ಇನ್ಮೇಲೆ ಹಾಲು ಬಿಸಿ ಮಾಡ್ವಾಗ ಗ್ಯಾಸ್ ಸ್ಟವ್ ಮೇಲೆ ಚೆಲ್ಲಲ್ಲ, ಈ ಹ್ಯಾಕ್ ಟ್ರೈ ಮಾಡಿ
ನಮ್ಮ ಕಣ್ಮುಂದೇನೇ ಹಾಲು ಉಕ್ಕಿ ಹರಿದ್ರೂ ನಮಗೇನೂ ಮಾಡೋಕೆ ಆಗ್ತಿಲ್ಲ ಅನ್ನೋರು ಈ 6 ಹ್ಯಾಕ್ ಟ್ರೈ ಮಾಡಿ, ಖಂಡಿತ ನಿಮ್ಮ ಕೆಲಸ ಇನ್ಮೇಲೆ ಈಸಿಯಾಗುತ್ತೆ.

ಕೆಲಸ ಈಸಿಯಾಗುತ್ತೆ
ಹಾಲು ಯಾರೂ ಉಪಯೋಗಿಸಲ್ಲ ಹೇಳಿ, ನಾವೆಷ್ಟೇ ಬಡವರೆಂದೂ ಒಂದು ಕಪ್ ಹಾಲಿಗೆ ನಮ್ಮಲ್ಲಿ ಬರವಿಲ್ಲ. ಕೆಲವರು ಹಾಲಿನ ಪ್ಯಾಕೆಟ್‌ಗಳನ್ನು ತರ್ತಾರೆ, ಮತ್ತೆ ಕೆಲವರ ಮನೆಗೆ ತೆರಳಿ ಆಗಷ್ಟೇ ಕರೆದ ಹಸುವಿನ ಹಾಲನ್ನ ಮಾರಿ ಬರಲಾಗುತ್ತದೆ. ಹಾಲು ಆರೋಗ್ಯಕ್ಕೆ ಪ್ರಯೋಜನಕಾರಿಯೂ ಆರುವುದರಿಂದ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಅದನ್ನು ಬಿಸಿ ಮಾಡುವ ವಿಚಾರಕ್ಕೆ ಬಂದಾಗ ಅದು ಕೊಡುವುದು ಕಡಿಮೆ ಸಮಸ್ಯೆಯೇನಲ್ಲ. ಹೀಗೆ ಹೋಗಿ ಹಾಗೇ ಬರುತ್ತವೆ ಅನ್ನುವಷ್ಟರಲ್ಲಿ ಅದು ಗ್ಯಾಸ್ ಸ್ಟವ್ ಅಗಿರಬಹುದು, ಸೌದೆ ಒಲೆ ಆಗಿರಬಹುದು ಖಂಡಿತವಾಗಿ ಚೆಲ್ಲುತ್ತದೆ. ಆಗ ಕ್ಲೀನಿಂಗ್ ಕೆಲಸವಿದೆಯಲ್ಲ ನಮ್ಮ ಹೆಣ್ಣುಮಕ್ಕಳಿಗೆ ದೊಡ್ಡ ತಲೆನೋವೇ ಸರಿ. ಅಯ್ಯೋ ಅದು ಬಿಡಿ, ನಮ್ಮ ಕಣ್ಮುಂದೇನೇ ಹಾಲು ಉಕ್ಕಿ ಹರಿದ್ರೂ ನಮಗೇನೂ ಮಾಡೋಕೆ ಆಗ್ತಿಲ್ಲ ಅನ್ನೋರು ಈ 6 ಹ್ಯಾಕ್ ಟ್ರೈ ಮಾಡಿ, ಖಂಡಿತ ನಿಮ್ಮ ಕೆಲಸ ಇನ್ಮೇಲೆ ಈಸಿಯಾಗುತ್ತೆ.
ದೊಡ್ಡ ಪಾತ್ರೆ ಬಳಸಿ
ಮೊದಲನೆಯದಾಗಿ ಹಾಲನ್ನು ಬಿಸಿ ಮಾಡಲು ಯಾವಾಗಲೂ ದೊಡ್ಡ ಪಾತ್ರೆಯನ್ನು ಬಳಸಿ. ಏಕೆಂದರೆ ಸಣ್ಣ ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡುವಾಗ ನೊರೆ ಬೇಗನೆ ಬರುತ್ತದೆ. ಕೆಳಗಿನಿಂದ ಬರುವ ಉಗಿ ನೊರೆಯ ಪದರವನ್ನು ಹೊರಗೆ ತಳ್ಳಿದಾಗ ಹಾಲು ಚೆಲ್ಲುತ್ತದೆ.
ಹಾಲಿನ ಪ್ರಮಾಣ
ಸರಿಯಾದ ಪಾತ್ರೆಯನ್ನು ಆಯ್ಕೆ ಮಾಡುವುದರ ಜೊತೆಗೆ ನೀವು ಹಾಲಿನ ಪ್ರಮಾಣವನ್ನು ಸಹ ನೋಡಿಕೊಳ್ಳಬೇಕು. ಪಾತ್ರೆಯನ್ನು ಸಂಪೂರ್ಣವಾಗಿ ಹಾಲಿನಿಂದ ತುಂಬಿಸುವ ಅಗತ್ಯವಿಲ್ಲ. ಅದರಲ್ಲಿ 75% ಜಾಗ ಇರಬೇಕು. ಇದು ಮೇಲೆ ಜಾಗವನ್ನು ಬಿಡುತ್ತದೆ ಮತ್ತು ಹಾಲು ಬೇಗನೆ ಚೆಲ್ಲುವುದಿಲ್ಲ .
ಬೌಲ್ ಹ್ಯಾಕ್
ಈ ಹ್ಯಾಕ್ ಸಾಮಾಜಿಕ ಮಾಧ್ಯಮದಲ್ಲಿಯೂ ವೈರಲ್ ಆಗಿದೆ . ಇದರಲ್ಲಿ, ಮೊದಲು ಒಂದು ಸಣ್ಣ ಬೌಲ್ ಅನ್ನು ಪಾತ್ರೆಯಲ್ಲಿ ಇರಿಸಿ ನಂತರ ಹಸಿ ಹಾಲನ್ನು ಸೇರಿಸಿ ಬಿಸಿ ಮಾಡಲಾಗುತ್ತದೆ. ಈ ಹ್ಯಾಕ್‌ನಿಂದ ಹಾಲು ಹೊರಗೆ ಚೆಲ್ಲುವುದಿಲ್ಲ ಎಂದು ಹೇಳಲಾಗುತ್ತದೆ.
ನೀರು ಚಿಮ್ಮುವಿಕೆ
ಕುದಿಯುತ್ತಿರುವ ಹಾಲು ಪಾತ್ರೆಯಿಂದ ಹೊರಗೆ ಚೆಲ್ಲುವುದನ್ನು ತಡೆಯಲು ಇನ್ನೊಂದು ಉಪಾಯವಿದೆ. ವಾಸ್ತವವಾಗಿ ಕೆಲವರು ಕುದಿಯುವ ಹಾಲಿನ ಮೇಲೆ ನೀರನ್ನು ಸಿಂಪಡಿಸುವುದರಿಂದ ಹಾಲು ನೊರೆಯನ್ನು ಒಡೆಯುತ್ತದೆ ಎಂದು ಹೇಳುತ್ತಾರೆ.
ಪಾತ್ರೆಯ ಮೇಲೆ ಚಮಚ
ಚಿತ್ರದಲ್ಲಿ ತೋರಿಸಿರುವ ಹಾಗೆ ನೀವು ಯಾವುದೇ ಸ್ಟೀಲ್ ಚಮಚ ಅಥವಾ ಮರದ ಚಮಚವನ್ನು ಪಾತ್ರೆಯ ಮೇಲೆ ಇಡಬಹುದು. ಈ ಟೆಕ್ನಿಕ್ ಹಾಲಿನಲ್ಲಿ ರೂಪುಗೊಂಡ ನೊರೆಯನ್ನು ಒಡೆಯುತ್ತದೆ. ಮತ್ತು ಹಾಲು ಪಾತ್ರೆಯಿಂದ ಹೊರಬರುವುದಿಲ್ಲ.
ತುಪ್ಪ ಅಥವಾ ಬೆಣ್ಣೆ
ಪಾತ್ರೆ ಚಿಕ್ಕದಾಗಿದ್ದರೆ, ತುಪ್ಪ ಅಥವಾ ಬೆಣ್ಣೆ ಸಹಾಯಕವಾಗಬಹುದು. ನೀವು ಹಾಲನ್ನು ಕುದಿಸುವಾಗಲೆಲ್ಲಾ, ಪಾತ್ರೆಯ ಬದಿಗಳಿಗೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ . ಇದು ಹಾಲು ಸೋರಿಕೆಯಾಗುವುದರಿಂದ ಉಂಟಾಗುವ ಒತ್ತಡವನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಿಸುತ್ತದೆ.