MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಡೇಟ್ ಬಾರ್ ಆಗಿರೋ ಟಾಲ್ಕಮ್ ಪೌಡರ್ ಕಸವಲ್ಲ, ಉಪಯೋಗ ತಿಳಿದ್ರೆ ಹಣ ಉಳಿತಾಯ

ಡೇಟ್ ಬಾರ್ ಆಗಿರೋ ಟಾಲ್ಕಮ್ ಪೌಡರ್ ಕಸವಲ್ಲ, ಉಪಯೋಗ ತಿಳಿದ್ರೆ ಹಣ ಉಳಿತಾಯ

Talcum Powder Uses :ಮನೆಗೆ ತಂದ ಟಾಲ್ಕಮ್ ಪೌಡರನ್ನು ಬಳಸೋ ಬದಲು ಎಸೆಯೋದೇ ಹೆಚ್ಚು. ತಂದು ಮೂಲೆಯಲ್ಲಿಟ್ರೆ ಅದರ ಅವಧಿ ಮುಗಿದಿದ್ದು ನೆನಪಿರೋದಿಲ್ಲ. ನಂತ್ರ ಅದನ್ನು ಕಸಕ್ಕೆ ಎಸೆಯುತ್ತೇವೆ. ಆದ್ರೆ ಕಸಕ್ಕೆ ಹಾಕುವ ಬದಲು ಅದನ್ನು ಅನೇಕ ರೀತಿಯಲ್ಲಿ ಬಳಕೆ ಮಾಡ್ಬಹುದು.

2 Min read
Author : Roopa Hegde
Published : May 22 2026, 02:29 PM IST
Share this Photo Gallery
  • FB
  • TW
  • Linkdin
  • Whatsapp
16
ಟಾಲ್ಕಮ್ ಪೌಡರ್ ಉಪಯೋಗ
Image Credit : Asianet News

ಟಾಲ್ಕಮ್ ಪೌಡರ್ ಉಪಯೋಗ

ಡೇಟ್ ಬಾರ್ ಆಗಿರುವ ಟಾಲ್ಕಮ್ ಪೌಡರ್ ಚರ್ಮಕ್ಕೆ ಹಾನಿಕಾರಕ. ಆದ್ರೆ ಅದನ್ನು ಬೇರೆ ರೀತಿಯಲ್ಲಿ ನೀವು ಬಳಕೆ ಮಾಡ್ಬಹುದು. ಬಿಗಿಯಾದ ಶೂಲೇಸ್ ಗಂಟಿನ ಮೇಲೆ ಸ್ವಲ್ಪ ಟಾಲ್ಕಮ್ ಪೌಡರ್ ಸಿಂಪಡಿಸುವುದರಿಂದ ಎಳೆಗಳ ನಡುವಿನ ಘರ್ಷಣೆ ಕಡಿಮೆಯಾಗುತ್ತದೆ. ಪುಡಿಯ ಸೂಕ್ಷ್ಮ ಕಣಗಳು ಲೇಸ್ಗಳನ್ನು ನಯಗೊಳಿಸುತ್ತದೆ. ಗಂಟು ಸಡಿಲಗೊಳ್ಳುತ್ತದೆ. ಶೂಲೇಸ್ ಬಿಗಿಯಾದಾಗ ಬಿಗಿಯಾದ ಗಂಟನ್ನು ಉಗುರಿನಿಂದ ಬಿಡಿಸೋದು ಕಷ್ಟ. ಟಾಲ್ಕಮ್ ಪೌಡರ್ ಬಳಸಿದ್ರೆ ಇದು ಸುಲಭ.

Add Asianetnews Kannada as a Preferred SourcegooglePreferred
26
ಇರುವೆ ಓಡಿಸಲು ಟಾಲ್ಕಮ್ ಪೌಡರ್
Image Credit : Asianet News

ಇರುವೆ ಓಡಿಸಲು ಟಾಲ್ಕಮ್ ಪೌಡರ್

ಅಡುಗೆ ಮನೆ ಅಥವಾ ಮನೆಯ ಕೆಲ ಭಾಗದಲ್ಲಿ ಇರುವೆಗಳು ಕಾಣಿಸಿಕೊಳ್ಳುತ್ತವೆ. ಮಾರುಕಟ್ಟೆಯಿಂದ ಸ್ಪ್ರೇ ಖರೀದಿಸುವ ಬದಲು ಟಾಲ್ಕಮ್ ಪೌಡರ್ ಬಳಸಿ. ಅಲ್ಲದೆ, ನಿಮ್ಮ ಮನೆಯಲ್ಲಿ ಒಂದು ಮೂಲೆಯಲ್ಲಿ ಅಥವಾ ಹೂವಿನ ಕುಂಡದ ಸುತ್ತಲೂ ಇರುವೆಗಳು ನಿರಂತರವಾಗಿ ಬರ್ತಿದ್ದರೆ ಅಲ್ಲಿ ಸ್ವಲ್ಪ ಟಾಲ್ಕಮ್ ಪೌಡರ್ ಸಿಂಪಡಿಸಿ. ಇರುವೆಗಳು ಅಲ್ಲಿಗೆ ಬರೋದಿಲ್ಲ.

Related Articles

Related image1
ಸ್ಮಾರ್ಟ್‌ ಫೋನ್‌ ಕಾರಣಕ್ಕೆ ಮಕ್ಕಳಾಗ್ತಿಲ್ಲ ! ಭಾರತದಲ್ಲಿ ಇಳಿತಿದೆ ಜನನ ದರ
Related image2
ವರ್ಷಪೂರ್ತಿ ಹುಣಸೆಹಣ್ಣು ಫ್ರೆಶ್ ಆಗಿರಬೇಕೇ? ಅಮ್ಮಮ್ಮನ ಕಾಲದ ಈ ಉಪ್ಪಿನ ಟ್ರಿಕ್ ಬಳಸಿ
36
ಚೈನ್ ಗಂಟು ಬಿಡಿಸಿ
Image Credit : Asianet News

ಚೈನ್ ಗಂಟು ಬಿಡಿಸಿ

ಬರೀ ಶೂ ಲೇಸ್ ಗಂಟು ಮಾತ್ರವಲ್ಲ ನೀವು ನಿಮ್ಮ ಚಿನ್ನದ ಚೈನ್ ಗಂಟಾಗಿದ್ದರೆ ಅದನ್ನು ಬಳಸಬಹುದು. ಡೇಟ್ ಬಾರ್ ಆಗಿರುವ ಟಾಲ್ಕಮ್ ಪೌಡರ್ ಇದಕ್ಕೆ ಉಪಯುಕ್ತ. ಗಂಟು ಹಾಕಿದ ಜಾಗದಲ್ಲಿ ಸ್ವಲ್ಪ ಪುಡಿಯನ್ನು ಸಿಂಪಡಿಸಿ. ಪುಡಿ ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಚೈನ್ ಮೇಲಿನ ಘರ್ಷಣೆ ಕಡಿಮೆಯಾಗುತ್ತದೆ. ನಂತ್ರ ಸೂಜಿ ಅಥವಾ ಬೆರಳಿನಿಂದ ಗಂಟುವನ್ನು ಸುಲಭವಾಗಿ ಬಿಚ್ಚಬಹುದು.

46
ಶೂ ವಾಸನೆಗೆ ಟಾಲ್ಕಮ್ ಪೌಡರ್
Image Credit : Asianet News

ಶೂ ವಾಸನೆಗೆ ಟಾಲ್ಕಮ್ ಪೌಡರ್

ಬೇಸಿಗೆಯಲ್ಲಿ ಬೆವರು ವಾಸನೆ ಹಾಗೂ ಮಳೆಗಾಲದಲ್ಲಿ ನೀರಿನ ವಾಸನೆ ಬರೋದು ಸಾಮಾನ್ಯ. ಶೂಗಳಿಂದ ಬರುವ ಈ ವಾಸನೆಯನ್ನು ನೀವು ಟಾಲ್ಕಮ್ ಪೌಡರ್ ನಿಂದ ದೂರ ಮಾಡಬಹುದು. ರಾತ್ರಿ ನಿಮ್ಮ ಶೂ ಒಳಗೆ ಸ್ವಲ್ಪ ಡೇಟ್ ಬಾರ್ ಆಗಿರುವ ಟಾಲ್ಕಮ್ ಪೌಡರ್ ಹಾಕಿ. ಬೆಳಿಗ್ಗೆ ಶೂ ಅಲ್ಲಾಡಿಸಿ. ಟಾಲ್ಕಮ್ ಪೌಡರ್ ತೇವಾಂಶ ಮತ್ತು ವಾಸನೆಯನ್ನು ಹೀರಿಕೊಳ್ಳುತ್ತದೆ.

56
ಎಣ್ಣೆ ಕಲೆಗೆ ಪರಿಹಾರ
Image Credit : Asianet News

ಎಣ್ಣೆ ಕಲೆಗೆ ಪರಿಹಾರ

ನಿಮ್ಮ ಬಟ್ಟೆ ಮೇಲೆ ಎಣ್ಣೆ ಕಲೆಯಾಗಿದ್ದರೆ ಅದನ್ನು ನೀವು ಟಾಲ್ಕಮ್ ಪೌಡರ್ ಬಳಸಿ ತೆಗೆಯಬಹುದು. ಎಣ್ಣೆ ಕಲೆಯ ಮೇಲೆ ಟಾಲ್ಕಮ್ ಪೌಡರ್ ಸಿಂಪಡಿಸಿ ಸ್ವಲ್ಪ ಸಮಯ ಹಾಗೇ ಬಿಡಿ. ಪುಡಿ ಬಟ್ಟೆಯಿಂದ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ನಂತರ, ಅದನ್ನು ಬ್ರಷ್ನಿಂದ ಸ್ವಚ್ಛಗೊಳಿಸಿ ಮತ್ತು ಬಟ್ಟೆಗಳನ್ನು ಸೋಪಿನಿಂದ ತೊಳೆಯಿರಿ. ಟಾಲ್ಕಮ್ ಪೌಡರ್ ಎಸೆಯುವ ಬದಲು ಎಣ್ಣೆ ಕಲೆ ತೆಗೆಯಲು ಇದನ್ನು ಬಳಸಬಹುದು.

66
ಬಾಗಿಲು ಶಬ್ದ ಕಡಿಮೆ ಮಾಡುತ್ತೆ ಟಾಲ್ಕಮ್ ಪೌಡರ್
Image Credit : Asianet News

ಬಾಗಿಲು ಶಬ್ದ ಕಡಿಮೆ ಮಾಡುತ್ತೆ ಟಾಲ್ಕಮ್ ಪೌಡರ್

ಬಾಗಿಲು ಅಥವಾ ಕಿಟಕಿ ಬಾಗಿಲು ಶಬ್ಧ ಮಾಡ್ತಿರುತ್ತದೆ. ಅದನ್ನು ಕಡಿಮೆ ಮಾಡಲು ಟಾಲ್ಕಮ್ ಪೌಡರ್ ಬಳಸಿ. ಡ್ರಾಯರ್ ಅಥವಾ ಶಬ್ಧ ಮಾಡುವ ಬಾಗಿಲಿಗೆ ನೀವು ಟಾಲ್ಕಮ್ ಪೌಡರ್ ಹಾಕಿದ್ರೆ ಅದು ಶಬ್ಧವನ್ನು ಕಡಿಮೆ ಮಾಡುತ್ತದೆ. ಸುಲಭವಾಗಿ ಬಾಗಿಲು ಅಥವಾ ಡ್ರಾಯರನ್ನು ನೀವು ತೆಗೆಯಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
ಒಂದೇ ದಿನಕ್ಕೆ 1 ಕೋಟಿ ಫಾಲೋವರ್ಸ್ ಗಳಿಸಿದ ಚೀನಾದ ಸುಂದರಿ; ಈಕೆಯ 10 ಮಿಲಿಯನ್ ಹಿಸ್ಟರಿಯೇ ಬೇರೆ!
Recommended image2
ಈ 3 ತರಕಾರಿ ಕಟ್ ಮಾಡಿದ ತಕ್ಷಣ ಅಡುಗೆ ಮಾಡ್ಬೇಡಿ ಎಂದ ಡಾಕ್ಟರ್, ಕಾರಣ ಗೊತ್ತಾದ್ರೆ ನೀವೂ ಖುಷಿಯಾಗ್ತೀರ
Recommended image3
"ಮದುವೆ ಸರಿ ಹೋಗ್ಲಿಲ್ಲ ಅಂದ್ರೆ ವಾಪಸ್ ಬರಬಹುದಾ?" ಟ್ವಿಶಾ ಶರ್ಮಾ ಸಾವಿನ ನಂತ್ರ ಹೆಚ್ಚು ವೈರಲ್ ಆಗ್ತಿದೆ ಈ ವಿಡಿಯೋ
Related Stories
Recommended image1
ಸ್ಮಾರ್ಟ್‌ ಫೋನ್‌ ಕಾರಣಕ್ಕೆ ಮಕ್ಕಳಾಗ್ತಿಲ್ಲ ! ಭಾರತದಲ್ಲಿ ಇಳಿತಿದೆ ಜನನ ದರ
Recommended image2
ವರ್ಷಪೂರ್ತಿ ಹುಣಸೆಹಣ್ಣು ಫ್ರೆಶ್ ಆಗಿರಬೇಕೇ? ಅಮ್ಮಮ್ಮನ ಕಾಲದ ಈ ಉಪ್ಪಿನ ಟ್ರಿಕ್ ಬಳಸಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved