೆಂಡೆಕಾಯಿ ಪಡೆಯುವುದು ಹೇಗೆ? ಇಂದೇ ಈ ಟಿಪ್ಸ್ ಟ್ರೈ ಮಾಡಿ
36
ಬಾಳೆ ಎಲೆಯ ಪ್ರಯೋಗ
Image Credit : AI Image

ಬಾಳೆ ಎಲೆಯ ಪ್ರಯೋಗ

ಬಾಳೆ ಎಲೆಯ ಪ್ರಯೋಗ
ಇದು ನಮ್ಮ ಹಿರಿಯರ ಕಾಲದಿಂದಲೂ ನಡೆದು ಬಂದಿರುವ ಅತ್ಯಂತ ಪರಿಣಾಮಕಾರಿ ವಿಧಾನ. ಒಂದು ತಾಜಾ ಬಾಳೆ ಎಲೆಯನ್ನು ತೆಗೆದುಕೊಂಡು, ಅದರಲ್ಲಿ ಮಲ್ಲಿಗೆ ಹೂವುಗಳನ್ನು ಇಟ್ಟು ಚೆನ್ನಾಗಿ ಸುತ್ತಿ. ಆ ಬಾಳೆ ಎಲೆಯ ಸುತ್ತನ್ನು ಒಂದು ಪ್ಲಾಸ್ಟಿಕ್ ಕವರ್ ಅಥವಾ ಡಬ್ಬದಲ್ಲಿಟ್ಟು ಫ್ರಿಡ್ಜ್‌ನಲ್ಲಿ ಇರಿಸಿದರೆ, ಹೂವುಗಳು ಸುಮಾರು 5 ರಿಂದ 7 ದಿನಗಳವರೆಗೆ ಈಗಷ್ಟೇ ಗಿಡದಿಂದ ಕಿತ್ತಂತೆ ತಾಜಾವಾಗಿರುತ್ತವೆ.

46
ನಿಂಬೆ ರಸದ ನೀರಿನ ಸಿಂಪಡಣೆ
Image Credit : AI Image

ನಿಂಬೆ ರಸದ ನೀರಿನ ಸಿಂಪಡಣೆ

ನಿಂಬೆ ರಸದ ನೀರಿನ ಸಿಂಪಡಣೆ
ಮಲ್ಲಿಗೆ ಹೂವುಗಳ ಬಣ್ಣ ಬದಲಾಗದಂತೆ ತಡೆಯಲು ನಿಂಬೆ ರಸದಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ಸಹಾಯ ಮಾಡುತ್ತವೆ. ಒಂದು ಸ್ಪ್ರೇ ಬಾಟಲಿಯಲ್ಲಿ ಕುಡಿಯುವ ನೀರನ್ನು ತೆಗೆದುಕೊಂಡು, ಅದಕ್ಕೆ ಕೆಲವು ಹನಿ ನಿಂಬೆ ರಸ ಸೇರಿಸಿ. ಹೂವುಗಳನ್ನು ಸಂಗ್ರಹಿಸುವ ಮೊದಲು ಈ ನೀರನ್ನು ಲಘುವಾಗಿ ಹೂವುಗಳ ಮೇಲೆ ಸ್ಪ್ರೇ ಮಾಡಿ. ಇದು ಹೂವುಗಳು ಒಣಗದಂತೆ ನೋಡಿ, ಬಣ್ಣ ಬದಲಾಗದಂತೆ ತಡೆಯುತ್ತದೆ.

56
ಐಸ್ ವಾಟರ್ ಪದ್ಧತಿ
Image Credit : AI Image

ಐಸ್ ವಾಟರ್ ಪದ್ಧತಿ

ಐಸ್ ವಾಟರ್ ಪದ್ಧತಿ
ಒಂದು ವೇಳೆ ಹೂವುಗಳು ಈಗಾಗಲೇ ಸ್ವಲ್ಪ ಬಾಡಿದಂತೆ ಅಥವಾ ಮೆತ್ತಗಾದಂತೆ ಅನಿಸಿದರೆ ಈ ಟ್ರಿಕ್ ಬಳಸಿ. ಒಂದು ಪಾತ್ರೆಯಲ್ಲಿ ಅತ್ಯಂತ ತಣ್ಣನೆಯ (ಐಸ್ ವಾಟರ್) ನೀರನ್ನು ತೆಗೆದುಕೊಂಡು, ಅದರಲ್ಲಿ ಬಾಡಿದ ಹೂವುಗಳನ್ನು ಕೇವಲ 2 ರಿಂದ 3 ನಿಮಿಷಗಳ ಕಾಲ ಮುಳುಗಿಸಿ ತೆಗೆಯಿರಿ. ನಂತರ ನೀರನ್ನು ಸಂಪೂರ್ಣವಾಗಿ ಆರಿಸಿ ಸಂಗ್ರಹಿಸಿಟ್ಟರೆ, ಹೂವುಗಳು ಮತ್ತೆ ಅರಳಿದಂತೆ ತಾಜಾವಾಗಿ ಕಾಣುತ್ತವೆ.

66
ಹೂವುಗಳನ್ನು ಸಂಗ್ರಹಿಸುವಾಗ ಮಾಡಬಾರದು ತಪ್ಪುಗಳು
Image Credit : AI Image

ಹೂವುಗಳನ್ನು ಸಂಗ್ರಹಿಸುವಾಗ ಮಾಡಬಾರದು ತಪ್ಪುಗಳು

ಹೂವುಗಳನ್ನ ಸಂಗ್ರಹಿಸುವಾಗ ಮಾಡಬಾರದು ತಪ್ಪುಗಳು
*ಹೂವುಗಳನ್ನು ನೇರವಾಗಿ ನೀರಿನಲ್ಲಿ ದೀರ್ಘಕಾಲ ನೆನೆಸಬಾರದು. ಇದರಿಂದ ದಳಗಳು ಬೇಗನೆ ಕೊಳೆಯಬಹುದು.
*ಮಾರುಕಟ್ಟೆಯಿಂದ ತಂದ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಗೆಯೇ ಇಟ್ಟರೆ, ಒಳಗೆ ಗಾಳಿಯಾಡದೆ ಹೂವುಗಳು ಕೆಲವೇ ಗಂಟೆಗಳಲ್ಲಿ ಕಪ್ಪಾಗುತ್ತವೆ.
*ಹೂವುಗಳನ್ನು ಫ್ರಿಡ್ಜ್‌ನ ಸಾಮಾನ್ಯ ಕಪಾಟುಗಳಲ್ಲಿ ಮಾತ್ರ ಇಡಬೇಕು, ಫ್ರೀಜರ್‌ನಲ್ಲಿ (Freezer) ಅಪ್ಪಿತಪ್ಪಿಯೂ ಇಡಬಾರದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು
Latest Videos
Recommended Stories
Recommended image1
ರಾಜ್ಯದಲ್ಲಿ ಹೆಚ್‌ಐವಿ ನಿಯಂತ್ರಣದಲ್ಲಿದೆ, ಕಾಲೇಜು ವಿದ್ಯಾರ್ಥಿಗಳ ಸೋಂಕಿನ ಸುದ್ದಿ ಸುಳ್ಳು: ಸಚಿವ ಯು.ಟಿ. ಖಾದರ್
Recommended image2
ಗ್ಯಾಸ್ ಸ್ಟೌವ್ ನಾಬ್ ಕ್ಲೀನ್ ಮಾಡಲು ಕಷ್ಟಪಡ್ತಿದ್ದೀರಾ? ಈ ಟ್ರಿಕ್ ಬಳಸಿ ಸುಲಭವಾಗಿ ಗಲೀಜನ್ನು ಹೊರೆತೆಗೆಯಿರಿ
Recommended image3
ಈ ಕಾಲದ ಹುಡುಗಿಯರ ಹಾಟ್ ಫೇವರಿಟ್ ಗೋಲ್ಡನ್ ಕಾಲ್ಗೆಜ್ಜೆ ಡಿಸೈನ್ಸ್ ಇಲ್ಲಿವೆ
Related Stories
Recommended image1
ತುಳಸಿ ಗಿಡ ನೀಡುತ್ತೆ ಈ 5 ಎಚ್ಚರಿಕೆ.. ಇಂದೇ ಗಮನಿಸಿ
Recommended image2
ಒಂದೇ ಒಂದು ಕುಂಡದಲ್ಲಿ ಹತ್ತಾರು ಬೆಂಡೆಕಾಯಿ ಪಡೆಯುವುದು ಹೇಗೆ? ಇಂದೇ ಈ ಟಿಪ್ಸ್ ಟ್ರೈ ಮಾಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved