ತಪ್ಪಿ ಅಡುಗೆಯಲ್ಲಿ ಜಾಸ್ತಿ ಎಣ್ಣೆ ಹಾಕಿದ್ರಾ? ಕೇವಲ 1 ನಿಮಿಷದಲ್ಲಿ ಹೀಗೆ ತೆಗೆಯಿರಿ
Kitchen Hacks: ಅಡುಗೆ ಮಾಡುವಾಗ, ಅಚಾನಕ್ ಆಗಿ ಹೆಚ್ಚು ಎಣ್ಣೆ ಗ್ರೇವಿಯಲ್ಲಿ ಬಿದ್ದಿರುತ್ತೆ. ಕೊನೆಯ ಕ್ಷಣದಲ್ಲಿ ಈ ಎಣ್ಣೆಯನ್ನು ಹೇಗೆ ಕಡಿಮೆ ಮಾಡುವುದು ಎಂದು ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ನಿಮಗಾಗಿ ಅತ್ಯುತ್ತಮ ಕಿಚನ್ ಹ್ಯಾಕ್ಸ್. ಇದರಿಂದ ಒಂದೇ ನಿಮಿಷದಲ್ಲಿ ಎಣ್ಣೆ ತೆಗೆದು ಹಾಕಬಹುದು.

ಭಾರತೀಯ ಅಡುಗೆ
ಭಾರತೀಯ ಅಡುಗೆ ಅದರ ವೈವಿಧ್ಯತೆ ಮತ್ತು ರುಚಿಕರವಾದ ಸುವಾಸನೆಗಳಿಗೆ ಹೆಸರುವಾಸಿಯಾಗಿದೆ. ವೈವಿಧ್ಯಮಯ ಭಕ್ಷ್ಯಗಳಲ್ಲಿ, ಸಾರು, ಪಲ್ಯಕ್ಕೆ ವಿಶೇಷ ಸ್ಥಾಬ ಇದೆ. ಅನ್ನಕ್ಕೂ, ತಿಂಡಿಗಳಿಗೂ ಗ್ರೇವಿ ಬೇಕೇ ಬೇಕು. ಆದರೆ ಅಡುಗೆಮನೆಯಲ್ಲಿ ಅಡುಗೆ ಮಾಡುವಾಗ, ನಾವು ಆಕಸ್ಮಿಕವಾಗಿ ಗ್ರೇವಿಗೆ ಹೆಚ್ಚು ಎಣ್ಣೆಯನ್ನು ಸೇರಿಸಿಬಿಡುತ್ತೇವೆ. ನಂತರ ಅಯ್ಯೋ ಹೇಗಪ್ಪಾ ತೆಗೆಯೋದು ಎಂದು ಯೋಚನೆ ಮಾಡುತ್ತೇವೆ.
ಗ್ರೇವಿಯಲ್ಲಿ ಹೆಚ್ಚಿನ ಎಣ್ಣೆ
ಎಣ್ಣೆಯ ಅತಿಯಾದ ಬಳಕೆಯು ಅಡುಗೆಯ ರುಚಿಯನ್ನು ಹಾಳು ಮಾಡುವುದಲ್ಲದೆ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಅತಿಥಿಗಳು ನಿಮ್ಮ ಮನೆಗೆ ಬಂದಿರುತ್ತಾರೆ, ಅವಸರದಲ್ಲಿ ನೀವು ಅಡುಗೆ ಮಾಡುವಾಗ ಗ್ರೇವಿಗೆ ಸ್ವಲ್ಪ ಹೆಚ್ಚೇ ಎಣ್ಣೆ ಬಿದ್ದಿದೆ. ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಅನ್ನೋದನ್ನು ನೀವು ಯೋಚನೆ ಮಾಡುತ್ತೀರಿ ಅಲ್ವಾ? ನಿಮಗಾಗಿಯೇ ಇಲ್ಲಿದೆ ಬೆಸ್ಟ್ ಟ್ರಿಕ್ಸ್.
ಒಂದು ನಿಮಿಷದ ಐಸ್ ಟ್ರಿಕ್
ಸೋಶಿಯಲ್ ಮೀಡಿಯಾದಲ್ಲಿ ಗ್ರೇವಿಯಲ್ಲಿನ ಎಣ್ಣೆ ತೆಗೆಯುವ ಟ್ರಿಕ್ಸ್ ವೈರಲ್ ಆಗಿದೆ, ಇದಕ್ಕಾಗಿ ನಿಮಗೆ ಐಸ್ ಅಗತ್ಯವಿದೆ. ಐಸ್ ಟ್ರೇನಿಂದ ಐಸ್ ತೆಗೆದು ಚಮಚದ ಮೇಲೆ ಇರಿಸಿ. ನೀವು ಈ ಚಮಚವನ್ನು ಗ್ರೇವಿ ಮೇಲೆ ಇರಿಸಿದಾಗ, ಎಣ್ಣೆ ಚಮಚದ ಮೇಲ್ಮೈಗೆ ಅಂಟಿಕೊಳ್ಳುತ್ತದೆ. ಹೀಗೆ ಮಾಡುವುದರಿಂದ, ಸ್ವಲ್ಪ ಸ್ವಲ್ಪವಾಗಿ, ನೀವು ಒಂದು ನಿಮಿಷದಲ್ಲಿ ಗ್ರೇವಿಯಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಬಹುದು. ಗ್ರೇವಿಯಿಂದ ಎಣ್ಣೆಯನ್ನು ಕಡಿಮೆ ಮಾಡುವ ಈ ಟ್ರಿಕ್‌ಗೆ ಹೆಚ್ಚಿನ ಸಾಮಾಗ್ರಿಗಳು ಅಗತ್ಯವಿಲ್ಲ. ಇದೊಂದು ಸುಲಭ ಉಪಾಯವಾಗಿದೆ.
ಸರಿಯಾಗಿ ಬೇಯಿಸುವುದು ಕೂಡ ಮುಖ್ಯ
ತರಕಾರಿಗಳನ್ನು ಬೇಯಿಸುವಾಗ ಯಾವಾಗಲೂ ಎಣ್ಣೆಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಸಾಕಷ್ಟು ಬಿಸಿಯಾಗಿರುವಾಗ, ಅದು ಸ್ವಲ್ಪ ಪ್ರಮಾಣದ ತರಕಾರಿಗಳನ್ನು ಸಹ ಚೆನ್ನಾಗಿ ಬೇಯಿಸಬಹುದು. ಎಣ್ಣೆಯನ್ನು ಸರಿಯಾಗಿ ಬಿಸಿ ಮಾಡದಿದ್ದಾಗ, ತರಕಾರಿಗಳಿಗೆ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಬೇರ್ಪಟ್ಟಂತೆ ಕಾಣುತ್ತದೆ. ತರಕಾರಿಗಳನ್ನು ಬಿಸಿ ಮಾಡಲು ತಣ್ಣೀರು ಬಳಸಿದಾಗಲೂ ಇದು ಸಂಭವಿಸಬಹುದು.
ಆಲೂಗಡ್ಡೆ ಅಥವಾ ಟೊಮೆಟೊ ಪ್ಯೂರಿ ಬಳಸಿ
ಹೆಚ್ಚುವರಿ ಎಣ್ಣೆಯನ್ನು ಗ್ರೇವಿಯಿಂದ ತೆಗೆಯಲು ಆಲೂಗಡ್ಡೆ ಅಥವಾ ಟೊಮೆಟೊ ಪ್ಯೂರಿಯನ್ನು ಸೇರಿಸುವುದು. ಈ ಎರಡೂ ಟ್ರಿಕ್ಸ್ ಮಾಡಲು ಗ್ರೇವಿಯನ್ನು ಮತ್ತೆ ಬೇಯಿಸಬೇಕಾಗುತ್ತದೆ, ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
ಅಡುಗೆ ಟವಲ್ ಅಥವಾ ಟಿಶ್ಯೂ ಪೇಪರ್ ಬಳಸಿ
ಗ್ರೇವಿಯಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು, ನೀವು ಸ್ವಚ್ಛವಾದ ಅಡುಗೆ ಟವಲ್ ಅಥವಾ ಟಿಶ್ಯೂ ಪೇಪರ್ ಅನ್ನು ಬಳಸಬಹುದು. ಇವುಗಳಲ್ಲಿ ಯಾವುದಾದರೂ ಒಂದರಿಂದ ಹೆಚ್ಚುವರಿ ಎಣ್ಣೆಯನ್ನು ನಿಧಾನವಾಗಿ ತೆಗೆದು ಹಾಕಬಹುದು. ಅಡುಗೆ ಟವಲ್ ಅಥವಾ ಟಿಶ್ಯೂ ಪೇಪರ್ ಎಣ್ಣೆಯನ್ನು ಹೀರಿಕೊಳ್ಳುತ್ತದೆ, ಇದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.
ರೆಫ್ರಿಜರೇಟರ್ ನಲ್ಲಿಡಬಹುದು
ಕೋಲ್ಡ್ ನಲ್ಲಿ ಫ್ಯಾಟ್ ಗಟ್ಟಿಯಾಗುತ್ತದೆ. ಒಂದು ವೇಳೆ ಗ್ರೇವಿಯಲ್ಲಿ ಹೆಚ್ಚು ಎಣ್ಣೆ ಇದ್ದರೆ, ಅದನ್ನು ತೆಗೆದುಹಾಕಲು ಸ್ವಲ್ಪ ಸಮಯದವರೆಗೆ ರೆಫ್ರಿಜರೇಟರ್‌ನಲ್ಲಿ ಇರಿಸಿ. ಎಣ್ಣೆಯಲ್ಲಿ ಕೊಬ್ಬು ಇರುತ್ತದೆ, ಆದ್ದರಿಂದ ಅದು ಗಟ್ಟಿಯಾಗುತ್ತದೆ, ಇದು ಗ್ರೇವಿಯಿಂದ ಅದನ್ನು ಸುಲಭವಾಗಿ ಬೇರ್ಪಡಿಸಲು ನಿಮಗೆ ಸಹಾಯ ಮಾಡಿಕೊಡುತ್ತದೆ. ಈ ಟ್ರಿಕ್ಸ್ ಟ್ರೈ ಮಾಡಿ, ನೀವು ಸುಲಭವಾಗಿ ಗ್ರೇವಿಯಿಂದ ಎಣ್ಣೆಯ ಅಂಶವನ್ನು ತೆಗೆದು ಹಾಕಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

