MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಬೀರುವಿನಲ್ಲಿರೋ ರೇಷ್ಮೆ ಸೀರೆ ಹಾಳಾಗಬಾರದಾ? ಬ್ಯಾಡ್ ಸ್ಮೆಲ್, ಕೀಟಗಳ ಕಾಟನಾ? 1 ಕರ್ಪೂರದಲ್ಲಿದೆ 10 ಪರಿಹಾರ

ಬೀರುವಿನಲ್ಲಿರೋ ರೇಷ್ಮೆ ಸೀರೆ ಹಾಳಾಗಬಾರದಾ? ಬ್ಯಾಡ್ ಸ್ಮೆಲ್, ಕೀಟಗಳ ಕಾಟನಾ? 1 ಕರ್ಪೂರದಲ್ಲಿದೆ 10 ಪರಿಹಾರ

Karpura uses in Kannada: ಬೀರುವಿನಲ್ಲಿ ಹೆಚ್ಚು ದಿನ ಮಡಚಿಟ್ಟ ದುಬಾರಿ ರೇಷ್ಮೆ ಸೀರೆಗಳು ಹಾಳಾಗುವ ಭಯವೇ? ಅಥವಾ ಮನೆಯಲ್ಲಿ ಇರುವೆ, ಸೊಳ್ಳೆ ಹಾಗೂ ಕೆಟ್ಟ ವಾಸನೆಯ ಕಾಟ ಕಾಡುತ್ತಿದೆಯೇ? ಹಾಗಾದರೆ 10 ಅಮೇಜಿಂಗ್ ಕಿಚನ್ & ಹೋಮ್ ಹ್ಯಾಕ್ಸ್ ಇಲ್ಲಿದೆ ನೋಡಿ.

2 Min read
Author : Ashwini HR
Published : Sep 25 2026, 05:40 PM IST
Share this Photo Gallery
  • FB
  • TW
  • Linkdin
  • Whatsapp
15
10 ಅದ್ಭುತ ಟಿಪ್ಸ್
Image Credit : AI Image

10 ಅದ್ಭುತ ಟಿಪ್ಸ್

10 ಅದ್ಭುತ ಟಿಪ್ಸ್
ದೇವರ ಕೋಣೆಯಲ್ಲಿ ಪೂಜೆಗೆ ಬಳಸುವ ಪುಟ್ಟ ಕರ್ಪೂರದಲ್ಲಿ ಮನೆಯ ನೂರಾರು ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿಯಿದೆ ಎಂಬುದು ನಿಮಗೆ ಗೊತ್ತೇ? ಇರುವೆ-ಸೊಳ್ಳೆಗಳನ್ನು ಓಡಿಸುವುದರಿಂದ ಹಿಡಿದು ವಾಷಿಂಗ್ ಮಷಿನ್ ದುರ್ವಾಸನೆ ಹೋಗಲಾಡಿಸುವವರೆಗೆ ಕರ್ಪೂರವನ್ನು ಸ್ಮಾರ್ಟ್ ಆಗಿ ಬಳಸುವ 10 ಅದ್ಭುತ ಟಿಪ್ಸ್ ಇಲ್ಲಿವೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನ್ಯಾಚುರಲ್ ರೂಮ್ ಫ್ರೆಶ್ನರ್
Image Credit : Social media

ನ್ಯಾಚುರಲ್ ರೂಮ್ ಫ್ರೆಶ್ನರ್

ನ್ಯಾಚುರಲ್ ರೂಮ್ ಫ್ರೆಶ್ನರ್
ಪಾತ್ರೆಯಲ್ಲಿ ಅರ್ಧದಷ್ಟು ನೀರು ಹಾಕಿ, ಅದಕ್ಕೆ 1 ಕರ್ಪೂರವನ್ನು ಪುಡಿ ಮಾಡಿ ಕುದಿಸಿ. ನಂತರ ಆ ಬಿಸಿನೀರಿನ ಪಾತ್ರೆಯನ್ನು ಹಾಲ್‌ನಲ್ಲಿಟ್ಟು ಫ್ಯಾನ್ ಆನ್ ಮಾಡಿ. ಮನೆಯಲ್ಲಿ ನಾನ್‌ವೆಜ್ ಮಾಡಿದಾಗ ಅಥವಾ ಯಾವುದೇ ಕೆಟ್ಟ ವಾಸನೆಯಿದ್ದರೂ ತಕ್ಷಣವೇ ಹೋಗಿ, ಇಡೀ ಮನೆ ಘಮಘಮಿಸುತ್ತದೆ. (ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಎಚ್ಚರಿಕೆ ವಹಿಸಿ).

ಶೂಗಳ ಕೆಟ್ಟ ವಾಸನೆ ಮತ್ತು ಕೀಟಗಳ ತಡೆಗೆ
ಮಕ್ಕಳ ಶಾಲಾ ಶೂ ಅಥವಾ ಶೂ ರ್ಯಾಕ್‌ನಲ್ಲಿ (Shoe rack) ತಲಾ ಒಂದೊಂದು ಕರ್ಪೂರದ ಬಿಲ್ಲೆಯನ್ನು ಹಾಕಿಡಿ. ಇದರಿಂದ ಬೆವರಿನ ಕೆಟ್ಟ ವಾಸನೆ ಬರುವುದಿಲ್ಲ ಮತ್ತು ಶೂ ಒಳಗೆ ಯಾವುದೇ ಸಣ್ಣಪುಟ್ಟ ಕ್ರಿಮಿ-ಕೀಟಗಳು ಸೇರಿಕೊಳ್ಳುವುದಿಲ್ಲ.

ಇರುವೆಗಳ ಕಾಟಕ್ಕೆ ರಾಮಬಾಣ
3-4 ಕರ್ಪೂರವನ್ನು ನುಣ್ಣಗೆ ಪುಡಿ ಮಾಡಿ ಒಂದು ಡಬ್ಬದಲ್ಲಿ ಇಟ್ಟುಕೊಳ್ಳಿ. ಅಡುಗೆ ಮನೆಯ ಕೌಂಟರ್ ಟಾಪ್, ಸಕ್ಕರೆ ಡಬ್ಬದ ಸುತ್ತ ಅಥವಾ ಇರುವೆಗಳು ಬರುವ ಜಾಗದಲ್ಲಿ ಈ ಪುಡಿಯನ್ನು ಲಘುವಾಗಿ ಉದುರಿಸಿ. ಕರ್ಪೂರದ ಘಾಟಿಗೆ ಇರುವೆಗಳು ಆ ಜಾಗಕ್ಕೆ ಸುಳಿಯುವುದೇ ಇಲ್ಲ.

Related Articles

Related image1
ಯಾವುದೇ ಬಿಲ್, ಬಸ್ ಟಿಕೆಟ್ ಮುಟ್ಟೋ ಮುಂಚೆ ಇಷ್ಟು ಮಾಡಿ.. ಇಲ್ಲವೆಂದ್ರೆ ಕಾದಿದೆ ಕ್ಯಾನ್ಸರ್, ಬಂಜೆತನದ ಆಪತ್ತು!
Related image2
ಸ್ನಾನಕ್ಕೂ ಮುನ್ನ ಹತ್ತಿಗೆ ಕೊಬ್ಬರಿ ಎಣ್ಣೆ ಹಾಕಿ ಕಿವಿಗೆ ಇಟ್ಟರೆ ಏನೆಲ್ಲಾ ಲಾಭಗಳಿವೆ ನೋಡಿ
35
ಸೋಫಾ ಮತ್ತು ಕಿಟಕಿ ಕರ್ಟನ್‌ಗಳಿಗೆ ಹೋಮ್‌ಮೇಡ್ ಸ್ಪ್ರೇ
Image Credit : Freepik

ಸೋಫಾ ಮತ್ತು ಕಿಟಕಿ ಕರ್ಟನ್‌ಗಳಿಗೆ ಹೋಮ್‌ಮೇಡ್ ಸ್ಪ್ರೇ

ಸೋಫಾ ಮತ್ತು ಕಿಟಕಿ ಕರ್ಟನ್‌ಗಳಿಗೆ ಹೋಮ್‌ಮೇಡ್ ಸ್ಪ್ರೇ
ಕರ್ಪೂರದ ಪುಡಿಯನ್ನು ನೀರಿನಲ್ಲಿ ಬೆರೆಸಿ, ಫಿಲ್ಟರ್ ಮಾಡಿ ಸ್ಪ್ರೇ ಬಾಟಲಿಗೆ ತುಂಬಿಸಿಕೊಳ್ಳಿ. ಇದನ್ನು ಸೋಫಾ ಮತ್ತು ಕಿಟಕಿಯ ಪರದೆಗಳ (Curtains) ಮೇಲೆ ಲಘುವಾಗಿ ಸ್ಪ್ರೇ ಮಾಡಿ. ಇದು ಕ್ರಿಮಿನಾಶಕವಾಗಿ ಕೆಲಸ ಮಾಡುವುದರ ಜೊತೆಗೆ ಕರ್ಟನ್ ಮೇಲೆ ಸೊಳ್ಳೆಗಳು ಕೂರದಂತೆ ತಡೆಯುತ್ತದೆ.

ರೇಷ್ಮೆ ಸೀರೆ ಮತ್ತು ಬಟ್ಟೆಗಳ ರಕ್ಷಣೆಗೆ
ಒಂದು ಟಿಶ್ಯೂ ಪೇಪರ್‌ನಲ್ಲಿ 2-3 ಕರ್ಪೂರ ಇಟ್ಟು ಮಡಚಿ, ರಬ್ಬರ್ ಬ್ಯಾಂಡ್ ಹಾಕಿ ಸೂಜಿಯಿಂದ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ. ಇದನ್ನು ಬೀರುವಿನಲ್ಲಿ ರೇಷ್ಮೆ ಸೀರೆಗಳ ಮಧ್ಯೆ ಇಡಿ. ಬಟ್ಟೆಗಳಿಗೆ ಗೆದ್ದಲು, ಚಿಟ್ಟೆ ಹುಳುಗಳು ಬೀಳುವುದಿಲ್ಲ ಮತ್ತು ಹೆಚ್ಚು ದಿನ ಇಟ್ಟರೂ ಬಟ್ಟೆ ತಾಜಾ ಸುವಾಸನೆಯಿಂದ ಕೂಡಿರುತ್ತದೆ.

ಸೊಳ್ಳೆಗಳನ್ನು ಓಡಿಸಲು ಕರ್ಪೂರದ ನೀರು
ಒಂದು ಸಣ್ಣ ಬಟ್ಟಲಿನಲ್ಲಿ ನೀರು ಹಾಕಿ 1 ಕರ್ಪೂರವನ್ನು ಪುಡಿ ಮಾಡಿ ಕೋಣೆಯ ಯಾವುದಾದರೂ ಮೂಲೆಯಲ್ಲಿ ಇಡಿ. ಇದರಿಂದ ಹೊರಹೊಮ್ಮುವ ನೈಸರ್ಗಿಕ ಸುವಾಸನೆಗೆ ಸೊಳ್ಳೆಗಳು ಕೋಣೆಯೊಳಗೆ ಬರುವುದಿಲ್ಲ. ಮಳೆಗಾಲಕ್ಕೆ ಇದು ಬೆಸ್ಟ್ ಟ್ರಿಕ್.

45
ಹಳೆಯ ಪುಸ್ತಕಗಳಿಗೆ ಗೆದ್ದಲು ಹಿಡಿಯದಂತೆ ಕಾಪಾಡಲು
Image Credit : Google

ಹಳೆಯ ಪುಸ್ತಕಗಳಿಗೆ ಗೆದ್ದಲು ಹಿಡಿಯದಂತೆ ಕಾಪಾಡಲು

ಹಳೆಯ ಪುಸ್ತಕಗಳಿಗೆ ಗೆದ್ದಲು ಹಿಡಿಯದಂತೆ ಕಾಪಾಡಲು
ಹಳೆಯ ಪುಸ್ತಕಗಳ ಹಾಳೆಗಳು ಹಳದಿಯಾಗುವುದನ್ನು ಮತ್ತು ಗೆದ್ದಲು ಅಥವಾ ಬೆಳ್ಳಿಹುಳುಗಳು (Silverfish) ಕತ್ತರಿಸುವುದನ್ನು ತಡೆಯಲು ಪುಸ್ತಕಗಳ ಮಧ್ಯದಲ್ಲಿ ಒಂದೊಂದು ಕರ್ಪೂರದ ತುಂಡನ್ನು ಇಟ್ಟು ಮುಚ್ಚಿಡಿ.

ಕೀಲು ನೋವು ನಿವಾರಣೆ & ಬಾಗಿಲಿನ ಶಬ್ದ ತಡೆಯಲು (ಕರ್ಪೂರದ ಎಣ್ಣೆ)
ಒಗ್ಗರಣೆ ಸೌಟಿನಲ್ಲಿ 2 ಚಮಚ ತೆಂಗಿನ ಎಣ್ಣೆ ಮತ್ತು 2 ಕರ್ಪೂರ ಹಾಕಿ ಒಲೆಯ ಮೇಲಿಟ್ಟು ಲಘುವಾಗಿ ಬಿಸಿ ಮಾಡಿ (ಕರ್ಪೂರ ಕರಗಿದ ತಕ್ಷಣ ಗ್ಯಾಸ್ ಆಫ್ ಮಾಡಿ).

ಪ್ರಯೋಜನ 1: ಈ ಉಗುರುಬೆಚ್ಚಗಿನ ಎಣ್ಣೆಯನ್ನು ಕೈ-ಕಾಲು ನೋವು, ಮೊಣಕಾಲು ನೋವು ಅಥವಾ ಮಕ್ಕಳಿಗೆ ಕಾಲು ನೋವಿದ್ದಾಗ ಹಚ್ಚಿ ಮಸಾಜ್ ಮಾಡಿದರೆ ನೋವು ತಕ್ಷಣ ಶಮನವಾಗುತ್ತದೆ.

ಪ್ರಯೋಜನ 2: ಇದೇ ಎಣ್ಣೆಯನ್ನು ಹತ್ತಿಯಿಂದ ಬಾಗಿಲಿನ ಹಿಂಜ್‌ಗಳಿಗೆ (ಕೀಲುಗಳಿಗೆ) ಸವರಿದರೆ, ಬಾಗಿಲು ಹಾಕುವಾಗ-ತೆಗೆಯುವಾಗ ಬರುವ ಕಿರಿಕಿರಿ ಶಬ್ದ ನಿಲ್ಲುತ್ತದೆ ಮತ್ತು ತುಕ್ಕು ಹಿಡಿಯುವುದಿಲ್ಲ.

55
ಮನೆ ಒರೆಸುವಾಗ ಕರ್ಪೂರ ಬಳಸಿ
Image Credit : Freepik

ಮನೆ ಒರೆಸುವಾಗ ಕರ್ಪೂರ ಬಳಸಿ

ಮನೆ ಒರೆಸುವಾಗ ಕರ್ಪೂರ ಬಳಸಿ
ಮನೆ ಒರೆಸುವ (Mopping) ನೀರಿಗೆ ಲೋಷನ್ ಜೊತೆಗೆ 1-2 ಕರ್ಪೂರವನ್ನು ಪುಡಿ ಮಾಡಿ ಹಾಕಿ ನೆಲ ಒರೆಸಿ. ಮುಖ್ಯವಾಗಿ ಟೈಲ್ಸ್ ಮೂಲೆಗಳಲ್ಲಿ ಒರೆಸಿದರೆ, ಸಾಲಾಗಿ ಬರುವ ಇರುವೆಗಳ ಕಾಟ ಸಂಪೂರ್ಣ ನಿಲ್ಲುತ್ತದೆ ಹಾಗೂ ಇಡೀ ಮನೆ ದೇವಸ್ಥಾನದಂತೆ ಪವಿತ್ರ ಸುವಾಸನೆಯಿಂದ ಕೂಡಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು
 

Latest Videos
Recommended Stories
Recommended image1
ತುಂಬಾ ತಲೆನೋವು ಕಾಡ್ತಿದ್ಯಾ? ಈ ಪಾನೀಯಗಳನ್ನು ಕುಡಿಯಿರಿ, ಆರಾಮ ಅನುಭವಿಸಿ!
Recommended image2
ಪ್ರತಿದಿನ ಟೊಮೆಟೊ ತಿಂದರೆ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳಿವು
Recommended image3
ಅಬ್ಬಾ... ಏನು ರುಚಿ! ಟೆಂಪಲ್ ಸ್ಟೈಲ್ ಚಿತ್ರಾನ್ನದ ಅಸಲಿ ಸೀಕ್ರೆಟ್ ಇಲ್ಲಿದೆ, ಒಮ್ಮೆ ಟ್ರೈ ಮಾಡಿ ನೋಡಿ..!
Related Stories
Recommended image1
ಯಾವುದೇ ಬಿಲ್, ಬಸ್ ಟಿಕೆಟ್ ಮುಟ್ಟೋ ಮುಂಚೆ ಇಷ್ಟು ಮಾಡಿ.. ಇಲ್ಲವೆಂದ್ರೆ ಕಾದಿದೆ ಕ್ಯಾನ್ಸರ್, ಬಂಜೆತನದ ಆಪತ್ತು!
Recommended image2
ಸ್ನಾನಕ್ಕೂ ಮುನ್ನ ಹತ್ತಿಗೆ ಕೊಬ್ಬರಿ ಎಣ್ಣೆ ಹಾಕಿ ಕಿವಿಗೆ ಇಟ್ಟರೆ ಏನೆಲ್ಲಾ ಲಾಭಗಳಿವೆ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved