- Home
- Life
- ಇಡೀ ದೇಶವನ್ನೇ ಸುತ್ತಲು ಇದೊಂದು ರೈಲ್ವೆ ನಿಲ್ದಾಣ ಸಾಕು! ಈ ಜಂಕ್ಷನ್‌ನಿಂದ ಭಾರತದ ಪ್ರತಿ ಮೂಲೆಗೂ ಸಿಗುತ್ತೆ ಟ್ರೈನ್
ಇಡೀ ದೇಶವನ್ನೇ ಸುತ್ತಲು ಇದೊಂದು ರೈಲ್ವೆ ನಿಲ್ದಾಣ ಸಾಕು! ಈ ಜಂಕ್ಷನ್‌ನಿಂದ ಭಾರತದ ಪ್ರತಿ ಮೂಲೆಗೂ ಸಿಗುತ್ತೆ ಟ್ರೈನ್
Indian Railways traveler tips: ಭಾರತೀಯ ರೈಲ್ವೆಯಲ್ಲಿ ಸಾವಿರಾರು ನಿಲ್ದಾಣಗಳಿವೆ. ಆದರೆ ಈ ಜಂಕ್ಷನ್ ವಿಶಿಷ್ಟವಾದುದು. ದೇಶದ 4 ದಿಕ್ಕುಗಳಿಗೆ ರೈಲು ಸಿಗುತ್ತೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಚರಿಸುವ ರೈಲುಗಳ ಕೊಂಡಿಯಂತಿರುವ ಈ ನಿಲ್ದಾಣದ ಬಗ್ಗೆ ತಿಳಿಲೇಬೇಕಾದ ಆಸಕ್ತಿದಾಯಕ ವಿಷಯ ಇಲ್ಲಿದೆ.

ಇಲ್ಲಿಂದ ಯಾವುದೇ ಮೂಲೆಗಾದ್ರೂ ಪ್ರಯಾಣಿಸ್ಬೋದು
ಭಾರತೀಯ ರೈಲ್ವೆ ಜಗತ್ತಿನಲ್ಲೇ ಅತಿ ದೊಡ್ಡ ಸಾರಿಗೆ ಜಾಲಗಳಲ್ಲಿ ಒಂದು. ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಹಂಚಿಹೋಗಿರುವ 'ನವಾಪುರ' ನಿಲ್ದಾಣ ಅಥವಾ ವೀಸಾ-ಪಾಸ್‌ಪೋರ್ಟ್ ಬೇಕಾಗಿರುವ 'ಅಟ್ಟಾರಿ' ನಿಲ್ದಾಣದಂತಹ ಅನೇಕ ವಿಶೇಷ ರೈಲ್ವೆ ನಿಲ್ದಾಣಗಳಿವೆ ಅಲ್ಲವೇ, ಆದರೆ ಈಗ ನಾವು ಹೇಳಹೊರಟಿರುವುದು ಮಥುರಾ ಜಂಕ್ಷನ್ ಬಗ್ಗೆ. ಇಲ್ಲಿಂದ ನೀವು ಭಾರತದ ಯಾವುದೇ ಮೂಲೆಗಾದರೂ ಪ್ರಯಾಣಿಸಬಹುದು.
ಮಥುರಾ ಜಂಕ್ಷನ್ ಯಾಕೆ ಇಷ್ಟು ವಿಶೇಷ?
ಉತ್ತರ ಪ್ರದೇಶದಲ್ಲಿರುವ ಮಥುರಾ ಜಂಕ್ಷನ್ ಉತ್ತರ ಮಧ್ಯ ರೈಲ್ವೆ ವಲಯದ ಪ್ರಮುಖ ಭಾಗವಾಗಿದೆ. ಈ ನಿಲ್ದಾಣದ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಇಲ್ಲಿಂದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಹೀಗೆ ನಾಲ್ಕೂ ದಿಕ್ಕುಗಳಿಗೆ ರೈಲುಗಳು ಲಭ್ಯವಿವೆ.
ಎಲ್ಲೆಲ್ಲಿಗೆ ಹೋಗ್ಬೋದು?
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಗುಜರಾತ್‌ನಿಂದ ಅಸ್ಸಾಂವರೆಗೆ ನೀವು ಎಲ್ಲಿಗೆ ಹೋಗಬೇಕಿದ್ದರೂ ಇಲ್ಲಿ ರೈಲು ಸಿಗುತ್ತದೆ.
ರೈಲ್ವೆ ಹಬ್
ದೆಹಲಿಯಿಂದ ಕೇವಲ 140 ಕಿ.ಮೀ ದೂರದಲ್ಲಿರುವ ಈ ನಿಲ್ದಾಣದಲ್ಲಿ ಪ್ರತಿದಿನ ನೂರಾರು ರೈಲುಗಳು ಸಂಚರಿಸುತ್ತವೆ. ಇದರಿಂದಾಗಿ ಪ್ರಯಾಣಿಕರು ಸುಲಭವಾಗಿ ಕನೆಕ್ಟಿಂಗ್ ರೈಲುಗಳನ್ನು ಪಡೆಯಬಹುದು.
ವಿದೇಶಿ ಪ್ರವಾಸಿಗರಿಗೆ ಭಾರತೀಯ ರೈಲುಗಳೇ ಇಷ್ಟ ಯಾಕೆ?
ಅಮೆರಿಕ, ಕೆನಡಾ ಮತ್ತು ಜರ್ಮನಿಯಂತಹ ದೇಶಗಳಿಂದ ಬರುವ ಪ್ರವಾಸಿಗರು ಹೆಚ್ಚಾಗಿ ಭಾರತೀಯ ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ಅದಕ್ಕೆ ಮುಖ್ಯ ಕಾರಣಗಳು:
ಕಡಿಮೆ ವೆಚ್ಚ: ವಿದೇಶಗಳಿಗೆ ಹೋಲಿಸಿದರೆ ಭಾರತದ ರೈಲ್ವೆ ಟಿಕೆಟ್ ದರಗಳು ತುಂಬಾ ಕಡಿಮೆ.
ಸೌಲಭ್ಯಗಳು: ಎಸಿ ಕೋಚ್‌ಗಳಲ್ಲಿ ಸಿಗುವ ಬೆಡ್‌ಶೀಟ್, ಪರ್ದೆಗಳು ಮತ್ತು ಚಹಾ-ತಿಂಡಿ ಸೌಲಭ್ಯಗಳು ಅವರಿಗೆ ಆರಾಮದಾಯಕ ಎನಿಸುತ್ತವೆ.
ಸಾಂಸ್ಕೃತಿಕ ಅನುಭವ: ರೈಲು ಪ್ರಯಾಣದ ವೇಳೆ ಸಿಗುವ ಹಳ್ಳಿಗಳ ದೃಶ್ಯಗಳು, ರೈಲ್ವೆ ನಿಲ್ದಾಣಗಳಲ್ಲಿ ಸಿಗುವ ಸ್ಥಳೀಯ ತಿಂಡಿಗಳು ಮತ್ತು ಜನರ ಸ್ನೇಹಪರ ಗುಣ ಅವರಿಗೆ ಭಾರತದ 'ವೈವಿಧ್ಯತೆಯಲ್ಲಿ ಏಕತೆ'ಯನ್ನು ತೋರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

