ಮಳೆಗಾಲದಲ್ಲಿ ಸೊಂಪಾಗಿ ಬೆಳೆಯುವ 7 ಗಿಡಗಳಿವು.. ಹೆಚ್ಚು ಆರೈಕೆ ಬೇಡ, ಕಣ್ಣಿಗೆ ಹಬ್ಬವೋ ಹಬ್ಬ
Monsoon plants in Kannada: ಮಳೆಗಾಲವು ಬಾಲ್ಕನಿ ಮತ್ತು ಟೆರೇಸ್‌ಗಳನ್ನು ಗಟ್ಟಿಮುಟ್ಟಾದ, ಮಳೆಯನ್ನು ಇಷ್ಟಪಡುವ ಗಿಡಗಳಿಂದ ಸಿಂಗರಿಸಲು ಹೇಳಿ ಮಾಡಿಸಿದ ಸಮಯ. ಈ ಏಳು ಬಗೆಯ ಗಿಡಗಳು ತೇವಾಂಶವಿರುವ ವಾತಾವರಣದಲ್ಲಿ ಚೆನ್ನಾಗಿ ಬೆಳೆದು, ಪುಟ್ಟ ಜಾಗಕ್ಕೆ ಬಣ್ಣ, ಸುವಾಸನೆ ಮತ್ತು ಹಸಿರನ್ನು ತುಂಬುತ್ತವೆ.

ಬೆಗೋನಿಯಾ
ಬೆಗೋನಿಯಾ
ಬೆಗೋನಿಯಾ ಗಿಡಗಳು ಮಳೆಗಾಲದುದ್ದಕ್ಕೂ ಆಕರ್ಷಕ ಹೂವು ಮತ್ತು ಎಲೆಗಳನ್ನು ಬಿಡುತ್ತವೆ. ನೆರಳಿರುವ ಜಾಗಗಳಿಗೆ ದೀರ್ಘಕಾಲದ ಬಣ್ಣವನ್ನು ನೀಡಲು ಇವು ಸೂಕ್ತ.
ಕೋಲಿಯಸ್
ಕೋಲಿಯಸ್
ಕೋಲಿಯಸ್ ಗಿಡಗಳು ತಮ್ಮ ವರ್ಣರಂಜಿತ ಎಲೆಗಳಿಗೆ ಹೆಸರುವಾಸಿ. ಇವು ಮಳೆಗಾಲದ ದಿನಗಳನ್ನು ಇನ್ನಷ್ಟು ಸುಂದರವಾಗಿಸುತ್ತವೆ. ಇವುಗಳಿಗೆ ಹೆಚ್ಚು ಆರೈಕೆ ಬೇಕಿಲ್ಲ ಮತ್ತು ಸಣ್ಣ ಜಾಗದಲ್ಲಿಯೂ ಕಣ್ಸೆಳೆಯುವಂತೆ ಕಾಣುತ್ತವೆ.
ಕ್ಯಾಲಾಡಿಯಂ
ಕ್ಯಾಲಾಡಿಯಂ
ಕ್ಯಾಲಾಡಿಯಂ ಗಿಡಗಳು ತಮ್ಮ ಆಕರ್ಷಕ ಹೃದಯಾಕಾರದ ಎಲೆಗಳಿಗೆ ಪ್ರಸಿದ್ಧ. ಇವು ಬೆಚ್ಚಗಿನ ಮತ್ತು ತೇವಾಂಶವಿರುವ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಇದರ ದಪ್ಪ ವಿನ್ಯಾಸಗಳು ಬಾಲ್ಕನಿ ಗಾರ್ಡನ್‌ಗೆ ಡ್ರಾಮಟಿಕ್ ಲುಕ್ ನೀಡುತ್ತವೆ.
ಫರ್ನ್
ಫರ್ನ್
ಫರ್ನ್ ಗಿಡಗಳು ತೇವಾಂಶ ಹೆಚ್ಚಿರುವ ವಾತಾವರಣದಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ಹಾಗಾಗಿ ಮಳೆಗಾಲಕ್ಕೆ ಇವು ಹೇಳಿ ಮಾಡಿಸಿದ ಗಿಡಗಳು. ಇದರ ಸೂಕ್ಷ್ಮವಾದ ಎಲೆಗಳು ಬಾಲ್ಕನಿಗೆ ಉಷ್ಣವಲಯದ ತಾಜಾ ಅನುಭವ ನೀಡುತ್ತವೆ.
ಪೀಸ್ ಲಿಲ್ಲಿ
ಪೀಸ್ ಲಿಲ್ಲಿ
ಪೀಸ್ ಲಿಲಿ ಗಿಡಗಳು ಮಳೆಗಾಲದ ತೇವಾಂಶದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಇವು ಅಂದವಾದ ಬಿಳಿ ಹೂವುಗಳನ್ನು ಬಿಡುತ್ತವೆ. ಇದರ ಸೊಂಪಾದ ಎಲೆಗಳು ಬಾಲ್ಕನಿಗೆ ತಕ್ಷಣವೇ ತಾಜಾ ಮತ್ತು ಶಾಂತ ನೋಟವನ್ನು ನೀಡುತ್ತವೆ.
ಸ್ಪೈಡರ್ ಪ್ಲಾಂಟ್
ಸ್ಪೈಡರ್ ಪ್ಲಾಂಟ್
ಸ್ಪೈಡರ್ ಪ್ಲಾಂಟ್‌ಗಳು ಬದಲಾಗುವ ಹವಾಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಇವು ಕುಂಡಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಕೆಳಗೆ ಇಳಿಬೀಳುವ ಇದರ ಎಲೆಗಳು ನೇತಾಡುವ ಕುಂಡಗಳಿಗೆ ಸ್ಟೈಲಿಶ್ ನೋಟ ನೀಡುತ್ತವೆ.
ಸಿಂಗೋನಿಯಂ
ಸಿಂಗೋನಿಯಂ
ಸಿಂಗೋನಿಯಂ ಗಿಡಗಳ ನಿರ್ವಹಣೆ ತುಂಬಾ ಸುಲಭ. ಇವು ಮಳೆಗಾಲದಲ್ಲಿ ಹುಲುಸಾಗಿ ಬೆಳೆಯುತ್ತವೆ. ಇದರ ಸೊಂಪಾದ ಹಸಿರು ಎಲೆಗಳು ಸೀಮಿತ ಜಾಗದಲ್ಲಿಯೂ ದಟ್ಟವಾದ, ಸುಂದರವಾದ ಗಾರ್ಡನ್ ನಿರ್ಮಿಸಲು ಸಹಾಯ ಮಾಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
